8 ಮಂದಿ ಸಾಧಕರಿಗೆ “ಚಂದನ’ ಪ್ರಶಸ್ತಿ

Team Udayavani, Nov 9, 2019, 3:03 AM IST

ಬೆಂಗಳೂರು: ಬೆಂಗಳೂರು ದೂರದರ್ಶನ ಕೇಂದ್ರದಿಂದ ನೀಡುವ “ಚಂದನ ಪ್ರಶಸ್ತಿ’ಗೆ ಡಾ.ಜಿ.ಎನ್‌.ನಾಗಮಣಿ ಶ್ರೀನಾಥ್‌, ಎಂ.ಎಸ್‌.ನರಸಿಂಹಮೂರ್ತಿ ಸೇರಿ ಎಂಟು ಜನ ಸಾಧಕರು ಆಯ್ಕೆಯಾಗಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಾ.ಜಿ.ಎನ್‌.ನಾಗಮಣಿ ಶ್ರೀನಾಥ್‌, ನೃತ್ಯ ಕಲಾವಿದೆ ಶ್ರೀದೇವಿ ಉನ್ನಿ, ಕೃಷಿ ಸಾಧಕ ಹನುಮಂತಪ್ಪ ಭೀಮಪ್ಪ ಮಡೂರ್‌, ರಂಗ ಸಾಧಕ ಸಾಂಬಾಶಿವ ದಳವಾಯಿ, ಸಾಹಿತ್ಯ ಸಾಧಕ ಶಶಿಕಲಾ ವಸ್ತ್ರದ ಸಿಂದಗಿ, ಕಿರುತೆರೆ ನಿರ್ದೇಶಕ ಎಂ.ಎಸ್‌.ನರಸಿಂಹಮೂರ್ತಿ, ಕ್ರೀಡಾ ಸಾಧಕಿ ಎಸ್‌.ಸಬಿಯಾ, ಶಿಕ್ಷಣ ಸಾಧಕ ಶಿವಪ್ಪ ಕುಬೇರ, ಜಾನಪದ ಕ್ಷೇತ್ರದಲ್ಲಿ ಹೆಸರು ಮಾಡಿರುವ ಪಾರವ್ವ ಲಚ್ಚಪ್ಪ ಲಮಾಣಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೂರದರ್ಶನ ಕೇಂದ್ರದ ಹೆಚ್ಚುವರಿ ಮಹಾ ನಿರ್ದೇಶಕ ರಾಜ್‌ಕುಮಾರ್‌, ಬೆಂಗಳೂರು ದೂರದರ್ಶನ ಕೇಂದ್ರದಿಂದ ನ.9ರಂದು ನಗರದಲ್ಲಿ “ಚಂದನ ಪ್ರಶಸ್ತಿ’ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾರಂಭ ನಡೆಯಲಿದ್ದು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಗೌರವಿಸಲಾಗುವುದು ಎಂದರು. ಅತಿಥಿಗಳಾಗಿ ರಾಜ್ಯಪಾಲ ವಜುಭಾಯ್‌ ವಾಲಾ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಲೋಕಾಯುಕ್ತ ಪಿ.ವಿಶ್ವನಾಥ್‌ ಶೆಟ್ಟಿ, ಉಪ ಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ