ಕೂಲಿ ಕಾರ್ಮಿಕನ ಮಗಳಿಗೆ ಏಳು ಚಿನ್ನದ ಪದಕ ಹೆಗ್ಗಳಿಕೆ

Team Udayavani, Feb 16, 2019, 12:15 AM IST

ಶಿವಮೊಗ್ಗ: ಕಾಫಿ ಕ್ಯೂರಿಂಗ್‌ ಘಟಕವೊಂದರಲ್ಲಿ ಮೂಟೆ ಹೊರುತ್ತಿದ್ದ ಅಪ್ಪ ಈಗ ಅವರಿವರ ಜಮೀನಿನಲ್ಲಿ ದುಡಿಯುವ ಕೂಲಿಯಾಳು. ಪ್ರತಿದಿನ ಕಾಫಿ  ತೋಟಕ್ಕೆ ಹೋಗಿ ದುಡಿಯುವ ಅಮ್ಮ.. ಬದುಕಿಗೆ ಬಳುವಳಿಯಾಗಿ ಬಂದ ಬಡತನ.. ಆದರೂ ಆ ಹುಡುಗಿ ಬಡತನ, ಕಷ್ಟಗಳಿಗೆ ಕುಗ್ಗಿ ಕೂರಲಿಲ್ಲ.. ಸಾಧಿ ಸುವ ಛಲ ಬಿಡದೆ ಮುನ್ನುಗ್ಗಿದ ಆಕೆಯ ಮುಡಿಗೇರಿದ್ದು ಪ್ರಥಮ ರ್‍ಯಾಂಕ್‌,ಬರೋಬ್ಬರಿ 7 ಚಿನ್ನದ ಪದಕ!

ಚಿಕ್ಕಮಗಳೂರು ತಾಲೂಕಿನ ಕುರುವಂಗಿಯ ಪರಿಶಿಷ್ಟ ಜಾತಿ ಕಾಲೋನಿ ನಿವಾಸಿ, ಕೂಲಿ ಕಾರ್ಮಿಕ ಅಣ್ಣಪ್ಪ ಅವರ ಪುತ್ರಿ ಕೆ.ಎ.ನೇತ್ರಾವತಿ ಎಲ್ಲರೂ ನಿಬ್ಬೆರಗಾಗುವ ಸಾಧನೆ ಮಾಡಿದ್ದಾರೆ. ಚಿಕ್ಕಮಗಳೂರಿನ ಐಡಿಎಸ್‌ಜಿ ಸರಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ನೇತ್ರಾವತಿ, ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ ರ್‍ಯಾಂಕ್‌ ಗಳಿಸುವುದರ ಜತೆಗೆ 7 ಚಿನ್ನದ ಪದಕ ಹಾಗೂ ಒಂದು ನಗದು ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ವಿಶೇಷವೆಂದರೆ ಈ ವಿಭಾಗದಲ್ಲಿ ಇರುವ 10 ಚಿನ್ನದ ಪದಕಗಳಲ್ಲಿ ನೇತ್ರಾವತಿ ಒಬ್ಬರೇ 7 ಪದಕ ಕೊರಳಿಗೇರಿಸಿಕೊಂಡಿದ್ದಾರೆ. ಇನ್ನುಳಿದ ಚಿನ್ನದ ಪದಕಗಳು ಕೂಡ ಐಡಿಎಸ್‌ಜಿ ಕಾಲೇಜಿನಲ್ಲೇ ವ್ಯಾಸಂಗ ಮಾಡುತ್ತಿರುವ ಬಿ.ಎಸ್‌.ಭವ್ಯ ಅವರ ಪಾಲಾಗಿದೆ. ಬಡತನದ ನಡುವೆಯೂ ಸಾಧನೆ ಮಾಡಿದ ನೇತ್ರಾವತಿ ಕಾಲೇಜು ಪ್ರಾಧ್ಯಾಪಕಿಯಾಗುವ ಕನಸು ಹೊತ್ತಿದ್ದಾರೆ.

ಸರಕಾರಿ ಶಾಲೆ ಮತ್ತು ಕನ್ನಡ ಮಾಧ್ಯಮ ದಲ್ಲೇ ಓದಿದ್ದು ಉಪನ್ಯಾಸಕಿ ಆಗಬೇಕು ಎಂಬ ಕನಸಿದೆ. ಇಂಗ್ಲಿಷ್‌ ಸೇರಿದಂತೆ ಇತರ ಭಾಷೆ ಕಲಿಯುವುದು ತಪ್ಪಲ್ಲ. ಉದ್ಯೋಗಕ್ಕೆ ಆ ಭಾಷೆಗಳು ಕೂಡ ಉಪಯುಕ್ತ. ಕನ್ನಡದಲ್ಲೂ ಸಾಕಷ್ಟು ಅವಕಾಶಗಳಿದ್ದು, ಅದನ್ನು ಬಳಸಿಕೊಳ್ಳುವ ಕೌಶಲ್ಯ ನಮ್ಮಲ್ಲಿರಬೇಕು.
● ಕೆ.ಎ. ನೇತ್ರಾವತಿ, ಎಂಎ ಕನ್ನಡ ವಿಭಾಗದಲ್ಲಿ 7 ಗೋಲ್ಡ್‌ ಮೆಡಲ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ