ವನ್ಯಜೀವಿ-ಮಾನವ ಸಂಘರ್ಷ ಅಧ್ಯಯನಕ್ಕೆ ಸಮಿತಿ ರಚನೆ


Team Udayavani, Feb 11, 2017, 3:45 AM IST

10-STATE-6.jpg

ಹಾವೇರಿ: ಸಮರ್ಪಕ ಮಳೆಯಿಲ್ಲದೆ, ನೀರು, ಆಹಾರ ಸಿಗದೆ ಕಾಡುಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುತ್ತಿರುವುದರಿಂದ ಆಗುತ್ತಿರುವ ಮಾನವ ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿ, ಬೆಳೆ ಹಾನಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಅಧ್ಯಯನ ಸಮಿತಿಯೊಂದನ್ನು ರಚಿಸಿದೆ.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಾನವ- ವನ್ಯಜೀವಿಗಳ ಸಂಘರ್ಷದಿಂದಾಗಿ ಬೆಂಗಳೂರು, ಚಾಮರಾಜನಗರ, ಮಂಡ್ಯ, ಮೈಸೂರು, ರಾಮನಗರ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಬೆಳೆ ಹಾಳಾಗುತ್ತಿದ್ದು, ರೈತರು ಆರ್ಥಿಕವಾಗಿ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇನ್ನೊಂದೆಡೆ ವನ್ಯಜೀವಿಗಳ ಹಾವಳಿಯಿಂದ ಪ್ರಾಣಹಾನಿ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಒಟ್ಟಾರೆ ಮಾನವ ಹಾಗೂ ವನ್ಯಜೀವಿ ಹಾವಳಿಯಿಂದಾಗುತ್ತಿರುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಈ ಬಗ್ಗೆ ಅಧ್ಯಯನ ನಡೆಸಿ, ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿಯಲ್ಲಿ ಕೈಗೊಳ್ಳಬಹುದಾದ
ಪರಿಹಾರ ಕ್ರಮಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ, ಜನವರಿ 24ರಂದು ಪ್ರತ್ಯೇಕ ಸಮಿತಿ ರಚಿಸಿದ್ದು, ಸಮಿತಿ ಈಗಷ್ಟೇ ಕಾರ್ಯಾರಂಭ ಮಾಡಲಿದೆ.

ನಾಲ್ವರ ಸಮಿತಿ ರಚನೆ: ನಾಲ್ಕು ಜನರ ಸಮಿತಿಗೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಜಯರಾಮ್‌ 
ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಸಂಜಯ ಗುಬ್ಬಿ ಹಾಗೂ ಮಲ್ಲೇಶ, ವಾಯ್ಸ ಫಾರ್‌ ವೈಲ್ಡ್‌ ಲೈಫ್‌ನ ಸುಧೀರ್‌ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಈ ಸಮಿತಿ ವನ್ಯಜೀವಿ ಹಾಗೂ ಮಾನವ
ನಡುವಿನ ಸಂಘರ್ಷದಿಂದ ಆಗುತ್ತಿರುವ ಪ್ರಾಣ ಹಾನಿ, ಬೆಳೆ ಹಾನಿ, ವನ್ಯಜೀವಿಗಳ ಮರಣ ಮತ್ತಿತರ ಅಂಶಗಳನ್ನು ಅಭ್ಯಸಿಸಲಿದೆ. ಹಲವು ಜಿಲ್ಲೆಗಳಲ್ಲಿರುವ ಮಾನವ- ವನ್ಯಜೀವಿಗಳ ಸಂಘರ್ಷದ ಗಂಭೀರತೆಯ ಮಟ್ಟ ಮತ್ತಿತರ ಅಂಶಗಳನ್ನು ಪರಿಗಣಿಸಿ, ನಿರ್ದಿಷ್ಟ ಸ್ಥಳ ಆಧಾರಿತ ಪರಿಹಾರೋಪಾಯಗಳನ್ನು ಸೂಚಿಸುವ ವಿಸ್ತೃತ  ವರದಿ ನೀಡಲಿದೆ.

ರಾಜ್ಯದ ಎಲ್ಲ ಜಿಲ್ಲೆಗಳ ಪ್ರವಾಸ ಮಾಡಿ ಅಧ್ಯಯನ ವರದಿಯನ್ನು ಮೂರು ತಿಂಗಳಲ್ಲಿ ಸಲ್ಲಿಸಲು ಸಮಿತಿಗೆ ಸರ್ಕಾರ ಸೂಚಿಸಿದೆ.
ಸರ್ಕಾರದ ಈ ಕ್ರಮದಿಂದಾಗಿ ಮುಂದಿನ ದಿನಗಳಲ್ಲಿ ವನ್ಯಜೀವಿಗಳಿಂದಾಗುವ ಹಾನಿ ತಡೆಗೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.

ಟಾಪ್ ನ್ಯೂಸ್

ನಾನೊಬ್ಬ ಯೋಧ, ಪಂಜಾಬ್ ಗತ ವೈಭವ ಮರು ಸ್ಥಾಪಿಸುತ್ತೇನೆ; ಭಗವಂತ ಮಾನ್

ನಾನೊಬ್ಬ ಯೋಧ, ಪಂಜಾಬ್ ಗತ ವೈಭವ ಮರು ಸ್ಥಾಪಿಸುತ್ತೇನೆ; ಭಗವಂತ ಮಾನ್

ಪಂಜಾಬ್ ಸಿಎಂ ಚನ್ನಿ ಸಂಬಂಧಿಗಳ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ

ಪಂಜಾಬ್ ಸಿಎಂ ಚನ್ನಿ ಸಂಬಂಧಿಗಳ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ

ಮಾಜಿ ಸಚಿವರ ಲೈಂಗಿಕ ಹಗರಣ: ವೀಡಿಯೊ ಮಾಡಲು ಕಾಂಗ್ರೆಸ್ ನಿಂದ 10 ಲಕ್ಷ ಡೀಲ್‍: ಸಂತ್ರಸ್ತೆ

ಮಾಜಿ ಸಚಿವರ ಲೈಂಗಿಕ ಹಗರಣ: ವೀಡಿಯೊ ಮಾಡಲು ಕಾಂಗ್ರೆಸ್ ನಿಂದ 10 ಲಕ್ಷ ಡೀಲ್‍: ಸಂತ್ರಸ್ತೆ

ragini dwivedi

ಕಾಲಿವುಡ್‌ ನ‌ತ್ತ ಹೊರಟ ರಾಗಿಣಿ

ಜೆಡಿಎಸ್ ನ ಜನತಾ ಜಲಧಾರೆ ಕಾರ್ಯಕ್ರಮ ಮುಂದೂಡಿಕೆ

ಜೆಡಿಎಸ್ ನ ಜನತಾ ಜಲಧಾರೆ ಕಾರ್ಯಕ್ರಮ ಮುಂದೂಡಿಕೆ

Ahmedabad franchise

ಹಾರ್ದಿಕ್ ಪಾಂಡ್ಯ, ರಶೀದ್ ಖಾನ್ ಜೊತೆಗೆ ಯುವ ಆಟಗಾರನನ್ನು ಸೆಳೆದ ಅಹಮದಾಬಾದ್ ಫ್ರಾಂಚೈಸಿ

ಸತೀಶ್ ಜಾರಕಿಹೊಳಿ

ಮೇಕೆದಾಟು ರೀತಿಯಲ್ಲೇ ಮಹದಾಯಿ ಹೋರಾಟ ನಡೆಸುತ್ತೇವೆ: ಸತೀಶ್ ಜಾರಕಿಹೊಳಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೃತ ಬಾಲಕಲಾವಿದೆ ಸಮನ್ವಿ ಮನೆಗೆ ಡಿ.ಕೆ. ಶಿವಕುಮಾರ್ ಭೇಟಿ, ಕುಟುಂಬ ಸದಸ್ಯರಿಗೆ ಸಾಂತ್ವನ

ಮೃತ ಬಾಲಕಲಾವಿದೆ ಸಮನ್ವಿ ಮನೆಗೆ ಡಿ.ಕೆ. ಶಿವಕುಮಾರ್ ಭೇಟಿ, ಕುಟುಂಬ ಸದಸ್ಯರಿಗೆ ಸಾಂತ್ವನ

ಸಂಕ್ರಾಂತಿಗೆ ಸಿಹಿ ಅಲ, ವಿಷ ಕೊಟ್ಟ ಸರ್ಕಾರ : ಅತಿಥಿ ಉಪನ್ಯಾಸಕರ ಆಕ್ರೋಶ

ಸಂಕ್ರಾಂತಿಗೆ ಸಿಹಿ ಅಲ, ವಿಷ ಕೊಟ್ಟ ಸರ್ಕಾರ : ಅತಿಥಿ ಉಪನ್ಯಾಸಕರ ಆಕ್ರೋಶ

ಸ್ಮಾರ್ಟ್‌ ಸಿಟಿಯಲ್ಲಿ ಇನ್ನು ಸೈಕಲ್‌ ಸವಾರಿ : ಪ್ರಾಯೋಗಿಕವಾಗಿ 8 ನಿಲ್ದಾಣಗಳು ಸಜ್ಜು

ಸ್ಮಾರ್ಟ್‌ ಸಿಟಿಯಲ್ಲಿ ಇನ್ನು ಸೈಕಲ್‌ ಸವಾರಿ : ಪ್ರಾಯೋಗಿಕವಾಗಿ 8 ನಿಲ್ದಾಣಗಳು ಸಜ್ಜು

ಒಮಿಕ್ರಾನ್‌ : 34 ಮೊಬೈಲ್‌ ತಂಡ ರಚನೆ  : ಶೀಘ್ರವೇ ಇನ್ನು ಆರು ತಂಡ ರಚನೆ

ಒಮಿಕ್ರಾನ್‌ : 34 ಮೊಬೈಲ್‌ ತಂಡ ರಚನೆ : ಶೀಘ್ರವೇ ಇನ್ನು ಆರು ತಂಡ ರಚನೆ

ಜೆಡಿಎಸ್ ನ ಜನತಾ ಜಲಧಾರೆ ಕಾರ್ಯಕ್ರಮ ಮುಂದೂಡಿಕೆ

ಜೆಡಿಎಸ್ ನ ಜನತಾ ಜಲಧಾರೆ ಕಾರ್ಯಕ್ರಮ ಮುಂದೂಡಿಕೆ

MUST WATCH

udayavani youtube

ಪರ್ಯಾಯ ಮಹೋತ್ಸವ : ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಿಂದ ಪವಿತ್ರ ಸ್ನಾನ

udayavani youtube

ನಿಷೇಧದ ನಡುವೆಯೂ ರಥೋತ್ಸವ : ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲ

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

udayavani youtube

ಅಬುಧಾಬಿಯಲ್ಲಿ ಡ್ರೋನ್ ದಾಳಿ : ಇಬ್ಬರು ಭಾರತೀಯರು ಸೇರಿ ಮೂವರು ಸಾವು

udayavani youtube

ಕೃಷ್ಣಾಪುರ ಸ್ವಾಮೀಜಿಗಳ ಹಿನ್ನೆಲೆ

ಹೊಸ ಸೇರ್ಪಡೆ

ನಾನೊಬ್ಬ ಯೋಧ, ಪಂಜಾಬ್ ಗತ ವೈಭವ ಮರು ಸ್ಥಾಪಿಸುತ್ತೇನೆ; ಭಗವಂತ ಮಾನ್

ನಾನೊಬ್ಬ ಯೋಧ, ಪಂಜಾಬ್ ಗತ ವೈಭವ ಮರು ಸ್ಥಾಪಿಸುತ್ತೇನೆ; ಭಗವಂತ ಮಾನ್

ಶೇ.33 ಅರಣ್ಯಪ್ರದೇಶ ವಿಸ್ತರಣೆ: ಕತ್ತಿ

ಶೇ.33 ಅರಣ್ಯಪ್ರದೇಶ ವಿಸ್ತರಣೆ: ಕತ್ತಿ

ಬಸವೇಶ್ವರ ಏತ ನೀರಾವರಿಗೆ ಪಾದಯಾತ್ರೆ

ಬಸವೇಶ್ವರ ಏತ ನೀರಾವರಿಗೆ ಪಾದಯಾತ್ರೆ

ಯುವಕರೇ ದೇಶದ ಸಂಪತ್ತು: ಹೇಮಲತಾ

ಯುವಕರೇ ದೇಶದ ಸಂಪತ್ತು: ಹೇಮಲತಾ

ಆಸ್ಪತ್ರೆ 30 ಹಾಸಿಗೆಗೆ ಮೇಲ್ದರ್ಜೆಗೆ

ಬೆಳಗಾವಿ: ವಡಗಾವಿಯ ಆಸ್ಪತ್ರೆ 30 ಹಾಸಿಗೆಗೆ ಮೇಲ್ದರ್ಜೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.