
ದ.ಕ. ಜಿಲ್ಲೆಯ 3 ಸಹಿತ ವಿವಿಧ ದೇಗುಲಗಳ ಅಭಿವೃದ್ಧಿಗೆ ನಿಧಿ
Team Udayavani, Apr 1, 2023, 5:34 AM IST

ಬೆಂಗಳೂರು: ಚುನಾವಣೆ ಘೋಷಣೆಗೆ ಒಂದು ದಿನ ಮೊದಲು ರಾಜ್ಯದ ವಿವಿಧ ದೇವಾಲಯಗಳ ಅಭಿವೃದ್ಧಿ, ದುರಸ್ತಿ ಮತ್ತು ಜೀರ್ಣೋದ್ಧಾರ ಕಾಮಗಾರಿಗಳಿಗೆ ರಾಜ್ಯ ಸರಕಾರ 2.98 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಸಚಿವರು, ಶಾಸಕರು, ಗಣ್ಯವ್ಯಕ್ತಿಗಳು ಮತ್ತು ಸಾರ್ವಜನಿಕರ ಕೋರಿಕೆ ಮೇರೆಗೆ ಈ ಹಣ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ದ.ಕ. ಜಿಲ್ಲೆಯ ಬಂಟ್ವಾಳದ ಬೆಂಜನಪದವಿನ ಭದ್ರಕಾಳಿ ದೇವಸ್ಥಾನಕ್ಕೆ 20 ಲಕ್ಷ ರೂ., ಫರಂಗಿಪೇಟೆಯ ಶಾರದಾ ಮಂದಿರ ಮತ್ತು ಮಂಗಳೂರಿನ ಅಶೋಕ ನಗರದ ಉರ್ವಾ ಬೈಲು ಚಾಮುಂಡೇಶ್ವರಿ ದೇವಸ್ಥಾನಕ್ಕೆ ತಲಾ 10 ಲಕ್ಷ ರೂ. ಸೇರಿ ವಿವಿಧ ಜಿಲ್ಲೆಗಳ 38 ದೇಗುಲಗಳಿಗೆ ಹಣ ಬಿಡುಗಡೆ ಮಾಡಲಾಗಿದೆ.
ವಿಜಯಪುರದ ದೇವರ ಹಿಪ್ಪರಗಿಯ ಕೆರುಟಗಿ ಲಕ್ಷ್ಮೀದೇವಿ ದೇವಸ್ಥಾನ ಮತ್ತು ಮೈಸೂರಿನ ವಿವೇಕಾನಂದ ನಗರದ ಶ್ರೀ ಶಂಕರ ಸೇವಾ ಟ್ರಸ್ಟ್‌ಗೆ ತಲಾ 20 ಲಕ್ಷ ರೂ, ಬೆಳಗಾವಿಯ ಮಮದಾಪುರದ ಶ್ರೀ ಅಂಬಿಕಾ ದೇವಸ್ಥಾನಕ್ಕೆ 18 ಲಕ್ಷ ರೂ ಒದಗಿಸಲಾಗಿದೆ. ತುಮಕೂರಿನ ಚಿಕ್ಕನಾಯಕನಹಳ್ಳಿಯ ತಿರುಮಲ ದೇವರ ದೇವಸ್ಥಾನ, ಹಾವೇರಿಯ ಸವಣೂರಿನ ಹೂವಿನಶಿಗ್ಲಿ ಶ್ರೀಗ್ರಾಮದೇವತೆ ದೇವಸ್ಥಾನ, ಬೆಳಗಾವಿಯ ಗೋಕಾಕಿನ ಕೊಳವಿಯ ಕರೆಮ್ಮಾ ದೇವಸ್ಥಾನಕ್ಕೆ ತಲಾ 10 ಲಕ್ಷ ರೂ. ಒದಗಿಸಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲೋಕಾಯುಕ್ತ ದಾಳಿ: ಇಬ್ಬರು ಸರಕಾರಿ ಅಧಿಕಾರಿಗಳ ಮನೆಯಲ್ಲಿತ್ತು ಕೋಟಿ ಕೋಟಿ ಮೌಲ್ಯದ ಸೊತ್ತುಗಳು

Shocking ಮೃತ ಉರಗತಜ್ಞ ನರೇಶ್ ಮನೆಯಲ್ಲಿ ವಿಷಕಾರಿ ಹಾವುಗಳ ರಾಶಿ!

ಕೊಟ್ಟಿಗೆಹಾರ: ಮನೆಯ ಬಳಿಯೇ ಅವಿತು ಕುಳಿತ್ತಿತ್ತು ಭಾರಿ ಗಾತ್ರದ ಕಾಳಿಂಗ ಸರ್ಪ

ಕರ್ನಾಟಕದಲ್ಲಿ ನೀರಿನ ಅಭಾವ…: ಮಹಾರಾಷ್ಟ್ರದಿಂದ ನೀರು ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಮನವಿ

Guarantee; ಮಂತ್ರಿ ಪರಿಷತ್ ಸಭೆ: ಸಿದ್ದರಾಮಯ್ಯ ಅವರಿಗೆ ಪರಮಾಧಿಕಾರ