ವಿಕಲಚೇತನ ಯುವಕನ ಬೇಡಿಕೆಗೆ ಸ್ಪಂದನೆ; ಮಾನವೀಯತೆ ಮೆರೆದ ಸಿಎಂ
Team Udayavani, May 14, 2022, 8:28 PM IST
ಬೆಂಗಳೂರು: ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದ ಅಡವಿಬಾವಿ ಗ್ರಾಮದ ವಿಕಲಚೇತನ ಯುವಕ ಶಿವಪ್ಪ ಅವರ ಬೇಡಿಕೆಗೆ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ.
ಬೆಂಗಳೂರಿನ ಬಿಜೆಪಿ ಕೋರ್ ಕಮಿಟಿ ಸಭೆಯ ಅನಂತರ ಹೊರಗೆ ಬಂದಿದ್ದ ಸಿಎಂ ಅವರನ್ನು ಭೇಟಿ ಮಾಡಿದ ಶಿವಪ್ಪ ತನ್ನ ತ್ರಿಚಕ್ರ ವಾಹನ ಅಪಘಾತಕ್ಕೆ ಒಳಗಾಗಿದ್ದು, ಹೊಸ ವಾಹನಕ್ಕೆ ಮನವಿ ಮಾಡಿದರು.
ಇದನ್ನೂ ಓದಿ:ನಿಗದಿಪಡಿಸಿದ ಅವಧಿಯೊಳಗೆ ಬೆಳೆ ಸಮೀಕ್ಷೆ ಪೂರ್ಣಗೊಳಿಸಿ: ಬಿ.ಸಿ. ಪಾಟೀಲ್
ಈ ವೇಳೆ ತತ್‌ಕ್ಷಣವೇ ಸ್ಪಂದಿಸಿದ ಸಿಎಂ ಬೊಮ್ಮಾಯಿ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮೂಲಕ ಮಾತಾಡಿ ಶಿವಪ್ಪನಿಗೆ ತ್ರಿಚಕ್ರ ವಾಹನದ ವ್ಯವಸ್ಥೆ ಮಾಡಿಕೊಡುವಂತೆ ಸೂಚನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಳ್ಳತನದ ವೇಳೆ ಎಚ್ಚರಗೊಂಡ ಮಾಲೀಕ : ಓಡುವ ಭರದಲ್ಲಿ ಮನೆಯ ಮೇಲಿಂದ ಬಿದ್ದು ಸಾವನ್ನಪ್ಪಿದ ಕಳ್ಳ
ತಾಂಬೂಲ ಪ್ರಶ್ನೆಗಿಂತ ಹೆಚ್ಚಿನ ತೀರ್ಮಾನ ಕೇಶವ ಕೃಪಾದಲ್ಲಿ: ಹೆಚ್ ಡಿಕೆ
ಚಿಕ್ಕಮಗಳೂರು: ತಂದೆ – ಮಗನ ಪಬ್ ಜಿ ಜಗಳ; ತಾಯಿಯ ಕೊಲೆಯಲ್ಲಿ ಅಂತ್ಯ
ಬೆಂಗಳೂರಿನಲ್ಲಿ ಐಕಿಯ ಸ್ಟೋರ್:ಸಿಇಓ ಜೆಸ್ಪರ್ ಬ್ರಾಡಿನ್ ಜತೆ ಸಿಎಂ ಚರ್ಚೆ
ಜಿ.ಟಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ ಸಿದ್ದರಾಮಯ್ಯ