23ರವರೆಗೆ ಕೆನರಾ ಉತ್ಸವ

Team Udayavani, Feb 21, 2019, 1:40 AM IST

ಬೆಂಗಳೂರು: ಬನಶಂಕರಿ 2ನೇ ಹಂತದ ಸೇವಾಕ್ಷೇತ್ರ ಆಸ್ಪತ್ರೆಯ ಮಾತೃಛಾಯ ಆವರಣದಲ್ಲಿ ಕೆನರಾ
ಬ್ಯಾಂಕ್‌ ಕೇಂದ್ರ ಕಚೇರಿಯ ಮಹಿಳಾ ಸಬಲೀಕರಣ ವಿಭಾಗ ಹಾಗೂ ಕೆನರಾ ರಿಲೀಫ್‌ ಆ್ಯಂಡ್‌ ವೆಲ್‌ ಫೇರ್‌ ಸೊಸೈಟಿ ಸಹಯೋಗದಲ್ಲಿ ಫೆ.23 ರವರೆಗೆ ಕರಕುಶಲ ವಸ್ತುಗಳ ಮಾರಾಟ ಮೇಳ “ಕೆನರಾ ಉತ್ಸವ’ ಆಯೋಜಿಸಲಾಗಿದೆ.

ಉತ್ಸವವನ್ನು ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕಿ ಎ. ಮಣಿಮೇಖಲೈ ಅವರು ಮಂಗಳವಾರ ಉದ್ಘಾಟಿಸಿ, ಮಹಿಳಾ ಉದ್ಯಮಿಗಳ ಕಲೆಗಾರಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೆನರಾ ಬ್ಯಾಂಕ್‌ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುವ ಮೂಲಕ ಎಲ್ಲ ರೀತಿ ಸಹಕಾರ ನೀಡಲಿದೆ ಎಂದರು.

ನಂತರ ಮಾರಾಟ ಮಳಿಗೆಗಳಿಗೆ ಭೇಟಿ ಕೊಟ್ಟು ಪ್ರದರ್ಶನಗೊಂಡಿರುವ ವಸ್ತ್ರಗಳು, ಆಭರಣಗಳು, ಕರಕುಶಲ ವಸ್ತುಗಳು, ಆಹಾರ ಪದಾರ್ಥಗಳನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಮಾಜಿ ಸಿಎಂಡಿ ಆರ್‌.ವಿ. ಶಾಸ್ತ್ರೀ, ಸಿಆರ್‌ಡಬುÉಎಸ್‌ ಗೌ.ಕಾರ್ಯದರ್ಶಿ ಪಿ. ಅರವಿಂದ ರಾವ್‌, ಜಂಟಿ ರ್ಯದರ್ಶಿ ಪ್ರೇಮಾ ರತ್ನಾಕರ್‌, ಜನರಲ್‌ ಮ್ಯಾನೇಜರ್‌ ಕೆ.ಎಸ್‌.ಎಸ್‌. ಕಾಮತ್‌ ಇತರರು ಭಾಗವಹಿಸಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ