ನನಗೆ ರಾಜಕೀಯವಾಗಿ ಮರುಜನ್ಮ ನೀಡಿದ ಚಾಮುಂಡೇಶ್ವರಿಯಿಂದ ಸ್ಪರ್ಧೆ 

Team Udayavani, Jul 14, 2017, 3:53 PM IST

ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ನನಗೆ ರಾಜಕೀಯ ಮರುಜನ್ಮ ಒದಗಿಸಿಕೊಟ್ಟಿದೆ. ನಾನು 6 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ ಮುಂದಿನ ಚುನಾವಣೆಯಲ್ಲಿ ನಾನು ಇಲ್ಲಿಂದಲೆ ಸ್ಪರ್ಧಿಸಬೇಕೆಂದಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನಡೆಸಿ ವೇದಿಕೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಈ ಹೇಳಿಕೆ ನೀಡಿದ್ದಾರೆ. 

ಇದೇ ವೇಳೆ ವರುಣಾ ಕ್ಷೇತ್ರಕ್ಕೆ ನನಗೆ ಹೆಚ್ಚಾಗಿ ಬರಲು ಸಾಧ್ಯವಾಗುತ್ತಿಲ್ಲ. ಹಿಂದೆ ನನ್ನ ಮಗ ರಾಕೇಶ್‌ ಬರುತ್ತಿದ್ದ ಈಗ ಯತೀಂದ್ರ ಬರುತ್ತಿದ್ದಾನೆ. ಕಳೆದ ಭಾರೀ ಆಶೀರ್ವದಿಸಿದಂತೆ ಈ ಬಾರಿಯೂ ಆಶೀರ್ವದಿಸಿ ಎಂದು ಪುತ್ರನ ಸ್ಫರ್ಧೆಯ ಸುಳಿವು ನೀಡಿದರು. 

2006 ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕೇವಲ 257ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2013ರಲ್ಲಿ ಕ್ಷೇತ್ರ ಬದಲಾವಣೆ ಮಾಡಿದ್ದ ಅವರು ವರುಣಾ ಕ್ಷೇತ್ರದಿಂದ 29,467 ಮತಗಳ ಅಂತರದಿಂದ ಜಯಗಳಿಸಿದ್ದರು. 

ಹಾಲಿ ಶಾಸಕರಾಗಿ ಜೆಡಿಎಸ್‌ನ ಜಿ.ಟಿ.ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರ ಪ್ರತಿನಿಧಿಸುತ್ತಿದ್ದು ಮುಂದಿನ ಚುನಾವಣೆಯಲ್ಲಿ ಪ್ರಬಲ ಸ್ಪರ್ಧೆ ಏರ್ಪಡುವುದು ನಿಶ್ಚಿತ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಸೂಚನೆಗಳು ಕಂಡುಬರುತ್ತಿದ್ದು, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯನ್ನು ವಿಸರ್ಜಿಸುವ ಮಹತ್ವದ ತೀರ್ಮಾನವನ್ನು...

  • ಬೆಂಗಳೂರು: ಕಳೆದ ಬಾರಿಯ ಬಜೆಟ್ (2019-20ರ ಅಯವ್ಯಯ)ನಲ್ಲಿ ಘೋಷಿಸಿದಂತೆ ರಾಜ್ಯ ಪೊಲೀಸ್‌ ಇಲಾಖೆಯಲ್ಲಿರುವ ಕಾನ್‌ಸ್ಟೆಬಲ್ ಮತ್ತು ಹೆಡ್‌ಕಾನ್‌ಸ್ಟೆಬಲ್ ಗಳ  ಮಾಸಿಕ...

  • ಬೆಂಗಳೂರು: ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ರಾಜ್ಯ ಪ್ರದೇಶ ಕಾಂಗ್ರೆಸ್‌ ಪದಾಧಿಕಾರಿಗಳ ಸಮಿತಿಯನ್ನು ವಿಸರ್ಜಿಸಿ ಹೈಕಮಾಂಡ್‌ ಆದೇಶ ನೀಡಿದ್ದು,...

  • ಬೆಂಗಳೂರು: ರಾಷ್ಟ್ರಾದ್ಯಂತ ಜು. 6ರಿಂದ ಆ.11ರವರೆಗೆ ಸದಸ್ಯತ್ವ ಅಭಿಯಾನ ನಡೆಯಲಿದ್ದು, ಕರ್ನಾಟಕದಲ್ಲೂ 50 ಲಕ್ಷ ಸದಸ್ಯತ್ವ ಸೇರ್ಪಡೆಗೆ ರಾಜ್ಯ ಬಿಜೆಪಿ ಗುರಿ ಹಾಕಿಕೊಂಡಿದೆ. ದೇಶಾದ್ಯಂತ...

  • ಬೆಂಗಳೂರು: ಬಹುನಿರೀಕ್ಷಿತ ಚಂದ್ರಯಾನ-2ಕ್ಕೆ ಇಸ್ರೋ ಸಜ್ಜಾಗಿದ್ದು, ಬೆಂಗಳೂರಿನ ಇಸ್ರೋ ಸ್ಪೇಸ್‌ಕ್ರಾಫ್ಟ್‌ ಇಂಟಿಗ್ರೇಷನ್‌ ಟೆಸ್ಟ್‌ ಎಸ್ಟಾಬ್ಲಿಷ್‌ಮೆಂಟ್‌(ಐಸೈಟ್‌)ನಲ್ಲಿ...

ಹೊಸ ಸೇರ್ಪಡೆ