ಸಿದ್ದರಾಮೇಶ್ವರ ರಥದ ಗಾಲಿಗೆ ಸಿಲುಕಿ ವ್ಯಕ್ತಿ ಸಾವು
Team Udayavani, Dec 19, 2019, 3:00 AM IST
ಬಾಗಲಕೋಟೆ: ಸಿದ್ದರಾಮೇಶ್ವರ ಜಾತ್ರೆ ರಥೋತ್ಸವದ ವೇಳೆ ನೂಕುನುಗ್ಗಲು ಉಂಟಾಗಿ ಹಗ್ಗ ಹಿಡಿದುಕೊಂಡಿದ್ದ ವ್ಯಕ್ತಿ ರಥದ ಗಾಲಿಗೆ ಸಿಲುಕಿ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ತಾಲೂಕಿನ ಲವಳೇಶ್ವರ ತಾಂಡಾದಲ್ಲಿ ಮಂಗಳವಾರ ಸಂಜೆ ನಡೆದಿದೆ. ಜಡ್ರಾಮಕುಂಟಿ ಗ್ರಾಮದ ಬಸಪ್ಪ ಬಿಂದಿ (28) ಮೃತರು. ತಲೆ ಮೇಲೆ ರಥದ ಗಾಲಿ ಹಾಯ್ದು ಸ್ಥಳ ದಲ್ಲೇ ಮೃತಪಟ್ಟಿದ್ದಾರೆ.
ಗಾಲಿಯಲ್ಲಿ ಕಾಲು ಸಿಲುಕಿ ಗಾಯಗೊಂಡಿರುವ ಜಡ್ರಾಕುಂಟಿ ಗ್ರಾಮದ ಶರಣಪ್ಪ ಕುಂಬಾರ ಹಾಗೂ ಕಮಲಪ್ಪ ಮನಗೂಳಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸಪ್ಪ ಅವರ ಪಕ್ಕದಲ್ಲಿದ್ದ ಶರಣಪ್ಪ ಅವರ ಕಾಲುಗಳು ಗಾಲಿಯಲ್ಲಿ ಸಿಲುಕಿವೆ. ತಕ್ಷಣ ರಥೋತ್ಸವ ಸ್ಥಗಿತಗೊಳಿಸಿ ಬಸಪ್ಪ ಮತ್ತು ಶರಣಪ್ಪ ಅವರನ್ನು ಹೊರತೆಗೆಯಲಾಯಿತು. ಗ್ರಾಮೀಣ ಠಾಣೆ ಸಿಪಿಐ ಪ್ರಭಾಕರ ಧರ್ಮಟ್ಟಿ, ಪಿಎಸ್‌ಐ ರಾಮನಗೌಡ ಸಂಕನಾಳ ಸ್ಥಳಕ್ಕೆ ಭೇಟಿ ನೀಡಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.