Udayavni Special

ಇಂದೇ ಸಂಪುಟ ಅಂತಿಮ?

Team Udayavani, Aug 2, 2021, 7:10 AM IST

ಇಂದೇ ಸಂಪುಟ ಅಂತಿಮ?

ಬೆಂಗಳೂರು: ಸಂಪುಟ ರಚನೆ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೊಸದಿಲ್ಲಿಗೆ ತೆರಳಿದ್ದು, ಸೋಮವಾರ ಬೆಳಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆಗೆ ಮಾತುಕತೆ ನಡೆಸಲಿದ್ದಾರೆ. ಒಂದು ವೇಳೆ ಸಂಪುಟ ರಚನೆಗೆ ಒಪ್ಪಿಗೆ ಸಿಕ್ಕಿದರೆ ಮಂಗಳವಾರ ಅಥವಾ ಬುಧವಾರ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.

ರವಿವಾರ ಸಂಜೆ ವರಿಷ್ಠರಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ಬೊಮ್ಮಾಯಿ ದಿಲ್ಲಿಗೆ ತೆರಳಿದರು. ನೂತನ ಸಚಿವ ಸಂಪುಟದಲ್ಲಿ ಯಾರನ್ನು ಸೇರಿಸಿಕೊಳ್ಳಬೇಕು ಎನ್ನುವ ಕುರಿತು ಅವರು ನಡ್ಡಾ ಜತೆ ಚರ್ಚಿಸಲಿದ್ದಾರೆ.

ಸಂಭಾವ್ಯರ ಪಟ್ಟಿ:

ಮೊದಲ ಹಂತದಲ್ಲಿ ಸಂಪುಟಕ್ಕೆ ಯಾರೆಲ್ಲ ಸೇರಬೇಕು ಎನ್ನುವ ಸಂಭಾವ್ಯರ ಪಟ್ಟಿ ಸಿದ್ಧಪಡಿಸಿಕೊಂಡು ದಿಲ್ಲಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಈ ಪಟ್ಟಿಯನ್ನು ವರಿಷ್ಠರು ಪರಿಗಣಿಸುತ್ತಾರೆಯೇ ಅಥವಾ ತಮ್ಮದೇ ಆದ ಪಟ್ಟಿಯನ್ನು ನೀಡುತ್ತಾರೆಯೇ ಎನ್ನುವ ಕುತೂಹಲ ಉಂಟಾಗಿದೆ.

ಈಗಿರುವ ಮಾಹಿತಿಯ ಪ್ರಕಾರ ಮೊದಲ ಹಂತದಲ್ಲಿ ಸಮಾರು 15 ಮಂದಿ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಲೆಕ್ಕಾಚಾರ ಸಿಎಂ ಅವರದು. ಆದರೆ ವರಿಷ್ಠರು ಯಾವ ಸೂಚನೆ ನೀಡುತ್ತಾರೆ ಎನ್ನುವುದರ ಆಧಾರದಲ್ಲಿ ಮೊದಲ ಹಂತದಲ್ಲಿ ಎಷ್ಟು ಜನ ಸಂಪುಟ ಸೇರುತ್ತಾರೆ ಎನ್ನುವುದು ನಿರ್ಧಾರವಾಗಲಿದೆ.

ಡಿಸಿಎಂ ಹುದ್ದೆಗೆ ಕಸರತ್ತು : ಹಿರಿತನ, ಜಾತಿ ಆಧಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಹಿರಿಯ ಸಚಿವರು ನಿರಂತರ ಪ್ರಯತ್ನ ನಡೆಸಿದ್ದಾರೆ. ಆರ್‌. ಅಶೋಕ್‌ ಮತ್ತು ಕೆ.ಎಸ್‌. ಈಶ್ವರಪ್ಪ ಮತ್ತೆ ಡಿಸಿಎಂ ಆಗಲು ಕಸರತ್ತು ನಡೆಸಿದ್ದಾರೆ. ವರಿಷ್ಠರು ತಮ್ಮನ್ನು ಡಿಸಿಎಂ ಸ್ಥಾನಕ್ಕೆ ಪರಿಗಣಿಸುತ್ತಾರೆ ಎಂಬ ವಿಶ್ವಾಸದಲ್ಲಿ ಬಿ. ಶ್ರೀರಾಮುಲು ಇದ್ದಾರೆ.

ಯತ್ನಾಳ್‌, ಅರವಿಂದ ಬೆಲ್ಲದ ಕೂಡ ಡಿಸಿಎಂ ಸ್ಥಾನಕ್ಕಾಗಿ ಪ್ರಯತ್ನ ನಡೆಸುತ್ತಿದ್ದಾರೆ. ದಲಿತ ಕೋಟಾದಡಿ ಗೋವಿಂದ ಕಾರಜೋಳ ಅಥವಾ ಅರವಿಂದ ಲಿಂಬಾವಳಿ ಅವರಲ್ಲಿ ಒಬ್ಬರನ್ನು ಪರಿಗಣಿಸಲಾಗುತ್ತದೆ ಎನ್ನಲಾಗುತ್ತಿದೆ.

ಲಕ್ಷ್ಮಣ ಸವದಿ ಮತ್ತು ಡಾ| ಅಶ್ವತ್ಥನಾರಾಯಣ ಕೂಡ ಲಾಬಿಯಲ್ಲಿ ಹಿಂದೆ ಬಿದ್ದಿಲ್ಲ. ಸಿ.ಟಿ. ರವಿ ಅವರ ಹೆಸರು ಕೂಡ ಡಿಸಿಎಂ ಸ್ಥಾನಕ್ಕೆ  ಕೇಳಿಬರುತ್ತಿದೆ.

ಬಿಎಸ್‌ವೈ ಜತೆ ಚರ್ಚೆ :

ಸಿಎಂ ಬೊಮ್ಮಾಯಿ ಅವರು ರವಿವಾರ ಬೆಳಗ್ಗೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕಾರಣರಾದ ವಲಸಿಗ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಕುರಿತು ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ. ವಲಸಿಗರಲ್ಲಿ ಆರೋಪ ಹೊತ್ತಿರುವವರನ್ನು ಸಚಿವ ಸಂಪುಟದಿಂದ ದೂರ ಇರಿಸಬೇಕೆಂದು ಆರೆಸ್ಸೆಸ್‌ ಸೂಚನೆ ನೀಡಿದೆ ಎನ್ನಲಾಗಿದ್ದು, ಇದೂ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಬಿಎಸ್‌ವೈ ಅವರು ವಲಸಿಗರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಆಕಾಂಕ್ಷಿಗಳಿಂದ ಸಿಎಂ ಭೇಟಿ :

ಸಚಿವ ಸಂಪುಟ ರಚನೆಯ ಲಾಬಿ ನಡೆದಿರುವ ಹೊತ್ತಿನಲ್ಲೇ ವಿ. ಸೋಮಣ್ಣ, ಬಿ.ಸಿ. ಪಾಟೀಲ್‌, ಮುರುಗೇಶ್‌ ನಿರಾಣಿ, ಆರ್‌. ಶಂಕರ್‌, ಶಾಸಕರಾದ ಶಿವನಗೌಡ ನಾಯಕ್‌, ಮಹೇಶ್‌ ಕುಮಠಳ್ಳಿ, ಎಂ.ವಿ. ವೀರಭದ್ರಯ್ಯ ಅವರು ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸಚಿವ ಸಂಪುಟದಲ್ಲಿ ತಮಗೂ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಬೊಮ್ಮಾಯಿ ಯಾರಿಗೂ ಸ್ಪಷ್ಟ ಭರವಸೆ ನೀಡಿಲ್ಲ ಎಂದು ತಿಳಿದುಬಂದಿದೆ.

ಸಂಕಷ್ಟ ಬಂದರೆ ನೆರವು: ದೇವೇಗೌಡ :

ಬಿಜೆಪಿ ಸರಕಾರಕ್ಕೆ ಸಂಕಷ್ಟ ಎದುರಾದರೆ ಬೆಂಬಲ ನೀಡುತ್ತೇನೆ. ಮಧ್ಯಾಂತರ ಚುನಾವಣೆಗೆ ಹೋಗುವ ಆಸೆ ಇಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಬೊಮ್ಮಾಯಿ ತಮ್ಮನ್ನು ಭೇಟಿಯಾಗಿ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಗೌಡರು, ಬಿಜೆಪಿಯು ಬಿಎಸ್‌ವೈ ಅವರಿಗೆ 2 ವರ್ಷ ಅವಕಾಶ ಕೊಟ್ಟಿದೆ. ಈಗ ಬಸವರಾಜ ಬೊಮ್ಮಾಯಿ ಅವರಿಗೆ ಸ್ಥಾನ ನೀಡಿದೆ. ಎಸ್‌.ಆರ್‌. ಬೊಮ್ಮಾಯಿ ನನ್ನ ಜತೆ ರಾಜಕಾರಣ ಮಾಡಿದವರು. ಅವರ ಪುತ್ರ ಈಗ ಸಿಎಂ ಆಗಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಸಲಹೆ ಕೇಳಿದರೆ ಕೊಡುತ್ತೇನೆ ಎಂದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸುವೆ. ಅವರ ಸೂಚನೆಯಂತೆ ಶೀಘ್ರವೇ ಸಂಪುಟ ರಚನೆ ಆಗಲಿದೆ.ಬಸವರಾಜ ಬೊಮ್ಮಾಯಿ,  ಮುಖ್ಯಮಂತ್ರಿ

ಬಸವರಾಜ ಬೊಮ್ಮಾಯಿ ಅವರು ನನಗೆ ಆತ್ಮೀಯ ಸ್ನೇಹಿತರು. ರಾಜಕಾರಣ ಬೇರೆ, ವೈಯಕ್ತಿಕ ವಿಶ್ವಾಸ ಬೇರೆ. ದೇವೇಗೌಡರ ಆಶೀರ್ವಾದ ಪಡೆದಿದ್ದಾರೆ. ನೂತನ ಮುಖ್ಯಮಂತ್ರಿಯವರು ಕೊರೊನಾ 3ನೇ ಅಲೆ ತಡೆಗಟ್ಟಿ ಪ್ರವಾಹ ಸಂತ್ರಸ್ತರಿಗೆ ಸ್ಪಂದಿಸಲಿ.ಎಚ್‌.ಡಿ. ರೇವಣ್ಣ, ಜೆಡಿಎಸ್‌ ನಾಯಕ

ಟಾಪ್ ನ್ಯೂಸ್

ವಿಧಾನಸಭಾ ಕ್ಷೇತ್ರಗಳೇ ಗಡಿ; ಜಿ.ಪಂ., ತಾ.ಪಂ. ಕ್ಷೇತ್ರಗಳ ಮರುವಿಂಗಡಣೆಗೆ ಸರಕಾರದ ಚಿಂತನೆ

ವಿಧಾನಸಭಾ ಕ್ಷೇತ್ರಗಳೇ ಗಡಿ; ಜಿ.ಪಂ., ತಾ.ಪಂ. ಕ್ಷೇತ್ರಗಳ ಮರುವಿಂಗಡಣೆಗೆ ಸರಕಾರದ ಚಿಂತನೆ

ಇಂದು ಭಾರತ್‌ ಬಂದ್‌; ಕೇಂದ್ರ ಕೃಷಿ ಕಾಯ್ದೆ ಖಂಡಿಸಿ ಪ್ರತಿಭಟನೆ

ಇಂದು ಭಾರತ್‌ ಬಂದ್‌; ಕೇಂದ್ರ ಕೃಷಿ ಕಾಯ್ದೆ ಖಂಡಿಸಿ ಪ್ರತಿಭಟನೆ

ಡಿಜಿಟಲ್‌ ಆರೋಗ್ಯ ಇಂದು ಲೋಕಾರ್ಪಣೆ

ಡಿಜಿಟಲ್‌ ಆರೋಗ್ಯ ಇಂದು ಲೋಕಾರ್ಪಣೆ

ಇಂದು ವಿಶ್ವ ಪ್ರವಾಸೋದ್ಯಮ ದಿನ: ಪ್ರವಾಸಿ ತಾಣಗಳ ಆಗರ ಕರಾವಳಿ

ಇಂದು ವಿಶ್ವ ಪ್ರವಾಸೋದ್ಯಮ ದಿನ: ಪ್ರವಾಸಿ ತಾಣಗಳ ಆಗರ ಕರಾವಳಿ

ಯಶಸ್ಸು ಕಂಡ ಪ್ರಧಾನಿ ಮೋದಿ ಅಮೆರಿಕ ಪ್ರವಾಸ

ಯಶಸ್ಸು ಕಂಡ ಪ್ರಧಾನಿ ಮೋದಿ ಅಮೆರಿಕ ಪ್ರವಾಸ

ನನ್ನ ರಾಜೀನಾಮೆಗೆ ಮೋದಿಯೂ ಬೆರಗಾಗಿದ್ದರು: ಬಿಎಸ್‌ವೈ

ನನ್ನ ರಾಜೀನಾಮೆಗೆ ಮೋದಿಯೂ ಬೆರಗಾಗಿದ್ದರು: ಬಿಎಸ್‌ವೈ

 ಐಪಿಎಲ್‌: ಆರ್‌ಸಿಬಿಗೆ ಗೆಲುವಿನ ಹರ್ಷ

 ಐಪಿಎಲ್‌: ಆರ್‌ಸಿಬಿಗೆ ಗೆಲುವಿನ ಹರ್ಷ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಧಾನಸಭಾ ಕ್ಷೇತ್ರಗಳೇ ಗಡಿ; ಜಿ.ಪಂ., ತಾ.ಪಂ. ಕ್ಷೇತ್ರಗಳ ಮರುವಿಂಗಡಣೆಗೆ ಸರಕಾರದ ಚಿಂತನೆ

ವಿಧಾನಸಭಾ ಕ್ಷೇತ್ರಗಳೇ ಗಡಿ; ಜಿ.ಪಂ., ತಾ.ಪಂ. ಕ್ಷೇತ್ರಗಳ ಮರುವಿಂಗಡಣೆಗೆ ಸರಕಾರದ ಚಿಂತನೆ

ಜೆಡಿಎಸ್‌ ಹೆಸರಿಗಷ್ಟೇ ಜಾತ್ಯತೀತ, ಅವರದ್ದು ಅವಕಾಶವಾದಿ ರಾಜಕಾರಣ : ಸಿದ್ದರಾಮಯ್ಯ

ಜೆಡಿಎಸ್‌ ಹೆಸರಿಗಷ್ಟೇ ಜಾತ್ಯತೀತ, ಅವರದ್ದು ಅವಕಾಶವಾದಿ ರಾಜಕಾರಣ : ಸಿದ್ದರಾಮಯ್ಯ

ನನ್ನ ರಾಜೀನಾಮೆಗೆ ಪ್ರಧಾನಿ ಮೋದಿ ಕೂಡ ಆಶ್ಚರ್ಯ ಪಟ್ಟಿದ್ರು ; ಮಾಜಿ ಮುಖ್ಯಮಂತ್ರಿ ಬಿಎಸ್ ವೈ

ನನ್ನ ರಾಜೀನಾಮೆಗೆ ಪ್ರಧಾನಿ ಮೋದಿ ಕೂಡ ಆಶ್ಚರ್ಯ ಪಟ್ಟಿದ್ರು ; ಮಾಜಿ ಮುಖ್ಯಮಂತ್ರಿ ಬಿಎಸ್ ವೈ

ಗಡಿ ಭಾಗದ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸಲು ಶೀಘ್ರ ಕ್ರಮ : ಅಪ್ಪಾಸಾಹೇಬ

ಗಡಿ ಭಾಗದ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸಲು ಶೀಘ್ರ ಕ್ರಮ : ಅಪ್ಪಾಸಾಹೇಬ

sdfeswrw

ಕೋವಿಡ್ : ರಾಜ್ಯದಲ್ಲಿಂದು 775 ಪ್ರಕರಣ| 860 ಸೋಂಕಿತರು ಗುಣಮುಖ

MUST WATCH

udayavani youtube

ಶ್ರೀ ಕ್ಷೇತ್ರ ಕಮಲಶಿಲೆಗೆ ಸಚಿವ ಅಶ್ವಥ್ ನಾರಾಯಣ್ ದಂಪತಿ ಭೇಟಿ, ವಿಶೇಷ ಪೂಜೆ

udayavani youtube

ರೈತರಿಗೆ ನಿರಂತರ ಆದಾಯ ಕೊಡುವ ಲಿಂಬೆ ಬೆಳೆಯ ಬಗ್ಗೆ ಮಾಹಿತಿ

udayavani youtube

ರೈತಸಂಘ ಹೋರಾಟದ ಹೆಸರಲ್ಲಿ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡುವ ಅಗತ್ಯವಿಲ್ಲ : ಪುಟ್ಟರಾಜು

udayavani youtube

ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ಸಮಾಜಕ್ಕೆ ಬಹಳಷ್ಟು ಅವಶ್ಯಕತೆ : ಡಾ| ಅಶ್ವತ್ಥನಾರಾಯಣ

udayavani youtube

ಕೋವಿಡ್ ಆತಂಕದ ನಡುವೆ ಜಾನಪದ ಸಮ್ಮೇಳನದಲ್ಲಿ ಶಾಲಾ ಮಕ್ಕಳು ಭಾಗಿ

ಹೊಸ ಸೇರ್ಪಡೆ

“ನಕ್ಸಲರಿಗೆ ಹಣದ ಹರಿವು ತಪ್ಪಿಸಿ’

“ನಕ್ಸಲರಿಗೆ ಹಣದ ಹರಿವು ತಪ್ಪಿಸಿ’

ಇಂದು ಪ್ರವಾಸೋದ್ಯಮ ದಿನ: ಕಡತದಲ್ಲೇ ಬಾಕಿಯಾದ ಪ್ರವಾಸೋದ್ಯಮ ಯೋಜನೆ

ಇಂದು ಪ್ರವಾಸೋದ್ಯಮ ದಿನ: ಕಡತದಲ್ಲೇ ಬಾಕಿಯಾದ ಪ್ರವಾಸೋದ್ಯಮ ಯೋಜನೆ

ವಿಧಾನಸಭಾ ಕ್ಷೇತ್ರಗಳೇ ಗಡಿ; ಜಿ.ಪಂ., ತಾ.ಪಂ. ಕ್ಷೇತ್ರಗಳ ಮರುವಿಂಗಡಣೆಗೆ ಸರಕಾರದ ಚಿಂತನೆ

ವಿಧಾನಸಭಾ ಕ್ಷೇತ್ರಗಳೇ ಗಡಿ; ಜಿ.ಪಂ., ತಾ.ಪಂ. ಕ್ಷೇತ್ರಗಳ ಮರುವಿಂಗಡಣೆಗೆ ಸರಕಾರದ ಚಿಂತನೆ

ಇಂದು ಭಾರತ್‌ ಬಂದ್‌; ಕೇಂದ್ರ ಕೃಷಿ ಕಾಯ್ದೆ ಖಂಡಿಸಿ ಪ್ರತಿಭಟನೆ

ಇಂದು ಭಾರತ್‌ ಬಂದ್‌; ಕೇಂದ್ರ ಕೃಷಿ ಕಾಯ್ದೆ ಖಂಡಿಸಿ ಪ್ರತಿಭಟನೆ

ಎಲ್ಲ ಇವಿಗಳಿಗೆ ಸಬ್ಸಿಡಿ?

ಎಲ್ಲ ಇವಿಗಳಿಗೆ ಸಬ್ಸಿಡಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.