ಐಟಿ ಡೀಲ್‌!: ಸಿಎಂ ವಿರುದ್ಧ ಕಿಡಿ ಕಾರಿದ ಬಿಎಸ್‌ವೈ,ವಿಜಯೇಂದ್ರ 

Team Udayavani, Sep 5, 2018, 4:35 PM IST

ಬೆಂಗಳೂರು: ‘ಮೈತ್ರಿ ಸರ್ಕಾರ ಉರುಳಿಸಲು ಬಿಜೆಪಿ ಸಂಚು ಹೂಡಿದ್ದು, ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಐಟಿ ಮುಖ್ಯಸ್ಥ ಬಾಲಕೃಷ್ಣ ಅವರನ್ನು ಭೇಟಿಯಾಗಿದ್ದಾರೆ’ ಎನ್ನುವ ಗಂಭೀರ ಆರೋಪವನ್ನು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಮಾಡಿದ್ದಾರೆ. 

ಬಿಎಸ್‌ವೈ ಕಿಡಿ 
ಆರೋಪದ ವಿರುದ್ದ ಕಿಡಿ ಕಾರಿರುವ ಬಿ.ಎಸ್‌.ಯಡಿಯೂರಪ್ಪ ‘ಜವಾಬ್ದಾರಿ ಅರಿತು ಮುಖ್ಯಮಂತ್ರಿಗಳು ಹೇಳಿಕೆ ಕೊಡಲಿ. ಯಾವ ಐಟಿ, ಯಾವ ಇಡಿ. ನಮಗೂ ಅದಕ್ಕೂ ಯಾವ ಸಂಬಂಧ’ ಎಂದು ಪ್ರಶ್ನಿಸಿದ ಅವರು ‘ಜನತೆಯಲ್ಲಿ ಅನಗತ್ಯ ಗೊಂದಲ ಹುಟ್ಟಿಸಲು ಕುಮಾರಸ್ವಾಮಿ ಅವರು ಈ ಹೇಳಿಕೆ ನೀಡಿದ್ದಾರೆ’ ಎಂದು ಕಿಡಿ ಕಾರಿದ್ದಾರೆ. 

ವಿಜಯೇಂದ್ರ ಆಕ್ರೋಶ 

ಬಿ.ವೈ.ವಿಜಯೇಂದ್ರ ಅವರು ಸುದ್ದಿಗಾರರೊಂದಿಗೆ ಮಾತನಾಡಿ ‘ಸಿಎಂ ಮಾಡಿರುವ ಆರೋಪ ಅವರ ಸ್ಥಾನಕ್ಕೂ ಗೌರವ ತರುವುದಿಲ್ಲ, ಬಾಲಿಷ ಹೇಳಿಕೆ ಕೊಡಬೇಡಿ ಅಸ್ಥಿರ ಮನಸ್ಸಿನಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ’ ಎಂದು ಕಿಡಿ ಕಾರಿದ್ದಾರೆ. 

‘ಆ ಹೆಸರಿನ ಐಟಿ ಮುಖ್ಯಸ್ಥರು ಇದ್ದಾರೆ ಎನ್ನುವುದೂ ನನಗೆ ಗೊತ್ತಿರಲಿಲ್ಲ. ರಾಜ್ಯದ ಗುಪ್ತಚರ ಅವರ ಬಳಿಯೆ ಇದೆ. ಯಡಿಯೂರಪ್ಪ ಎಲ್ಲಿ ಹೋಗ್ತಾರೆ, ವಿಜಯೇಂದ್ರ ಎಲ್ಲಿ ಹೋಗ್ತಾರೆ ಅನ್ನುವುದು ನಮಗಿಂತ ಚೆನ್ನಾಗಿ ಅವರಿಗೆ ಗೊತ್ತಿದೆ.ಅದರಿಂತ ತನಿಖೆ ಮಾಡಲಿ’ ಎಂದು ಕಿಡಿ ಕಾರಿದರು. 

ಕ್ಯಾಮರಾ ಹಿಡ್ಕೊಂಡು ಹೋಗಕ್ಕೆ ಆಗುತ್ತಾ ? !
ಸುದ್ದಿಗಾರರು ವಿಜಯೇಂದ್ರ ಅವರು ಎಲ್ಲಿ  ಐಟಿ ಮುಖ್ಯಸ್ಥರನ್ನು ಭೇಟಿಯಾಗಿದ್ದು ಎಂದು ಪ್ರಶ್ನಿಸಿದಾಗ ‘ನಾನೇನು ಕ್ಯಾಮರಾ ಹಿಡಿದುಕೊಂಡು  ಹೋಗ್ಲಿಕ್ಕೆ ಆಗುತ್ತದಾ? ನನಗೆ ಮಾಹಿತಿ ಬಂದಿದೆ ನಾನು ಹೇಳಿದ್ದೇನೆ’ ಎಂದಿದ್ದಾರೆ. 

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ