B. S. Yediyurappa ವರ್ತಮಾನದ ದುರಂತ ನಾಯಕ: ರಮೇಶ್ ಬಾಬು ಟೀಕೆ
Team Udayavani, Aug 4, 2024, 11:01 PM IST
ಬೆಂಗಳೂರು: ಈ ಹಿಂದೆ ವಚನಭ್ರಷ್ಟತೆ ಆರೋಪ ಮಾಡಿದ್ದ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೇ ಇಂದು ಬಿ.ಎಸ್. ಯಡಿಯೂರಪ್ಪ ಕೈಜೋಡಿಸಿ ಪಾದಯಾತ್ರೆ ಆರಂಭಿಸಿದ್ದಾರೆ.
ಈ ಮೂಲಕ ವರ್ತಮಾನದ ದುರಂತ ನಾಯಕರಾಗಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ.
ಕುಮಾರಸ್ವಾಮಿಯಿಂದ ಅಧಿಕಾರ ವಂಚಿತ ರಾಗಿ ವಚನ ಭ್ರಷ್ಟತೆ ಆರೋಪ ಮಾಡಿ, ಇದೇ ಕಾರಣಕ್ಕೆ ಹೋರಾಟವನ್ನೂ ಮಾಡಿ ಬಿಎಸ್‌ವೈ ಅಧಿಕಾರಕ್ಕೆ ಬಂದರು. ಅನಂತರ ಬೇರೆ ಬೇರೆ ಸಂದರ್ಭಗಳಲ್ಲಿ ದೇವೇಗೌಡರ ಕುಟುಂಬದ ಮೇಲೆ ವಿಧಾನ ಮಂಡಲದ ಒಳಗಡೆ ಗಂಭೀರ ಆರೋಪಗಳನ್ನು ಮಾಡಿದರು. ಅವು ದಾಖಲೆ ಕೂಡ ಆಗಿವೆ. ಆದರೆ ಮಗನ ರಾಜಕೀಯ ಭವಿಷ್ಯಕ್ಕಾಗಿ ಅದೇ ಕುಮಾರಸ್ವಾಮಿ ಜತೆಗೆ ಕೈಜೋಡಿಸಿದ್ದಾರೆ.
ಯಡಿಯೂರಪ್ಪ 2008ರಲ್ಲಿ ಕುಮಾರಸ್ವಾಮಿ ವಿರುದ್ಧ ಮಾಡಿದ್ದ ವಚನ ಭ್ರಷ್ಟತೆ ಆರೋಪವನ್ನು ಈಗ ಹಿಂಪಡೆಯುತ್ತಾರಾ? 2011ರ ಮಾರ್ಚ್ 17ರಂದು ಮುಡಾದಲ್ಲಿ ದೇವೇಗೌಡ ಕುಟುಂಬ ಅಕ್ರಮವಾಗಿ 48 ನಿವೇಶನ ಪಡೆದಿರುವ ಆರೋಪವನ್ನು ವಾಪಸ್ ಪಡೆಯುತ್ತಾರಾ? ಅದೇ ದಿನ ಜಂತ್‌ಕಲ್ ಮೈನಿಂಗ್ ನವೀಕರಣದಲ್ಲಿ ದೇವೇಗೌಡರ ಕುಟುಂಬದವರು ಪಾಲುದಾರಿಕೆ ಪಡೆದಿದ್ದಾರೆ ಎಂದು ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆಯುತ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಲಂಚ ಸ್ವೀಕರಿಸುತ್ತಿದ್ದ ವೇಳೆ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ
Hubballi: ಕರ್ತವ್ಯದಲ್ಲಿದ್ದ ಎಎಸ್‌ಐ ತಲೆ ಮೇಲೆ ಬಿದ್ದ ಕಬ್ಬಿಣದ ರಾಡ್; ತೀವ್ರ ಗಾಯ
Belagavi: ಕಾಂಗ್ರೆಸ್ ನ ಆಂತರಿಕ ಕಲಹ ಇನ್ನಷ್ಟು ತೀವ್ರವಾಗಲಿದೆ: ಶೆಟ್ಟರ್
State Politics; ಸರ್ಕಾರ ಇರುವವರೆಗೂ ಸಿದ್ದರಾಮಯ್ಯನವರೇ ಸಿಎಂ…: ದೇಶಪಾಂಡೆ
Hubballi: ಮಹಾದಾಯಿಗೆ ಕ್ಲಿಯರೆನ್ಸ್ ನೀಡಲು ಬಿಜೆಪಿಗೆ ಯಾಕೆ ಆಗುತ್ತಿಲ್ಲ? ಸಚಿವ ಲಾಡ್ ಕಿಡಿ
MUST WATCH
ಹೊಸ ಸೇರ್ಪಡೆ
Kolkata: ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದರೂ ಮುಂದುವರಿದ ಕಿರಿಯ ವೈದ್ಯರ ಪ್ರತಿಭಟನೆ!
ಮಡಾಮಕ್ಕಿ: ವೃದ್ದ ವಿಷ ಸೇವಿಸಿ ಚಿಕಿತ್ಸೆ ಫಲಿಸದೆ ಸಾವು
Haryana Assembly Election: ಆಪ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ
Kangana Ranaut: 32 ಕೋಟಿ ರೂ.ಗೆ ಬಂಗಲೆ ಮಾರಿದ ಸಂಸದೆ ಕಂಗನಾ
Manipur: ಮತ್ತೆ ಉದ್ವಿಗ್ನ, ಇಂಟರ್ನೆಟ್ ಸ್ಥಗಿತ, ಕರ್ಫ್ಯೂ ಜಾರಿಗೊಳಿಸಿದ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.