ವಿವಿಧೆಡೆ ಸಂತ್ರಸ್ತ ಯುವತಿ ಜತೆಗೆ ಸ್ಥಳ ಮಹಜರು


Team Udayavani, Apr 2, 2021, 6:26 AM IST

ವಿವಿಧೆಡೆ ಸಂತ್ರಸ್ತ ಯುವತಿ ಜತೆಗೆ  ಸ್ಥಳ ಮಹಜರು

ಬೆಂಗಳೂರು: ಸಿ.ಡಿ. ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ ಯುವತಿಯನ್ನು ಕರೆದೊಯ್ದು ಸ್ಥಳ ಮಹಜರು ಮಾಡಿದೆ.  ಜತೆಗೆ ಒಂದೆರಡು ದಿನಗಳಲ್ಲಿ ವಿಚಾರಣೆಗೆ ಹಾಜರಾಗಲು ರಮೇಶ್‌ ಜಾರಕಿಹೊಳಿಗೆ ಎಸ್‌ಐಟಿ  ನೋಟಿಸ್‌ ನೀಡಲಿದೆ ಎಂದು ತಿಳಿದು ಬಂದಿದೆ.

ಗುರುವಾರ ಬೆಳಗ್ಗೆ ತಮ್ಮ ಪರ ವಕೀಲರ ಜತೆ ಆಗಮಿಸಿದ ಸಂತ್ರಸ್ತೆಯನ್ನು ತನಿಖಾಧಿಕಾರಿ ಕವಿತಾ ನೇತೃತ್ವದ ತಂಡ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಆರ್‌.ಟಿ.ನಗರದ ಗಂಗಾನಗರದಲ್ಲಿರುವ ಪಿ.ಜಿ.ಗೆ ಕರೆದೊಯ್ದು  11 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ತಪಾಸಣೆ ನಡೆಸಿದರು.

ತಾನು 2 ವರ್ಷಗಳಿಂದ ಪಿಜಿಯಲ್ಲಿದ್ದೆ. ನಗರದ ಸಾಫ್ಟ್ವೇರ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, 45 ಸಾ. ರೂ. ಸಂಬಳ ಬರುತ್ತಿತ್ತು.  ಇದರೊಂದಿಗೆ ಎನ್‌ಜಿಒ ಸಂಸ್ಥೆಯೊಂದರ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಈ ವೇಳೆಯೇ ರಮೇಶ್‌ ಜಾರಕಿಹೊಳಿ ಪರಿಚಯವಾಗಿದೆ.   ನಾನು ಪಿಜಿಯ ಕೊಠಡಿಯಲ್ಲೇ ಕುಳಿತು ಅವರೊಂದಿಗೆ ವೀಡಿಯೋ ಕರೆಯಲ್ಲಿ ಮಾತನಾಡಿದ್ದೆ ಎಂದು ಯುವತಿ ಹೇಳಿದ್ದಾಳೆ ಎನ್ನಲಾಗಿದೆ.

ಮಂತ್ರಿ ಅಪಾರ್ಟ್ಮೆಂಟ್ನಲ್ಲಿ 

ಮಲ್ಲೇಶ್ವರದಲ್ಲಿರುವ ಮಂತ್ರಿ ಅಪಾರ್ಟ್‌ಮೆಂಟ್‌ನ  7ನೇ ಮಹಡಿಯಲ್ಲಿರುವ ರಮೇಶ್‌ ಜಾರಕಿಹೊಳಿಗೆ ಸೇರಿದ 107ನೇ ಫ್ಲ್ಯಾಟ್‌ನಲ್ಲಿ ತಡರಾತ್ರಿವರೆಗೂ ಯುವತಿಯೊಂದಿಗೆ ಅಧಿಕಾರಿಗಳು ಮಹಜರು ನಡೆಸಿದರು.

ಹೆತ್ತವರ ಭೇಟಿಗಾಗಿ ಕಣ್ಣೀರು! :

ಸ್ಥಳ ಮಹಜರು ಸಂದರ್ಭದಲ್ಲಿ ಯುವತಿ ವಿಚಾರಣೆಗೆ ವಿಚಲಿತಗೊಂಡು, ತನ್ನ ಪೋಷಕರ ಭೇಟಿಗೆ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಈ ವೇಳೆ ಪೋಷಕರ ಭೇಟಿಗೆ ಅವಕಾಶ ನೀಡಿದರೆ ತನಿಖಾ ಸಂಸ್ಥೆ ಮೇಲೆ ಅನುಮಾನ ಬರುತ್ತದೆ ಎಂದು ತನಿಖಾಧಿಕಾರಿಗಳು ಹೇಳಿದರು. ಆದರೂ ಪಟ್ಟು ಬಿಡದ ಯುವತಿ ಭೇಟಿಗೆ ಮನವಿ ಮಾಡಿ ಕಣ್ಣೀರು ಹಾಕಿದರು. ತಮ್ಮ ಪರ ವಕೀಲರ ಮೂಲಕ ಪತ್ರ ಕಳುಹಿಸಿದರೆ ಅವಕಾಶ ನೀಡುವುದಾಗಿ ಅಧಿಕಾರಿಗಳು ಹೇಳಿದ್ದಾರೆಂದು ತಿಳಿದು ಬಂದಿದೆ.

ಯುವತಿ ಕೊಠಡಿ ಮೊದಲೇ ಸೀಲ್ :

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಯುವತಿ ವಾಸವಾಗಿದ್ದ ಪಿ.ಜಿ. ಕೊಠಡಿ ಮೇಲೆ ದಾಳಿ ನಡೆಸಿದ್ದ ಎಸ್‌ಐಟಿ ಅಧಿಕಾರಿಗಳು, 9 ಲ.ರೂ.  ಹಾಗೂ ಕೆಲವು ವಸ್ತುಗಳನ್ನು ವಶಕ್ಕೆ ಪಡೆದು ಕೊಠಡಿಯನ್ನು ಸೀಲ್‌ ಮಾಡಲಾಗಿತ್ತು.

ಇಬ್ಬರು ಎಸ್ಪಿಪಿ : ಸಿ.ಡಿ. ಪ್ರಕರಣದಲ್ಲಿ ಎಸ್‌ಐಟಿ ಪರ ವಾದ ಮಂಡನೆಗೆ ಹೈಕೋರ್ಟ್‌ ವಕೀಲ ಎಸ್‌. ಕಿರಣ ಜವಳಿ ಮತ್ತು ಸಿಬಿಐ ಪರ ರಾಜ್ಯದ ವಕೀಲ ಪಿ. ಪ್ರಸನ್ನಕುಮಾರ್‌ ಅವರನ್ನು ವಿಶೇಷ ಅಭಿಯೋಜಕರನ್ನಾಗಿ ನೇಮಿಸಲಾಗಿದೆ.

ಜಗದೀಶ್ ರಾಜ್ಯದ ಬಾರ್ ಕೌನ್ಸಿಲ್ನಲ್ಲಿ ನೋಂದಾಯಿಸಿಕೊಂಡಿಲ್ಲ  :

ಬೆಂಗಳೂರು:  ಯುವತಿ ಪರ ವಕಾಲತ್ತು ವಹಿಸಿರುವ   ಕೆ.ಎನ್‌ ಜಗದೀಶ್‌ ಕುಮಾರ್‌ ಹೊಸ ವಿವಾದಕ್ಕೆ ಸಿಲುಕಿದ್ದು, ಅವರು  ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ (ಬಾರ್‌ ಕೌನ್ಸಿಲ್‌)   ನೋಂದಾಯಿಸಿಕೊಂಡಿಲ್ಲ ಎನ್ನಲಾಗಿದೆ. ಜತೆಗೆ ಈ ಹೆಸರಿನಲ್ಲಿ ಯಾವುದೇ ವಕೀಲಿಕೆ ಸನ್ನದು ವರ್ಗಾವಣೆ ಕೋರಿ ಮನವಿ ಬಂದಿಲ್ಲ ಎಂದು ರಾಜ್ಯ ವಕೀಲರ ಪರಿಷತ್ತು ತಿಳಿಸಿದೆ.

ಒಂದು ವೇಳೆ ಜಗದೀಶ್‌ ಬೇರೆ ಯಾವುದೇ ರಾಜ್ಯ ವಕೀಲರ ಪರಿಷ ತ್ತಿನಲ್ಲಿ ನೋಂದಾಯಿಸಿಕೊಂಡಿದ್ದರೆ, ಅವರು ಭಾರತೀಯ ವಕೀಲರ ಪರಿಷತ್ತಿನ ನಿಯಮಗಳ ಪ್ರಕಾರ 6 ತಿಂಗಳ ಬಳಿಕ ರಾಜ್ಯದಲ್ಲಿ ವಕೀಲಿಕೆ ಮುಂದುವರಿಸುವಂತಿಲ್ಲ ಎಂದು ರಾಜ್ಯ ವಕೀಲರ ಪರಿಷತ್ತು ಸ್ಪಷ್ಟನೆ ನೀಡಿದೆ.

ವಕೀಲ ಕೆ.ಎನ್‌ ಜಗದೀಶ್‌ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡಿರುವ ಕುರಿತು ಮಾಹಿತಿ ನೀಡುವಂತೆ ರಾಜ್ಯ ವಕೀಲರ ಪರಿಷತ್ತಿನ ಹಿರಿಯ ಸದಸ್ಯರಾದ ಎಸ್‌. ಬಸವರಾಜು ಮನವಿ ಸಲ್ಲಿಸಿದ್ದರು. ಅದಕ್ಕೆ ಮಾಹಿತಿ ನೀಡಿರುವ ಪರಿಷತ್ತು ಕೆ.ಎನ್‌ ಜಗದೀಶ್‌ ಕುಮಾರ್‌ ರಾಜ್ಯದ ಬಾರ್‌ ಕೌನ್ಸಿಲ್‌ನಲ್ಲಿ ನೋಂದಣಿ ಮಾಡಿಸಿಕೊಂಡಿಲ್ಲ ಎಂದು ಮಾಹಿತಿ ನೀಡಿದೆ.

ಜಗದೀಶ್ ಸ್ಪಷ್ಟನೆ :

ಕರ್ನಾಟಕ ಬಾರ್‌ ಕೌನ್ಸಿಲ್‌ನಲ್ಲಿ  ನೋಂದಣಿ ವಿಚಾರ ಸಂಬಂಧಿಸಿ ಕೆ.ಎನ್‌.ಜಗದೀಶ್‌  ಸ್ಪಷ್ಟನೆ ನೀಡಿದ್ದು, ಯುವತಿ ಪರ ವಕಾಲತ್ತು ಹಾಕಲು ನಾವು ಯೋಗ್ಯರಿದ್ದೇವೆ. ಆಲ್‌ ಇಂಡಿಯಾ ಬಾರ್‌ ಪರೀಕ್ಷೆ ಪಾಸ್‌ ಮಾಡಿದ್ದೇನೆ.ಯಾರಾದರೂ ತೋಳಿನಲ್ಲಿ ತಾಕತ್ತು ಇದ್ದರೆ ದೂರು ನೀಡಬಹುದು ಮಕ್ಕಳೇ. ಅವರಿಗೆ ಮುಂದಿನ ದಿನಗಳಲ್ಲಿ ಉತ್ತರಿಸುತ್ತೇನೆ ಎಂದರು. ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯದಿಂದ ಎಲ್‌ಎಲ್‌ಬಿ ಪದವಿ ಪಡೆದುಕೊಂಡಿದ್ದೇನೆ. ದಿಲ್ಲಿ ಬಾರ್‌ ಕೌನ್ಸಿಲ್‌ನಲ್ಲಿ  ನೋಂದಣಿಯಾಗಿದೆ ಎಂದು ಸ್ಪಷ್ಟಪಡಿಸಿದರು.

ಟಾಪ್ ನ್ಯೂಸ್

rwytju11111111111

ಮಂಗಳವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಏಳು ಸರಕಾರಿ ನೌಕರಿ ಗಿಟ್ಟಿಸಿಕೊಂಡ ರೈತನ ಮಗಳು

ಏಳು ಸರಕಾರಿ ನೌಕರಿ ಗಿಟ್ಟಿಸಿಕೊಂಡ ರೈತನ ಮಗಳು

24 ಸಾವಿರ ರೂ. ಬಿಲ್‌ ಕಟ್ಟಲು ಹೇಳಿ ಫ್ಯೂಸ್‌ ತೆಗೆದು ದಬ್ಟಾಳಿಕೆ

24 ಸಾವಿರ ರೂ. ಬಿಲ್‌ ಕಟ್ಟಲು ಹೇಳಿ ಫ್ಯೂಸ್‌ ತೆಗೆದು ದಬ್ಟಾಳಿಕೆ

ದಾಖಲೆಯ ಮತದಾನಕ್ಕೆ ಕಾರ್ಯತಂತ್ರ

ದಾಖಲೆಯ ಮತದಾನಕ್ಕೆ ಕಾರ್ಯತಂತ್ರ

ಅಯ್ಯಪ್ಪ ಸ್ವಾಮಿ ದರ್ಶನಕ್ಕೂ ಆನ್‌ಲೈನ್‌ ಬುಕ್ಕಿಂಗ್‌!

ಅಯ್ಯಪ್ಪ ಸ್ವಾಮಿ ದರ್ಶನಕ್ಕೂ ಆನ್‌ಲೈನ್‌ ಬುಕ್ಕಿಂಗ್‌!

ಎಸ್‌-400 ಬೂಸ್ಟರ್‌ ;  ಭಾರತಕ್ಕೆ ಕ್ಷಿಪಣಿ ನಿಗ್ರಹ ವ್ಯವಸ್ಥೆ ಪೂರೈಕೆ ಸರಾಗ

ಎಸ್‌-400 ಬೂಸ್ಟರ್‌ ;  ಭಾರತಕ್ಕೆ ಕ್ಷಿಪಣಿ ನಿಗ್ರಹ ವ್ಯವಸ್ಥೆ ಪೂರೈಕೆ ಸರಾಗ

ಡಿಜಿಟಲ್‌ ವಹಿವಾಟು ಶೇ. 53 ಏರಿಕೆ

ಡಿಜಿಟಲ್‌ ವಹಿವಾಟು ಶೇ. 53 ಏರಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತಾ.ಪಂ., ಜಿ.ಪಂ. ಕ್ಷೇತ್ರ ನಿಗದಿ ವಿಷಯ ಹೈಕೋರ್ಟ್‌ಗೆ

ತಾ.ಪಂ., ಜಿ.ಪಂ. ಕ್ಷೇತ್ರ ನಿಗದಿ ವಿಷಯ ಹೈಕೋರ್ಟ್‌ಗೆ

ಪ್ರತಿ ತಿಂಗಳು 1 ಲಕ್ಷ ರೇಷ್ಮೆ ಸೀರೆ ಉತ್ಪಾದನೆ ಗುರಿ: ಸಚಿವ ಗೌಡ

ಪ್ರತಿ ತಿಂಗಳು 1 ಲಕ್ಷ ರೇಷ್ಮೆ ಸೀರೆ ಉತ್ಪಾದನೆ ಗುರಿ: ಸಚಿವ ಗೌಡ

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನ

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನ

ಬೆಂಕಿಗೂ ಹೆದರಲ್ಲ, ಜನರಿಗೂ ಬೆದರಲ್ಲ :ನಾಗರಹೊಳೆ ರಸ್ತೆಯಲ್ಲಿ 2 ಗಂಟೆ ಜನರನ್ನು ಕಾಡಿದ ಸಲಗ

ಬೆಂಕಿಗೂ ಹೆದರಲ್ಲ, ಜನರಿಗೂ ಬೆದರಲ್ಲ :ನಾಗರಹೊಳೆ ರಸ್ತೆಯಲ್ಲಿ 2 ಗಂಟೆ ಜನರನ್ನು ಕಾಡಿದ ಸಲಗ

1-fffsdfdsdsfsf

ಬಿಜೆಪಿ ಹಿರಿಯ ನಾಯಕ, ಮಾಜಿ ಶಾಸಕ ರಾಮ್ ಭಟ್ ವಿಧಿವಶ

MUST WATCH

udayavani youtube

‘ಮರದ ಅರಶಿನ’ದ ವಿಶೇಷತೆ !

udayavani youtube

ತಾಯಿ, ಮಗ ಆರಂಭಿಸಿದ ತಿಂಡಿ ತಯಾರಿ ಘಟಕ ಇಂದು 65 ಮಂದಿಗೆ ಉದ್ಯೋಗ !

udayavani youtube

ಕಳವಾದ ವೈದ್ಯರ ನಾಯಿಯನ್ನು ಗಂಟೆಗಳೊಳಗೆ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು

udayavani youtube

ಮೃತ ಗೋವುಗಳನ್ನು ವಾಹನಕ್ಕೆ ಕಟ್ಟಿ ಹೆದ್ದಾರಿಯಲ್ಲಿ ಎಳೆದೊಯ್ದ ಸಿಬ್ಬಂದಿ : ಆಕ್ರೋಶ

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

ಹೊಸ ಸೇರ್ಪಡೆ

rwytju11111111111

ಮಂಗಳವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಶಬರಿಮಲೆಯಲ್ಲಿ ಭಾರೀ ಮಳೆ: ಭಕ್ತರಿಗೆ ತೊಂದರೆ

ಶಬರಿಮಲೆಯಲ್ಲಿ ಭಾರೀ ಮಳೆ: ಭಕ್ತರಿಗೆ ತೊಂದರೆ

ಏಳು ಸರಕಾರಿ ನೌಕರಿ ಗಿಟ್ಟಿಸಿಕೊಂಡ ರೈತನ ಮಗಳು

ಏಳು ಸರಕಾರಿ ನೌಕರಿ ಗಿಟ್ಟಿಸಿಕೊಂಡ ರೈತನ ಮಗಳು

ಡ್ರಗ್ಸ್‌ ಚಟುವಟಿಕೆಗಳ ತಡೆಗೆ ಜಾಗೃತಿ ಅಗತ್ಯ

ಡ್ರಗ್ಸ್‌ ಚಟುವಟಿಕೆಗಳ ತಡೆಗೆ ಜಾಗೃತಿ ಅಗತ್ಯ

24 ಸಾವಿರ ರೂ. ಬಿಲ್‌ ಕಟ್ಟಲು ಹೇಳಿ ಫ್ಯೂಸ್‌ ತೆಗೆದು ದಬ್ಟಾಳಿಕೆ

24 ಸಾವಿರ ರೂ. ಬಿಲ್‌ ಕಟ್ಟಲು ಹೇಳಿ ಫ್ಯೂಸ್‌ ತೆಗೆದು ದಬ್ಟಾಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.