ಇ.ಡಿಯಿಂದ ಡಿಕೆಶಿ ತಾಯಿ ಗೌರಮ್ಮ ವಿಚಾರಣೆ


Team Udayavani, Feb 12, 2020, 3:06 AM IST

ed-dkshi

ರಾಮನಗರ/ಕನಕಪುರ: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದಲ್ಲಿ ಇ.ಡಿ ಅಧಿಕಾರಿಗಳು ಮಂಗಳವಾರ ಡಿಕೆಶಿ ತಾಯಿ ಗೌರಮ್ಮ ಅವರ ವಿಚಾರಣೆ ನಡೆಸಿದರು.

ನ್ಯಾಯಾಲಯದ ಆದೇಶದ ಮೇರೆಗೆ ಮಹಿಳಾ ಅಧಿಕಾರಿ ಸೇರಿ ಐವರು ಇ.ಡಿ ಅಧಿಕಾರಿಗಳು ಮಧ್ಯಾಹ್ನ 12.30ರ ವೇಳೆಗೆ 2 ಕಾರುಗಳಲ್ಲಿ ಕನಕಪುರ ತಾಲೂಕು ಕೋಡಿಹಳ್ಳಿಯಲ್ಲಿರುವ ಅವರ ನಿವಾಸಕ್ಕೆ ಆಗಮಿಸಿ, ಗೌರಮ್ಮ ಅವರನ್ನು ವಿಚಾರಣೆಗೊಳಪಡಿಸಿದರು. ವಿಚಾರಣೆಗೂ ಮುನ್ನ ಕುಟುಂಬದ ವೈದ್ಯರು 85 ವರ್ಷ ವಯಸ್ಸಿನ ಗೌರಮ್ಮ ಅವರ ಆರೋಗ್ಯದ ತಪಾಸಣೆ ನಡೆಸಿದರು. ವಿಚಾರಣೆ ರಾತ್ರಿವರೆಗೂ ನಡೆದಿದ್ದು, ಸಂಪೂರ್ಣ ವಿಚಾರಣೆಯ ಆಡಿಯೋ, ವೀಡಿಯೋ ರೆಕಾರ್ಡ್‌ ಮಾಡಲಾಗಿದೆ.

ವಿಚಾರಣೆ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್‌ ಮತ್ತು ಡಿ.ಕೆ.ಸುರೇಶ್‌ ಅವರು ಸೋಮವಾರವೇ ಕೋಡಿಹಳ್ಳಿಗೆ ಬಂದು ತಾಯಿ ಗೌರಮ್ಮ ಅವರ ಜೊತೆಗಿದ್ದರು. ಇ.ಡಿ ಅಧಿಕಾರಿಗಳು ಕೇಳಬಹುದಾದ ಪ್ರಶ್ನೆಗಳು, ಉತ್ತರಗಳನ್ನು ಸಂಯಮದಿಂದಲೇ ಕೊಡುವ ಅವಶ್ಯಕತೆ ಬಗ್ಗೆ ತಿಳಿಸಿಕೊಟ್ಟು ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ. ಇವರೊಟ್ಟಿಗೆ ಡಿಕೆಶಿ ಪತ್ನಿ ಉಷಾ, ಪುತ್ರಿ ಐಶ್ವರ್ಯ ಸಹ ಇದ್ದಾರೆ ಎನ್ನಲಾಗಿದೆ. ಆದರೆ, ವಿಚಾರಣೆ ವೇಳೆ ಡಿ.ಕೆ.ಸಹೋದರರು ಪ್ರತ್ಯೇಕ ಕೊಠಡಿಯಲ್ಲಿದ್ದರು ಎನ್ನಲಾಗಿದೆ. ವಿಚಾರಣೆ ಹಿನ್ನೆಲೆಯಲ್ಲಿ ಮನೆಯ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಈ ಹಿಂದೆಯೇ ಗೌರಮ್ಮ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ವಿಚಾರಣೆಗಾಗಿ ದೆಹಲಿಗೆ ಬರುವಂತೆ ಸಮನ್ಸ್‌ ಜಾರಿಗೊಳಿಸಿತ್ತು. ಆದರೆ, ತಮಗೆ 85 ವರ್ಷವಾಗಿರುವ ಕಾರಣ ತಮ್ಮ ಪರವಾಗಿ ಪ್ರತಿನಿಧಿ ಕಳುಹಿಸಿಕೊಡಲು ಅವಕಾಶ ಕಲ್ಪಿಸಬೇಕು. ಇಲ್ಲವೇ, ಸ್ವಗೃಹದಲ್ಲಿ ವಿಚಾರಣೆಗೆ ಅನುಮತಿ ನೀಡಬೇಕು ಎಂದು ಗೌರಮ್ಮ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ, ಗೌರಮ್ಮ ಅವರ ವಿಚಾರಣೆಯನ್ನು ಅವರ ನಿವಾಸದಲ್ಲೇ ನಡೆಸುವಂತೆ ಆದೇಶ ನೀಡಿತ್ತು.

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಡಿಕೆಶಿಯವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಮ್ಮ ತಾಯಿ ಗೌರಮ್ಮ ಅವರಿಂದ ತಮಗೆ 22 ಕೋಟಿ 11 ಲಕ್ಷ 74 ಸಾವಿರದ 303 ರೂ.ಬಾಕಿ ಬರಬೇಕಾಗಿದೆ. ಅಲ್ಲದೆ, ಡಿಕೆಶಿ ಪುತ್ರಿ ಐಶ್ವರ್ಯ ಅವರು, ಅಜ್ಜಿ ಗೌರಮ್ಮಗೆ 36 ಲಕ್ಷ 67 ಸಾವಿರದ 860 ರೂ. ಬಾಕಿ ಕೊಡಬೇಕು ಎಂದು ಘೋಷಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

ಚಿಕ್ಕಬಳ್ಳಾಪುರ ಭಾರೀ ಮಳೆ : ಹಲವು ಬಡಾವಣೆ ಜಲಾವೃತ; ವಾಹನ ಸವಾರರ ಪರದಾಟ

ಚಿಕ್ಕಬಳ್ಳಾಪುರ ಭಾರೀ ಮಳೆ: ಹಲವು ಬಡಾವಣೆ ಜಲಾವೃತ; ವಾಹನ ಸವಾರರ ಪರದಾಟ

ನನ್ನ ಅವಧಿಯಲ್ಲೇ ವಿವಿಧ ಸಮುದಾಯಗಳಿಗೆ ಮೀಸಲು ಸೌಲಭ್ಯ : ಬೊಮ್ಮಾಯಿ

ನನ್ನ ಅವಧಿಯಲ್ಲೇ ವಿವಿಧ ಸಮುದಾಯಗಳಿಗೆ ಮೀಸಲು ಸೌಲಭ್ಯ : ಬೊಮ್ಮಾಯಿ

dks

ಸಿದ್ದರಾಮಯ್ಯ ಮೂರನೇ ಭೇಟಿ ಡಿಕೆಶಿ ಅಧ್ಯಕ್ಷ ಪದವಿಗೆ ಕುತ್ತು ತರಲಿದೆಯೇ?;ಬಿಜೆಪಿ ಪ್ರಶ್ನೆ

ರಸ್ತೆ ಗುಂಡಿ ಖಂಡಿಸಿ ಬೈಕ್ ರ‍್ಯಾಲಿ ಗೆದ್ದವರಿಗೆ ಟ್ರೋಪಿ, ನೋವು ನಿವಾರಕ ಮುಲಾಮ್ ಬಹುಮಾನ

ಕಾರ್ಕಳ: ರಸ್ತೆ ಗುಂಡಿ ಖಂಡಿಸಿ ಬೈಕ್ ರ‍್ಯಾಲಿ: ಗೆದ್ದವರಿಗೆ ಟ್ರೋಫಿ,ನೋವು ನಿವಾರಕ ಮುಲಾಮ್

655-aaa

3 ಹೆಣ್ಣು ಹೆತ್ತಿದ್ದಕ್ಕೆ ಕಿರುಕುಳ : ಮಕ್ಕಳೊಂದಿಗೆ ಬಾವಿಗೆ ಜಿಗಿದು ಮಹಿಳೆ ಆತ್ಮಹತ್ಯೆ

yogi

ರಾಮದ್ರೋಹಿಗಳು ರಾಜ್ಯವನ್ನು ಗಲಭೆಯ ಬೆಂಕಿಗೆ ನೂಕಿದರು : ಸಿಎಂ ಯೋಗಿ

ಭಾಗ್ಯವಂತರು ಮರು ಬಿಡುಗಡೆ

ಭಾಗ್ಯವಂತರು ಮರು ಬಿಡುಗಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನ ಅವಧಿಯಲ್ಲೇ ವಿವಿಧ ಸಮುದಾಯಗಳಿಗೆ ಮೀಸಲು ಸೌಲಭ್ಯ : ಬೊಮ್ಮಾಯಿ

ನನ್ನ ಅವಧಿಯಲ್ಲೇ ವಿವಿಧ ಸಮುದಾಯಗಳಿಗೆ ಮೀಸಲು ಸೌಲಭ್ಯ : ಬೊಮ್ಮಾಯಿ

dks

ಸಿದ್ದರಾಮಯ್ಯ ಮೂರನೇ ಭೇಟಿ ಡಿಕೆಶಿ ಅಧ್ಯಕ್ಷ ಪದವಿಗೆ ಕುತ್ತು ತರಲಿದೆಯೇ?;ಬಿಜೆಪಿ ಪ್ರಶ್ನೆ

ಡಾ.ಅಂಬೇಡ್ಕರ್ ಗೆ ಅಪಮಾನ ಮಾಡಿದ ಕಾಂಗ್ರೆಸ್ ಸೋಲಿಸಿ : ಕಾರಜೊಳ

ಡಾ.ಅಂಬೇಡ್ಕರ್ ಗೆ ಅಪಮಾನ ಮಾಡಿದ ಕಾಂಗ್ರೆಸ್ ಸೋಲಿಸಿ : ಕಾರಜೊಳ

ಸಾರ್ವತ್ರಿಕ ಚುನಾವಣೆಯಲ್ಲಿ ಅಭಿವೃದ್ಧಿಯೊಂದಿಗೆ ಮತದಾರರ ಮುಂದೆ ಬರುತ್ತೇನೆ : ಬೊಮ್ಮಾಯಿ

ಸಾರ್ವತ್ರಿಕ ಚುನಾವಣೆಯಲ್ಲಿ ಅಭಿವೃದ್ಧಿಯೊಂದಿಗೆ ಮತದಾರರ ಮುಂದೆ ಬರುತ್ತೇನೆ : ಬೊಮ್ಮಾಯಿ

gdghgfd

ನಾಳೆಯಿಂದ 1-5ನೇ ತರಗತಿ ಶಾಲೆಗಳು ಆರಂಭ : ಸರ್ಕಾರದ ಗೈಡ್ ಲೈನ್ಸ್ ಅನುಸಾರ ತರಗತಿ ಶುರು

MUST WATCH

udayavani youtube

ಕೆರೆಯ ಮೇಲೆ ಆಂಬ್ಯುಲೆನ್ಸ್ ಹೋಗಲು ಸಹಾಯ ಮಾಡಿದ ಸಾರ್ವಜನಿಕರು

udayavani youtube

ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಿಸಿದ ಗ್ರಾಮಸ್ಥರು

udayavani youtube

3 ವರ್ಷದಲ್ಲಿ ಫಲ ಬರುವ ತೆಂಗಿನಕಾಯಿ ಇಲ್ಲಿದೆ ನೋಡಿ

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

ಹೊಸ ಸೇರ್ಪಡೆ

Mass confinement for poor pregnant women

ಬಡ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ

sagara news

ಸಾಲುಮರಗಳ ಕಡಿತಲೆಗೆ ಆಕ್ಷೇಪ ಸಲ್ಲ

23dvg1

ಅನ್ಯಭಾಷೆ ನಾಮಫಲಕ ತೆರವುಗೊಳಿಸದಿದ್ರೆ ಹೋರಾಟ: ರಾಮೇಗೌಡ

covid news

100 ಕೋಟಿ ಡೋಸ್‌ ಐತಿಹಾಸಿಕ ಮೈಲಿಗಲ್ಲು

14shashikala

ಪ್ರಧಾನಿ ಮೋದಿ ಕೈ ಬಲಪಡಿಸಿ: ಶಶಿಕಲಾ ಜೊಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.