ಶ್ರೀನಗರ ಉಗ್ರರ ದಾಳಿಯಲ್ಲಿ ಗಾಯಗೊಂಡಿದ್ದ ಕನ್ನಡಿಗ ಯೋಧ ಹುತಾತ್ಮ
Team Udayavani, Apr 4, 2017, 2:37 PM IST
ಬೆಳಗಾವಿ: ಶ್ರೀನಗರದ ಪಂಥಾ ಚೌಕ್‌ನಲ್ಲಿ ಸೋಮವಾರ ನಡೆದ ಉಗ್ರರ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬೆಳಗಾವಿಯ ಸಿಆರ್‌ಪಿಎಫ್ ಹೆಡ್ ಕಾನ್ಸ್‌ಟೇಬಲ್ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ.
ಕಿತ್ತೂರಿನ ಬೈಲೂರಿನ ಬಸಪ್ಪ ಹನುಮಂತಪ್ಪ ಭಜಂತ್ರಿ(50) ಹುತಾತ್ಮ ಯೋಧ. ಭಜಂತ್ರಿ ಅವರು ಕಳೆದ 18 ವರ್ಷಗಳಿಂದ ಸಿಆರ್‌ಪಿಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಜಮ್ಮುವಿನಿಂದ ಶ್ರೀನಗರಕ್ಕೆ ಬರುತ್ತಿದ್ದ ಸಿಆರ್‌ಪಿಎಫ್ ಯೋಧರ ವಾಹನವನ್ನು ಗುರಿಯಾಗಿರಿಸಿಕೊಂಡು ಉಗ್ರರು ಭಾರೀ ದಾಳಿ ನಡೆಸಿದ್ದರು. ದಾಳಿಯಲ್ಲಿ ಭಜಂತ್ರಿ ಸೇರಿದಂತೆ 6 ಮಂದಿ ಯೋಧರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಭಜಂತ್ರಿ ಅವರ ಪಾರ್ಥೀವ ಶರೀರ ಇಂದು ಸ್ವಗೃಹಕ್ಕೆ ತರಲಾಗುತ್ತಿದೆ. ಶ್ರೀನಗರದಿಂದ ಪಣಜಿಗೆ ವಿಮಾನ ಮೂಲಕ ತಂದು ಬಳಿಕ ರಸ್ತೆ ಮಾರ್ಗದ ಮೂಲಕ ಮನೆಗೆ ತರಲಾಗುತ್ತಿರುವ ಬಗ್ಗೆ ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯಸಭೆ ಚುನಾವಣೆ; ನಾಳೆ ಸಿದ್ದರಾಮಯ್ಯ ನವದೆಹಲಿಗೆ :ಹೈಕಮಾಂಡ್ ಜತೆ ಚರ್ಚೆ
ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್ ಅಪಘಾತ : ಇಬ್ಬರು ಸಾವು, ಓರ್ವ ಗಂಭೀರ
ವಿಜಯಪುರ ಜಿಲ್ಲೆಯಲ್ಲಿ ಮಳೆ ಅವಾಂತರ : 25 ಮನೆಗಳಿಗೆ ಹಾನಿ, 3 ಜಾನುವಾರು ಬಲಿ
ಅಕ್ಬರ್,ಟಿಪ್ಪು,ಅಲೆಗ್ಸಾಂಡರನ್ನು ಮಾತ್ರ ಮಹಾನ್ ಎಂದು ಚಿತ್ರಿಸಿದ್ದೇಕೆ?:ಬಿಜೆಪಿ ಪ್ರಶ್ನೆ
ಎಂಟು ವಾರದಲ್ಲಿ ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ಮುಗಿಸಲು ಸುಪ್ರೀಂ ನಿರ್ದೇಶನ