ಸರ್ಕಾರಿ ನೌಕರರ ಸಮಸ್ಯೆ ನಿವಾರಣೆಗೆ ಸಿಎಂ ಸೂಚನೆ
Team Udayavani, Aug 6, 2019, 3:00 AM IST
ಬೆಂಗಳೂರು: ಆರೋಗ್ಯ, ಶಿಕ್ಷಣ ಹಾಗೂ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ರಾಜ್ಯ ಸರ್ಕಾರಿ ನೌಕರರಿಗೆ ತಿಂಗಳ ಮೊದಲ ವಾರದಲ್ಲಿಯೇ ವೇತನ ಮತ್ತು ಭತ್ಯೆಯನ್ನು ರಾಜ್ಯ ಸರ್ಕಾರದಿಂದ ಪಾವತಿಸಿ ಕೇಂದ್ರ ಸರ್ಕಾರದಿಂದ ಅನುದಾನದ ಬಿಡುಗಡೆಯಾದ ನಂತರ ಮರು ಹೊಂದಾಣಿಕೆ ಮಾಡಿಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಬೇಡಿಕೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ನಿರ್ದೇಶಿಸಿದ್ದಾರೆ.
ಆರೋಗ್ಯ ಭಾಗ್ಯ: ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತರ ಚಿಕಿತ್ಸೆಯ ಮರುಪಾವತಿ ವೆಚ್ಚ ನಿಯಮಗಳಲ್ಲಿ ಬದಲಾವಣೆ ತಂದು ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಆರೋಗ್ಯ ಭಾಗ್ಯ ಯೋಜನೆಯನ್ನು ರಾಜ್ಯ ಸರ್ಕಾರಿ ನೌಕರರಿಗೂ ವಿಸ್ತರಿಸಲು ಪ್ರಸ್ತಾವನೆ ಸಲ್ಲಿಸಲು ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟ
ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ
ಚಳ್ಳಕೆರೆಯಲ್ಲಿ ಹನ್ಸ-ಎನ್ಜಿ ಯಶಸ್ವಿ ಪ್ರಯೋಗ; ಸಿಎಸ್ಐಆರ್, ಎನ್ಎಎಲ್ನಿಂದ ವಿಮಾನ ಸಿದ್ಧ
ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ
ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ