Udayavni Special

ಮೌನಕ್ಕೆ ಮೊರೆಹೋದ ಬಿಜೆಪಿ ನಾಯಕರು

ಆಡಳಿತ ಪಕ್ಷಗಳ ಶಾಸಕರು ಕೆಣಕಿದರೂ, ಸಹನೆ ಕಳೆದುಕೊಳ್ಳದ ಕಮಲ ಪಾಳಯ; ತದ್ವಿರುದ್ಧ ಪರಿಸ್ಥಿತಿಗೆ ಸಾಕ್ಷಿಯಾದ ವಿಧಾನಸಭೆ

Team Udayavani, Jul 19, 2019, 5:03 AM IST

07

ಬೆಂಗಳೂರು: ಆಡಳಿತ ಪಕ್ಷದ ಶಾಸಕರು, ಸಚಿವರು ವಿರೋಧ ಪಕ್ಷದ ವಿರುದ್ಧ ಘೋಷಣೆ ಕೂಗಿ, ಆಕ್ರೋಶದ ಹೇಳಿಕೆಗಳನ್ನು ನೀಡಿದರೂ, ಎಲ್ಲವನ್ನು ಕೇಳಿಸಿಕೊಂಡರೂ, ನಿಯಂತ್ರಿಸಿಕೊಂಡು ಮೌನವಾಗಿ ಕೂತ ತದ್ವಿರುದ್ಧ ಪರಿಸ್ಥಿತಿಗೆ ರಾಜ್ಯ ವಿಧಾನಸಭೆ ಸಾಕ್ಷಿಯಾಯಿತು.

ಬಹುತೇಕ ರಾಜ್ಯದ ವಿಧಾನಸಭೆ ಇತಿಹಾಸದಲ್ಲಿ ಆಡಳಿತ ಪಕ್ಷದ ಸದಸ್ಯರು ಪ್ರತಿಪಕ್ಷದ ವಿರುದ್ಧ ನೇರವಾಗಿ ಆರೋಪ ಮಾಡಿದರೂ ಪ್ರತಿಪಕ್ಷದ ಶಾಸಕರು ಅಸಹಾಯಕರಾಗಿ ಕುಳಿತ ಪ್ರಸಂಗ ನಡೆದಿರುವುದು ಇದೇ ಮೊದಲು ಎನಿಸುತ್ತಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡಿ ಭಾಷಣ ಆರಂಭಿಸಿದ ಸಂದರ್ಭದಲ್ಲಿ ಕ್ರಿಯಾ ಲೋಪ ಎತ್ತಿದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ವಿಪ್‌ ಜಾರಿ ಅನ್ವಯ ಆಗುತ್ತದೆಯೋ, ಇಲ್ಲವೋ ಎನ್ನುವ ಬಗ್ಗೆ ಸ್ಪಷ್ಟಪಡಿಸದ ಹೊರತು ವಿಶ್ವಾಸಮತ ಯಾಚನೆಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು. ಅವರು ಕ್ರಿಯಾಲೋಪದ ಹೆಸರಿನಲ್ಲಿ ಸಂವಿಧಾನದ 10ನೇ ಪರಿಚ್ಛೇದದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಹೇಗೆ ಜಾರಿಗೆ ತರಲಾಯಿತು ಎನ್ನುವುದನ್ನು ನಿಧಾನ ವಾಗಿ ವಿವರಿಸುವ ಮೂಲಕ ಪ್ರತಿಪಕ್ಷದ ಶಾಸಕರ ತಾಳ್ಮೆ ಪರೀಕ್ಷೆ ಮಾಡುವ ಪ್ರಯತ್ನ ಮಾಡಿದರು.

ಸಿದ್ದರಾಮಯ್ಯ ಅವರ ವಿಳಂಬ ಧೋರಣೆ ಪ್ರತಿಪಕ್ಷದ ಶಾಸಕರಲ್ಲಿ ಅಸಮಾಧಾನ ಹೆಚ್ಚುವಂತೆ ಮಾಡಿತು. ಅವರ ನಿಧಾನಗತಿಯ ವಿಶ್ಲೇಷಣೆಗೆ ಆಕ್ಷೇಪ ವ್ಯಕ್ತಪಡಿಸಲು ಮೇಲೇಳಲು ಶಾಸಕರು ಪ್ರಯತ್ನ ನಡೆಸಿದರೂ, ಯಾರೂ ಮೇಲೆದ್ದು ಮಾತನಾಡದಂತೆ ಪಕ್ಷದ ನಾಯಕರು ಆಗಾಗ ಸೂಚನೆ ನೀಡುತ್ತ, ಅವರನ್ನು ತಡೆ ಹಿಡಿಯುವ ಪ್ರಯತ್ನ ನಡೆಸಿದರು.

ಆದರೂ, ಜೆ.ಸಿ.ಮಾಧುಸ್ವಾಮಿಯವರು ಪ್ರತಿಯೊಂದಕ್ಕೂ ಆಕ್ಷೇಪ ವ್ಯಕ್ತಪಡಿಸುತ್ತ ಆಡಳಿತ ಪಕ್ಷದ ಧೋರಣೆಗೆ ವಿರೋಧ ವ್ಯಕ್ತಪಡಿಸಿದಾಗ ಆಡಳಿತ ಪಕ್ಷದ ಸಚಿವರಾದಿಯಾಗಿ ಎಲ್ಲರೂ ಎದ್ದು ಅವರ ಮೇಲೆ ಮುಗಿ ಬೀಳುತ್ತಿದ್ದರು. ಆದರೂ, ಬಿಜೆಪಿ ಶಾಸಕರು ಮಾತ್ರ ತಮ್ಮ ಆಕ್ರೋಶವನ್ನು ಹಿಡಿದಿಟ್ಟುಕೊಂಡು ಸುಮ್ಮನೆ ಕೂತಿದ್ದರು.

ಜೆ.ಸಿ.ಮಾಧುಸ್ವಾಮಿ ಬದಲು ಯಾರಾದರೂ ಮೇಲೆದ್ದು ಆಡಳಿತ ಪಕ್ಷದ ವಿರುದ್ಧ ಮಾತನಾಡಲು ಮುಂದಾದರೆ, ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಸೇರಿ ಬಹುತೇಕ ನಾಯಕರು ತಳಮಳಗೊಂಡು ಅವರನ್ನು ಸುಮ್ಮನೆ ಕೂಡುವಂತೆ ಸೂಚನೆ ನೀಡುವುದರಲ್ಲಿಯೇ ನಿರತರಾಗಿದ್ದು ಕಂಡು ಬಂತು. ಅದಕ್ಕೆ ತದ್ವಿರುದ್ಧವಾಗಿ ಆಡಳಿತ ಪಕ್ಷದ ಶಾಸಕರು ಮಾತ್ರ ಪ್ರತಿಯೊಂದು ವಿಷಯಕ್ಕೂ ಮೇಲೆ ಬಿದ್ದು ಜೋರಾಗಿ ಕೂಗುತ್ತಿದ್ದುದು ಸಾಮಾನ್ಯವಾಗಿತ್ತು.

ಆಡಳಿತ ಪಕ್ಷಕ್ಕೆ ಸಿಕ್ಕ ಶ್ರೀಮಂತ ಪಾಟೀಲ್ ಅಸ್ತ್ರ: ಮಧ್ಯಾಹ್ನದವರೆಗೂ ಬಿಜೆಪಿಯವರನ್ನು ಕೆಣಕಲು ಆಡಳಿತ ಪಕ್ಷದ ಸದಸ್ಯರು ನಡೆಸಿದ ಪ್ರಯತ್ನ ಅಷ್ಟೊಂದು ಯಶಸ್ವಿಯಾದಂತೆ ಕಾಣಲಿಲ್ಲ. ಆಡಳಿತ ಪಕ್ಷದ ನಾಯಕರು ಹಾಗೂ ಶಾಸಕರಿಂದ ಮಾತಿನ ಬಾಣಗಳು ನೇರವಾತಿ ತಮಗೇ ತಾಗುತ್ತಿದ್ದರೂ, ಬಿಜೆಪಿಯವರು ಎಲ್ಲವನ್ನೂ ಸಹಿಸಿಕೊಂಡು ಏನೂ ಆಗಿಲ್ಲ ಎನ್ನುವಂತೆ ಕುಳಿತುಕೊಂಡಿದ್ದರು.

ಮಧ್ಯಾಹ್ನ ಭೋಜನ ವಿರಾಮದ ನಂತರ ಆಡಳಿತ ಪಕ್ಷದ ಶಾಸಕರು ಹಾಗೂ ಸಚಿವರು ಬಿಜೆಪಿಯವರನ್ನು ಕೆಣಕುವ ತಂತ್ರಗಾರಿಕೆಯನ್ನು ಮತ್ತಷ್ಟು ತೀವ್ರಗೊಳಿಸಿ ದರು. ಅದಕ್ಕೆ ಬಿಜೆಪಿಯವರೇ ಬಿಟ್ಟಿದ್ದಾರೆ ಎನ್ನಲಾದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಹೃದಯ ಬೇನೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೊಗಳನ್ನೇ ಅಸ್ತ್ರಗಳನ್ನಾಗಿ ಬಳಸಿ, ಬಿಜೆಪಿ ವಿರುದ್ಧ ನೇರ ವಾಗ್ಧಾಳಿ ನಡೆಸಿದರು.

ಸಚಿವ ಡಿ.ಕೆ.ಶಿವಕುಮಾರ್‌ ನಮ್ಮ ಶಾಸಕರನ್ನು ಅಪಹರಣ ಮಾಡಲಾಗಿದೆ. ಅವರನ್ನು ಉಳಿಸಿಕೊಡಿ ಎಂದು ಆವೇಶಭರಿತರಾಗಿ ಬೇಡಿಕೊಳ್ಳುವ ಮೂಲಕ ಬಿಜೆಪಿಯವರನ್ನು ಕೆಣಕುವ ಪ್ರಯತ್ನ ನಡೆಸಿದರು. ಅದೇ ಅಸ್ತ್ರವನ್ನು ಸಮರ್ಥವಾಗಿ ಬಳಸಲು ತೀರ್ಮಾನ ಮಾಡಿಕೊಂಡೇ ಬಂದಂತೆ ಕಂಡ ಆಡಳಿತ ಪಕ್ಷದ ಸದಸ್ಯರು ನೇರವಾಗಿ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಆದರೂ, ಬಿಜೆಪಿ ಶಾಸಕರು ಮಾತ್ರ ಆಡಳಿತ ಪಕ್ಷದ ಶಾಸಕರ ಮೇಲಿನ ಕೋಪವನ್ನು ಹೊರ ಹಾಕಲೂ ಆಗದೇ, ಮನಸ್ಸಿನಲ್ಲಿ ಇಟ್ಟುಕೊಳ್ಳಲೂ ಆಗದೇ ಕುಳಿತಲ್ಲೇ ತಮ್ಮ ಕೈಯನ್ನು ತಾವೇ ಹಿಚುಕಿಕೊಂಡಿದ್ದು ಮಾತ್ರ ವಿಪರ್ಯಾಸ.

ಯಡಿಯೂರಪ್ಪ ಮೌನವೇ ಆಶ್ಚರ್ಯ
ರಾಜ್ಯದ ಇತಿಹಾಸದಲ್ಲಿ ಪ್ರತಿಪಕ್ಷದ ನಾಯಕ ಅಂದರೆ ಯಡಿಯೂರಪ್ಪ ಎಂಬ ಮಾತು ಸಾಮಾನ್ಯವಾಗಿ ಕೇಳಿ ಬರುತ್ತದೆ. ಒಂದು ಕಾಲದಲ್ಲಿ ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎನ್ನುವುದು ಯಡಿಯೂರಪ್ಪ ಪ್ರತಿಪಕ್ಷದ ನಾಯಕರಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ರೀತಿಯಿಂದ ಪ್ರಚಲಿತವಾಗಿದ್ದ ಮಾತು.

ಆದರೆ, ಗುರುವಾರ ಸದನದಲ್ಲಿ ಆಡಳಿತ ಪಕ್ಷದವರು ಪ್ರತಿಪಕ್ಷದವರ ವಿರುದ್ಧ ನೇರವಾಗಿ ಅಷ್ಟೊಂದು ಆರೋಪ ಮಾಡುತ್ತಿದ್ದರೂ, ಯಡಿಯೂರಪ್ಪ ಮಾತ್ರ ತಮ್ಮ ಆಕ್ರೋಶವನ್ನು ನಿಯಂತ್ರಿಸಿಕೊಂಡು ಕುಳಿತಿದ್ದು, ಪರಿಸ್ಥಿತಿ ಅವರನ್ನು ಕಟ್ಟಿ ಹಾಕಿದಂತಿತ್ತು.

ಕಲಾಪದಲ್ಲಿ ಪ್ರತಿಯೊಂದಕ್ಕೂ ಎದ್ದು ನಿಂತು ಆಕ್ಷೇಪ ಎತ್ತಿ, ಗಲಾಟೆ ಮಾಡುತ್ತಿದ್ದ ಬಿಜೆಪಿಯ ಸಿ.ಟಿ.ರವಿ, ಎಂ.ಪಿ.ರೇಣುಕಾಚಾರ್ಯ, ವಿಶ್ವೇಶ್ವರ ಹೆಗಡೆ ಕಾಗೇರಿ, ಅರಗ ಜ್ಞಾನೇಂದ್ರ ಅವರಿಗೆ ಸ್ಪೀಕರ್‌ ಅವರ ಕಾರ್ಯ ವೈಖರಿಯ ಬಗ್ಗೆಯೂ ಅಸಮಾಧಾನ ಇದ್ದಂತೆ ಕಂಡು ಬಂತು. ಆದರೂ, ಬಾಯಿಗೆ ಬೀಗ ಹಾಕಿಕೊಂಡು ಕುಳಿತಿದ್ದು, ರಾಜ್ಯ ವಿಧಾನಸಭೆ ಇತಿಹಾಸದಲ್ಲಿ ಹೊಸದೊಂದು ದಾಖಲೆಗೆ ಸಾಕ್ಷಿಯಾದಂತಾಯಿತು.

ಆಡಳಿತ ಪಕ್ಷದ ಸದಸ್ಯರು ಏನೇ ಆರೋಪ ಮಾಡಿದರೂ, ಗಲಾಟೆ ಮಾಡದೆ, ಬಾವಿಗಿಳಿದು ಪ್ರತಿಭಟನೆ ಮಾಡದೆ ಬಿಜೆಪಿ ಶಾಸಕರು ಶಾಂತರೀತಿಯಿಂದ ಕುಳಿತುಕೊಳ್ಳಲು ಸ್ಪೀಕರ್‌ ಅಮಾನತು ಮಾಡಿದರೆ, ಸದನದಿಂದ ಹೊರ ಹೋಗಬೇಕಾಗುತ್ತದೆ ಎನ್ನುವ ಆತಂಕ ಕಾಡಿದಂತಿತ್ತು. ಆಡಳಿತ ಪಕ್ಷದ ಸದಸ್ಯರು ಬಿಜೆಪಿಯವರನ್ನು ಕೆಣಕ್ಕಿದ್ದರ ಹಿಂದಿನ ಉದ್ದೇಶವೂ ಅದೇ ಆಗಿತ್ತು ಎನ್ನುವುದು ಮೌನ ವಹಿಸಿ ಕೂತವರ ಮನದ ಮಾತಾಗಿತ್ತು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಚಿಂತನೆ: ಕೊನೆಯ ಪಯಣದ ಸಿದ್ಧತೆಗೆ ಶೌರಿ ಪಾಠ!

ಚಿಂತನೆ: ಕೊನೆಯ ಪಯಣದ ಸಿದ್ಧತೆಗೆ ಶೌರಿ ಪಾಠ!

ಟ್ರಂಪ್‌ ಭರವಸೆಗಳ ಕಥೆಯೇನು?

ಟ್ರಂಪ್‌ ಭರವಸೆಗಳ ಕಥೆಯೇನು?

ಮನೆಯೊಳಗೆ ಬಿದ್ದ ಸೂಜಿ, ಹುಡುಕಾಟ ಹೊರಗೆ!

ಮನೆಯೊಳಗೆ ಬಿದ್ದ ಸೂಜಿ, ಹುಡುಕಾಟ ಹೊರಗೆ!

Paddy

ಬೆಂಬಲ ಬೆಲೆಯ ಭತ್ತ ಖರೀದಿ ಕೇಂದ್ರ ಈಗ ಆರಂಭವಾದರಷ್ಟೇ ಪ್ರಯೋಜನ

26 ದಿನಗಳ ಬಳಿಕ 60 ಕಿ.ಮೀ. ಕ್ರಮಿಸಿ ಮನೆಗೆ ಬಂದ ಶ್ವಾನ

26 ದಿನಗಳ ಬಳಿಕ 60 ಕಿ.ಮೀ. ಕ್ರಮಿಸಿ ಮನೆಗೆ ಬಂದ ಶ್ವಾನ

ನಾನು ಗೆದ್ದರೆ ಅಮೆರಿಕ ಜಯ ಗಳಿಸಿದಂತೆ: ಟ್ರಂಪ್‌

ನಾನು ಗೆದ್ದರೆ ಅಮೆರಿಕ ಜಯ ಗಳಿಸಿದಂತೆ: ಟ್ರಂಪ್‌

ಗ್ರಾಮ ಪಂಚಾಯತ್ ನಲ್ಲಿನ್ನು ಆನ್‌ಲೈನ್‌ ಲೆಕ್ಕ ಪರಿಶೋಧನೆ !

ಗ್ರಾಮ ಪಂಚಾಯತ್ ನಲ್ಲಿನ್ನು ಆನ್‌ಲೈನ್‌ ಲೆಕ್ಕ ಪರಿಶೋಧನೆ !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಪನ್ಯಾಸಕರ ವರ್ಗ ನಿಯಮ ಸಿದ್ಧ: ಶೇ. 12ರಷ್ಟು ಕಾಲೇಜು ಬೋಧಕರಿಗೆ ಅನುಕೂಲ

ಉಪನ್ಯಾಸಕರ ವರ್ಗ ನಿಯಮ ಸಿದ್ಧ: ಶೇ. 12ರಷ್ಟು ಕಾಲೇಜು ಬೋಧಕರಿಗೆ ಅನುಕೂಲ

ಜಗಳಗಂಟ ಸರಕಾರಗಳಿಂದ ಅಭಿವೃದ್ಧಿಗೆ ಹಿನ್ನಡೆ: ಡಿಸಿಎಂ

ಜಗಳಗಂಟ ಸರಕಾರಗಳಿಂದ ಅಭಿವೃದ್ಧಿಗೆ ಹಿನ್ನಡೆ: ಡಿಸಿಎಂ

ನಿಮ್ಮ ಕಷ್ಟ , ಸುಖ ಹಂಚಿಕೊಳ್ಳಲು ಒಂದು ಅವಕಾಶ ನೀಡಿ: ಕುಸುಮಾ

ನಿಮ್ಮ ಕಷ್ಟ , ಸುಖ ಹಂಚಿಕೊಳ್ಳಲು ಒಂದು ಅವಕಾಶ ನೀಡಿ: ಕುಸುಮಾ

ಸಮ್ಮಿಶ್ರ ಸರ್ಕಾರಗಳಿಂದ ಜೆಡಿಎಸ್‍ಗೆ ಹೊಡೆತ: ವೈಎಸ್‍ವಿ ದತ್ತ

ಸಮ್ಮಿಶ್ರ ಸರ್ಕಾರಗಳಿಂದ ಜೆಡಿಎಸ್‍ಗೆ ಹೊಡೆತ: ವೈಎಸ್‍ವಿ ದತ್ತ

ಮಲೆ ಮಹದೇಶ್ವರ ಬೆಟ್ಟ: ಭಕ್ತಾದಿಗಳ ನಿಷೇಧದ ನಡುವೆಯೂ ಸರಳ ಮತ್ತು ಸಂಭ್ರಮದ ತೆಪ್ಪೋತ್ಸವ

ಮಲೆ ಮಹದೇಶ್ವರ ಬೆಟ್ಟ: ಭಕ್ತಾದಿಗಳ ನಿಷೇಧದ ನಡುವೆಯೂ ಸರಳ ಮತ್ತು ಸಂಭ್ರಮದ ತೆಪ್ಪೋತ್ಸವ

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!ಹೊಸ ಸೇರ್ಪಡೆ

bihar

ಬಿಹಾರ ಚುನಾವಣೆ: 71 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ, ಕಣದಲ್ಲಿ 1066 ಅಭ್ಯರ್ಥಿಗಳು

ಚಿಂತನೆ: ಕೊನೆಯ ಪಯಣದ ಸಿದ್ಧತೆಗೆ ಶೌರಿ ಪಾಠ!

ಚಿಂತನೆ: ಕೊನೆಯ ಪಯಣದ ಸಿದ್ಧತೆಗೆ ಶೌರಿ ಪಾಠ!

Loanಚಕ್ರಬಡ್ಡಿಯ ಮೊತ್ತ ಗ್ರಾಹಕರ ಖಾತೆಗೆ ಗೊಂದಲ ಪರಿಹರಿಸಿ

ಚಕ್ರಬಡ್ಡಿಯ ಮೊತ್ತ ಗ್ರಾಹಕರ ಖಾತೆಗೆ ಗೊಂದಲ ಪರಿಹರಿಸಿ

ಟ್ರಂಪ್‌ ಭರವಸೆಗಳ ಕಥೆಯೇನು?

ಟ್ರಂಪ್‌ ಭರವಸೆಗಳ ಕಥೆಯೇನು?

ಮನೆಯೊಳಗೆ ಬಿದ್ದ ಸೂಜಿ, ಹುಡುಕಾಟ ಹೊರಗೆ!

ಮನೆಯೊಳಗೆ ಬಿದ್ದ ಸೂಜಿ, ಹುಡುಕಾಟ ಹೊರಗೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.