ಬೆಂಗಳೂರಲ್ಲಿ ಶತಕದಂಚಿನಲ್ಲಿ ಡೀಸೆಲ್
Team Udayavani, Oct 12, 2021, 8:16 AM IST
ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಸೋಮವಾರ ಕ್ರಮವಾಗಿ ಪ್ರತಿ ಲೀಟರ್ ಗೆ 30 ಪೈಸೆ, 35 ಪೈಸೆ ಏರಿಕೆ ಯಾಗಿದೆ. ಇದು ಸತತ ಏಳನೇ ದಿನದ ಬೆಲೆ ಏರಿಕೆ ಯಾಗಿದೆ. ಹೀಗಾಗಿ, ಕರ್ನಾಟಕ ಮತ್ತು ಕೇರಳದ ಕೆಲವು ಭಾಗಗಳಲ್ಲಿ ಪ್ರತಿ ಲೀಟರ್ ಡೀಸೆಲ್ ದರ 100 ರೂ. ದಾಟಿದೆ.
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ 31 ಪೈಸೆ ಏರಿಕೆಯಾಗಿ, 108.08 ರೂ., ಪ್ರತಿ ಲೀಟರ್ ಡೀಸೆಲ್ಗೆ 37 ಪೈಸೆ ಏರಿಕೆ ಯಾಗಿ 98.89 ರೂ. ಆಗಿದೆ. ನಿರಂತರ ದರ ಏರಿಕೆಯಿಂದಾಗಿ ಹೆಚ್ಚಿನ ನಗರ, ಪಟ್ಟಣಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 100 ರೂ. ದಾಟಿದೆ. ಕರ್ನಾಟಕದ ಬಳ್ಳಾರಿ, ಶಿರಸಿಯಲ್ಲಿ ಪ್ರತಿ ಲೀಟರ್ ಡೀಸೆಲ್ ದರ 100 ರೂ. ದಾಟಿದೆ. ಆರು ದಿನಗಳಿಂದ ಪೆಟ್ರೋಲ್, ಡೀಸೆಲ್ಗೆ ಪ್ರತಿ ದಿನ ಸರಾಸರಿ 30 ಪೈಸೆ ಏರಿಕೆಯಾಗುತ್ತಿತ್ತು.
ಆದರೆ, ಸೋಮವಾರ ಡೀಸೆಲ್ಗೆ 35 ಪೈಸೆ ಏರಿಕೆಯಾಗಿ, ದಾಖಲೆ ನಿರ್ಮಿಸಿದೆ ಕರ್ನಾಟಕ-ಕೇರಳವಲ್ಲದೆ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಛತ್ತೀಸ್ಗಡ, ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ, ಲೇಹ್ನಲ್ಲಿ ಪ್ರತಿ ಲೀಟರ್ ಡೀಸೆಲ್ಗೆ 100 ರೂ. ದಾಟಿದೆ. ಎಂಟು ದಿನ: ಅ.2ರಿಂದ ಶುರುವಾಗಿ ಅ.11ರ ವರೆಗೆ ಬೆಂಗಳೂರಿನ ಲೆಕ್ಕಾಚಾರವನ್ನೇ ತೆಗೆದುಕೊಂಡರೆ ಪ್ರತಿ ಲೀಟರ್ ಪೆಟ್ರೋಲ್ಗೆ 2.64 ರೂ., ಪ್ರತಿ ಲೀಟರ್ ಡೀಸೆಲ್ಗೆ 3.19 ರೂ. ಏರಿಕೆ ಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 80 ಅಮೆರಿಕನ್ ಡಾಲರ್ ಏರಿಕೆಯಾಗಿದೆ. ಒಂದು ತಿಂಗಳ ಹಿಂದೆ ಅದರ ಬೆಲೆ ಪ್ರತಿ ಬ್ಯಾರೆಲ್ಗೆ 72 ಡಾಲರ್ ಆಗಿತ್ತು.