92ನೇ ವಯಸ್ಸಿನಲ್ಲೂ ದುಡಿಯುತ್ತಲೇ ಇದ್ದ ಉತ್ಸಾಹಿ

ಪರಿಶ್ರಮದ ಪರಂಪರೆಗೆ ಬುನಾದಿ ಹಾಕಿದ ಆರ್‌ಎನ್‌ಎಸ್‌

Team Udayavani, Dec 18, 2020, 5:30 AM IST

92ನೇ ವಯಸ್ಸಿನಲ್ಲೂ ದುಡಿಯುತ್ತಲೇ ಇದ್ದ ಉತ್ಸಾಹಿ

ಆರ್‌.ಎನ್‌. ಶೆಟ್ಟಿ ಎಂಬ ಹೆಸರು ನಾಡಿಗೆ ಚಿರಪರಿ ಚಿತ. ಉತ್ತರ ಕನ್ನಡದ ಭಟ್ಕಳ ತಾಲೂಕಿನ ಮಾವಳ್ಳಿ ಗ್ರಾಮದ ಮುರ್ಡೇಶ್ವರದಲ್ಲಿ ಜನಿಸಿದ ಇವರು ಗುತ್ತಿಗೆ ದಾರರಾಗಿ, ಉದ್ಯಮಿಯಾಗಿ, ನವ ಮುಡೇìಶ್ವರದ ನಿರ್ಮಾಪಕರಾಗಿ, ಶಿಕ್ಷಣ ಪ್ರೇಮಿಯಾಗಿ ನಾಡಿಗೆ ಬಹು ದೊಡ್ಡ ಕೊಡುಗೆ ನೀಡಿ ಹೊರಟು ಹೋಗಿ ದ್ದಾರೆ. ಯೌವ್ವನದ ದಿನಗಳಲ್ಲಿ ದಿನಕ್ಕೆ 18 ತಾಸು ದುಡಿಯುತ್ತಿದ್ದ ಇವರು ತಮ್ಮ 92ನೇ ವಯಸ್ಸಿನಲ್ಲೂ ದುಡಿಯುತ್ತಲೇ ಇದ್ದರು. ದುಡಿಮೆಯೇ ದೇವರೆಂದು ನಂಬಿ ದೇವರು ಕೊಟ್ಟ ಸಂಪತ್ತನ್ನು ಮತ್ತೆ ದುಡಿಸುತ್ತ ದಾನ, ಧರ್ಮ ಮಾಡುತ್ತ ಎತ್ತರಕ್ಕೇರಿದ ಕರ್ನಾಟಕದ ವಿಶಿಷ್ಟ ವ್ಯಕ್ತಿಗಳಲ್ಲೊಬ್ಬರು.

1928ರ ಆ.15ರಂದು ಜನಿಸಿದ ಇವರು 24 ಸಂಸ್ಥೆ ಗಳನ್ನು ಸ್ಥಾಪಿಸಿ 10 ಸಾವಿರಕ್ಕೂ ಹೆಚ್ಚು ಜನರಿಗೆ ಕಾಯಂ ಉದ್ಯೋಗ, ಅಷ್ಟೇ ಜನರಿಗೆ ಪರ್ಯಾಯ ಉದ್ಯೋಗ ನೀಡಿದ್ದಾರೆ. ಕೃಷಿ, ಜಲ, ಸೌರ, ಗಾಳಿ ವಿದ್ಯುತ್‌ ಉತ್ಪಾದನಾ ಘಟಕಗಳು, ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಮುಡೇìಶ್ವರದ ಸರ್ವತೋಮುಖ ಅಭಿ ವೃದ್ಧಿ, ಅಣೆಕಟ್ಟು, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಕೊಂಕಣ ರೈಲ್ವೆ ಕಾಮಗಾರಿ, ನೀರಾವರಿ ಯೋಜನೆ ಸಹಿತ ಹಲವು ಅಭಿವೃದ್ಧಿ ಯೋಜನೆಗಳನ್ನು ತಮ್ಮ ಆರ್‌.ಎನ್‌. ಶೆಟ್ಟಿ ಸಮೂಹ ಸಂಸ್ಥೆಗಳಿಂದ ಮಾಡಿಸಿ ದ್ದಾರೆ. ಶಿರಸಿಯಿಂದ ಗುತ್ತಿಗೆದಾರ ವೃತ್ತಿ ಆರಂಭಿಸಿದ ಆರ್‌ಎನ್‌ಎಸ್‌ ನೀಲೇಕಣಿಯಲ್ಲಿ ಮನೆ ಮಾಡಿದ್ದರು. ಆಧಾರ್‌ ಕಾರ್ಡ್‌ನ ಜನ್ಮದಾತ ನಂದನ ನೀಲೇಕಣಿ ಅವರ ತಂದೆ ಮತ್ತು ಆರ್‌ಎನ್‌ಎಸ್‌ ಒಟ್ಟಿಗೆ ಶಿರಸಿಯ ಲ್ಲಿದ್ದರು. ಆಗ ಆರ್‌ಎನ್‌ಎಸ್‌ ನಿರ್ಮಿಸಿದ ಸೇತುವೆ ಗಳು ಜಿಲ್ಲಾದ್ಯಂತ ಇದ್ದು ಇಂದಿಗೂ ಮುಕ್ಕಾಗಿಲ್ಲ. ಉತ್ತಮ ಗುಣಮಟ್ಟದ ಕೆಲಸ, ಸಮಾಜಕ್ಕೆ ಉಪಯುಕ್ತವಾಗುವ ಯೋಜನೆಗಳು ಶೆಟ್ಟರಿಗೆ ಕೀರ್ತಿ ತಂದವು. ಅವರ ಸಾಧನೆ ವಿವರಗಳು ಹೀಗಿದೆ.

ಮುಡೇìಶ್ವರದ ಅಭಿವೃದ್ಧಿ: ಶಿವನ ಆತ್ಮಲಿಂಗದ ಅಂಶವುಳ್ಳ ಪಂಚಕ್ಷೇತ್ರಗಳಲ್ಲಿ ಒಂದಾದ ಮುಡೇìಶ್ವರ ದೇವರ ಪರಮಭಕ್ತರಾದ ಇವರು 1978ರ ಸುಮಾರು ಮುರ್ಡೇಶ್ವರದ ಅಭಿವೃದ್ಧಿ ಕಾರ್ಯವನ್ನು ದೇವಾಲಯದ ನವೀಕರಣದಿಂದ ಆರಂಭಿಸಿದರು. ಮದ್ರಾಸಿನಿಂದ ಬಂದ ಎಸ್‌.ಕೆ. ಆಚಾರಿ ಎಂಬ ಪ್ರಸಿದ್ಧ ಶಿಲ್ಪಿ ಶಿಲಾಮಯ ಮುಡೇìಶ್ವರ ದೇವಾ ಲಯವನ್ನು 4 ವರ್ಷದಲ್ಲಿ ನಿರ್ಮಾಣ ಮಾಡಿದರು. ಸಿಮೆಂಟ್‌ನ ನಿರ್ಮಾಣ ಕಾಮಗಾರಿಯನ್ನು ಶಿವಮೊ ಗ್ಗದ ಕಾಶಿನಾಥ ಮಾಡಿದರು. ಅದೇ ಸಮಯದಲ್ಲಿ ಅವಿದ್ಯಾವಂತರಿಗೆ ಉದ್ಯೋಗ ಕೊಡಲು ಮುರ್ಡೇಶ್ವರ ಹಂಚಿನ ಕಾರ್ಖಾನೆ ಆರಂಭಿಸಿದರು. ದೇವಾಲಯದ ಹಿಂದಿನ ಗುಡ್ಡದಲ್ಲಿ ನಾಲ್ಕು ಅತಿಥಿ ಗೃಹಗಳು ತಲೆ ಎತ್ತಿದವು. ಮುರ್ಡೇಶ್ವರದಲ್ಲಿ ಅತಿರುದ್ರ-ಮಹಾರುದ್ರ ಯಾಗಗಳು, ಅಷ್ಟಪವಿತ್ರ ನಾಗಮಂಡಲಗಳು ನಡೆದವು.

ಗುಡ್ಡದ ಮೇಲೆ ಸಿಮೆಂಟ್‌ ಕಲಾಕೃತಿಯಾಗಿ ಗೀತೋಪದೇಶ, ಸೂರ್ಯನಾರಾಯಣ, ಸಪ್ತರ್ಷಿ ಗಳ ಮೂರ್ತಿ ನಿರ್ಮಾಣವಾದವು. ಕಾಶಿನಾಥ ಅವರಿಂದ 123 ಅಡಿ ಎತ್ತರದ ಪದ್ಮಾಸನರೂಢ ಈಶ್ವರನ ಮೂರ್ತಿ ನಿರ್ಮಾಣವಾಯಿತು. ಶಿವ ಕುಳಿತ ಗುಡ್ಡದೊಳಗಿನ ಗುಹೆಯಲ್ಲಿ ಭೂಕೈಲಾಸದ ಕಥೆ ಹೇಳುವ ಸಿಮೆಂಟ್‌ ಶಿಲ್ಪಗಳು ನಿರ್ಮಾಣ ವಾದವು. ದೇಶದಲ್ಲಿ ಅಪರೂಪವಾದ 249 ಅಡಿ ಎತ್ತರದ ರಾಜಗೋಪುರ ನಿರ್ಮಾಣವಾಯಿತು.

ದೇವರಿಗೆ ಚಿನ್ನದ ಸಕಲ ಆಭರಣ, ಚಿನ್ನದ ರಥ, ಧ್ವಜಸ್ತಂಭಕ್ಕೆ ಚಿನ್ನದ ಲೇಪನ, ಭಕ್ತರಿಗೆ ಹವಾನಿಯಂತ್ರಿತ ಪ್ರಸಾದ ಭೋಜನ, ಎರಡು ಕಲ್ಯಾಣ ಮಂಟಪ, ಎಲ್ಲ ವರ್ಗದ ಅತಿಥಿಗಳಿಗೆ ವಸತಿಗೃಹಗಳು ನಿರ್ಮಾಣ ವಾದವು. ಮುಡೇìಶ್ವರ ದೇಶದ ಪ್ರವಾಸಿ ನಕ್ಷೆಯಲ್ಲಿ ತನ್ನನ್ನು ಅಭಿಮಾನದಿಂದ ಗುರುತಿಸಿಕೊಂಡಿತು. ತಾವು ಕಲಿತ ಪ್ರಾಥಮಿಕ ಶಾಲೆಗೆ ನೂತನ ಭವ್ಯ ಕಟ್ಟಡ, ಊರ ಮೀನು ಪೇಟೆಗೊಂದು ಕಟ್ಟಡ ಸಹಿತ ಸುತ್ತಮುತ್ತಲಿನ ದೇವಸ್ಥಾನಗಳಿಗೆ ನೆರವು ಮಾತ್ರವಲ್ಲ, ಕೆಲವು ದೇವಸ್ಥಾನಗಳನ್ನು ಆರ್‌.ಎನ್‌. ಶೆಟ್ಟಿಯವರೇ ಕಟ್ಟಿಸಿಕೊಟ್ಟಿದ್ದಾರೆ.

ಶಿಕ್ಷಣ ಸಂಸ್ಥೆಗಳು: ಎಸ್ಸೆಸ್ಸೆಲ್ಸಿ ಓದಿದ ವಿದ್ಯಾರ್ಥಿಗಳಿಗೆ ವೃತ್ತಿ ತರಬೇತಿ ನೀಡಲು ಆರ್‌ಎನ್‌ಎಸ್‌ ಪಾಲಿಟೆಕ್ನಿಕ್‌ ಮುಡೇìಶ್ವರದಲ್ಲಿ ಆರಂಭವಾಯಿತು. ನಾಲ್ಕು ದಶಕ ದಲ್ಲಿ 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡಿದ್ದಾರೆ. ರೂರಲ್‌ ಪಾಲಿಟೆಕ್ನಿಕ್‌ ಎಂಬ ಯೋಜನೆಯನ್ವಯ ಹಳ್ಳಿಹಳ್ಳಿಗೆ ಹೋಗಿ ಮಹಿಳೆ ಯರನ್ನು, ಪುರುಷರನ್ನು ಸಂಘಟಿಸಿ ವೃತ್ತಿ ತರಬೇತಿ ನೀಡಿದ್ದಾರೆ. ವಯಸ್ಸು, ವಿದ್ಯಾರ್ಹತೆ ನಿರ್ಬಂಧ ಇಲ್ಲದೆ ಆಸಕ್ತರೆಲ್ಲರಿಗೆ ಹೊಲಿಗೆ, ಮೆಕ್ಯಾನಿಕ್‌, ಟೈಪಿಂಗ್‌, ಮೊಬೈಲ್‌ ರಿಪೇರಿ ಸಹಿತ 25ಕ್ಕೂ ಹೆಚ್ಚು ವೃತ್ತಿಗಳಿಗೆ ಉಚಿತ ತರಬೇತಿ ನೀಡಲಾಗಿದೆ. ಇಲ್ಲಿ ತರಬೇತಿ ಪಡೆದ ಶೇ.60 ಜನ ಸ್ವಂತ ಉದ್ಯೋಗ ಮಾಡುತ್ತಿದ್ದಾರೆ. 30 ಸಾವಿರ ಜನ ಈವರೆಗೆ ತರಬೇತಿ ಪಡೆದಿದ್ದಾರೆ. ಆರ್‌ಎನ್‌ಎಸ್‌ ನರ್ಸಿಂಗ್‌ ಕಾಲೇಜು, ಪಿಯು ಕಾಲೇಜು, ಪದವಿ ಕಾಲೇಜು, ವಿದ್ಯಾನಿಕೇತನ ಮೊದಲಾದ ಸಂಸ್ಥೆಗಳು ಮುಡೇìಶ್ವರದ ಯುವಕ ರಿಗೆ ವಿದ್ಯೆ ನೀಡಿವೆ. ಬೆಂಗಳೂರಿನಲ್ಲಿ ಆರ್‌ಎನ್‌ಎಸ್‌ ತಾಂತ್ರಿಕ ಮಹಾವಿದ್ಯಾಲಯ, ಪಿಯು ಕಾಲೇಜು, ಪ್ರಥಮ ದರ್ಜೆ ಕಾಲೇಜು, ಇಂಟರ್‌ನ್ಯಾಶನಲ್‌ ಸ್ಕೂಲ್‌, ಸ್ಕೂಲ್‌ ಆಫ್‌ ಆರ್ಕಿಟೆಕ್ಚರ್‌, ಶ್ರೀಮತಿ ಸುಧಾ ಆರ್‌.ಎನ್‌. ಶೆಟ್ಟಿ ಶಾಲೆ ತಲೆ ಎತ್ತಿದವು.

ಸಾರ್ವಜನಿಕ ಗೌರವ: 2009ರಲ್ಲಿ ಬೆಂಗಳೂರು ವಿವಿ ಗೌರವ ಡಾಕ್ಟರೇಟ್‌, ಎಫ್ಕೆಸಿಸಿಐನಿಂದ ವಿಶ್ವೇಶ್ವರಯ್ಯ ಮೆಮೋರಿಯಲ್‌ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕಾಸಿಯಾದಿಂದ ಕೈಗಾರಿಕಾ ರತ್ನ ಪ್ರಶಸ್ತಿ, ಕೆನರಾ ಕಾಲೇಜು ಸೊಸೈಟಿಯಿಂದ ಕೆನರಾ ರತ್ನ ಪುರಸ್ಕಾರ ಹಾಗೂ ವಿವಿಧ ಮಠಗಳು ಸಹಿತ ಧಾರ್ಮಿಕ ಕ್ಷೇತ್ರದ ಮುಖಂಡರು ಆರ್‌.ಎನ್‌. ಶೆಟ್ಟಿಯವರನ್ನು ಸನ್ಮಾನಿಸಿ ಕ್ಷೇತ್ರ ಗೌರವ ನೀಡಿದ್ದಾರೆ.

ಕೈಗಾರಿಕೆ, ಉದ್ಯೋಗ, ನಿರ್ಮಾಣ: ಆರ್‌ಎನ್‌ಎಸ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌, ನವೀನ್‌ ಸ್ಟ್ರಕ್ಚರಲ್‌ ಆ್ಯಂಡ್‌ ಎಂಜಿನಿಯರಿಂಗ್‌ ಕಂಪನಿ, ಅಪ್ಪರ್‌ ಭದ್ರಾ ಪ್ರೊಜೆಕ್ಟ್, ಶರಾವತಿ ಟೇಲರೀಸ್‌ ಡ್ಯಾಂ, ಸುಪಾ ಡ್ಯಾಂ, ವಾರಾಹಿ ಡ್ಯಾಂ, ನೃಪತುಂಗಾ ರೋಡ್‌, ಓಲ್ಡ್‌ ಏರ್‌ಪೋರ್ಟ್‌ ರೋಡ್‌, ಆರ್‌ಎನ್‌ಎಸ್‌ ವಿಂಡ್‌ ಪವರ್‌ ಗದಗ, ಆರ್‌ಎನ್‌ಎಸ್‌ ಸೋಲಾರ್‌ ಪವರ್‌, ಪಾವಗಡ, ಅಪ್ಪರ್‌ ಕೃಷ್ಣಾ ಪ್ರೊಜೆಕ್ಟ್, ಕೊಂಕಣ ರೈಲ್ವೆಯ 18 ಸುರಂಗಗಳು, ನಾರಾಯಣಪುರದಲ್ಲಿ 12 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ, ಪಣಜಿ- ಮಂಗಳೂರು, ಧಾರವಾಡ-ಬೆಳಗಾವಿ ಹೈವೇ, ಸರ್ವಧರ್ಮ ಪ್ರಾರ್ಥನಾ ಮಂದಿರ (ಆರ್‌ಎನ್‌ಎಸ್‌ ಹಾಸ್ಪಿಟಲ್‌ ಎದುರು), ಕೃಷಿ ಪ್ರಯೋಗಗಳು, ಹಣ್ಣಿನ ತೋಟಗಳು, ಶಂಕರ ಮಠ ಧಾರವಾಡ, ಆರ್‌ಎನ್‌ಎಸ್‌ ಸ್ಟೇಡಿಯಂ ಧಾರವಾಡ, ಆರ್‌ಎನ್‌ಎಸ್‌ ಪಾಲಿಟೆಕ್ನಿಕ್‌ ಶಿರಸಿ, ಇಡಗುಂಜಿಯಿಂದ ಮುಡೇì ಶ್ವರ ಕುಡಿಯುವ ನೀರಿನ ಯೋಜನೆಗಳನ್ನು ನಿರ್ಮಿ ಸಲಾಗಿದೆ. ಮುಡೇìಶ್ವರ ಸಿರಾಮಿಕ್‌ ಲಿಮಿಟೆಡ್‌ ನೆಲಹಾಸು ಹಂಚುಗಳನ್ನು ಉತ್ಪಾದಿಸುತ್ತಿದೆ. ಆರ್‌ಎನ್‌ಎಸ್‌ ಶಾಂತಿನಿಕೇತನ ಎಂಬ 500 ಮನೆಗಳ ಅಪಾರ್ಟ್‌ಮೆಂಟ್‌ ನಿರ್ಮಾಣ, ಪಂಚತಾರಾ ತಾಜ್‌ ಹೋಟೆಲ್‌-ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ನಿರ್ಮಾಣ, ನವೀನ್‌ ಹೋಟೆಲ್‌, ಮುಡೇìಶ್ವರದಲ್ಲಿ ಆರ್‌ಎನ್‌ಎಸ್‌ ರೆಸಿಡೆನ್ಸಿ, ಆರ್‌ಎನ್‌ಎಸ್‌ ಗಾಲ್ಫ್  ಕ್ಲಬ್‌, ಮಾರುತಿ ಕಾರುಗಳ ಮಾರಾಟದ ಏಜೆನ್ಸಿ ಪಡೆದುಕೊಂಡ ಆರ್‌ಎನ್‌ಎಸ್‌ ಮೋಟಾರ್ ಹುಬ್ಬಳ್ಳಿ, ಬೆಂಗಳೂರು, ಮುರ್ಡೇಶ್ವರದಲ್ಲಿ ಶಾಖೆ ಆರಂಭಿಸಿ ಹೆಸರು ಗಳಿಸಿದೆ.

ಬಡವರಿಗೆ ನೆರವಾದ ಆರೋಗ್ಯ ಶಿಬಿರಗಳು
100 ಹಾಸಿಗೆಗಳ ಮುರ್ಡೇಶ್ವರ ಆಸ್ಪತ್ರೆ ಆರ್‌ಎನ್‌ಎಸ್‌ ಅವರ ಕೊಡುಗೆ. ಆರ್‌ಎನ್‌ಎಸ್‌ ಟ್ರಸ್ಟ್‌ ನಾಡಿನಾದ್ಯಂತ ದೇವಾಲಯ, ಆಸ್ಪತ್ರೆ ನಿರ್ಮಾಣ, ನೆರೆ ಹಾವಳಿ, ಬರಗಾಲ ಸಂದರ್ಭದಲ್ಲಿ ಬಹುಕೋಟಿ ನೆರವು ನೀಡಿದೆ. ನೂರಾರು ಉಚಿತ ಆರೋಗ್ಯ ಶಿಬಿರಗಳು ಬಡವರಿಗೆ ನೆರವಾಗಿವೆ. ಕೊರೊನಾ ಸಂಕಟ ಕಾಲದಲ್ಲಿ ಕೇಂದ್ರ ನಿಧಿ ಗೆ 3 ಕೋಟಿ ಮತ್ತು ರಾಜ್ಯ ನಿಧಿ ಗೆ 1 ಕೋಟಿ ಸೇರಿ 4 ಕೋಟಿ ರೂ. ಆರ್‌.ಎನ್‌. ಶೆಟ್ಟಿಯವರು ತಮ್ಮ ಟ್ರಸ್ಟ್‌ ಮುಖಾಂತರ ನೀಡಿದ್ದಾರೆ. ಕಾರ್ಮಿಕರು-ಸಿಬ್ಬಂದಿಯ ವಿವಾಹ, ಚಿಕಿತ್ಸೆಗೆ ನೆರವು ನೀಡಿದ್ದಾರೆ. ಬೆಂಗಳೂರಿನ ಬಂಟ್‌ ಸಂಘದ ಶಾಲೆಗೆ, ಹುಬ್ಬಳ್ಳಿ ಮತ್ತು ಕುಂದಾಪುರದ ಆರ್‌ಎನ್‌ಎಸ್‌ ಕಲ್ಯಾಣ ಮಂಟಪಗಳಿಗೆ ದೊಡ್ಡ ಮೊತ್ತದ ದಾನ ನೀಡಿದ್ದಾರೆ. ಪ್ರತಿವರ್ಷ 5 ಸಾವಿರ ಮಕ್ಕಳಿಗೆ ಶಿಷ್ಯವೇತನ, ಸಮವಸ್ತ್ರ, ಪಠ್ಯಪುಸ್ತಕ ನೀಡಲಾಗುತ್ತಿದೆ.

ಡಾ| ಹೆಗ್ಗಡೆ ಸಂತಾಪ
ಆರ್‌.ಎನ್‌. ಶೆಟ್ಟಿ ಅವರ ನಿಧನ ವಾರ್ತೆ ತಿಳಿದು ವಿಷಾದವಾಯಿತು. ಅವರು ನಾನು ಮೆಚ್ಚಿದ ವ್ಯಕ್ತಿ. ವ್ಯವಹಾರ, ಧಾರ್ಮಿಕತೆ ಎಲ್ಲ ರಂಗದಲ್ಲಿಯೂ ಯಶಸ್ಸು ಪಡೆದು ಮಾದರಿ ಅನ್ನಿಸಿಕೊಂಡಿದ್ದರು. ಆದರ್ಶ ಜೀವನವನ್ನು ನಡೆಸಿದ ಶೆಟ್ಟಿಯವರ ಜೀವನ ಇತರರಿಗೆ ಮಾದರಿ.
ಡಾ| ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ

ಗಣ್ಯರ ಸಂತಾಪ
ಆರ್‌.ಎನ್‌. ಶೆಟ್ಟಿ ಅವರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ, ಸಚಿವ ಜಗದೀಶ್‌ ಶೆಟ್ಟರ್‌, ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮಾಜಿ ಸಚಿವ ರಮಾನಾಥ ರೈ ಸಹಿತ ನಾಡಿನ ಗಣ್ಯರು ಕಂಬನಿ ಮಿಡಿದಿದ್ದಾರೆ.

ಜೀಯು ಹೊನ್ನಾವರ

ಟಾಪ್ ನ್ಯೂಸ್

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.