ಕೈಲಾಗದವನು ಮೈಪರಚಿಕೊಂಡಂತೆ ಆಗಿದೆ ನಿಮ್ಮ ಪರಿಸ್ಥಿತಿ: ಸಿದ್ದರಾಮಯ್ಯಗೆ ಬಿಜೆಪಿ ಟಾಂಗ್
Team Udayavani, Nov 24, 2020, 4:27 PM IST
ಬೆಂಗಳೂರು: ಶಿರಾ ಸೋಲಿಗೆ ಡಿ ಕೆ ಶಿವಕುಮಾರ್ ಮತ್ತು ನಿಮ್ಮೊಳಗಿರುವ ವೈಮನಸ್ಸೇ ಕಾರಣ ಹೊರತು ಮತದಾರರಲ್ಲ. ಕೈಲಾಗದವನು ಮೈಪರಚಿಕೊಂಡಂತೆ ಆಗಿದೆ ನಿಮ್ಮ ಸದ್ಯದ ಪರಿಸ್ಥಿತಿ. ದೂರುವುದನ್ನು ಬಿಟ್ಟು ಅವಲೋಕನ ಮಾಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಬಿಜೆಪಿ ಟಾಂಗ್ ನೀಡಿದೆ.
ಮತಗಳನ್ನು ಖರೀದಿ ಮಾಡಿ ಬಿಜೆಪಿ ಶಿರಾದಲ್ಲಿ ಗೆಲುವು ಸಾಧಿಸಿದೆ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಬಿಜೆಪಿ ಕರ್ನಾಟಕ ತನ್ನ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದೆ.
ನಿಮ್ಮ ವೈಫಲ್ಯವನ್ನು ಬೇರೆಯವರ ಹೆಗಲ ಮೇಲೆ ಹಾಕಿ ನುಣುಚಿಕೊಳ್ಳುವ ನಿಮ್ಮ ಪ್ರವೃತ್ತಿಯನ್ನು ಎಂದು ಕೊನೆಗಾಣಿಸುತ್ತೀರಿ ಸಿದ್ದರಾಮಯನವರೇ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ:ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ: ವಿಜಯೇಂದ್ರ ವಿರುದ್ಧ ಮಾಜಿ ಸಂಸದ ಉಗ್ರಪ್ಪ ಕಿಡಿ
ಐದು ವರ್ಷ ಮುಖ್ಯಮಂತ್ರಿಯಾಗಿದ್ದ ನೀವು ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತರೂ ಬುದ್ಧಿ ಕಲಿತಿಲ್ಲ. ಮತದಾರರನ್ನು ನಿಂದಿಸುವ ಮಟ್ಟಕ್ಕೆ ನೀವು ಇಳಿದಿರುವುದು ನಿಜಕ್ಕೂ ನಾಚಿಕೆಗೇಡು. ನಿಮ್ಮದೇ ಕಾರ್ಯಕರ್ತರನ್ನು ದೂರಲು ಮನಸ್ಸು ಹೇಗೆ ಬಂತು? ಕಾಂಗ್ರೆಸ್ ಕಾರ್ಯಕರ್ತರು ಆಮಿಷಕ್ಕೆ ಬಲಿಯಾಗಿದ್ದಾರೆ ಎಂದರೆ ಏನರ್ಥ ಎಂದು ಬಿಜೆಪಿ ಪ್ರಶ್ನಿಸಿದೆ.
ಮತಗಳನ್ನು ಖರೀದಿ ಮಾಡಿಯೇ ಶಿರಾ ಉಪಚುನಾವಣೆಯನ್ನು ಗೆದ್ದ ಬಿಜೆಪಿ ಮಸ್ಕಿ ಚುನಾವಣೆಯಲ್ಲೂ ಹಣ ಹಂಚಲು ತಂಡವನ್ನೇ ಕಟ್ಟಿಕೊಂಡು ಬರುತ್ತಾರೆ. ಬಿಜೆಪಿಯವರ ಆಸೆ, ಆಮಿಷಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಬಲಿಯಾಗಬಾರದು. ಮಾರುಕಟ್ಟೆಯಲ್ಲಿ ಕುರಿ, ಕೋಣಗಳಂತೆ ತನ್ನನ್ನೇ ಮಾರಾಟ ಮಾಡಿಕೊಂಡವರನ್ನು ಮಸ್ಕಿ ಕ್ಷೇತ್ರದ ಜನರು ನಂಬಬೇಡಿ ಎಂದು ಸಿದ್ದರಾಮಯ್ಯ ಹೇಳಿದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶಾಸಕ ಮನಗೂಳಿ ನಿಧನಕ್ಕೆ ಸುರೇಶ್ ಕುಮಾರ್ ಸಂತಾಪ
ಚರಂಡಿ ಸ್ವಚ್ಛತೆ ವೇಳೆ ಇಬ್ಬರು ಕಾರ್ಮಿಕರ ದುರ್ಮರಣ: ಅಧಿಕಾರಿಗಳ ನಿರ್ಲಕ್ಷಕ್ಕೆ ಆಕ್ರೋಶ
ಸರ್ಕಾರ ಕೈಗಾರಿಗೆ ಮತ್ತು ಹೂಡಿಕೆದಾರರ ಪರವಾಗಿದೆ: ಮುರಗೇಶ್ ನಿರಾಣಿ
ನಾಡು ನುಡಿ ತಂಟೆಗೆ ಬಂದರೆ ಕೈಕಟ್ಟಿ ಕೂರಲು ಕನ್ನಡಿಗರೇನು ಕೈಗೆ ಬಳೆ ತೊಟ್ಟು ಕೂತಿಲ್ಲ!
ತಾಕತ್ತಿದ್ದರೆ ಉಳ್ಳಾಲದ ಜನರು ಮುಸ್ಲಿಮೇತರರನ್ನು ಶಾಸಕರಾಗಿ ಮಾಡಿ: ಕಲ್ಲಡ್ಕ ಪ್ರಭಾಕರ್ ಭಟ್