ಭೀಕರ ಕಾರು ಅಪಘಾತ:ನ್ಯೂಇಯರ್‌ ಸಂಭ್ರಮದಲ್ಲಿದ್ದ ಮೂವರ ದುರ್ಮರಣ

Team Udayavani, Jan 2, 2019, 4:44 AM IST

ಬೆಂಗಳೂರು: ಹೊಸಕೋಟೆಯ ಮೈಲಾಪುರ ಗೇಟ್‌ ಬಳಿ ಬುಧವಾರ ನಸುಕಿನ ವೇಳೆ ಟಾಟಾ  ಸಫಾರಿ ಕಾರೊಂದು ಡಿವೈಡರ್‌ಗೆ ಢಿಕ್ಕಿಯಾಗಿ ಭೀಕರ ಅವಘಡ ಸಂಭವಿಸಿದ್ದು ಮೂವರು ದಾರುಣವಾಗಿ ಸಾವನ್ನಪ್ಪಿ , ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತದ ತೀವ್ರತೆಗೆ ಕಾರು ಅಡಿಮೇಲಾಗಿ ಬಿದ್ದಿದ್ದು ಸ್ಥಳದಲ್ಲೇ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. 

ಮೃತ ದುರ್‌ದೈವಿಗಳು ಆಂಧ್ರದ ಪಶ್ಚಿಮ ಗೋದಾವರಿ ಮೂಲದ ಶ್ರೀನಾಥ್‌ (40), ಶ್ರೀಲೇಖಾ(36)ಮತ್ತು ಶ್ರೀಲತಾ (32)ಎನ್ನುವರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಹೊಸ ವರ್ಷದ ಸಂಭ್ರಮಾಚರಣೆ ನಡೆಸಿ ತವರಿನಿಂನ ವೈಟ್‌ ಫೀಲ್ಡ್‌ಗೆ ಆಗಮಿಸುವ ವೇಳೆ  ದುರಂತ ಸಂಭವಿಸಿದೆ. 

ಹಸಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ