“ಕೆಜಿಎಫ್‌’ ದಾಖಲೆ ಮೀರಿಸಿದ ಬಿಜೆಪಿ

Team Udayavani, Aug 31, 2019, 3:00 AM IST

ಕಲಬುರಗಿ: ವರ್ಗಾವಣೆ ಕಲೆಕ್ಷನ್‌ನಲ್ಲಿ ರಾಜ್ಯದ ಬಿಜೆಪಿ ಸರ್ಕಾರ “ಬಾಹುಬಲಿ-2′, “ಕೆಜಿಎಫ್‌’ ಚಿತ್ರದ ದಾಖಲೆ ಮೀರಿಸಿದೆ ಎಂದು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ದೂರಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ಅಧಿ ಕಾರಿಗಳ ವರ್ಗಾವಣೆ ಹೆಸರಲ್ಲಿ ಹಣದ ದಂಧೆ ನಡೆಸುತ್ತಿದೆ. ಸರ್ಕಾರ ರಚಿಸಲು ಆಪರೇಷನ್‌ ಕಮಲಕ್ಕೆ ಮಾಡಿರುವ ಖರ್ಚು-ವೆಚ್ಚವನ್ನು ಈಗ ವರ್ಗಾವಣೆಯಲ್ಲಿ ಪಡೆಯುತ್ತಿದ್ದಾರೆ.

ವರ್ಗಾವಣೆ ಕಲೆಕ್ಷನ್‌ನಲ್ಲಿ ರಾಜ್ಯದ ಬಿಜೆಪಿ ಸರ್ಕಾರ “ಬಾಹುಬಲಿ-2′, ‘ಕೆಜಿಎಫ್‌’ ಚಿತ್ರದ ದಾಖಲೆ ಮೀರಿಸಿದೆ ಎಂದರು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಪ್ರತಿಕ್ರಿಯಿಸಿ, ದಿನೇಶ ಗುಂಡೂ ರಾವ್‌ ಅವರು ಕೆಪಿಸಿಸಿ ಅಧ್ಯಕ್ಷರಿದ್ದಾರೆ. ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್‌ ಸೂಚನೆ ನೀಡಿಲ್ಲ. ಈ ಕುರಿತು ಹೈಕಮಾಂಡ್‌ನಿಂದ ಯಾವುದೇ ಮಾಹಿತಿಯೂ ಬಂದಿಲ್ಲ ಎಂದರು.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ