ಕೊರಿಯರ್‌ನಲ್ಲಿ ಬಂದಿದ್ದ ದ್ರಾವಣ ಸೇವಿಸಿ ಸಾವು

Team Udayavani, Aug 6, 2019, 3:00 AM IST

ಸೋಮವಾರಪೇಟೆ: ಕೊರಿಯರ್‌ನಲ್ಲಿ ಬಂದಿದ್ದ ದ್ರಾವಣ ಸೇವಿಸಿ ಪಟ್ಟಣದ ಕಣಾರ ಹೊಟೇಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಸುರೇಶ್‌ (38) ಎಂಬುವ ರು ತಣ್ಣೀರುಹಳ್ಳ ಗ್ರಾಮದಲ್ಲಿ ಸಾವಿಗೀಡಾಗಿದ್ದಾರೆ. ಭಾನುವಾರ ಹೊಟೇಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಸುರೇಶ್‌ ಹೆಸರಿಗೆ ಕೊರಿಯರ್‌ನಲ್ಲಿ ಪಾರ್ಸಲ್‌ ಬಂದಿತ್ತು.

ಅದನ್ನು ಮನೆಗೆ ತಂದ ಪತಿ, ಕಾಸರಗೋಡು ವಿಷ್ಣುಮೂರ್ತಿ ಮಂತ್ರ ದೇವಾಲಯದಿಂದ ತೀರ್ಥ ಬಂದಿದ್ದು, ಅದನ್ನು ಸೇವಿಸುವುದಾಗಿ ತಿಳಿಸಿ ಮಲಗಿದ್ದರು. ಕೆಲ ನಿಮಿಷಗಳ ಬಳಿಕ ನೋಡಿದಾಗ ಮೃತಪಟ್ಟಿದ್ದರು ಎಂದು ಪತ್ನಿ ರಾಧಾ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಶವಪರೀಕ್ಷೆ ನಡೆದು, ಶರೀರದ ಅಂಗಾಂಗಗಳನ್ನು ಎಫ್ಎಸ್‌ಎಲ್‌. ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

ಕೊಲೆ ಮಾಡಿದರೇ?: ಕೊಲೆ ಮಾಡುವ ಉದ್ದೇಶದಿಂದ ಯಾರಾದರೂ ಕೊರಿಯರ್‌ ಮೂಲಕ ಕಳುಹಿಸಿರಬಹುದೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ