“ಸೇತುಬಂಧ’ದಲ್ಲೂ ಮಾರ್ಪಾಡಿಗೆ ಸಿದ್ಧತೆ

Team Udayavani, Jun 25, 2021, 6:10 AM IST

“ಸೇತುಬಂಧ’ದಲ್ಲೂ ಮಾರ್ಪಾಡಿಗೆ ಸಿದ್ಧತೆ

ಸಾಂದರ್ಭಿಕ ಚಿತ್ರ

ದಾವಣಗೆರೆ: ಕೋವಿಡ್‌ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಸರಕಾರಿ ಪ್ರಾಥಮಿಕ ಶಾಲೆ ಗಳ ಸೇತುಬಂಧ (ಬ್ರಿಡ್ಜ್ ಕೋರ್ಸ್‌) ಕಲಿಕಾ ಪದ್ಧತಿಯಲ್ಲೇ ಮಾರ್ಪಾಡು ತಂದು ಮಕ್ಕಳ ಸ್ವಕಲಿಕೆಗೆ ಉತ್ತೇಜನ ನೀಡಲು ಮುಂದಾಗಿದ್ದು,  ಹೊಸ ವಿನ್ಯಾಸದ ಕ್ಯೂಆರ್‌ ಕೋಡ್‌ ಇರುವ ಅಭ್ಯಾಸ ಮತ್ತು ಚಟುವಟಿಕೆ ಹಾಳೆ ಸಿದ್ಧವಾಗಿದೆ.

60 ದಿನಗಳ ನಲಿ-ಕಲಿ ಸೇತುಬಂಧ ಕಲಿಕಾ ಮಾದರಿಗೆ ಪೂರಕವಾಗಿ ವಿಷಯವಾರು, ತರಗತಿ ವಾರು ಅಗತ್ಯವಿರುವ ಸ್ವಕಲಿಕಾ ಆಧಾರಿತ ಚಟು ವಟಿಕೆ ಮತ್ತು ಅಭ್ಯಾಸದ ಹಾಳೆಗಳನ್ನು  ರಾಜ್ಯ ನಲಿ-ಕಲಿ ಸಂಪನ್ಮೂಲ ವ್ಯಕ್ತಿಗಳ ನೆರವಿನೊಂದಿಗೆ ವಿನ್ಯಾಸಗೊಳಿಸಲಾಗಿದೆ.

ಅಭ್ಯಾಸ ಮತ್ತು ಚಟುವಟಿಕೆಯ ಈ ಹೊಸ ವಿನ್ಯಾಸದ ಕೆಲವು ಹಾಳೆಗಳಲ್ಲಿ ಕ್ಯೂಆರ್‌ ಕೋಡ್‌ ಅಳವಡಿಸಿರುವುದು ವಿಶೇಷ. ವೀಡಿಯೋ ಮತ್ತು ಆಡಿಯೋಗಳನ್ನು ಬಳಸಿ ಮಕ್ಕಳು ಹೆಚ್ಚಿನ ಕಲಿಕಾ ಅನುಭವ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಜತೆಗೆ ರೇಡಿಯೋ, ದೂರದರ್ಶನ ಪಾಠ ಪ್ರಸಾರದ ಬಳಕೆಗೂ ಇದು ನೆರವಾಗಲಿದೆ.

ಅಭ್ಯಾಸ ಹಾಳೆ ಬಳಕೆ ಕಡ್ಡಾಯ:

ಅಭ್ಯಾಸ ಹಾಳೆಗಳಲ್ಲಿರುವ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಬಗ್ಗೆ ಪೋಷಕರಿಗೆ ಅಥವಾ ಮಕ್ಕಳ ಮನೆಯಲ್ಲಿರುವವರಿಗೆ ಆನ್‌ಲೈನ್‌ ಇಲ್ಲವೇ ದೂರವಾಣಿ ಮೂಲಕ ಮಾರ್ಗದರ್ಶನ ನೀಡಲು ಇಲಾಖೆ ಯೋಜನೆ ಹಾಕಿಕೊಂಡಿದೆ. ಈ ಹಾಳೆಗಳನ್ನು ಸೇತುಬಂಧ ಮಾದರಿಯೊಂದಿಗೆ ಎಲ್ಲ ಶಾಲೆಗಳ ಶಿಕ್ಷಕರಿಗೆ ತಲುಪಿಸಲಿದೆ. ಪ್ರತಿ ಮಗುವೂ ವಿನ್ಯಾಸಗೊಳಿಸಿದ ಅಭ್ಯಾಸದ ಹಾಳೆಗಳನ್ನು (ವರ್ಕ್‌ ಶೀಟ್‌) ಬಳಸುವುದನ್ನು ಕಡ್ಡಾಯ ಮಾಡಲಾಗಿದೆ.

ಸೇತುಬಂಧ ಕಲಿಕೆಗೆ ಸಂಬಂಧಿಸಿ ಮೌಲ್ಯಮಾಪನಕ್ಕೆ ಕಲಿಕಾ ಅಭ್ಯಾಸದ ಹಾಳೆಗಳನ್ನೇ ಬಳಸಲು ಶಿಕ್ಷಕರಿಗೆ ಸೂಚಿಸಲಾಗಿದೆ. ಅಭ್ಯಾಸ ಪೂರ್ಣಗೊಳಿಸಿದ ಹಾಳೆ ಗಳನ್ನು ಮಕ್ಕಳಿಂದ ನೇರವಾಗಿ ಇಲ್ಲವೇ ಆನ್‌ಲೈನ್‌ ಮೂಲಕ ಮರಳಿ ಪಡೆದು ಕಲಿಕೆಯ ಸಾಧನೆಯನ್ನು ಮೌಲ್ಯಮಾಪನಕ್ಕೆ ಒಳಪಡಿಸಬೇಕು. ಪೂರ್ಣ ಸರಿ ಉತ್ತರ ಇದ್ದರೆ  “ಎ’ ಎಂದೂ, ತಪ್ಪಾದ ಉತ್ತರ ಇದ್ದರೆ   “ಬಿ’ ಎಂದೂ ಶ್ರೇಣಿಗಳನ್ನು ನೀಡಬೇಕು.   “ಬಿ’ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಸೂಕ್ತ ಹಿಮ್ಮಾಹಿತಿ ನೀಡುವ ಮೂಲಕ ಪೂರಕ ಚಟುವಟಿಕೆ ಮಾಡಿಸಿ ಕಲಿಕಾ ಕೊರತೆ ನೀಗಿಸಬೇಕು.  ಈ  ಹಾಳೆಗಳನ್ನು ಮಕ್ಕಳ ಪೋರ್ಟ್‌ ಪೋಲಿಯೋದಲ್ಲಿ ಇಟ್ಟುಕೊಳ್ಳಬೇಕು. ಸೇತುಬಂಧ ಕಲಿಕೆಗೆ ನಿರ್ದಿಷ್ಟಪಡಿಸಿದ ಕಲಿಕಾ ದಿನಗಳು ಪೂರ್ಣ ಗೊಂಡ ಬಳಿಕವೇ ಪ್ರತಿ ಮಗು ತರಗತಿವಾರು ಪ್ರಸಕ್ತ ಸಾಲಿನ ಕಲಿಕೆಗೆ ಪ್ರವೇಶ ಪಡೆದುಕೊಳ್ಳಬೇಕು.

ಶಿಕ್ಷಕರಿಗೆ ತರಬೇತಿ :

ಅಭ್ಯಾಸ ಹಾಳೆಗಳ ಬಳಕೆ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ನೆರವು ನೀಡಲು ಅಗತ್ಯವಿರುವ ಸೂಚನೆ, ಮಾರ್ಗದರ್ಶನಗಳನ್ನು  ಪೋಷಕ ರಿಗೂ ಸ್ಪಷ್ಟಪಡಿಸಬೇಕು. ಈ  ಹಾಳೆಗಳನ್ನು ಮಕ್ಕಳಿಗೆ ನೀಡಿರುವ ಮತ್ತು ಹಿಂಪಡೆದಿರುವ ಬಗ್ಗೆ ಸೂಕ್ತ ದಾಖಲೆಯನ್ನು ಶಿಕ್ಷಕರು ನಿರ್ವಹಿ ಸಬೇಕು.  ಹಾಳೆಗಳ ಬಳಕೆ ಬಗ್ಗೆ ಶಿಕ್ಷಕರಿಗೆ ಕ್ಲಸ್ಟರ್‌ ಹಂತದಲ್ಲಿ ಗೂಗಲ್‌, ಝೂಮ್‌, ವೀಡಿಯೊ ಮಾಧ್ಯಮ ಆಧಾರಿತ ಸಭೆಗಳ ಮೂಲಕ ಮಾರ್ಗದರ್ಶನ ನೀಡಲಾಗುತ್ತಿದೆ.

ಆನ್‌ಲೈನ್‌ ಮತ್ತು ಆಫ್‌ಲೈನ್‌ ಮಾದರಿಯಲ್ಲಿ ಸಮಗ್ರ ಶಿಕ್ಷಣ ವತಿ ಯಿಂದ ಹೊಸದಾಗಿ ಅಭ್ಯಾಸ ಮತ್ತು ಚಟುವಟಿ ಕೆಯ ಹಾಳೆಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಹಾಳೆಗಳು ಸೇತುಬಂಧ ಹೊಸ ಕಲಿಕಾ ಮಾದರಿಯೊಂದಿಗೆ ಬರಲಿದೆ. ಇದರ ಬಳಕೆ ಕುರಿತು ಈಗಾಗಲೇ ಶಿಕ್ಷಕರಿಗೆ ಆನ್‌ಲೈನ್‌ ಮೂಲಕ ತರಬೇತಿ ನೀಡಲಾಗುತ್ತಿದೆ.– ಎಚ್‌.ಕೆ. ಲಿಂಗರಾಜು,ಪ್ರಾಚಾರ್ಯರು, ಡಯಟ್‌, ದಾವಣಗೆರೆ

-ಎಚ್‌.ಕೆ.ನಟರಾಜ

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.