ದಸರಾ ಪ್ರಯುಕ್ತ ವಿಶೇಷ ರೈಲು ಸೌಲಭ್ಯ

Team Udayavani, Sep 29, 2019, 3:00 AM IST

Udayavani Kannada Newspaper

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯವು ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ಸರಿದೂಗಿಸಲು ಮುಂಗಡ ಟಿಕೆಟ್‌ ಇಲ್ಲದ ಜನಸಾಧಾರಣ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ. ಅ.8ರಂದು ರಾತ್ರಿ 9 ಗಂಟೆಗೆ ಮೈಸೂರಿನಿಂದ ಹೊರಡುವ ಮೈಸೂರು- ಚಾಮರಾಜನಗರ ಜನಸಾಧಾರಣ ವಿಶೇಷ (06207/06208) ರೈಲು ರಾತ್ರಿ 10:50ಕ್ಕೆ ಚಾಮರಾಜ ನಗರಕ್ಕೆ ಬರಲಿದೆ. ಚಾಮರಾಜನಗರದಿಂದ ಅ.8ರಂದು ರಾತ್ರಿ 11:10ಕ್ಕೆ ಪ್ರಯಾಣ ಬೆಳೆಸುವ ಚಾಮರಾಜನಗರ- ಮೈಸೂರು ಜನಸಾಧಾರಣ ವಿಶೇಷ (06208) ರೈಲು ಮೈಸೂರಿಗೆ ರಾತ್ರಿ 12:05ಕ್ಕೆ ಬಂದು ಸೇರಲಿದೆ.

ಮೈಸೂರಿನಿಂದ ಅ.8ರಂದು ರಾತ್ರಿ 10 ಗಂಟೆಗೆ ಹೊರಡುವ ಮೈಸೂರು-ಬೆಂಗಳೂರು ನಗರ ಜನಸಾಧಾರಣ ವಿಶೇಷ (06215) ರೈಲು ರಾತ್ರಿ 12:30ಕ್ಕೆ ಬೆಂಗಳೂರು ನಗರಕ್ಕೆ ಆಗಮಿಸಲಿದೆ. ಬೆಂಗಳೂರು ನಗರದಿಂದ ಅ.9ರಂದು ರಾತ್ರಿ 1 ಗಂಟೆಗೆ ತೆರಳುವ ವಿಶೇಷ (06216) ರೈಲು ಅದೇ ದಿನ ನಸುಕಿನ 3:30ಕ್ಕೆ ಮೈಸೂರಿಗೆ ಬಂದು ಸೇರಲಿದೆ. ಅ.7ರಂದು ಧಾರವಾಡ-ಮೈಸೂರು ಎಕ್ಸ್‌ಪ್ರೆಸ್‌ (17302) ರೈಲಿಗೆ ಹಾಗೂ ಅ.8ರಂದು ಮೈಸೂರು-ಧಾರವಾಡ (17301) ರೈಲಿಗೆ ಮಾವಿನಕೆರೆ, ಅಕ್ಕಿಹೆಬ್ಟಾಳು, ಹೊಸ ಅಗ್ರಹಾರ, ಸಾಗರಕಟ್ಟೆ, ಬೆಳಗುಳ ನಿಲ್ದಾಣಗಳಲ್ಲಿ ನಿಲುಗಡೆ ಕಲ್ಪಿಸಲಾಗುವುದು.

ಅ.1ರಿಂದ 8ರವರೆಗೆ ಮೈಸೂರು-ತಾಳಗುಪ್ಪ (56276/56275) ಪ್ಯಾಸೆಂಜರ್‌ ರೈಲನ್ನು ಕೃಷ್ಣರಾಜಸಾಗರ, ಕಲ್ಲೂರ, ಯೆಡಹಳ್ಳಿ, ದೋರ್ನಹಳ್ಳಿ, ಹಂಪಾಪುರ, ಅರ್ಜುನಹಳ್ಳಿ ನಿಲ್ದಾಣಗಳಲ್ಲಿ; ಅ.1ರಿಂದ ಅ.8ರವರೆಗೆ ಮೈಸೂರು-ಶಿವಮೊಗ್ಗ ಟೌನ್‌ (56276/56275) ರೈಲಿಗೆ ಬೆಳಗುಳ, ಅರ್ಜುನಹಳ್ಳಿ, ಹೊಸ ಅಗ್ರಹಾರ, ಮಾವಿನಕೆರೆ ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆ ಕಲ್ಪಿಸಲಾಗುವುದು ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ವಿಶೇಷ ರೈಲು ಸೌಲಭ್ಯ: ದಸರಾ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ಸರಿದೂಗಿಸಲು ನೈಋತ್ಯ ರೈಲ್ವೆ ವಲಯ, ಸುವಿಧಾ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಅಕ್ಟೋಬರ್‌ 4ರಂದು ಹಾಗೂ 7ರಂದು ಸಂಜೆ 5 ಗಂಟೆಗೆ ಯಲಹಂಕದಿಂದ ಹೊರಡುವ ಯಲಹಂಕ-ಕಲಬುರಗಿ ಸುವಿಧಾ ವಿಶೇಷ (82661) ರೈಲು, ಮರುದಿನ ನಸುಕಿನ 4:20ಕ್ಕೆ ಕಲಬುರಗಿ ತಲುಪಲಿದೆ.

ಅ.5 ಹಾಗೂ 8ರಂದು ರಾತ್ರಿ 8:30ಕ್ಕೆ ಕಲಬುರಗಿಯಿಂದ ಪ್ರಯಾಣ ಬೆಳೆಸುವ ಸುವಿಧಾ ವಿಶೇಷ (82662) ರೈಲು, ಮರುದಿನ ಬೆಳಗ್ಗೆ 8:40ಕ್ಕೆ ಯಲಹಂಕ ತಲುಪಲಿದೆ. ಅ.7ರಂದು ರಾತ್ರಿ 11:55ಕ್ಕೆ ಬೆಂಗಳೂರು ನಗರದಿಂದ ಹೊರಡುವ ಬೆಂಗಳೂರು ನಗರ-ಕಾರವಾರ ಸುವಿಧಾ ವಿಶೇಷ (82665) ರೈಲು, ಮರುದಿನ ಮಧ್ಯಾಹ್ನ 3:00 ಗಂಟೆಗೆ ಕಾರವಾರ ತಲುಪಲಿದೆ ಎಂದು ನೈಋತ್ಯ ರೈಲ್ವೆ ವಲಯ ಕಚೇರಿಯ ಪ್ರಕಟಣೆ ತಿಳಿಸಿದೆ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.