ವಿದ್ಯಾರ್ಥಿಗಳ ದಾಖಲಾತಿ ನಿಯಮದಲ್ಲಿ ಬದಲಾವಣೆ

Team Udayavani, May 22, 2019, 6:00 AM IST

ಬೆಂಗಳೂರು: ವಿದ್ಯಾರ್ಥಿಗಳು ಗಳಿಸಿರುವ ಅಂಕಗಳ ಜೇಷ್ಠತೆಯ ಆಧಾರದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ವರ್ಗವಾರು ವಿಂಗಡನೆ ಅನುಸರಿಸಿ ಪಿಯು ಕಾಲೇಜುಗಳಿಗೆ ದಾಖಲಾತಿ ನಡೆಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ. 2019-20ನೇ ಸಾಲಿನ ಪಿಯು ದಾಖಲಾತಿ ಸಂಬಂಧ ಇಲಾಖೆ ಹೊರಡಿಸಿದ್ದ ಸೀಟ್ಮ್ಯಾಟ್ರಿಕ್ಸ್‌ ನಿಯಮಗಳ ಪ್ರಕಾರ, ಗಂಡು ಮಕ್ಕಳಿಗೆ ಶೇ.50ರಷ್ಟು ಹಾಗೂ ಹೆಣ್ಣು ಮಕ್ಕಳಿಗೆ ಶೇ.50ರಷ್ಟು ಅನುಪಾತದಲ್ಲಿ ದಾಖಲಾತಿ ಮಾಡಿ ಕೊಳ್ಳುವಂತೆ ನಿರ್ದೇಶನ ನೀಡಲಾಗಿತ್ತು. ಈಗ ನಿಯಮದಲ್ಲಿ ಸ್ವಲ್ಪ ಬದಲಾವಣೆ ಮಾಡಿರುವ ಪಿಯು ಇಲಾಖೆ, ವಿದ್ಯಾರ್ಥಿ ಗಳ ದಾಖಲಾತಿ ಸಂದರ್ಭದಲ್ಲಿ ಗಂಡು-ಹೆಣ್ಣು ಮಕ್ಕಳ ತಲಾ ಶೇ.50ರಷ್ಟು ಅನುಪಾತದ ಕ್ರಮವನ್ನು ಬಿಟ್ಟು, ವಿದ್ಯಾರ್ಥಿಗಳು ಗಳಿಸಿರುವ ಅಂಕಗಳ ಜೇಷ್ಠತೆಯಲ್ಲಿ ವರ್ಗಾವಾರು ವಿಂಗಡನೆ ಅನುಸರಿಸಿ ದಾಖಲಾತಿ ಮಾಡಿಕೊಳ್ಳಬೇಕೆಂದು ಪಿಯು ಕಾಲೇಜಿನ ಪ್ರಾಂಶುಪಾಲರಿಗೆ ತಿಳಿಸಿದೆ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ