ನೀವು 45 ವರ್ಷ ಮೇಲ್ಪಟ್ಟವರೇ? ಹಾಗಾದರೆ ತಡ ಮಾಡದೇ ಹೋಗಿ ಕೋವಿಡ್ ಲಸಿಕೆ ಪಡೆಯಿರಿ


Team Udayavani, Apr 1, 2021, 9:08 AM IST

ನೀವು 45 ವರ್ಷ ಮೇಲ್ಪಟ್ಟವರೇ? ಹಾಗಾದರೆ ತಡ ಮಾಡದೇ ಹೋಗಿ ಕೋವಿಡ್ ಲಸಿಕೆ ಪಡೆಯಿರಿ

ಬೆಂಗಳೂರು: ದೇಶದಾದ್ಯಂತ ಇಂದಿನಿಂದ (ಏ.1) 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲಾಗುತ್ತಿದೆ‌. ಇದಕ್ಕಾಗಿ ರಾಜ್ಯ ಆರೋಗ್ಯ ಇಲಾಖೆಯು ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ರಾಜ್ಯದ್ಯಾಂತ ಜಿಲ್ಲಾ, ತಾಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ, ವೈದ್ಯಕೀಯ ಕಾಲೇಜು, ಖಾಸಗಿ ಆಸ್ಪತ್ರೆ ಸೇರಿ 5,500 ಕ್ಕೂ ಹೆಚ್ಚು ಕಡೆಗಳಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತದೆ. ಈ ಹಿಂದೆ 60 ವರ್ಷ ಮೇಲ್ಪಟ್ಟವರು ಮತ್ತು 45 – 59 ವರ್ಷ ಆರೋಗ್ಯ ಸಮಸ್ಯೆಯೊಂದಿರುವರಿಗೆ ಮಾತ್ರ ಕೊರೊನಾ ಲಸಿಕೆ ನೀಡಲಾಗುತ್ತಿತ್ತು. ಮುಂದುವರೆದ ಭಾಗವಾಗಿ ಕೇಂದ್ರ ಸರ್ಕಾರವು 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಸೂಚನೆ ನೀಡಿದೆ.

1.66 ಕೋಟಿ ಮಂದಿ

ರಾಜ್ಯದಲ್ಲಿ 45 ವರ್ಷ ಮೇಲ್ಟಟ್ಟವರು 1.66 ಕೋಟಿ ಮಂದಿ ಇದ್ದಾರೆ. ಈಗಾಗಲೇ ಅನಾರೋಗ್ಯ ಸಮಸ್ಯೆ ಹಿನ್ನೆಲೆ 6 ಲಕ್ಷ ಮಂದಿ‌, 19 ಲಕ್ಷ ಹಿರಿಯ ನಾಗರಿಕರು ಲಸಿಕೆ ಪಡೆದುಕೊಂಡಿದ್ದಾರೆ.  ಉಳಿದ 1.41 ಕೋಟಿ ಮಂದಿ ಲಸಿಕೆ ಪಡೆಯಬೇಕಿದೆ.

ನೋಂದಣಿ ಹೇಗೆ?

ಕೋವಿನ್ ಆ್ಯಪ್ ಮೂಲಕ ಆನ್ ಲೈನ್ ನೋಂದಣಿ‌ ಆಥವಾ ಸಮೀಪದ ಆಸ್ಪತ್ರೆಗೆ ತೆರಳಿ ಸ್ಥಳದಲ್ಲಿ ನೇರವಾಗಿ ನೋಂದಣಿ ಮಾಡಿಕೊಂಡು ಲಸಿಕೆ ಪಡೆಯ ಬಹುದಾಗಿದೆ.  ನೋಂದಣಿ ಮತ್ತು ಲಸಿಕೆ ಸಮಯದಲ್ಲಿ ಕಡ್ಡಾಯವಾಗಿ ಗುರುತಿನ ಚೀಟಿ ಅವಶ್ಯಕವಾಗಿದೆ.  ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ, ಖಾಸಗಿಯಲ್ಲಿ 250 ರೂ. ದರವಿದೆ.

ಇದನ್ನೂ ಓದಿ:45+ ಇಂದಿನಿಂದ ಲಸಿಕೆ

ಲಸಿಕೆ ಲಭ್ಯವಿದೆಯೇ?

ಈವರೆಗೂ ರಾಜ್ಯದಲ್ಲಿ 52 ಲಕ್ಷಕ್ಕೂ ಅಧಿಕ ಡೋಸ್ ಕೊರೊನಾ ಲಸಿಕೆ ಕೇಂದ್ರ ಸರ್ಕಾರದಿಂದ ಬಂದಿದೆ. ಸದ್ಯ 37.5 ಲಕ್ಷ ಲಸಿಕೆ ವಿತರಿಸಲಾಗಿದೆ. ಬಾಕಿ 15 ಲಕ್ಷ ಡೋಸ್ ಲಸಿಕೆ ಲಭ್ಯವಿದೆ. ಈ ಪೈಕಿ 13.5 ಲಕ್ಷ ಡೋಸ್ ಕೋವಿಶೀಲ್ಡ್, 1.5 ಲಕ್ಷ ಡೋಸ್ ಕೋವ್ಯಾಕ್ಸಿನ್ ಇದೆ. ಜಿಲ್ಲಾ ಉಗ್ರಾಣಗಳಲ್ಲಿ ಶೇಖರಿಸಿಡಲಾಗಿದೆ.  ಶೀಘ್ರದಲ್ಲೇ ಇನ್ನಷ್ಟು ಲಸಿಕೆ ರಾಜ್ಯಕ್ಕೆ ಬರಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈವರೆಗೂ ರಾಜ್ಯದಲ್ಲಿ ಲಸಿಕೆ ಪಡೆದವರು

ಆರೋಗ್ಯ ಕಾರ್ಯಕರ್ತರು – 5.6 ಲಕ್ಷ

ಮುಂಚೂಣಿ ಕಾರ್ಯಕರ್ತರು – 2.3 ಲಕ್ಷ

45 ವರ್ಷ ಮೇಲ್ಪಟ್ಟವರು – 6 ಲಕ್ಷ

60 ವರ್ಷ ಮೇಲ್ಪಟ್ಟವರು – 19 ಲಕ್ಷ

ಒಟ್ಟು – 33 ಲಕ್ಷ

ಆನ್‌ಲೈನ್ ನೋಂದಣಿಗೆhttps://www.cowin.gov.in  ಅಥವಾ ಆರೋಗ್ಯ ಸೇತು ಆ್ಯಪ್.

ನೇರ ನೋಂದಣಿಗೆ: ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾ, ತಾಲೂಕು ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು, ಖಾಸಗಿ ಆಸ್ಪತ್ರೆ. (ಒಟ್ಟು 5500+ ಕಡೆಗಳಲ್ಲಿ)

ಇದನ್ನೂ ಓದಿ: ಕಂಟೈನ್‌ಮೆಂಟ್‌ ವಲಯದಲ್ಲಿ ಕಠಿನ ನಿರ್ಬಂಧ : ಅಗತ್ಯ ಸೇವೆಗಳಿಗಷ್ಟೇ ಅವಕಾಶ

ಬೇಕಿರುವ ದಾಖಲಾತಿಗಳು: ಆಧಾರ್ ಕಾರ್ಡ್, ಚುನಾವಣಾ ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ, ಪಾನ್‌ಕಾರ್ಡ್, ಪಾಸ್‌ಪೋರ್ಟ್. (ಇವುಗಳಲ್ಲಿ ಯಾವುದಾದರೂ ಒಂದು)

ದರ ಎಷ್ಟು?

ಸರ್ಕಾರಿ ಆರೋಗ್ಯಕೇಂದ್ರ – ಉಚಿತ.

ಖಾಸಗಿ ಆರೋಗ್ಯ ಕೇಂದ್ರ – ಪ್ರತಿ ಡೋಸ್ 250 ರೂ. (ಒಟ್ಟು 500 ರೂ)

ಟಾಪ್ ನ್ಯೂಸ್

1-ewe-wr-we

ಪಿಒಕೆ ಕುರಿತು 1971ರಲ್ಲೇ ನಿರ್ಧಾರ ತೆಗೆದುಕೊಳ್ಳಬೇಕಿತ್ತು: ರಾಜನಾಥ್ ಸಿಂಗ್

32 ವರ್ಷದ ಸೂರ್ಯಕುಮಾರ್‌ ನನ್ನು “ಮಗು” ಎಂದ ಖ್ಯಾತ ಮಾಜಿ ಆಲೌ ರೌಂಡರ್; ನೆಟ್ಟಿಗರಿಂದ ಟ್ರೋಲ್

32 ವರ್ಷದ ಸೂರ್ಯಕುಮಾರ್‌ ಗೆ “ಮಗು” ಎಂದ ಖ್ಯಾತ ಮಾಜಿ ಆಲೌ ರೌಂಡರ್; ನೆಟ್ಟಿಗರಿಂದ ಟ್ರೋಲ್

ಬಿಜೆಪಿ ಭಂಡತನದಿಂದ ವಿತಂಡವಾದ ಮಾಡುತ್ತಿದೆ: ಎಚ್.ಡಿ.ಕುಮಾರಸ್ವಾಮಿ ಟೀಕೆ

ಬಿಜೆಪಿ ಭಂಡತನದಿಂದ ವಿತಂಡವಾದ ಮಾಡುತ್ತಿದೆ: ಎಚ್.ಡಿ.ಕುಮಾರಸ್ವಾಮಿ ಟೀಕೆ

web exxclusive diet exclusive

ಉಪವಾಸ ವ್ರತ ಆಚರಣೆ ಮಾಡುವುದರ ಮಹತ್ವ, ಪ್ರಯೋಜನಗಳು  

ಐಐಐಟಿ ಧಾರವಾಡ ಘಟಕ ಉದ್ಘಾಟಿಸಿದ ರಾಷ್ಟ್ರಪತಿ ಮುರ್ಮು

ಐಐಐಟಿ ಧಾರವಾಡ ಘಟಕ ಉದ್ಘಾಟಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

1-asds-dsad

ವಕ್ಫ್ ಬೋರ್ಡ್ ಅಕ್ರಮ: ಎಎಪಿ ಶಾಸಕ ಅಮಾನತುಲ್ಲಾ ಗೆ 14 ದಿನಗಳ ನ್ಯಾಯಾಂಗ ಬಂಧನ

ನಾವು ಮೊದಲೇ ಡೀನ್ ಗೆ ಎಚ್ಚರಿಕೆ ನೀಡಿದ್ದೆವು: ರನೌಟ್ ಬಗ್ಗೆ ದೀಪ್ತಿ ಶರ್ಮಾ ಹೇಳಿಕೆ

ನಾವು ಮೊದಲೇ ಡೀನ್ ಗೆ ಎಚ್ಚರಿಕೆ ನೀಡಿದ್ದೆವು: ರನೌಟ್ ಬಗ್ಗೆ ದೀಪ್ತಿ ಶರ್ಮಾ ಹೇಳಿಕೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಜೆಪಿ ಭಂಡತನದಿಂದ ವಿತಂಡವಾದ ಮಾಡುತ್ತಿದೆ: ಎಚ್.ಡಿ.ಕುಮಾರಸ್ವಾಮಿ ಟೀಕೆ

ಬಿಜೆಪಿ ಭಂಡತನದಿಂದ ವಿತಂಡವಾದ ಮಾಡುತ್ತಿದೆ: ಎಚ್.ಡಿ.ಕುಮಾರಸ್ವಾಮಿ ಟೀಕೆ

ಕೆಲಸ ಮಾಡದ ಮುಖಂಡರಿಗೆ ಖಡಕ್ ಎಚ್ಚರಿಕೆ ನೀಡಿದ ಎಚ್.ಡಿ.ಕುಮಾರಸ್ವಾಮಿ

ಕೆಲಸ ಮಾಡದ ಮುಖಂಡರಿಗೆ ಖಡಕ್ ಎಚ್ಚರಿಕೆ ನೀಡಿದ ಎಚ್.ಡಿ.ಕುಮಾರಸ್ವಾಮಿ

dk-shivakumar

ರಾಜ್ಯದಲ್ಲಿ ಸರ್ಕಾರವೇ ಇಲ್ಲ ಎಂಬಂತೆ ಅದು ವಿಫಲವಾಗಿದೆ: ಡಿ.ಕೆ.ಶಿವಕುಮಾರ್

ಮೈಸೂರಿನಲ್ಲೇ ತಯಾರಾದ ರೇಷ್ಮೆ ಸೀರೆಯುಟ್ಟು ದಸರೆಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಮೈಸೂರಿನಲ್ಲೇ ತಯಾರಾದ ರೇಷ್ಮೆ ಸೀರೆಯುಟ್ಟು ದಸರೆಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

dk shivakumar met sm krishna in Manipal hospital

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಆರೋಗ್ಯ ವಿಚಾರಿಸಿದ ಡಿ.ಕೆ. ಶಿವಕುಮಾರ್

MUST WATCH

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

udayavani youtube

ದೇವ್ರೇ ನನಗೆ 25 ಕೋಟಿ ಬಹುಮಾನ ಬರಬಾರದಿತ್ತು…

udayavani youtube

ಪತ್ರಿ ವರ್ಷ ಈ ಬೆಣ್ಣೆಹಣ್ಣು ಮರದಲ್ಲಿ 300 ರಿಂದ 400 ಹಣ್ಣುಗಳು ಸಿಗುತ್ತದೆ

udayavani youtube

ಸೆ. 26ರಿಂದ ಅ. 5 ವರೆಗೆ ವೈಭವದ ಉಚ್ಚಿಲ ದಸರಾ

ಹೊಸ ಸೇರ್ಪಡೆ

1-ewe-wr-we

ಪಿಒಕೆ ಕುರಿತು 1971ರಲ್ಲೇ ನಿರ್ಧಾರ ತೆಗೆದುಕೊಳ್ಳಬೇಕಿತ್ತು: ರಾಜನಾಥ್ ಸಿಂಗ್

32 ವರ್ಷದ ಸೂರ್ಯಕುಮಾರ್‌ ನನ್ನು “ಮಗು” ಎಂದ ಖ್ಯಾತ ಮಾಜಿ ಆಲೌ ರೌಂಡರ್; ನೆಟ್ಟಿಗರಿಂದ ಟ್ರೋಲ್

32 ವರ್ಷದ ಸೂರ್ಯಕುಮಾರ್‌ ಗೆ “ಮಗು” ಎಂದ ಖ್ಯಾತ ಮಾಜಿ ಆಲೌ ರೌಂಡರ್; ನೆಟ್ಟಿಗರಿಂದ ಟ್ರೋಲ್

ಹೊಸ ವರ್ಷಕ್ಕೆ ಮಸ್ಕಿಯಲ್ಲಿ ಪ್ರತ್ಯೇಕ ಕೋರ್ಟ್‌

ಹೊಸ ವರ್ಷಕ್ಕೆ ಮಸ್ಕಿಯಲ್ಲಿ ಪ್ರತ್ಯೇಕ ಕೋರ್ಟ್‌

ವಿದೇಶಿ ಮಾರುಕಟ್ಟೆಗೆ ಕೊರಳ್ಳಿ ಬಾಳೆ; ಹಳದಿ ಕಲ್ಲಂಗಡಿ ಬೆಳೆದಿದ್ದ ರೈತನ ಸಾಧನೆ

ವಿದೇಶಿ ಮಾರುಕಟ್ಟೆಗೆ ಕೊರಳ್ಳಿ ಬಾಳೆ; ಹಳದಿ ಕಲ್ಲಂಗಡಿ ಬೆಳೆದಿದ್ದ ರೈತನ ಸಾಧನೆ

Shindhe

ಹಲವಾರು ನಾಯಕರು ಸಂಪರ್ಕದಲ್ಲಿದ್ದಾರೆ : ಮಹಾರಾಷ್ಟ್ರ ಸಿಎಂ ಶಿಂಧೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.