Udayavni Special

ಆತಂಕದ ಸ್ಥಿತಿ! ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಮುನ್ಸೂಚನೆ ನೀಡಿದ ಸಚಿವ ಸುಧಾಕರ್


Team Udayavani, Apr 16, 2021, 12:52 PM IST

ಆತಂಕದ ಸ್ಥಿತಿ! ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಮುನ್ಸೂಚನೆ ನೀಡಿದ ಸಚಿವ ಸುಧಾಕರ್

ಬೆಂಗಳೂರು: ಕೋವಿಡ್-19 ಸೋಂಕಿನ ಎರಡನೇ ಅಲೆಯ ಕಾರಣದಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕು ತಡೆಗೆ ಈಗಾಗಲೇ ಕೆಲವು ನಗರಗಳಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಆದರೆ ಇದರ ನಡುವೆ ಆರೋಗ್ಯ ಸಚಿವ ಡಾ|ಕೆ. ಸುಧಾಕರ್ ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಆರಂಭವಾಗುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.

ಕೋವಿಡ್ ಲಸಿಕೆ ಹಾಕಿಸಿಕೊಂಡ ಮೇಲೂ ಕೆಲವರಿಗೆ ಸೋಂಕು ಬಂದಿದೆ. ಬರುವುದಿಲ್ಲವೆಂದು ನಾವು ಹೇಳಿಲ್ಲ. ಆದರೆ ಸಾವಿನ ಪ್ರಮಾಣ ಕಡಿಮೆ ಆಗಲಿದೆ. ಮುಂದೆ ಬರುವ ಮೂರನೇ ಅಲೆಯನ್ನು ಇದರಿಂದ ತಪ್ಪಿಸಿಕೊಳ್ಳಬಹುದು ಎಂದು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಸುಧಾಕರ್ ಹೇಳಿದರು.

ಸಿಎಂ ಆಧ್ಯಕತೆಯಲ್ಲಿ ಆರೋಗ್ಯ, ವೈದ್ಯಕೀಯ ಮುಖ್ಯಕಾರ್ಯದರ್ಶಿ ಜೊತೆ ಉನ್ನತ ಮಟ್ಟದ ಸಭೆ ಮಾಡಿ ಚರ್ಚೆ ಮಾಡುತ್ತೇವೆ. ಬೆಂಗಳೂರು ಸಂಬಂಧಿಸಿದ ಶಾಸಕರು, ಸಚಿವರ ಜೊತೆ ಭಾನುವಾರವೇ ಸಭೆ ನಡೆಯಲಿದೆ. ಎಲ್ಲರ ಸಲಹೆ ಸೂಚನೆ ಬಗ್ಗೆ ಚರ್ಚಿಸಿ ಘೋಷಣೆ ಮಾಡುತ್ತೇವೆ ಎಂದರು.

ಇದನ್ನೂ ಓದಿ:ದೆಹಲಿಯಲ್ಲಿ 10 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಿ: ಕೇಜ್ರಿವಾಲ್ ಗೆ ಸಿಎಐಟಿ

ಚಿಕಿತ್ಸೆ ಕೊಡುವುದು, ಟೆಸ್ಟಿಂಗ್ ಹೆಚ್ಚಳ, ಕಂಟೋನ್ಮೆಂಟ್ ಜೋನ್ ಹೆಚ್ಚಳ, ಹೋಮ್ ಐಸೋಲೇಷನ್ ಇರುವವರ ಮೇಲೆ ನಿಗಾ ಇಡುವ ಬಗ್ಗೆ ಚರ್ಚೆಯಾಗಿದೆ. ಅತಿ ಹೆಚ್ಚು ಹಾಸಿಗೆ ಇಡುವುದಕ್ಕೆ ಮೊದಲ ಆದ್ಯತೆ. ಮೂರರಿಂದ ಐದು ಸ್ಟಾರ್ ಹೋಟೆಲ್ ಜೊತೆ ಒಡಂಬಡಿಕೆ ಮಾಡಿಕೊಳ್ಳುವುದು. ಖಾಸಗಿ ಆಸ್ಪತ್ರೆಯಲ್ಲಿ ಕಡಿಮೆ ಅನಾರೋಗ್ಯದಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗುವುದು. ರಾಜ್ಯದಲ್ಲಿ ಶೇ. 95 ರಷ್ಟು ಸೋಂಕಿತ ಜನರಿಗೆ ಆಸ್ಪತ್ರೆ ಅವಶ್ಯಕತೆ ಇಲ್ಲ ಎಂದರು.

ಕಡಿಮೆ ಸೋಂಕಿನ ಲಕ್ಷಣ ಇರುವವರು ಆಸ್ಪತ್ರೆ, ವೈದ್ಯರ ಅವಶ್ಯಕತೆ ಇದೆ ಎನ್ನುವುದಾದರೆ ಖಾಸಗಿ ಹೋಟೆಲ್‌ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಒಂದು ಸಾವಿರ ಹಾಸಿಗೆ ಮೀಸಲಿಡುತ್ತೇವೆ. ಖಾಸಗಿ ಮೆಡಿಕಲ್ ಕಾಲೇಜು ಎರಡು ಸಾವಿರ, ಹೆಚ್ಚುವರಿಯಾಗಿ ಎರಡುವರೆ ಸಾವಿರ ನೀಡಲು ತೀರ್ಮಾನಿಸಲಾಗಿದೆ ಎಂದರು.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ, ಜನರ ಸಹಕಾರ ಬೇಕು: ಸಚಿವ ಬಿ.ಸಿ. ಪಾಟೀಲ್

ನಮ್ಮ ಐಎಎಸ್, ಐಪಿಎಸ್, ನೋಡಲ್ ಅಧಿಕಾರಿ, ಸ್ವಸ್ಥ ಅಧಿಕಾರಿಗಳು 24 ಗಂಟೆ ಕೆಲಸ ಮಾಡುತ್ತಾರೆ. ಬೆಂಗಳೂರಿಗೆ ಸೀಮಿತವಾಗಿ ಪ್ರತೀ ವಾರ್ಡಿಗೆ ಹೆಚ್ಚುವರಿ ಒಂದು ಆಂಬ್ಯುಲೆನ್ಸ್ ಮೀಸಲಿಡುತ್ತೇವೆ. 49 ಆಂಬ್ಯುಲೆನ್ಸ್ ಶ್ರದ್ಧಾಂಜಲಿ ಆಂಬ್ಯುಲೆನ್ಸ್ ಆಗಿ ಪರಿವರ್ತನೆ ಮಾಡುತ್ತೇವೆ. ನಾಲ್ಕು ಜನ ಅಧಿಕಾರಿಗಳು ದೊಡ್ಡ ಆಸ್ಪತ್ರೆಯಲ್ಲಿ ಇರಲಿದ್ದಾರೆ ಎಂದು ಸುಧಾಕರ್ ವಿವರಿಸಿದರು.

ರಾಜ್ಯದಲ್ಲಿ ರೆಮಿಡಿಸೀವರ್ ಕೊರತೆಯಿಲ್ಲ. ಇದರ ಹೊರತಾಗಿ ಖರೀದಿಗೆ ಪ್ರಕ್ರಿಯೆ ಆರಂಭವಾಗಿದೆ. ಆಕ್ಸಿಜನ್ ಮುಖ್ಯವಾಗಿದ್ದು, ಸಿಎಂ ವೈದ್ಯಕೀಯ ಕಾಲೇಜುಗಳಲ್ಲಿ ಆಕ್ಸಿಜನ್ ಘಟಕ ಸ್ಥಾಪನೆಗೆ ಸೂಚನೆ ನೀಡಿದ್ದಾರೆ. ಜಂಬೂ ಸಿಲಿಂಡರ್‌ಗಳನ್ನು, ಕಮರ್ಷಿಯಲ್ ಆಕ್ಸಿಜನ್ ಪಡೆಯಲು ಒಡಂಬಡಿಕೆಯಾಗಿದೆ. ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಆಗದಂತೆ ಕ್ರಮ ವಹಿಸಿದ್ದೇವೆ. ಜಿಲ್ಲಾ ಆಸ್ಪತ್ರೆಯಲ್ಲಿ ಟೆಂಡರ್ ಕರೆದಿದ್ದು,ಆಕ್ಸಿಜನ್ ಘಟಕ ಸ್ಥಾಪನೆ ಮಾಡಲಿದ್ದೇವೆ ಎಂದರು.

ಇದನ್ನೂ ಓದಿ: ರಾಜ್ಯಾದ್ಯಂತ ಸೆ.144; ಶಾಲೆ-ಕಾಲೇಜು, ಚಿತ್ರಮಂದಿರ, ಬಾರ್- ಪಬ್ ಬಂದ್?

ರೋಗದ ಲಕ್ಷಣ ಇದ್ದರೆ ಶೀಘ್ರವೇ ಟೆಸ್ಟ್ ಮಾಡಬೇಕು. 24 ಗಂಟೆಯೊಳಗೆ ರಿಪೋರ್ಟ್ ಬರಬೇಕು. ಈಗ ಕೆಲವೆಡೆ ಬರದಿರುವುದನ್ನು ಗಮನಿಸಿದ್ದೇನೆ. ಶೀಘ್ರವೇ ನೀಡಲು ಸೂಚಿಸುತ್ತೇನೆ ಎಂದು ಸುಧಾಕರ್ ಹೇಳಿದರು.

ಟಾಪ್ ನ್ಯೂಸ್

LIC new rule these major changes will be applicable from may 10

ಇನ್ಮುಂದೆ ವಾರದಲ್ಲಿ ಐದು ದಿನಗಳು ಮಾತ್ರ ಕಾರ್ಯ ನಿರ್ವಹಿಸಲಿದೆ ಎಲ್ ಐ ಸಿ ಕಚೇರಿ ..!

dyhtyt

ಪಶ್ಚಿಮ ಬಂಗಾಳ : ಕೇಂದ್ರ ಸಚಿವರ ವಾಹನದ ಮೇಲೆ ದಾಳಿ

ಕೋವಿಡ್ ಪಾಸಿಟಿವ್ ಆದವರು ಹೊರಗೆ ಬಂದ್ರೆ ಎಫ್ ಐಆರ್‌: ಸೋಮಶೇಖರ್

ಕೋವಿಡ್ ಪಾಸಿಟಿವ್ ಆದವರು ಹೊರಗೆ ಬಂದ್ರೆ ಎಫ್ ಐಆರ್‌: ಸೋಮಶೇಖರ್

Uber announces cash incentives for vaccinating 150000 drivers

ತನ್ನ ಎಲ್ಲಾ ಚಾಲಕರಿಗೆ ಲಸಿಕೆಗಾಗಿ ಪ್ರೋತ್ಸಾಹ ಧನ ನೀಡಲು ಮುಂದಾದ ಉಬರ್ !

ಕಾಫಿನಾಡಿನಲ್ಲಿ ಆಕ್ಸಿಜನ್ ಗಾಗಿ ಸೋಂಕಿತರ ಪರದಾಟ!

ಕಾಫಿನಾಡಿನಲ್ಲಿ ಆಕ್ಸಿಜನ್ ಗಾಗಿ ಸೋಂಕಿತರ ಪರದಾಟ!

uiuyiuyi

ನಾಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಸಾಧ್ಯತೆ ?

giyuiyiuuy

ಸಾವಿರಾರು ಜನರ ಹಸಿವು ನೀಗಿಸುತ್ತಿರುವ ಬಾಲಿವುಡ್ ನಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

uiuyiuyi

ನಾಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಸಾಧ್ಯತೆ ?

ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ: ಸದಾನಂದ ಗೌಡ

ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ: ಸದಾನಂದ ಗೌಡ

ಕೋವಿಡ್ ಕೇರ್ ಸೆಂಟರ್ ನಿಂದ ಹೊರಗೆ ಸುತ್ತಾಡುತ್ತಿರುವ ಸೋಂಕಿತರು!

ಕೋವಿಡ್ ಕೇರ್ ಸೆಂಟರ್ ನಿಂದ ಹೊರಗೆ ಸುತ್ತಾಡುತ್ತಿರುವ ಸೋಂಕಿತರು!

ಡಿಸಿಎಂ ನೇತೃತ್ವದಲ್ಲಿ ಆಪರೇಷನ್ ಆಕ್ಸಿಜನ್;ತಪ್ಪಿದ ಭಾರೀ ಅನಾಹುತ,ಉಳಿಯಿತು 200 ಸೋಂಕಿತರ ಜೀವ

ಡಿಸಿಎಂ ನೇತೃತ್ವದಲ್ಲಿ ಆಪರೇಷನ್ ಆಕ್ಸಿಜನ್;ತಪ್ಪಿದ ಭಾರೀ ಅನಾಹುತ,ಉಳಿಯಿತು 200 ಸೋಂಕಿತರ ಜೀವ

hdk

ಲಸಿಕೆ ಅಭಿಯಾನದಲ್ಲಿ ಕೇಂದ್ರದಿಂದ ತಾರತಮ್ಯ, ಕನ್ನಡಿಗರಿಗಾಗಿ ಸೊಲ್ಲೆತ್ತದ ರಾಜ್ಯ ಸರ್ಕಾರ:HDK

MUST WATCH

udayavani youtube

ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವ ವಿ.ಮುರಳೀಧರನ್ ಅವರ ಕಾರ್ ಮೇಲೆ ಹಲ್ಲೆ

udayavani youtube

ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿಯಿಂದ ಕೊರೊನಾ ಜಾಗೃತಿ

udayavani youtube

ನರೇಗಾ ವೇತನ ತಾರತಮ್ಯ: ಕಂಪ್ಯೂಟರ್ ಆಪರೇಟರ್ ಮೇಲೆ ಹಲ್ಲೆ

udayavani youtube

ಆಸ್ಪತ್ರೆಗಳಲ್ಲಿ ಬೆಡ್ ಸಿಗದಿದ್ದಕ್ಕೆ CM Yediyurappa ಮನೆ ಮುಂದೆ ಧರಣಿ

udayavani youtube

ವ್ಯಾಕ್ಸೀನ್ ಕುರಿತು ಉಡುಪಿ ಜನತೆಗೆ ಶೋಭಾ ಅವರಿಂದ ಶುಭ ಸುದ್ದಿ

ಹೊಸ ಸೇರ್ಪಡೆ

LIC new rule these major changes will be applicable from may 10

ಇನ್ಮುಂದೆ ವಾರದಲ್ಲಿ ಐದು ದಿನಗಳು ಮಾತ್ರ ಕಾರ್ಯ ನಿರ್ವಹಿಸಲಿದೆ ಎಲ್ ಐ ಸಿ ಕಚೇರಿ ..!

dyhtyt

ಪಶ್ಚಿಮ ಬಂಗಾಳ : ಕೇಂದ್ರ ಸಚಿವರ ವಾಹನದ ಮೇಲೆ ದಾಳಿ

ಕೋವಿಡ್ ಪಾಸಿಟಿವ್ ಆದವರು ಹೊರಗೆ ಬಂದ್ರೆ ಎಫ್ ಐಆರ್‌: ಸೋಮಶೇಖರ್

ಕೋವಿಡ್ ಪಾಸಿಟಿವ್ ಆದವರು ಹೊರಗೆ ಬಂದ್ರೆ ಎಫ್ ಐಆರ್‌: ಸೋಮಶೇಖರ್

covid effect

ಕೊರೊನಾ ತಡೆ ಪಂಚಾಯ್ತಿ ಮಟ್ಟದಿಂದ ಆಗಲಿ

Give extra land for tomato trading

ಟೊಮೆಟೋ ವಹಿವಾಟಿಗೆ ಹೆಚ್ಚುವರಿ ಭೂಮಿ ನೀಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.