ಬಿಜೆಪಿಯಲ್ಲಿ ವಿಶ್ವಾಸ ಮೂಡಿಸದ ವಲಸಿಗರ ನಿಷ್ಠೆ; ಭಿನ್ನ ದಾರಿಯಲ್ಲಿ ಸಚಿವರು, ಶಾಸಕರು

ಹಲವು ಸಚಿವರಿಂದ ನಿಯಮ ಪಾಲನೆ

Team Udayavani, May 9, 2022, 7:20 AM IST

BJPಬಿಜೆಪಿಯಲ್ಲಿ ವಿಶ್ವಾಸ ಮೂಡಿಸದ ವಲಸಿಗರ ನಿಷ್ಠೆ; ಭಿನ್ನ ದಾರಿಯಲ್ಲಿ ಸಚಿವರು, ಶಾಸಕರು

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಅನ್ಯ ಪಕ್ಷಗಳ ನಾಯಕರನ್ನು ಸೆಳೆಯಲು ಬಿಜೆಪಿ ಕಸರತ್ತು ನಡೆಸುತ್ತಿದೆ. ಆದರೆ “ಆಪರೇಷನ್‌ ಕಮಲ’ದ ಮೂಲಕ ಬಿಜೆಪಿ ಸೇರಿ ಸರಕಾರ ರಚನೆಗೆ ಕಾರಣವಾಗಿರುವ ವಲಸಿಗರ ಬಗ್ಗೆ ಪಕ್ಷದಲ್ಲಿ ಇನ್ನೂ ವಿಶ್ವಾಸ ಮೂಡಿದಂತಿಲ್ಲ.

ಮೈತ್ರಿ ಸರಕಾರದ ಭಾಗವಾಗಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಬಂದಿರುವ 17 ಶಾಸಕರು ಆರಂಭದಲ್ಲಿ ತಮ್ಮದೇ ಆದ ಪ್ರತ್ಯೇಕ ಗುಂಪು ಕಟ್ಟಿ ಒಗ್ಗಟ್ಟು ಪ್ರದರ್ಶಿಸಿದ್ದರು. ಈ ಗುಂಪು ಕ್ರಮೇಣ ನಾಯಕತ್ವ ಪ್ರತಿಷ್ಠೆ ಯಿಂದಾಗಿ ಮೂರು ಹೋಳಾ ಗಿದ್ದು, ಎಲ್ಲರ ನಡೆಯೂ ನಿಗೂಢವಾಗಿದೆ.

ಪಕ್ಷಾಂತರದ ಅನುಮಾನ
ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ವಲಸೆ ಬಂದು ಬಿಜೆಪಿಯಲ್ಲಿಯೇ ಮುಂದುವರಿಯುವುದಾಗಿ ಮೇಲಿಂದ ಮೇಲೆ ಹೇಳುತ್ತಿದ್ದರೂ ವಲಸಿಗರ ಬಗ್ಗೆ ಬಿಜೆಪಿಯಲ್ಲಿ ಅನುಮಾನಗಳು ಮುಂದುವರಿದಿವೆ ಎನ್ನಲಾಗುತ್ತಿದೆ.
ಸಚಿವ ಎಂ.ಟಿ.ಬಿ. ನಾಗರಾಜ್‌ ಕೂಡ ಆಗಾಗ ಬಹಿರಂಗವಾಗಿ ಬೇಸರ ವ್ಯಕ್ತ ಪಡಿಸುತ್ತಿದ್ದು, ಒಂದು ಹಂತದಲ್ಲಿ ಕಾಂಗ್ರೆಸ್‌ಗೆ ಮರಳಲು ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿತ್ತು.

ಎಚ್‌.ವಿಶ್ವನಾಥ್‌ ತಮ್ಮ ಹೇಳಿಕೆಗಳ ಮೂಲಕ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದು, ಮತ್ತೆ ಜೆಡಿಎಸ್‌ ಸೇರುವ ಮುನ್ಸೂಚನೆ ನೀಡುತ್ತಿದ್ದಾರೆ. ಬಿಜೆಪಿಗೂ ಅವರ ಬಗ್ಗೆ ಆಸಕ್ತಿ ಇದ್ದಂತಿಲ್ಲ. ವಿಧಾನಪರಿಷತ್‌ ಸದಸ್ಯ ಆರ್‌. ಶಂಕರ್‌, ಎಚ್‌. ನಾಗೇಶ್‌, ಶ್ರೀಮಂತ ಪಾಟೀಲ್‌ ಮತ್ತೆ ಸಚಿವ ರಾಗಲು ಕಸರತ್ತು ನಡೆಸಿದ್ದಾರೆ. ಮಹೇಶ್‌ ಕುಮಟಳ್ಳಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ಸಿಗುವ ಬಗ್ಗೆಯೇ ಸಂಶಯವಿದೆ ಎನ್ನಲಾಗುತ್ತಿದೆ.

ಪಕ್ಷ ನಿಷ್ಠೆಗೆ ಯತ್ನ
ಶಿಸ್ತಿನ ಪಕ್ಷ ಎನ್ನುವ ಬಿಜೆಪಿಯ ಕೆಲವು ನಿಯಮಗಳನ್ನು ಪಾಲಿಸಲು ಅನ್ಯ ಪಕ್ಷಗಳಿಂದ ಬಂದವರಿಗೆ ಕಷ್ಟವಾಗುತ್ತಿದೆ. ಆದರೆ ಪ್ರಮುಖ ರಾಗಿರುವ ಗೋಪಾಲಯ್ಯ, ಎಸ್‌.ಟಿ. ಸೋಮಶೇಖರ್‌, ಬೈರತಿ ಬಸವರಾಜ, ಆನಂದ ಸಿಂಗ್‌, ಡಾ| ಕೆ. ಸುಧಾಕರ್‌, ಕೆ.ಸಿ. ನಾರಾಯಣ ಗೌಡ, ಬಿ.ಸಿ. ಪಾಟೀಲ್‌, ಶಿವರಾಮ ಹೆಬ್ಟಾರ್‌ ಮೊದಲಾದವರು ಮೂಲ ಬಿಜೆಪಿಯವರಿಗಿಂತಲೂ ಹೆಚ್ಚು ಪಕ್ಷ ನಿಷ್ಠೆ ತೋರುತ್ತಿದ್ದಾರೆ. ಪಕ್ಷದ ಸೂಚನೆಯನ್ನು ಸರಿಯಾಗಿ ಪಾಲಿಸುತ್ತಿದ್ದಾರೆ. ಇದರ ನಡುವೆಯೇ ನಾರಾಯಣ ಗೌಡ, ಸೋಮಶೇಖರ್‌, ಡಾ| ಸುಧಾಕರ್‌, ಬೈರತಿ ಬಸವರಾಜ್‌ ಕಾಂಗ್ರೆಸ್‌ ನಾಯಕರ ಜತೆ ಸಂಪರ್ಕ ದಲ್ಲಿದ್ದಾರೆ ಎಂಬ ಅನುಮಾನ ಬಿಜೆಪಿಯ ಒಂದು ವರ್ಗದ ನಾಯಕರಲ್ಲಿ ಮೂಡಿದೆ ಎನ್ನಲಾಗಿದೆ.

-ಶಂಕರ ಪಾಗೋಜಿ

ಟಾಪ್ ನ್ಯೂಸ್

ವಾರಾಂತ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಲ್ಲಿಗೆ

ವಾರಾಂತ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಲ್ಲಿಗೆ

ಭಾರತೀಯ ಸೇನೆಗೆ ಮತ್ತಷ್ಟು “ಸ್ವದೇಶಿ’ ಬಲ

ಭಾರತೀಯ ಸೇನೆಗೆ ಮತ್ತಷ್ಟು “ಸ್ವದೇಶಿ’ ಬಲ

ಮುಂದಿನ ಅಧಿವೇಶನದಲ್ಲಿ ಮರಳು ನೀತಿಗೆ ತಿದ್ದುಪಡಿ: ಸಚಿವ ಹಾಲಪ್ಪ ಆಚಾರ್‌

ಮುಂದಿನ ಅಧಿವೇಶನದಲ್ಲಿ ಮರಳು ನೀತಿಗೆ ತಿದ್ದುಪಡಿ: ಸಚಿವ ಹಾಲಪ್ಪ ಆಚಾರ್‌

ಹಾಟ್‌ಸ್ಪಾಟ್‌ ಬೆಂಗಳೂರು! ಇಲ್ಲೇ ಬಂದು ಸ್ಟಾರ್ಟಪ್‌ ಆರಂಭಿಸುತ್ತಿರುವ ವಿದೇಶಿಯರು

ಹಾಟ್‌ಸ್ಪಾಟ್‌ ಬೆಂಗಳೂರು! ಇಲ್ಲೇ ಬಂದು ಸ್ಟಾರ್ಟಪ್‌ ಆರಂಭಿಸುತ್ತಿರುವ ವಿದೇಶಿಯರು

ದೇಸೀ ಪಠ್ಯಕ್ಕೆ ಸಲಹೆ ನೀಡಿ: ಆನ್‌ಲೈನ್‌ ಸಲಹೆ ನೀಡಲು ದೇಶವಾಸಿಗಳಿಗೆ ಕೇಂದ್ರದ ಮನವಿ

ದೇಸೀ ಪಠ್ಯಕ್ಕೆ ಸಲಹೆ ನೀಡಿ: ಆನ್‌ಲೈನ್‌ ಸಲಹೆ ನೀಡಲು ದೇಶವಾಸಿಗಳಿಗೆ ಕೇಂದ್ರದ ಮನವಿ

ಸಂಸತ್‌, ವಿಧಾನಸಭೆಗಳಿಗೆ ಸ್ಮಾರ್ಟ್‌ ಟಚ್‌!

ಸಂಸತ್‌, ವಿಧಾನಸಭೆಗಳಿಗೆ ಸ್ಮಾರ್ಟ್‌ ಟಚ್‌!

ಮುಸ್ಲಿಮರು ವಾಸಿಸುವ ಪ್ರದೇಶ ದೇಶದ ಭಾಗವಲ್ಲವೇ?: ಸಚಿವ ಆರಗ ಜ್ಞಾನೇಂದ್ರ

ಮುಸ್ಲಿಮರು ವಾಸಿಸುವ ಪ್ರದೇಶ ದೇಶದ ಭಾಗವಲ್ಲವೇ?: ಸಚಿವ ಆರಗ ಜ್ಞಾನೇಂದ್ರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಾರಾಂತ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಲ್ಲಿಗೆ

ವಾರಾಂತ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಲ್ಲಿಗೆ

ಮುಂದಿನ ಅಧಿವೇಶನದಲ್ಲಿ ಮರಳು ನೀತಿಗೆ ತಿದ್ದುಪಡಿ: ಸಚಿವ ಹಾಲಪ್ಪ ಆಚಾರ್‌

ಮುಂದಿನ ಅಧಿವೇಶನದಲ್ಲಿ ಮರಳು ನೀತಿಗೆ ತಿದ್ದುಪಡಿ: ಸಚಿವ ಹಾಲಪ್ಪ ಆಚಾರ್‌

ಮುಸ್ಲಿಮರು ವಾಸಿಸುವ ಪ್ರದೇಶ ದೇಶದ ಭಾಗವಲ್ಲವೇ?: ಸಚಿವ ಆರಗ ಜ್ಞಾನೇಂದ್ರ

ಮುಸ್ಲಿಮರು ವಾಸಿಸುವ ಪ್ರದೇಶ ದೇಶದ ಭಾಗವಲ್ಲವೇ?: ಸಚಿವ ಆರಗ ಜ್ಞಾನೇಂದ್ರ

ಬಿಜೆಪಿ ಕಳಪೆ ಸರಕಾರ ಎನ್ನುವುದಕ್ಕೆ ಬೇರೆ ಪುರಾವೆ ಬೇಕೇ? ಕಾಂಗ್ರೆಸ್‌

ಬಿಜೆಪಿ ಕಳಪೆ ಸರಕಾರ ಎನ್ನುವುದಕ್ಕೆ ಬೇರೆ ಪುರಾವೆ ಬೇಕೇ? ಕಾಂಗ್ರೆಸ್‌

ಓಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಸಾವರ್ಕರ್‌ ವಿರೋಧ: ಸಿ.ಟಿ. ರವಿ

ಓಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಸಾವರ್ಕರ್‌ ವಿರೋಧ: ಸಿ.ಟಿ. ರವಿ

MUST WATCH

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಆಳವಾದ ಕಂದಕಕ್ಕೆ ಬಸ್ ಉರುಳಿ ಬಿದ್ದು, ಐಟಿಬಿಪಿಯ 6 ಯೋಧರು ಸಾವು

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತದ ಕಾಂಗ್ರೆಸ್ ನಡಿಗೆಯಲ್ಲಿ ಜನಸ್ತೋಮ

udayavani youtube

ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿಗೆ ಬೆದರಿಕೆ ಕರೆ

ಹೊಸ ಸೇರ್ಪಡೆ

ವಾರಾಂತ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಲ್ಲಿಗೆ

ವಾರಾಂತ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಲ್ಲಿಗೆ

ಭಾರತೀಯ ಸೇನೆಗೆ ಮತ್ತಷ್ಟು “ಸ್ವದೇಶಿ’ ಬಲ

ಭಾರತೀಯ ಸೇನೆಗೆ ಮತ್ತಷ್ಟು “ಸ್ವದೇಶಿ’ ಬಲ

ಮುಂದಿನ ಅಧಿವೇಶನದಲ್ಲಿ ಮರಳು ನೀತಿಗೆ ತಿದ್ದುಪಡಿ: ಸಚಿವ ಹಾಲಪ್ಪ ಆಚಾರ್‌

ಮುಂದಿನ ಅಧಿವೇಶನದಲ್ಲಿ ಮರಳು ನೀತಿಗೆ ತಿದ್ದುಪಡಿ: ಸಚಿವ ಹಾಲಪ್ಪ ಆಚಾರ್‌

ಹಾಟ್‌ಸ್ಪಾಟ್‌ ಬೆಂಗಳೂರು! ಇಲ್ಲೇ ಬಂದು ಸ್ಟಾರ್ಟಪ್‌ ಆರಂಭಿಸುತ್ತಿರುವ ವಿದೇಶಿಯರು

ಹಾಟ್‌ಸ್ಪಾಟ್‌ ಬೆಂಗಳೂರು! ಇಲ್ಲೇ ಬಂದು ಸ್ಟಾರ್ಟಪ್‌ ಆರಂಭಿಸುತ್ತಿರುವ ವಿದೇಶಿಯರು

ದೇಸೀ ಪಠ್ಯಕ್ಕೆ ಸಲಹೆ ನೀಡಿ: ಆನ್‌ಲೈನ್‌ ಸಲಹೆ ನೀಡಲು ದೇಶವಾಸಿಗಳಿಗೆ ಕೇಂದ್ರದ ಮನವಿ

ದೇಸೀ ಪಠ್ಯಕ್ಕೆ ಸಲಹೆ ನೀಡಿ: ಆನ್‌ಲೈನ್‌ ಸಲಹೆ ನೀಡಲು ದೇಶವಾಸಿಗಳಿಗೆ ಕೇಂದ್ರದ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.