ಮುಖ್ಯಮಂತ್ರಿ ಬೊಮ್ಮಾಯಿ ಮುಂದಿದೆ ಪಂಚ ಜಲಸವಾಲು 


Team Udayavani, Aug 23, 2021, 7:40 AM IST

Untitled-1

ಬೆಂಗಳೂರು: ರಾಜ್ಯದಲ್ಲಿ ಒಂದಲ್ಲೊಂದು ಕಾರಣಕ್ಕೆ ಕುಂಟುತ್ತ ಸಾಗುತ್ತಿರುವ ಐದು ಮಹತ್ತರ ನೀರಾವರಿ ಯೋಜನೆಗಳ ಜಾರಿ ಮಾಡುವ ಸವಾಲು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲಿದೆ.    ಇವುಗಳಿಗೆ ಕೇಂದ್ರ ಸರಕಾರದ ನೆರವು ಮತ್ತು ನೆರೆಯ ರಾಜ್ಯಗಳ ಸಹಕಾರ ಜತೆಗೆ ಅನುಮೋದನೆ ಪಡೆದುಕೊಳ್ಳಬೇಕಿದೆ.

 ಕೃಷ್ಣಾ  ಮೇಲ್ದಂಡೆಗೆ ಕೇಂದ್ರದ ಸಹಕಾರ : 

ಕೃಷ್ಣಾ ನದಿ ನೀರು ಹಂಚಿಕೆ ಕುರಿತಂತೆ ನ್ಯಾ| ಬ್ರಿಜೇಶ್‌ ಕುಮಾರ್‌ ಮಿಶ್ರಾ ನೇತೃತ್ವದ ನ್ಯಾಯಮಂಡಳಿ ನೀಡಿರುವ ತೀರ್ಪಿನಿಂದ ತಮಗೆ ಅನ್ಯಾಯವಾಗಿದೆ ಎಂದು ಆಂಧ್ರಪ್ರದೇಶ ಮತ್ತು ತೆಲಂಗಾಣ  ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿವೆ. ತೆಲಂಗಾಣ ರಾಜ್ಯ ತನಗೆ ಪ್ರತ್ಯೇಕವಾಗಿ ನೀರಿನ ಹಂಚಿಕೆ ಮಾಡುವಂತೆ ಕೇಳಿಕೊಂಡಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ತಮಗೂ ಅನ್ಯಾಯವಾಗಿದೆ ಎಂದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿವೆ. ಪ್ರಕರಣ  ಇತ್ಯರ್ಥವಾಗಲು ಕೇಂದ್ರದ ಸಹಕಾರ ಅಗತ್ಯ. ಬೆನ್ನಲ್ಲೇ, ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಷೋಷಿಸಲು ಕೇಂದ್ರದ ಮೇಲೆ ಒತ್ತಡ ಹೇರುವುದಾಗಿ ಮುಖ್ಯಮಂತ್ರಿಯವರು ಹೇಳಿದ್ದಾರೆ.

ಕಳಸಾ ಬಂಡೂರಿಗೆ ಕೇಂದ್ರದ ಅನುಮತಿ : 

ಉತ್ತರ ಕರ್ನಾಟಕದ  ಬಹುದಿನಗಳ ಬೇಡಿಕೆ ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆ  ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್‌ ಆದೇಶದಂತೆ ರಾಜ್ಯದ ಪಾಲಿನ ನೀರಿನ ಬಳಕೆಗೆ ಅನುವಾಗುವಂತೆ ಗೆಜೆಟ್‌ ಅಧಿಸೂಚನೆ ಹೊರಡಿಸಿತು.   ಯೋಜನೆ ಜಾರಿಗೆ ಸಚಿವ ಸಂಪುಟ ಸಹ ಅನುಮೋದನೆಗಳನ್ನು ನೀಡಿದೆ. ಈ ಯೋಜನೆಗೆ 1,675 ಕೋಟಿ ರೂ. ಆಡಳಿತಾತ್ಮಕ ಅನು ಮೋದನೆಯನ್ನೂ  ನೀಡಿದೆ. ಆದರೆ, ರಾಜ್ಯ ಸರಕಾರ  ನೀರನ್ನು ತಿರುಗಿಸಿ ಯೋಜನೆ ಕೈಗೆತ್ತಿಕೊಂಡಿದೆ ಎಂದು  ಗೋವಾ ಸರಕಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದು,  ಇದರ ಪರಿಶೀಲನೆಗೆ  ಸುಪ್ರೀಂಕೋರ್ಟ್‌ ಸಮಿತಿ ಯೊಂದನ್ನು ರಚಿಸಿದೆ.

ಮೇಕೆದಾಟು :

ಬೆಂಗಳೂರು ಮಹಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರಿನ ಯೋಜನೆಗೆ ಮೇಕೆದಾಟು ಬಳಿ ಕಾವೇರಿ ನದಿಗೆ ಸಮಾನಾಂತರ ಜಲಾಶಯ ನಿರ್ಮಿಸಲು ಸರಕಾರ ತೀರ್ಮಾನಿಸಿದೆ. ಇದಕ್ಕಾಗಿ  ಸುಮಾರು 9 ಸಾವಿರ ಕೋಟಿ ರೂ. ವೆಚ್ಚದ ವಿಸ್ತೃತ ಯೋಜನಾ ವರದಿ ಸಿದ್ದಪಡಿಸಿದ್ದು, ಸುಮಾರು 60 ಟಿಎಂಸಿ ನೀರು ಸಂಗ್ರಹಿಸುವುದು ಹಾಗೂ 400 ಮೆ.ವ್ಯಾ ವಿದ್ಯುತ್‌ ಉತ್ಪಾದನೆಯ ಈ ಯೋಜನೆಗೆ ಕೇಂದ್ರ  ಪರಿಸರ ಇಲಾಖೆಯ ಅನುಮತಿ ಅಗತ್ಯವಿದೆ. ಯೋಜನೆಗೆ ಪಕ್ಕದ ತಮಿಳುನಾಡು ತಕರಾರು ತೆಗೆಯುತ್ತಿದೆ.

ಎತ್ತಿನಹೊಳೆ :

ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಹಾಸನ, ತುಮಕೂರು ಜಿಲ್ಲೆಗಳ ಬರ ನೀಗಿಸಲು 2012ರಲ್ಲಿ ಆರಂಭವಾಗಿರುವ ಎತ್ತಿನಹೊಳೆ ಯೋಜನೆ ಕುಂಟುತ್ತಲೇ ಸಾಗಿದೆ.  ಇದಕ್ಕೆ ಯಾವುದೇ ಅಂತಾರಾಜ್ಯ ತಕರಾರಿಲ್ಲ. ಈ ಯೋಜನೆ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ರಾಜ್ಯ ಸರಕಾರಕ್ಕೆ ಯೋಜನಾ ವೆಚ್ಚ ಹೆಚ್ಚಾಗುತ್ತಲೇ ಇದೆ. ಆರಂಭದಲ್ಲಿ 7 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ತೀರ್ಮಾನಿಸಿದ್ದ ಈ ಯೋಜನೆಗೆ ಪ್ರಸ್ತುತ 21 ಸಾವಿರ ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.

ಭದ್ರಾ ಯೋಜನೆ : 

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವಂತೆ ಕೇಂದ್ರದ ಮೇಲೆ ನಿರಂತರ ಒತ್ತಡ ಹೇರಲಾಗುತ್ತಿದೆ. ಈ ಕುರಿತು ಶೀಘ್ರವೇ ಕೇಂದ್ರ ಸರಕಾರ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವ ನಿರೀಕ್ಷೆಯಲ್ಲಿ ರಾಜ್ಯದ್ದಾಗಿದೆ. ಸುಮಾರು 21,473 ಕೋಟಿ ರೂ. ವೆಚ್ಚದ  ಇದನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿದರೆ, ಕೇಂದ್ರ ಸರಕಾರ ಶೇ. 90 ರಷ್ಟು ಹಣಕಾಸು ಒದಗಿಸುತ್ತದೆ. ರಾಷ್ಟ್ರೀಯ ಯೋಜನೆ ಎಂದು ಘೋಷಣೆಯಾದರೆ, ಕೇಂದ್ರ  16,125 ಕೋಟಿ ರೂ. ಭರಿಸಲಿದೆ.

ನವಲಿ ಸಮತೋಲನ ಜಲಾಶಯ ನಿರ್ಮಾಣಕ್ಕೆ  ಆಂಧ್ರ, ತೆಲಂಗಾಣದ ಒಪ್ಪಿಗೆ ಅಗತ್ಯ :

ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ ನೀರು ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ.  ಹೀಗಾಗಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯ ನವಲಿ ಗ್ರಾಮದ ಸಮೀಪ ಸಮತೋಲನ ಜಲಾಶಯ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈ ಯೋಜನೆ ಜಾರಿಗೆ ರಾಜ್ಯ ಸರಕಾರ ಯೋಜನಾ ವರದಿ ಸಿದ್ಧಪಡಿಸಲು 14.20 ಕೋಟಿ ರೂ. ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ನವಲಿ ಸಮತೋಲಿತ ಜಲಾಶಯ ನಿರ್ಮಾಣದಿಂದ ಪ್ರಸ್ತುತ ತುಂಗ ಭದ್ರಾ ಜಲಾಶಯದ ನೀರು ಸಂಗ್ರಹ  ಸಾಮರ್ಥ್ಯ 130 ಟಿಎಂಸಿಯಷ್ಟು ಇದ್ದರೂ 31.616 ಟಿಎಂಸಿಯಷ್ಟು ಹೂಳು ತುಂಬಿರುವ ಕಾರಣದಿಂದ ಕನಿಷ್ಟ 30 ಟಿಎಂಸಿ ನೀರು ವ್ಯರ್ಥವಾಗುತ್ತಿದೆ. ಈ ಯೋಜನೆ ಜಾರಿಗೊಳ್ಳಲು ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಸಹಮತ ಅಗತ್ಯವಿದೆ.

 

– ಶಂಕರ ಪಾಗೋಜಿ

ಟಾಪ್ ನ್ಯೂಸ್

omicron

ಒಮಿಕ್ರಾನ್ :ಡೆಲ್ಟಾ ಗಿಂತ ಅಪಾಯಕಾರಿಯೇ? ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು ?

ashika ranganath

ಬ್ಯಾಕ್‌ ಟು ಬ್ಯಾಕ್‌ ಆಶಿಕಾ: ಈ ವಾರ ಒಂದು ಮುಂದಿನ ವಾರ ಮತ್ತೂಂದು ರಿಲೀಸ್‌

ಒಮಿಕ್ರಾನ್ ಭೀತಿ: ರಾಜ್ಯದಲ್ಲಿ ಇಂದಿನಿಂದ ಹಲವು ಕಠಿಣ ನಿಯಮಗಳು ಜಾರಿ

ಒಮಿಕ್ರಾನ್ ಭೀತಿ: ರಾಜ್ಯದಲ್ಲಿ ಇಂದಿನಿಂದ ಹಲವು ಕಠಿಣ ನಿಯಮಗಳು ಜಾರಿ

covid-1

ಸೋಂಕಿತರ ಮಾದರಿ ಪುಣೆಗೆ: ಗೋವಾದಲ್ಲಿಯೂ ಒಮಿಕ್ರಾನ್ ಆತಂಕ

ಬ್ಯಾಟ್ ತಾಗಿದ್ದರೂ ಎಲ್ ಬಿಡಬ್ಲ್ಯೂ ತೀರ್ಪು! ಅಂಪೈರ್ ತೀರ್ಮಾನಕ್ಕೆ ಹಲವರ ಆಕ್ಷೇಪ

ಬ್ಯಾಟ್ ತಾಗಿದ್ದರೂ ಎಲ್ ಬಿಡಬ್ಲ್ಯೂ ತೀರ್ಪು! ಅಂಪೈರ್ ತೀರ್ಮಾನಕ್ಕೆ ಹಲವರ ಆಕ್ಷೇಪ

ಪಂಜಾಬ್; ವಿವಾದಿತ ಗಾಯಕ ಸಿಧು ಮೂಸೆವಾಲಾ ಕಾಂಗ್ರೆಸ್ ಗೆ ಸೇರ್ಪಡೆ

ಪಂಜಾಬ್; ವಿವಾದಿತ ಗಾಯಕ ಸಿಧು ಮೂಸೆವಾಲಾ ಕಾಂಗ್ರೆಸ್ ಗೆ ಸೇರ್ಪಡೆ

satish jarkiholi

ರಮೇಶ ಜಾರಕಿಹೊಳಿ ನಮ್ಮ ಪಕ್ಷಕ್ಕೆ ಬುದ್ದಿ ಹೇಳುವ ಅವಶ್ಯಕತೆ ಇಲ್ಲ: ಸತೀಶ್ ಜಾರಕಿಹೊಳಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಒಮಿಕ್ರಾನ್ ಭೀತಿ: ರಾಜ್ಯದಲ್ಲಿ ಇಂದಿನಿಂದ ಹಲವು ಕಠಿಣ ನಿಯಮಗಳು ಜಾರಿ

ಒಮಿಕ್ರಾನ್ ಭೀತಿ: ರಾಜ್ಯದಲ್ಲಿ ಇಂದಿನಿಂದ ಹಲವು ಕಠಿಣ ನಿಯಮಗಳು ಜಾರಿ

ಒಮಿಕ್ರಾನ್ ಭೀತಿ: ಸಿಎಂ ನೇತೃತ್ವದಲ್ಲಿ ತುರ್ತು ಸಭೆ

ಒಮಿಕ್ರಾನ್ ಭೀತಿ: ಸಿಎಂ ನೇತೃತ್ವದಲ್ಲಿ ತುರ್ತು ಸಭೆ

vote

ಮೈಸೂರಿನಲ್ಲಿ ಸಂವಾದ ;ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪರಿಷತ್ ಅಭ್ಯರ್ಥಿಗಳು ತಬ್ಬಿಬ್ಬು

ಕೆಲವು ಕಠಿಣ ನಿಯಮಗಳನ್ನು ಮತ್ತೆ ಜಾರಿ ಮಾಡಬೇಕಾಗಬಹುದು: ಗೌರವ್ ಗುಪ್ತಾ

ಕೆಲವು ಕಠಿಣ ನಿಯಮಗಳನ್ನು ಮತ್ತೆ ಜಾರಿ ಮಾಡಬೇಕಾಗಬಹುದು: ಗೌರವ್ ಗುಪ್ತಾ

1-fsfd

ಒಮಿಕ್ರಾನ್ ವಿಚಾರದಲ್ಲೂ ಲಂಚ ಹೊಡೆಯುವುದನ್ನು ಸರಕಾರ ಬಿಡಬೇಕು : ಡಿಕೆಶಿ

MUST WATCH

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

ಹೊಸ ಸೇರ್ಪಡೆ

18vote

ಅಭಿವೃದ್ದಿಗಾಗಿ ಪ್ರಕಾಶ ಖಂಡ್ರೆ ಗೆಲ್ಲಿಸಿ: ಚವ್ಹಾಣ

omicron

ಒಮಿಕ್ರಾನ್ :ಡೆಲ್ಟಾ ಗಿಂತ ಅಪಾಯಕಾರಿಯೇ? ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು ?

17protest

ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಮನವಿ

ashika ranganath

ಬ್ಯಾಕ್‌ ಟು ಬ್ಯಾಕ್‌ ಆಶಿಕಾ: ಈ ವಾರ ಒಂದು ಮುಂದಿನ ವಾರ ಮತ್ತೂಂದು ರಿಲೀಸ್‌

16crop

ಅಕಾಲಿಕ ಮಳೆಗೆ ಶೇ.80 ತೊಗರಿ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.