
ಬಿಎಂಟಿಸಿ & ಕೆಎಸ್‌ಆರ್‌ಟಿಸಿ; ಬಸ್ ಪೂಜೆಗೆ ಕೇವಲ 100 ರೂ.: ಸಿಬಂದಿಗೆ ನಿರಾಸೆ
ಒಂದು ನಿಂಬೆಹಣ್ಣಿನ ಬೆಲೆ 10 ರೂ....
Team Udayavani, Oct 3, 2022, 9:19 PM IST

ಬೆಂಗಳೂರು: ಬಸ್‌ಗಳ ಪೂಜೆಗೆ ತಲಾ ನೂರು ರೂ. ನೀಡಿರುವುದು ಸಾರಿಗೆ ಚಾಲನಾ ಸಿಬಂದಿಗೆ ನಿರಾಸೆ ಮೂಡಿಸಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹಾಗೂ ಕೆಎಸ್‌ಆರ್‌ಟಿಸಿಯು ಆಯುಧ ಪೂಜೆ ಪ್ರಯುಕ್ತ ನಡೆಸುವ ಬಸ್‌ಗಳ ಪೂಜೆ ಮತ್ತು ಅಲಂಕಾರ ವೆಚ್ಚಕ್ಕೆ ಈ ಬಾರಿಯೂ ಪ್ರತಿ ಬಸ್‌ಗೆ ಕೇವಲ 100 ರೂ. ನೀಡಲಾಗಿದೆ.
ಮಾರುಕಟ್ಟೆಗಳಲ್ಲಿ ಹೂ-ಹಣ್ಣಿನ ಬೆಲೆ ಗಗನಕ್ಕೇರಿದೆ. ಒಂದು ನಿಂಬೆಹಣ್ಣಿನ ಬೆಲೆ 10 ರೂ. ಆಗಿದೆ. ವಾಹನಕ್ಕೆ ಹಾಕುವ ಹೂವಿನ ಹಾರಕ್ಕೆ ಕನಿಷ್ಠ 300-400 ರೂ. ಬೇಕಾಗುತ್ತದೆ. ಬಾಳೆ ಕಂಬ, ಬೂದಗುಂಬಳ ಸೇರಿ ಇತರೆ ಪೂಜೆ ಸಾಮಗ್ರಿಗಳಿಗೆ 200 ರಿಂದ 300 ರೂ. ಖರ್ಚಾಗುತ್ತದೆ. ಬಿಎಂಟಿಸಿ ನೀಡುವ ಬಿಡಿಗಾಸಿಗೆ ಅರ್ಧಮಾರು ಹೂವು ಕೂಡ ಬರುವುದಿಲ್ಲ. ಸಾವಿರಾರು ರೂ. ನೀಡಿ ಎನ್ನುವುದಿಲ್ಲ, ಕನಿಷ್ಠ ಅಲಂಕಾರಕ್ಕಾಗುವಷ್ಟಾದರೂ ಹೆಚ್ಚಳ ಮಾಡಬೇಕು ಎಂದು ಚಾಲಕರೊಬ್ಬರು ಆಗ್ರಹಿಸಿದರು.
ಡಿಪೋಗೆ 10 ಸಾವಿರ: ಕೆಎಸ್‌ಆರ್‌ಟಿಸಿಯಲ್ಲಿಯೂ ತಲಾ ಒಂದು ಬಸ್ ಪೂಜೆಗೆ 100 ರೂ.ಗಳಂತೆ ಡಿಪೋಗಳಿಗೆ ಪೂಜೆ ಖರ್ಚಿಗೆ ಹಣವನ್ನು ವರ್ಗಾಯಿಸಲಾಗಿದೆ. 100 ಬಸ್‌ಗಳಿರುವ ಪ್ರತಿ ಡಿಪೋಗೆ 10 ಸಾವಿರ ರೂ. ಬಿಡುಗಡೆ ಮಾಡಲಾಗಿದೆ. ಡಿಪೋದ ಎಲ್ಲ ವಾಹನಗಳಿಗೂ ಒಟ್ಟಾಗಿ ಪೂಜೆ ಸಲ್ಲಿಸಲಾಗುತ್ತದೆ. ಬೆಂಗಳೂರು ಹೊರತುಪಡಿಸಿ, ಇತರೆ ಭಾಗಗಳಲ್ಲಿ ಹೂವಿನ ದರ ಕಡಿಮೆ ಇದ್ದು, ಡಿಪೋಗೆ ನೀಡುವ 10 ಸಾವಿರ ರೂ. ಸಾಕಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಈ ಮಧ್ಯೆ ಬಿಎಂಟಿಸಿ ಚಾಲಕರು ತಮ್ಮ ಬಸ್‌ಗಳನ್ನು ಅದ್ಧೂರಿಯಾಗಿ ಸಿಂಗರಿಸಿದ್ದಾರೆ. ಜಯನಗರ, ಬನಶಂಕರಿ, ರಾಜರಾಜೇಶ್ವರಿ ಡಿಪೋಗಳಲ್ಲಿ ಬಸ್‌ಗಳಿಗೆ ವಿಶೇಷ ಅಲಂಕಾರ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಾಖಲೆ ಸಮೇತ ದೂರು ನೀಡಿದರೆ ದೂರುದಾರಿಗೂ ರಕ್ಷಣೆ : ಲೋಕಾಯುಕ್ತ ಪಾಟೀಲ್

ಮಣಿಪಾಲ: ಶಿವಪಾಡಿಯಲ್ಲಿ”ಅತಿರುದ್ರ ಮಹಾಯಾಗ ಸಂಕಲ್ಪ ದಿವಸ್”ಪೂರ್ವ ಸಿದ್ಧತೆ ಸಭೆ

ಬಲಿಜ ಸಮುದಾಯಕ್ಕೆ ಕೂಡಲೇ ಪೂರ್ಣ ಪ್ರಮಾಣದ 2ಎ ಮೀಸಲಾತಿ ಸೌಲಭ್ಯ ಕಲ್ಪಿಸಿ : ಮಾಜಿ ಸಚಿವ ಎಂ.ಆರ್. ಸೀತಾರಾಂ

ಬಿಎಸ್ ವೈ ಮಾರ್ಗದರ್ಶನ, ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ: ನಳಿನ್ ಕಟೀಲ್

ಸುಮಲತಾ ಅವರು ಬಿಜೆಪಿ ಸೇರಿದರೆ ಸಂತೋಷ: ಸಿ.ಟಿ ರವಿ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
