Udayavni Special

ದೇಶದ 12ನೇ ರೈಲ್ವೆ ಹೆರಿಟೇಜ್‌ ಮ್ಯೂಸಿಯಂ ಸಿದ್ಧ

Team Udayavani, Aug 1, 2020, 10:35 AM IST

ದೇಶದ 12ನೇ ರೈಲ್ವೆ ಹೆರಿಟೇಜ್‌ ಮ್ಯೂಸಿಯಂ ಸಿದ್ಧ

ಹುಬ್ಬಳ್ಳಿ: ದೇಶದ 12ನೇ ರೈಲ್ವೆ ಹೆರಿಟೇಜ್‌ ಮ್ಯೂಸಿಯಂ ಹುಬ್ಬಳ್ಳಿ-ಗದಗ ರಸ್ತೆಯಲ್ಲಿ ತಲೆಯೆತ್ತಿದೆ. ರಾಜ್ಯದ 2ನೇ ರೈಲು ವಸ್ತು ಸಂಗ್ರಹಾಲಯ ಇದಾಗಿದ್ದು, ಎರಡು ಹಾಗೂ ಅದಕ್ಕಿಂತ ಹೆಚ್ಚು ಮ್ಯೂಸಿಯಂ ಹೊಂದಿದ ರಾಜ್ಯ ಎನ್ನುವ  ಖ್ಯಾತಿ ಕರ್ನಾಟಕ ಪಡೆದಿದೆ. ರೈಲ್ವೆ ಇಲಾಖೆಯ ಗತವೈಭವ ನೆನಪಿಸುವ ಅತ್ಯಾಕರ್ಷಣೆಯ ಮ್ಯೂಸಿಯಂ ಸ್ಥಾಪಿಸುವ ಮೂಲಕ ನಗರವನ್ನು ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವ ನೈರುತ್ಯ ರೈಲ್ವೆ ವಲಯದ ಕನಸು ಈಡೇರಿದೆ.

ಸುಮಾರು 3500 ಚ.ಮೀ.ವ್ಯಾಪ್ತಿಯಲ್ಲಿ ಮ್ಯೂಸಿಯಂ ಸ್ಥಾಪನೆಗೊಂಡಿದೆ. ಇದಕ್ಕೆ ಅಗತ್ಯವಾದ ಎರಡು ಹಳೆಯ ವಸತಿ ಗೃಹಗಳನ್ನು ನವೀಕರಣ ಮಾಡಿ ವಸ್ತು  ಪ್ರದರ್ಶನಾಲಯಕ್ಕೆ ಬೇಕಾದ ರೀತಿಯಲ್ಲಿ ಮಾರ್ಪಡಿಸಲಾಗಿದೆ. ಪರಂಪರೆ ಮತ್ತು ವಾಸ್ತುಶಿಲ್ಪ ತಜ್ಞರ ನೆರವು ಪಡೆದು ಮಾದರಿ ವಸ್ತು ಸಂಗ್ರಹಾಲಯವನ್ನಾಗಿ ಮಾಡಲಾಗಿದೆ. ಪ್ರತಿಯೊಂದು ವಸ್ತುಗಳ ವಿವರಣೆಗಳನ್ನು ಕನ್ನಡ, ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ನೀಡಲಾಗಿದೆ. ಹೊರಾಂಗಣಕ್ಕಿಂತ ಹೆಚ್ಚು ಸಾಮಗ್ರಿಗಳ ಸಂಗ್ರಹ ಒಳಾಂಗಣದಲ್ಲಿವೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ವಾಣಿಜ್ಯ ನಗರಕ್ಕೆ ಆಗಮಿಸುವ ಜನರಿಗೆ ಇದೊಂದು ಅತ್ಯಾಕರ್ಷಣೆಯ ಸ್ಥಳವಾಗಲಿದೆ.

ಸ್ವಾಗತಿಸುವ ಎಂಜಿನ್‌ಗಳು: ಮ್ಯೂಸಿಯಂನ ಪ್ರವೇಶ ದ್ವಾರದಲ್ಲಿ ಮೂರ್‍ನಾಲ್ಕು ದಶಕಗಳ ಕಾಲ ಪ್ರಯಾಣಿಕ, ಸರಕು ಸೇವೆ ನೀಡಿದ ಎಂಜಿನ್‌ ಹಾಗೂ ಬೋಗಿಗಳು ಸ್ವಾಗತಿಸುತ್ತವೆ. 1992ರಲ್ಲಿ ಸಿದ್ಧಗೊಂಡು 2019ರಲ್ಲಿ ಕಾರ್ಯ ಸ್ಥಗಿತಗೊಳಿಸಿರುವ ಪಶ್ಚಿಮ ರೈಲ್ವೆ ವಲಯದ ವಡೋದರ ವಿಭಾಗದ ನ್ಯಾರೋಗೇಜ್‌ ಲೋಕೋಮೋಟಿವ್‌, ಆಗ್ನೇಯ ಮಧ್ಯ ರೈಲ್ವೆಯ 1989ರಲ್ಲಿ ತಯಾರಿಸಿದ ನ್ಯಾರೋ ಗೇಜ್‌ ಬೋಗಿ, 1981ರಲ್ಲಿ ತಯಾರಿಸಿದ ನ್ಯಾರೋ ಗೇಜ್‌ ಲೋಕೋಮೇಟಿವ್‌ (ಎಂಜಿನ್‌), 1981ರಿಂದ ಸುಮಾರು 38 ವರ್ಷಗಳ ಕಾಲ ಕಲ್ಲಿದ್ದಲು, ಜಲ್ಲಿ ಸಾಗಾಣಿಕೆಗೆ ಬಳಸಿದ ನ್ಯಾರೋಗೇಜ್‌ ವ್ಯಾಗನ್‌ ಹಾಗೂ 1948ರಿಂದ ಬಳಕೆಯಾಗುತ್ತಿದ್ದ ಟ್ಯಾಂಕ್‌ ವ್ಯಾಗನ್‌ ಸಾರ್ವಜನಿಕರನ್ನು ಸಾಗತಿಸುವ ಪ್ರಮುಖ ಆಕರ್ಷಣೆಯಾಗಿವೆ. ಇನ್ನು ಆ ಕಾಲದಲ್ಲಿ ಬಳಸಲಾಗುತ್ತಿದ್ದ ಸಿಗ್ನಲ್‌ ಸೇರಿದಂತೆ ಇನ್ನಿತರ ಸಾಮಗ್ರಿಗಳು ರೈಲ್ವೆ ಮಾರ್ಗಗಳು ನೈಜತೆ ನೆನಪಿಸುತ್ತವೆ.

ರೈಲ್ವೆ ಇಲಾಖೆಯ ನಿಲ್ದಾಣ, ವಿವಿಧ ಕಚೇರಿಗಳಲ್ಲಿ ಬಳಸುತ್ತಿದ್ದ ಅಂದಿನ ಕಾಲದ ವಿದ್ಯುತ್‌ ದೀಪಗಳು, ಗ್ರಿಲ್‌ ಗಳು, ವಿಂಟೇಜ್‌ ರೈಲು ಚಕ್ರಗಳು, ಆಯಾ ಕಾಲಘಟ್ಟದಲ್ಲಿ ಬದಲಾದ ರೈಲುಗಳ ಚಕ್ರಗಳಿವೆ. ಲೆವೆಲ್‌ ಕ್ರಾಸಿಂಗ್‌, ಟೆಂಡರ್‌ ಟ್ರಕ್‌ ಟ್ರಾಲಿ, ರೈಲ್‌ ಬೆಂಡರ್‌, ಇಂಟರ್‌ ಲಾಕಿಂಗ್‌ ಫ್ರೇಮ್‌, ಗ್ರೌಂಡ್‌ ಲಿವರ್‌ ಫ್ರೇಂ, ಡಬಲ್‌, ಸಿಂಗಲ್‌ ವೈರ್‌ ಪುಲ್ಲಿ, ಯಾಂತ್ರಿಕ ಸಿಗ್ನಲ್‌ನಲ್ಲಿ ಬಳಸುವ ವಿವಿಧ ರೀತಿಯ ಕ್ಯಾಂಕ್‌ಗಳು, ಕಪ್ಲಿಂಗ್‌ ರಾಡ್‌, ಸಿಗ್ನಲ್‌ ಕೇಬಲ್‌, ಟೆಲಿಕಾಂ ಕೇಬಲ್‌ ಸೇರಿದಂತೆ ಕಳೆದ ಮೂರ್‍ನಾಲ್ಕು ದಶಕಗಳ ಹಿಂದೆ ಬಳಸಲಾಗುತ್ತಿದ್ದ ಅಪರೂಪದ ಸಾಮಗ್ರಿಗಳು ಇಲ್ಲಿವೆ. ಒಳ ಹೊಕ್ಕರೆ ಐತಿಹಾಸಿಕ ರೈಲ್ವೆ ಜಗತ್ತನ್ನೇ ಈ ಮ್ಯೂಸಿಯಂ ಪರಿಚಯಿಸುತ್ತದೆ.

ಇತರೆ ರೈಲ್ವೆ ಮ್ಯೂಸಿಯಂಗಿಂತ ಇದು ಭಿನ್ನ ಹಾಗೂ ವಿಶೇಷತೆಯಿಂದ ಕೂಡಿದೆ. ಸಮಗ್ರ ಮಾಹಿತಿ ನೀಡುವ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಸ್ಥಾಪಿಸಲಾಗಿದೆ. ನಮ್ಮ
ವಲಯದ ಪ್ರಧಾನ ವ್ಯವಸ್ಥಾಪಕರಿಂದ ಹಿಡಿದು ಅಧಿಕಾರಿಗಳು ಮ್ಯೂಸಿಯಂ ಬಗ್ಗೆ ಕಾಳಜಿ ತೆಗೆದುಕೊಂಡಿದ್ದರಿಂದ ಉತ್ತಮವಾಗಿ ನಿರ್ಮಾಣವಾಗಿದೆ. ಕೋವಿಡ್‌-19 ಇರುವ ಹಿನ್ನೆಲೆಯಲ್ಲಿ ಉದ್ಘಾಟನೆ ಕಾರ್ಯಕ್ರಮ ಕುರಿತು ಇನ್ನೂ ನಿರ್ಧಾರವಾಗಿಲ್ಲ. ಆದಷ್ಟು ಶೀಘ್ರ ಚಾಲನೆಗೊಳ್ಳಲಿದೆ. ಪ್ರವೇಶ ಶುಲ್ಕ
ನಿಗದಿ ಪಡಿಸಲಾಗುವುದು. ಎ.ವಿಜಯಾ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ನೈರುತ್ಯ ರೈಲ್ವೆ ವಲಯ

ಹೇಮರಡ್ಡಿ ಸೈದಾಪುರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಡಿಯೋ ಮತ್ತು ಪಲ್ಸರ್ ಬೈಕ್ ಢಿಕ್ಕಿ: ಇಬ್ಬರು ಸಾವು, ಇಬ್ಬರಿಗೆ ಗಾಯ

ಡಿಯೋ ಮತ್ತು ಪಲ್ಸರ್ ಬೈಕ್ ಢಿಕ್ಕಿ: ಇಬ್ಬರು ಸಾವು, ಇಬ್ಬರಿಗೆ ಗಾಯ

Unemployment-1

ಅಭಿಮತ: ಸಿಂಗಾಪೂರ್‌ ನಿರುದ್ಯೋಗ ಸಮಸ್ಯೆ ಭಾರತೀಯರ ಮೇಲೆ ಜನರ ಮುನಿಸು!

ಎಸೆಸೆಲ್ಸಿ ಉತ್ತೀರ್ಣರಾದವರಿಗೆ ಅಂಚೆ ಕಚೇರಿಯಲ್ಲಿ ಉದ್ಯೋಗಾವಕಾಶಗಳು

ಎಸೆಸೆಲ್ಸಿ ಉತ್ತೀರ್ಣರಾದವರಿಗೆ ಅಂಚೆ ಕಚೇರಿಯಲ್ಲಿ ಉದ್ಯೋಗಾವಕಾಶಗಳು

ವರಿಷ್ಠರ ಅಂಗಳದಲ್ಲಿ ಸಂಪುಟ ಸರ್ಕಸ್‌: ಐವರಿಗೆ ಸಚಿವ ಸ್ಥಾನ ?

ವರಿಷ್ಠರ ಅಂಗಳದಲ್ಲಿ ಸಂಪುಟ ಸರ್ಕಸ್‌: ಐವರಿಗೆ ಸಚಿವ ಸ್ಥಾನ ?

ಕಷ್ಟ, ಪರಿಶ್ರಮ, ಸವಾಲು, ಹೋರಾಟಗಳೇ ಬದುಕು

ಕಷ್ಟ, ಪರಿಶ್ರಮ, ಸವಾಲು, ಹೋರಾಟಗಳೇ ಬದುಕು

ಶಾಲೆ ತೆರೆದರೂ ತರಗತಿ ನಡೆಯದು: ಶಿಕ್ಷಣ ಸಚಿವ ಸುರೇಶ್‌ ಕುಮಾರ್‌

ಶಾಲೆ ತೆರೆದರೂ ತರಗತಿ ನಡೆಯದು: ಶಿಕ್ಷಣ ಸಚಿವ ಸುರೇಶ್‌ ಕುಮಾರ್‌

ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ಆರ್ಥಿಕ ನೆರವು ಯಾಚನೆ; ಪೊಲೀಸರ ಹೆಸರಲ್ಲಿ ವಂಚನೆ

ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ಆರ್ಥಿಕ ನೆರವು ಯಾಚನೆ; ಪೊಲೀಸರ ಹೆಸರಲ್ಲಿ ವಂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವರಿಷ್ಠರ ಅಂಗಳದಲ್ಲಿ ಸಂಪುಟ ಸರ್ಕಸ್‌: ಐವರಿಗೆ ಸಚಿವ ಸ್ಥಾನ ?

ವರಿಷ್ಠರ ಅಂಗಳದಲ್ಲಿ ಸಂಪುಟ ಸರ್ಕಸ್‌: ಐವರಿಗೆ ಸಚಿವ ಸ್ಥಾನ ?

ಶಾಲೆ ತೆರೆದರೂ ತರಗತಿ ನಡೆಯದು: ಶಿಕ್ಷಣ ಸಚಿವ ಸುರೇಶ್‌ ಕುಮಾರ್‌

ಶಾಲೆ ತೆರೆದರೂ ತರಗತಿ ನಡೆಯದು: ಶಿಕ್ಷಣ ಸಚಿವ ಸುರೇಶ್‌ ಕುಮಾರ್‌

ಮಲೆ ಮಹದೇಶ್ವರ ದೇವಸ್ಥಾನದ ಹುಂಡಿ ಆದಾಯಕ್ಕೂ ಕೋವಿಡ್ ಹೊಡೆತ ; ಇಲ್ಲಿದೆ ಗಳಿಕೆ ವಿವರ

ಮಲೆ ಮಹದೇಶ್ವರ ದೇವಸ್ಥಾನದ ಹುಂಡಿ ಆದಾಯಕ್ಕೂ ಕೋವಿಡ್ ಹೊಡೆತ ; ಇಲ್ಲಿದೆ ಗಳಿಕೆ ವಿವರ

ಅತ್ಯಾಧುನಿಕ ಮಾದರಿಯ ಕರ್ನಾಟಕ ಭವನ ನಿರ್ಮಾಣ: ಕಾರಜೋಳ

ಅತ್ಯಾಧುನಿಕ ಮಾದರಿಯ ಕರ್ನಾಟಕ ಭವನ ನಿರ್ಮಾಣ: ಕಾರಜೋಳ

‘ಬೆಳೆ ಸಮೀಕ್ಷೆ ಆಪ್’ಗೆ ರೈತರಿಂದ ಉತ್ತಮ ಸ್ಪಂದನೆ : ಏನು? ಎತ್ತ? ಇಲ್ಲಿದೆ ಮಾಹಿತಿ

‘ಬೆಳೆ ಸಮೀಕ್ಷೆ ಆಪ್’ಗೆ ರೈತರಿಂದ ಉತ್ತಮ ಸ್ಪಂದನೆ : ಏನು? ಎತ್ತ? ಇಲ್ಲಿದೆ ಮಾಹಿತಿ

MUST WATCH

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆಹೊಸ ಸೇರ್ಪಡೆ

ಡಿಯೋ ಮತ್ತು ಪಲ್ಸರ್ ಬೈಕ್ ಢಿಕ್ಕಿ: ಇಬ್ಬರು ಸಾವು, ಇಬ್ಬರಿಗೆ ಗಾಯ

ಡಿಯೋ ಮತ್ತು ಪಲ್ಸರ್ ಬೈಕ್ ಢಿಕ್ಕಿ: ಇಬ್ಬರು ಸಾವು, ಇಬ್ಬರಿಗೆ ಗಾಯ

Unemployment-1

ಅಭಿಮತ: ಸಿಂಗಾಪೂರ್‌ ನಿರುದ್ಯೋಗ ಸಮಸ್ಯೆ ಭಾರತೀಯರ ಮೇಲೆ ಜನರ ಮುನಿಸು!

ಎಸೆಸೆಲ್ಸಿ ಉತ್ತೀರ್ಣರಾದವರಿಗೆ ಅಂಚೆ ಕಚೇರಿಯಲ್ಲಿ ಉದ್ಯೋಗಾವಕಾಶಗಳು

ಎಸೆಸೆಲ್ಸಿ ಉತ್ತೀರ್ಣರಾದವರಿಗೆ ಅಂಚೆ ಕಚೇರಿಯಲ್ಲಿ ಉದ್ಯೋಗಾವಕಾಶಗಳು

ವರಿಷ್ಠರ ಅಂಗಳದಲ್ಲಿ ಸಂಪುಟ ಸರ್ಕಸ್‌: ಐವರಿಗೆ ಸಚಿವ ಸ್ಥಾನ ?

ವರಿಷ್ಠರ ಅಂಗಳದಲ್ಲಿ ಸಂಪುಟ ಸರ್ಕಸ್‌: ಐವರಿಗೆ ಸಚಿವ ಸ್ಥಾನ ?

ಕಷ್ಟ, ಪರಿಶ್ರಮ, ಸವಾಲು, ಹೋರಾಟಗಳೇ ಬದುಕು

ಕಷ್ಟ, ಪರಿಶ್ರಮ, ಸವಾಲು, ಹೋರಾಟಗಳೇ ಬದುಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.