ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು: ಬೊಮ್ಮಾಯಿ

Team Udayavani, Oct 24, 2021, 2:23 PM IST

ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು: ಬೊಮ್ಮಾಯಿ

ವಿಜಯಪುರ: ಕುರಿಯಿಂದ ಉಣ್ಣೆ ತೆಗೆದು, ನೇಯ್ದು ಕಂಬಳಿ ಮಾಡಲಾಗುತ್ತದೆ. ಈ ಪರಿಶ್ರಮದ ಹಿಂದೆ ಹಿಂದೆ ಹಾಲುಮತ ಸಮುದಾಯದ ಶ್ರಮಗೌರವ ಅಡಗಿದೆ. ಹೀಗಾಗಿ ಕಂಬಳಿ ಹೊದ್ದುಕೊಳ್ಳಲೂ ಯೋಗ್ಯತೆ ಇರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರೋಕ್ಷವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಭಾನುವಾರ ಸಿಂದಗಿ ವಿಧಾನಸಭೆ ಉಪ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಕೊಕಟನೂರು ಗ್ರಾಮದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಉಣ್ಣೆ ಕಂಬಳ ಹೊದ್ದುಕೊಂಡ ಎಲ್ಲರಿಗೂ ಅದರ ಯೋಗ್ಯತೆ ಬರುವುದಿಲ್ಲ. ಹಾಲುಮತದ ಸಮಾಜಕ್ಕೆ ಸರಿಯಾದ ಅಭಿವೃದ್ಧಿ ಮಾಡಿದವರಿಗೆ ಮಾತ್ರ ಆ ಯೋಗ್ಯತೆ ಪ್ರಾಪ್ತವಾಗುತ್ತದೆ ಎಂದು ಕುಟುಕಿದರು.

ದಾಸಶ್ರೇಷ್ಠ ಕನಕದಾಸರ ಜನ್ಮಸ್ಥಳ ಬಾಡ ಹಾಗೂ ಅವರ ಕರ್ಮಭೂಮಿ ಕಾಗಿನೆಲೆ ಕ್ಷೇತ್ರಗಳ ಅಭಿವೃದ್ಧಿಗೆ ಕಾಂಗ್ರೆಸ್ ಗಮನವನ್ನೇ ಹರಿಸಲಿಲ್ಲ. ಆದರೆ ನಮ್ಮ ಬಿ.ಜೆ.ಪಿ. ಸರಕಾರದ ಅಧಿಕಾರ ಅವಧಿಯಲ್ಲೇ ಕನಕದಾಸರ ಈ ಕ್ಷೇತ್ರಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಯಿತು ಎಂದರು.

ಎಲ್ಲಿದೆ ಸಾಮಾಜಿಕ ನ್ಯಾಯ: ಸಾಮಾಜಿಕ ನ್ಯಾಯದ ಹರಿಕಾರರೆಂದು ಬಿಂಬಿಸಿಕೊಳ್ಳುವ ಕಾಂಗ್ರೆಸ್ ಪಕ್ಷ ಯಾರಿಗೂ ಸಾಮಾಜಿಕ ನ್ಯಾಯ ಕಲ್ಪಿಸಿಲ್ಲ. ಸಂವಿಧಾನದ ಮೂಲಕ ಸಾಮಾಜಿಕ‌ ನ್ಯಾಯ ಕಲ್ಪಿಸಿದ ಡಾ.ಅಂಬೇಡ್ಕರ್ ಗೆ ದೇಶ ಸದಾ ಋಣಿಯಾಗಿರಬೇಕು ಎಂದರು.

ಆದರೆ ಇಂಥ ಧೀಮಂತ ನಾಯಕ ಡಾ.ಅಂಬೇಡ್ಕರ್ ವಿರುದ್ಧ ಚುನಾವಣೆಯಲ್ಲಿ ಶ್ರೀಮಂತರನ್ನು  ಸ್ಪರ್ಧೆಗಿಳಿಸಿ ಸೋಲಿಸಿದರು ಎಂದರು.

ಹಾಲುಮತ ಸಮಾಜ ಇಂದಿಗೂ ಅದೇ ಸ್ಥಿತಿಯಲ್ಲಿದೆ. ಸಣ್ಣ ಸಣ್ಣ ಕಸುಬುಗಳನ್ನು ಮಾಡುವವರು ಸಹ ಅದೇ ಸ್ಥಿತಿಯಲ್ಲಿದ್ದಾರೆ. ಅಲ್ಪಸಂಖ್ಯಾತರಿಗೆ ಈ ಹಿಂದಿನ ಸರ್ಕಾರಗಳು ಕೇವಲ ಚುನಾವಣೆಗೆ ಬಳಸಿಕೊಂಡರು ಅವರನ್ನು ಅಂಧಕಾರದಲ್ಲಿ ಇಟ್ಟಿದ್ದಾರೆ ಎಂದು ತಿಳಿಸಿದ ಅವರು ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಮಕ್ಕಳು ಮುಂದಕ್ಕೆ ಬಂದು ಅಭಿವೃದ್ಧಿ ಹೊಂದಬೇಕಾದರೆ ಬಿಜೆಪಿ ಯಿಂದ ಮಾತ್ರ ಸಾಧ್ಯ. ಹೀಗಾಗಿ ಬಿಜೆಪಿ ಅಭಿವೃದ್ಧಿಗೆ ರಮೇಶ ಭೂಸನೂರ ಅವರನ್ನು ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿ ಎಂದರು

ಅಭಿವೃದ್ಧಿಗೆ ಸರಕಾರದ ಆದ್ಯತೆ :

ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ನೀರಾವರಿ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ವಸತಿ ಸೌಲಭ್ಯ ಸೇರಿದಂತೆ ಈ ಭಾಗದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ವಿವರಿಸಿದರು.

ಇದಲ್ಲದೇ ನಮ್ಮ ಸರ್ಕಾರ ಪ್ರಸಕ್ತ ವರ್ಷ ಹೆಚ್ಚುವರಿಯಾಗಿ 5 ಲಕ್ಷ ಮನೆಗಳನ್ನು ನಿರ್ಮಿಸಲು ಯೋಜಿಸಿದೆ. ಇದರಲ್ಲಿ ಸಿಂದಗಿ ಕ್ಷೇತ್ರಕ್ಕೆ 5 ಸಾವಿರ ಮನೆ ನೀಡಲಾಗುತ್ತದೆ. ಅಮೃತ  ಯೋಜನೆ ಅಡಿಯಲ್ಲಿ 2 ಸಾವಿರ ಮನೆಗಳನ್ನು ಮಂಜೂರು ಮಾಡಲಾಗುತ್ತದೆ. ಹೀಗೆ  1 ವರ್ಷದಲ್ಲಿ ಸಿಂದಗಿ ಕ್ಷೇತ್ರದಲ್ಲಿ  7 ಸಾವಿರ ಮನೆ  ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.

ಸಿಂದಗಿ ಭಾಗದಲ್ಲಿ ಚಿಮ್ಮಲಗಿ ಏತ ನೀರಾವರಿ ಅಡಿ ಬರುವ ಕೋರವಾರ ಉಪ ಕಾಲುವೆ ಟೆಂಡರ್ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ.  ಇದರಿಂದ 80 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿ ಸಲಾಗುತ್ತದೆ. ಇಂಡಿ ಮತ್ತು ಗುತ್ತಿ ಬಸವಣ್ಣ ಯೋಜನೆಗಳ ಪುನಃಶ್ಚೇತನ ಮಾಡಲಾಗುತ್ತಿದೆ ಎಂದು ಕೇಳಿದರು.

ಟಾಪ್ ನ್ಯೂಸ್

ಮುಂಬಯಿ ಟೆಸ್ಟ್‌ ಪಂದ್ಯಕ್ಕೆ ಶೇ. 25 ವೀಕ್ಷಕರಿಗಷ್ಟೇ ಪ್ರವೇಶ

ಮುಂಬಯಿ ಟೆಸ್ಟ್‌ ಪಂದ್ಯಕ್ಕೆ ಶೇ. 25 ವೀಕ್ಷಕರಿಗಷ್ಟೇ ಪ್ರವೇಶ

ಒಂದೇ ದಿನದಲ್ಲಿ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು

ಒಂದೇ ದಿನದಲ್ಲಿ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು

ಜಿಯೋ ಬಳಕೆದಾರರಿಗೆ ಕಹಿ ಸುದ್ದಿ

ಜಿಯೋ ಬಳಕೆದಾರರಿಗೆ ಕಹಿ ಸುದ್ದಿ

ಚೀನಾದಲ್ಲಿ ದಿನಕ್ಕೆ 6.30 ಲಕ್ಷ ಕೇಸ್‌: ತಜ್ಞರ ಎಚ್ಚರಿಕೆ

ಚೀನಾದಲ್ಲಿ ದಿನಕ್ಕೆ 6.30 ಲಕ್ಷ ಕೇಸ್‌: ತಜ್ಞರ ಎಚ್ಚರಿಕೆ

ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚೀನಾ ವಶ : ಸಾಲ ತೀರಿಸದಿರುವುದೇ ಕಾರಣ

ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚೀನಾ ವಶ : ಸಾಲ ತೀರಿಸದಿರುವುದೇ ಕಾರಣ

ಜಾತಿ ಆಧಾರಿತ ಅಪರಾಧಗಳು ಇನ್ನೂ ತೊಲಗಿಲ್ಲ : ಸರ್ವೋಚ್ಚ ನ್ಯಾಯಾಲಯ ಅಸಮಾಧಾನ

ಜಾತಿ ಆಧಾರಿತ ಅಪರಾಧಗಳು ಇನ್ನೂ ತೊಲಗಿಲ್ಲ : ಸರ್ವೋಚ್ಚ ನ್ಯಾಯಾಲಯ ಅಸಮಾಧಾನ

ದಯವಿಟ್ಟು ಥಿಯೇಟರ್‌ ಒಳಗೆ ಪಟಾಕಿ ಹೊಡೆಯಬೇಡಿ : ಅಭಿಮಾನಿಗಳಲ್ಲಿ ಸಲ್ಮಾನ್‌ ಮನವಿ

ದಯವಿಟ್ಟು ಥಿಯೇಟರ್‌ ಒಳಗೆ ಪಟಾಕಿ ಹೊಡೆಯಬೇಡಿ : ಅಭಿಮಾನಿಗಳಲ್ಲಿ ಸಲ್ಮಾನ್‌ ಮನವಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಾನ ಧರ್ಮದ ರಾಯಭಾರಿ ಪುನೀತ್ ರಾಜಕುಮಾರ್: ಆರ್ ಅಶೋಕ್

ದಾನ ಧರ್ಮದ ರಾಯಭಾರಿ ಪುನೀತ್ : ‘ಅಪ್ಪು ಅಮರ’ ಕಾರ್ಯಕ್ರಮದಲ್ಲಿ ಸಚಿವ ಆರ್ ಅಶೋಕ್ ಹೇಳಿಕೆ

ಉಸಿರುಗಟ್ಟಿ ಇಬ್ಬರು ಸಾವು, ಓರ್ವ ಗಂಭೀರ : ನೀರಿನ ಟ್ಯಾಂಕ್ ಕ್ಲೀನ್ ಮಾಡುವ ವೇಳೆ ನಡೆದ ಘಟನೆ

ನೀರಿನ ಟ್ಯಾಂಕ್ ಕ್ಲೀನ್ ಮಾಡುವ ವೇಳೆ ಉಸಿರುಗಟ್ಟಿ ಇಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ

cm

ಯೋಜನಾಬದ್ಧವಾಗಿ ಬೆಂಗಳೂರಿನ ಅಭಿವೃದ್ಧಿಗೆ ಚಿಂತನೆ : ಮುಖ್ಯಮಂತ್ರಿ

rape

ಮೈಸೂರು ಗ್ಯಾಂಗ್ ರೇಪ್: 1499 ಪುಟಗಳ ಆರೋಪಪಟ್ಟಿ ಸಲ್ಲಿಸಿದ ಪೊಲೀಸರು

ಪಾದಯಾತ್ರೆ ಹಿನ್ನೆಲೆ: ಮೇಕದಾಟುವಿಗೆ ಭೇಟಿ ನೀಡಿದ ಡಿಕೆಶಿ

ಪಾದಯಾತ್ರೆ ಹಿನ್ನೆಲೆ: ಮೇಕದಾಟುವಿಗೆ ಭೇಟಿ ನೀಡಿದ ಡಿಕೆಶಿ

MUST WATCH

udayavani youtube

ಭೀಕರ ರಸ್ತೆ ಅಪಘಾತ : ಅಂತ್ಯಕ್ರಿಯೆಗೆ ತೆರಳುತ್ತಿದ್ದ 18 ಮಂದಿ ದುರ್ಮರಣ

udayavani youtube

ಬೂದು ಬಾಳೆ ಸೇವನೆಯಿಂದ ಆರೋಗ್ಯವಾಗಿರುವುದು ನಿಮ್ಮ ನಾಳೆ

udayavani youtube

4.2 ಕಿ.ಮೀ. ಸೈಕಲ್ ಚಾಲನೆ ಮಾಡಿದ ಸಚಿವ ಅಶ್ವತ್ಥ ನಾರಾಯಣ

udayavani youtube

ವಾಹನ ತಪಾಸಣೆಗೆ ಇಳಿದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಯಾಣಿಕರು.!

udayavani youtube

ದಾಂಡೇಲಿ: ಗಬ್ಬು ನಾರುತ್ತಿದೆ ಸಂಡೆ ಮಾರ್ಕೆಟ್ ಹೊರ ಆವರಣ

ಹೊಸ ಸೇರ್ಪಡೆ

ಮುಂಬಯಿ ಟೆಸ್ಟ್‌ ಪಂದ್ಯಕ್ಕೆ ಶೇ. 25 ವೀಕ್ಷಕರಿಗಷ್ಟೇ ಪ್ರವೇಶ

ಮುಂಬಯಿ ಟೆಸ್ಟ್‌ ಪಂದ್ಯಕ್ಕೆ ಶೇ. 25 ವೀಕ್ಷಕರಿಗಷ್ಟೇ ಪ್ರವೇಶ

ಒಂದೇ ದಿನದಲ್ಲಿ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು

ಒಂದೇ ದಿನದಲ್ಲಿ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು

ಜಿಯೋ ಬಳಕೆದಾರರಿಗೆ ಕಹಿ ಸುದ್ದಿ

ಜಿಯೋ ಬಳಕೆದಾರರಿಗೆ ಕಹಿ ಸುದ್ದಿ

ಚೀನಾದಲ್ಲಿ ದಿನಕ್ಕೆ 6.30 ಲಕ್ಷ ಕೇಸ್‌: ತಜ್ಞರ ಎಚ್ಚರಿಕೆ

ಚೀನಾದಲ್ಲಿ ದಿನಕ್ಕೆ 6.30 ಲಕ್ಷ ಕೇಸ್‌: ತಜ್ಞರ ಎಚ್ಚರಿಕೆ

ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚೀನಾ ವಶ : ಸಾಲ ತೀರಿಸದಿರುವುದೇ ಕಾರಣ

ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚೀನಾ ವಶ : ಸಾಲ ತೀರಿಸದಿರುವುದೇ ಕಾರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.