Darshan ದೊಡ್ಡ ನಟ, ತತ್‌ಕ್ಷಣ ಕ್ರಮ ಅಸಾಧ್ಯ: ಫಿಲ್ಮ್ ಚೇಂಬರ್‌

ತಪ್ಪು ಸಾಬೀತಾದರೆ ನಿಷೇಧ... ಚಿಂತೆಯಲ್ಲಿ ನಿರ್ಮಾಪಕರು

Team Udayavani, Jun 14, 2024, 6:40 AM IST

Darshan

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಮೇಲಿನ ಆರೋಪ ಸಾಬೀತಾದರೆ ಅವರನ್ನು ನಿಷೇಧ ಮಾಡುವ ಕುರಿತು ನಿರ್ಧರಿಸು ತ್ತೇವೆ ಎಂದು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ (ಫಿಲ್ಮ್ ಚೇಂಬರ್‌) ಅಧ್ಯಕ್ಷ ಎನ್‌.ಎಂ. ಸುರೇಶ್‌ ಹೇಳಿದ್ದಾರೆ. ಶನಿವಾರ ಚಿತ್ರದುರ್ಗಕ್ಕೆ ತೆರಳಿ ಹತ್ಯೆಗೆ ಒಳಗಾಗಿರುವ ರೇಣುಕಾ ಸ್ವಾಮಿ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಲಾಗುತ್ತದೆ ಎಂದಿದ್ದಾರೆ.

ಕೊಲೆ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್‌ ಅವರನ್ನು ಚಿತ್ರರಂಗದಿಂದ ನಿಷೇಧಿಸಬೇಕೆಂದು ಕೇಳಿ ಬಂದ ಕೂಗಿನ ಹಿನ್ನೆಲೆಯಲ್ಲಿ ಗುರುವಾರ ಚಿತ್ರರಂಗದ ಪ್ರಮುಖರ ಸಭೆಯನ್ನು ಫಿಲ್ಮ್ ಚೇಂಬರ್‌ ನಡೆಸಿತು. ಅನಂತರ ಮಾತನಾಡಿದ ಅಧ್ಯಕ್ಷ ಎನ್‌.ಎಂ. ಸುರೇಶ್‌, “ಈ ಅನ್ಯಾಯವನ್ನು ನಾವು ಖಂಡಿಸಲೇಬೇಕು. ಮೊದಲು ರೇಣುಕಾಸ್ವಾಮಿ ಕುಟುಂಬ ವನ್ನು ಭೇಟಿ ಮಾಡಲಿದ್ದೇವೆ. ದರ್ಶನ್‌ ದೊಡ್ಡ ನಟ, ಅವರ ಮೇಲೆ ಭಾರೀ ಬಂಡವಾಳ ಹೂಡಲಾಗಿದೆ, ಹಾಗಾಗಿ ನಿರ್ಮಾಪಕರ ಬಗ್ಗೆಯೂ ಯೋಚಿಸಬೇಕು. ಸದ್ಯ ನಿಷೇಧದ ಬಗ್ಗೆ ನಿರ್ಧರಿಸಲು ಆಗುವುದಿಲ್ಲ. ಈಗ ತನಿಖೆ ನಡೆಯುತ್ತಿದೆ. ತಪ್ಪು ಸಾಬೀತಾದರೆ ಕಲಾ ವಿದರ ಸಂಘದೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದಿದ್ದಾರೆ.

ಸದ್ಯಕ್ಕಂತೂ ದರ್ಶನ್‌ ಸಿನೆಮಾ ಮಾಡಲು ಆಗುವುದಿಲ್ಲ. ನಾವು ರಾಜಿ ಮಾಡಿಕೊಂಡು ಯಾರನ್ನೂ ರಕ್ಷಿಸುವ ಪ್ರಮೇಯವೇ ಇಲ್ಲ. ಇಲ್ಲಿ ನಡೆದಿರುವುದು ಕೊಲೆ. ಯಾವುದೇ ಮುಚ್ಚುಮರೆ ಇಲ್ಲ. ನಿರ್ಮಾಪಕರ ಆರ್ಥಿಕ ಪರಿಸ್ಥಿತಿಯನ್ನೂ ನೋಡಬೇಕು. ಮುಂದಿನ ದಿನಗಳಲ್ಲಿ ಆ ನಿರ್ಮಾಪಕರನ್ನು ಕರೆಸಿ ಮಾತನಾಡುತ್ತೇವೆ ಎಂದಿದ್ದಾರೆ. ಇದೇವೇಳೆ ಮಂಡಳಿ ಮತ್ತೂಮ್ಮೆ ಸಭೆ ನಡೆಸಿ ಚರ್ಚಿಸಲು ನಿರ್ಧರಿಸಿದೆ.

ಚಿಂತೆಯಲ್ಲಿ ನಿರ್ಮಾಪಕರು

ನಟ ದರ್ಶನ್‌ ಅವರನ್ನು ನಿಷೇಧಿಸಬೇಕೆಂಬ ಒತ್ತಡ ಒಂದು ಕಡೆಯಾದರೆ, ಅವರ ಮೇಲೆ ನಿರ್ಮಾಪಕರು 50 ಕೋಟಿ ರೂ.ಗೂ ಹೆಚ್ಚು ಬಂಡವಾಳ ಹೂಡಿರುವುದು ಮಂಡಳಿಗೆ ತಲೆನೋವಾಗಿದೆ. ಈಗಾಗಲೇ ದರ್ಶನ್‌ “ಡೆವಿಲ್‌’, “ಸಿಂಧೂರ ಲಕ್ಷ್ಮಣ’, ಪ್ರೇಮ್‌ ನಿರ್ದೇಶನದ ಸಿನೆಮಾ, ತಮಿಳು, ತೆಲುಗು ನಿರ್ಮಾಪಕರ ಸಿನೆಮಾಗಳ ಜತೆಗೆ ಹಲವು ನಿರ್ಮಾಪಕರಿಗೆ ಸಿನೆಮಾ ಮಾಡುವುದಾಗಿ ಮುಂಗಡ ಪಡೆದಿದ್ದಾರೆ. 25 ಲಕ್ಷ ರೂ.ಗಳಿಂದ 3 ಕೋ.ರೂ.ವರೆಗೂ ಪಡೆದುಕೊಂಡಿದ್ದಾರೆ. ಇದಲ್ಲದೆ ಇನ್ನೊಂದಿಷ್ಟು ನಿರ್ಮಾಣ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಸಿನೆಮಾ ಮಾಡುವುದಕ್ಕಾಗಿ ದರ್ಶನ್‌ಗೆ ಮುಂಗಡ ರೂಪದಲ್ಲಿ ಹಣ ನೀಡಿವೆ. “ಡೆವಿಲ್‌’ ಸಿನೆಮಾ ಕೆಲವೇ ದಿನ ಶೂಟಿಂಗ್‌ ಆಗಿದೆ. ಈಗಾಗಲೇ ಆ ಚಿತ್ರಕ್ಕೂ ದರ್ಶನ್‌ ಮುಂಗಡ, ಶೂಟಿಂಗ್‌ ವೆಚ್ಚವೆಂದು ಕೋಟಿಗಟ್ಟಲೆ ಹಣ ವ್ಯಯಿಸಿದ್ದು, ಸದ್ಯ ನಿರ್ಮಾಪಕರು ಚಿಂತೆಗೀಡಾಗಿದ್ದಾರೆ.

ಟಾಪ್ ನ್ಯೂಸ್

HDK

MUDA Scam: ಸಿದ್ದರಾಮಯ್ಯನವರಿಗೆ ಪಾಪ ಪ್ರಜ್ಞೆ ಕಾಡುತ್ತಿದೆ: ಎಚ್‌ಡಿಕೆ

Hunsur ಆಕಸ್ಮಿಕ ಬೆಂಕಿಗೆ ಹೊತ್ತಿ ತಂಬಾಕು ಭಸ್ಮ: ಬ್ಯಾರನ್ ಗೂ ಹಾನಿ; ಲಕ್ಷಾಂತರ ರೂ. ನಷ್ಟ

Hunsur ಆಕಸ್ಮಿಕ ಬೆಂಕಿಗೆ ಹೊತ್ತಿ ತಂಬಾಕು ಭಸ್ಮ: ಬ್ಯಾರನ್ ಗೂ ಹಾನಿ; ಲಕ್ಷಾಂತರ ರೂ. ನಷ್ಟ

Renukacharya ಎಲ್ಲ ಸರ್ಕಾರಗಳ ಅವಧಿಯ ಭ್ರಷ್ಟಾಚಾರ ತನಿಖೆಯಾಗಲಿ

Renukacharya ಎಲ್ಲ ಸರ್ಕಾರಗಳ ಅವಧಿಯ ಭ್ರಷ್ಟಾಚಾರ ತನಿಖೆಯಾಗಲಿ

Heavy Rain: ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ಎರಡು ದಿನ ರಜೆ‌ ಘೋಷಣೆ

Heavy Rain: ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ಎರಡು ದಿನ ರಜೆ‌ ಘೋಷಣೆ

Thirthahalli ನಿರಂತರ ಮಳೆಯ ಆರ್ಭಟ : ಕುಸಿದು ಬಿದ್ದ ಮನೆಯ ಗೋಡೆ

Thirthahalli ನಿರಂತರ ಮಳೆಯ ಆರ್ಭಟ: ಕುಸಿದು ಬಿದ್ದ ಮನೆಯ ಗೋಡೆ

Rain-Karnataka

Rain Alert: ಕರಾವಳಿ ಜಿಲ್ಲೆಗಳಲ್ಲಿ ಜು.25ರವರೆಗೂ ವ್ಯಾಪಕ ಮಳೆ 

1-mmm

Mudhol; ಸ್ವಲ್ಪವೂ ಪಾಪ ಪ್ರಜ್ಞೆಯೇ ಇಲ್ಲದೆ ಪೊಲೀಸರೆದುರೇ ಎದೆ ತಟ್ಟಿಕೊಂಡ ಆರೋಪಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HDK

MUDA Scam: ಸಿದ್ದರಾಮಯ್ಯನವರಿಗೆ ಪಾಪ ಪ್ರಜ್ಞೆ ಕಾಡುತ್ತಿದೆ: ಎಚ್‌ಡಿಕೆ

Rain-Karnataka

Rain Alert: ಕರಾವಳಿ ಜಿಲ್ಲೆಗಳಲ್ಲಿ ಜು.25ರವರೆಗೂ ವ್ಯಾಪಕ ಮಳೆ 

1-mmm

Mudhol; ಸ್ವಲ್ಪವೂ ಪಾಪ ಪ್ರಜ್ಞೆಯೇ ಇಲ್ಲದೆ ಪೊಲೀಸರೆದುರೇ ಎದೆ ತಟ್ಟಿಕೊಂಡ ಆರೋಪಿ!

Ankola-Cm

Hill Slide: ಶಿರೂರಿಗೆ ಸಿಎಂ ಸಿದ್ದರಾಮಯ್ಯ ಭೇಟಿ, ರಕ್ಷಣಾ ಕಾರ್ಯ ಪರಿಶೀಲನೆ

CM Siddaramaiah resorting to blackmail strategy is ridiculous: V Sunil Kumar

CM Siddaramaiah ಬ್ಲ್ಯಾಕ್ ಮೇಲ್ ತಂತ್ರಕ್ಕೆ ಮುಂದಾಗಿರುವುದು ಹಾಸ್ಯಾಸ್ಪದ: ಸುನೀಲ್ ಕುಮಾರ್

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Bajpe ಎಕ್ಕಾರು: ಕಲ್ಲಿನ ಕೋರೆ ಕಾರ್ಮಿಕ ಆತ್ಮಹತ್ಯೆ

Bajpe ಎಕ್ಕಾರು: ಕಲ್ಲಿನ ಕೋರೆ ಕಾರ್ಮಿಕ ಆತ್ಮಹತ್ಯೆ

Hunsur ಬುಡಸಹಿತ ಉರುಳಿ ಬಿದ್ದ ತೆಂಗಿನ ಮರ; ಮನೆ ಛಾವಣಿಗೆ ಹಾನಿ,ಸ್ಕೂಟರ್‌ ಜಖಂ

Hunsur ಬುಡಸಹಿತ ಉರುಳಿ ಬಿದ್ದ ತೆಂಗಿನ ಮರ; ಮನೆ ಛಾವಣಿಗೆ ಹಾನಿ,ಸ್ಕೂಟರ್‌ ಜಖಂ

HDK

MUDA Scam: ಸಿದ್ದರಾಮಯ್ಯನವರಿಗೆ ಪಾಪ ಪ್ರಜ್ಞೆ ಕಾಡುತ್ತಿದೆ: ಎಚ್‌ಡಿಕೆ

Hunsur ಆಕಸ್ಮಿಕ ಬೆಂಕಿಗೆ ಹೊತ್ತಿ ತಂಬಾಕು ಭಸ್ಮ: ಬ್ಯಾರನ್ ಗೂ ಹಾನಿ; ಲಕ್ಷಾಂತರ ರೂ. ನಷ್ಟ

Hunsur ಆಕಸ್ಮಿಕ ಬೆಂಕಿಗೆ ಹೊತ್ತಿ ತಂಬಾಕು ಭಸ್ಮ: ಬ್ಯಾರನ್ ಗೂ ಹಾನಿ; ಲಕ್ಷಾಂತರ ರೂ. ನಷ್ಟ

Renukacharya ಎಲ್ಲ ಸರ್ಕಾರಗಳ ಅವಧಿಯ ಭ್ರಷ್ಟಾಚಾರ ತನಿಖೆಯಾಗಲಿ

Renukacharya ಎಲ್ಲ ಸರ್ಕಾರಗಳ ಅವಧಿಯ ಭ್ರಷ್ಟಾಚಾರ ತನಿಖೆಯಾಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.