ರಾಷ್ಟ್ರಧರ್ಮ ಸಂಘಟನೆಯಿಂದ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಆಗ್ರಹ
Team Udayavani, Dec 2, 2020, 8:55 PM IST
ಬೆಂಗಳೂರು: ಪ್ರಬಲ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ರಾಷ್ಟ್ರಧರ್ಮ ಸಂಘಟನೆಯ ವತಿಯಿಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರವರಿಗೆ ಮನವಿ ಸಲ್ಲಿಸಲಾಯಿತು. ಗಾಂಧಿನಗರದ ಮೌರ್ಯ ಸರ್ಕಲ್‍ನಲ್ಲಿ ಆಯೋಜನೆಗೊಂಡಿದ್ದ ಈ ಕಾರ್ಯಕ್ರಮದಲ್ಲಿ 80 ರಿಂದ 100 ಜನರು ನಮ್ಮ ಹಿಂದೂ ಸಂಸ್ಕೃತಿಯ ಮೌಲ್ಯಗಳನ್ನು ಎತ್ತಿಹಿಡಿಯುವವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರಾಷ್ಟ್ರಧರ್ಮ ಸಂಘಟನೆಯ ಸಂಸ್ಥಾಪಕರಾದ ಸಂತೋಷ್ ಕೆಂಚಾಂಬ ರವರ ನೇತೃತ್ವದಲ್ಲಿ ದೇಸಿ ತಳಿಯಾದ ಗಿರ್ ಗೋವಿನೊಂದಿಗೆ ಮೌರ್ಯ ಸರ್ಕಲ್‍ನಿಂದ ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣವರೆಗೆ ಪಾದಯಾತ್ರೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರಧರ್ಮ ಸಂಘಟನೆಯ ಕಾರ್ಯಕರ್ತರು ಹಾಗೂ ಗೋಪಾಲಕ ಕುಮಾರ ಸುಬ್ರಮಣ್ಯ ಜಾಗೀರ್‍ಧಾರ್, ಗೋ ಸೇವಕ ರಾಘವೇಂದ್ರ, ರಾಷ್ಟ್ರೋತ್ತಾನ ಗೋಶಾಲೆಯ ಡಾ. ವಿ ಜೀವನ್ ಕುಮಾರ್, ಗೋಮಾತ್ರಂ ಗೋಶಾಲೆಯ ಜಿ.ಎಲ್ ಮಂಜುನಾಥ್, ಪ್ರಾಣಿ ದಯಾಸಂಘದ ಸುನೀಲ್ ದುಗಾರ್ ಸೇರಿದಂತೆ ಹಲವಾರು ಗೋ ಸೇವಕರು ಪಾಲ್ಗೊಂಡಿದ್ದರು.
ಈ ಕೆಳಕಂಡ ವಿಷಯಗಳನ್ನು ಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಯಿತು.
1. ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರುವುದು
2. ಗೋ ರಕ್ಷಕರನ್ನು ಜೈಲಿನಿಂದ ಬಿಡುಗಡೆ ಮಾಡಿ ಅವರ ಮೇಲಿರುವ ಕೇಸುಗಳನ್ನು ಖುಲಾಸೆ
ಮಾಡುವುದು
3. ದೇಸಿ ಗೋವುಗಳ ಸಂರಕ್ಷಣೆಗೆ ಆಯೋಗ ರಚನೆ
4. ಗೋಮಾಳ ಜಾಗದ ಸಂರಕ್ಷಣೆ ಮತ್ತು ಒತ್ತುವರಿ ತಡೆಯುವುದು
5. ಗೋ ಶಾಲೆಗಳಿಗೆ ಬಜೆಟ್‍ನಲ್ಲಿ ಸೂಕ್ತ ಅನುದಾನ ನೀಡುವುದು
ಈ ಎಲ್ಲಾ ವಿಷಯಗಳನ್ನು ಆಲಿಸಿದ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜೆಡಿಎಸ್ ನ ಹೊರಟ್ಟಿಗೆ ಸಭಾಪತಿ ಸ್ಥಾನ : ಬಿಜೆಪಿಯ ಪ್ರಾಣೇಶ್ ಉಪ ಸಭಾಪತಿ
ಬೇಬಿಬೆಟ್ಟದ ಸುತ್ತ ಮಾರ್ಚ್ 24ರವರೆಗೆ ಎಲ್ಲ ರೀತಿಯ ಗಣಿಗಾರಿಕೆ ನಿಷೇಧ
ರಾಜ್ಯದ ಎಲ್ಲ ಅಂಗಡಿಗಳ ನಾಮಫಲಕ ಕನ್ನಡದಲ್ಲೇ ಇರಬೇಕು : ನಾಗಾಭರಣ
ರಾಜ್ಯದ ಒಂದಿಂಚು ಜಾಗವನ್ನೂ ಬಿಡೆವು, ನಮ್ಮನ್ನು ಕೆಣಕಿದರೆ ಪರಿಣಾಮ ನೆಟ್ಟಗಿರಲ್ಲ :ನಾರಾಯಣಗೌಡ
ಸೌಜನ್ಯ ಕೊಲೆ ಪ್ರಕರಣ: ಸಿಬಿಐ ಮರು ತನಿಖೆಗೆ ಹೈಕೋರ್ಟ್ ನಕಾರ
MUST WATCH
ಹೊಸ ಸೇರ್ಪಡೆ
ಲಂಚದ ಹಣ ಪಡೆಯುವಾಗಲೇ ಎಸಿಬಿ ಬಲೆಗೆ ಬಿದ್ದ ಡಿಎಚ್ಓ ಕಛೇರಿ ವ್ಯವಸ್ಥಾಪಕ ಮನೋಹರ
ಅಲ್ಖೈದಾ ಜೊತೆ ಸೇರಿ ಹೊಸ ಉಗ್ರಸಂಘಟನೆ ಕಟ್ಟಲು ಹಖ್ಖಾನಿ ಸಂಚು?
“ತಾಂಡವ’ ತಂಡಕ್ಕೆ ಮಧ್ಯಂತರ ರಕ್ಷಣೆ ನೀಡಲು ಸುಪ್ರೀಂ ಕೋರ್ಟ್ ನಕಾರ
ಜೆಡಿಎಸ್ ನ ಹೊರಟ್ಟಿಗೆ ಸಭಾಪತಿ ಸ್ಥಾನ : ಬಿಜೆಪಿಯ ಪ್ರಾಣೇಶ್ ಉಪ ಸಭಾಪತಿ
ಬೇಬಿಬೆಟ್ಟದ ಸುತ್ತ ಮಾರ್ಚ್ 24ರವರೆಗೆ ಎಲ್ಲ ರೀತಿಯ ಗಣಿಗಾರಿಕೆ ನಿಷೇಧ