ಹತ್ಯೆಯಲ್ಲಿ ರಾಜಕೀಯ ಮಾಡುವವರು ಮೃಗಗಳು: ದಿನೇಶ್ ಗುಂಡೂರಾವ್
Team Udayavani, Jun 29, 2022, 4:18 PM IST
ಬೆಂಗಳೂರು: ರಾಜಸ್ಥಾನದ ಕನ್ಹಯ್ಯ ಲಾಲ್ ಹತ್ಯೆಯನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸಲೇಬೇಕು. ಧರ್ಮಾಂಧತೆಯ ಅಮಲು ತಲೆಗೇರಿಸಿಕೊಂಡಿರುವ ರಕ್ತಪಿಪಾಸಿಗಳು ಮಾತ್ರ ಇಂತಹ ಹೇಯ ಕೃತ್ಯ ನಡೆಸಲು ಸಾಧ್ಯ. ಈ ಹತ್ಯೆಯನ್ನು ಯಾರೇ ಸಂಭ್ರಮಿಸಿದರೂ ಅವರು ಮನುಷ್ಯತ್ವ ಇಲ್ಲದ ಮೃಗಗಳಿಗೆ ಸಮ. ಅದೇ ರೀತಿ ಪ್ರತಿ ಹತ್ಯೆಯಲ್ಲೂ ರಾಜಕೀಯ ಮಾಡುವವರು ಕೂಡ ಮೃಗಗಳೆ ಆಗಿರುತ್ತಾರೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಅವರು ಸರಣಿ ಟ್ವೀಟ್ ಮಾಡಿದ್ದು, ಕನ್ಹಯ್ಯ ಹತ್ಯೆಯನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಕಾರಣ ಕನ್ಹಯ್ಯ ಹತ್ಯೆಯಾಗಿದೆ ಎಂದು ಬೊಬ್ಬಿಡುತ್ತಿರುವ ಬಿಜೆಪಿ ವರ್ತನೆ ಬಾಲಿಷತನ. ಇತ್ತೀಚೆಗೆ ಶಿವಮೊಗ್ಗದಲ್ಲಿ ಹರ್ಷ ಎಂಬ ಯುವಕನ ಕೊಲೆಯಾಯ್ತು. ಆಗ ರಾಜ್ಯದಲ್ಲಿದಿದ್ದು ಇದೇ ಬಿಜೆಪಿ ಸರ್ಕಾರ. ಹಾಗಾದರೆ ಹರ್ಷನ ಕೊಲೆಯ ಹೊಣೆಗಾರಿಕೆ ಈಗಿನ ಬಿಜೆಪಿ ಸರ್ಕಾರದ್ದೇ.? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬುದ್ದಿ ಹೇಳಲು ಬಂದ ಪತ್ನಿಯ ಪೋಷಕರಿಗೆ ಬೆಂಕಿ ಹಚ್ಚಿದ ಪತಿ, ಓರ್ವ ಸಾವು, ಮೂವರ ಸ್ಥಿತಿ ಗಂಭೀರ
ಧರ್ಮದ ಅಫೀಮ್ ತಿಂದಿರುವ ಕೋಮು ಕ್ರಿಮಿಗಳಿಗೆ ಯಾವುದೇ ಸರ್ಕಾರವಿದ್ದರೂ ಅಂಜಿಕೆಯಿರುವುದಿಲ್ಲ. ಇಂತಹ ಕ್ರಿಮಿಗಳನ್ನು ಯಾವುದೇ ಮುಲಾಜಿಲ್ಲದೆ ಹೆಡೆಮುರಿ ಕಟ್ಟಿ ಹುಟ್ಟಡಗಿಸಬೇಕು. ಮನುಷ್ಯತ್ವ ಮರೆತ ಇಂತಹ ಕ್ರಿಮಿಗಳ ಹುಟ್ಟಡಗಿಸಲು ಯಾರ ತಕರಾರು ಇಲ್ಲ. ಹೀಗಿರುವಾಗ ಬಿಜೆಪಿ ಪ್ರತಿ ಹತ್ಯೆಯಲ್ಲೂ ಹೆಣದ ರಾಜಕೀಯ ಮಾಡುವ ಉದ್ದೇಶವೇನು.? ಎಂದಿದ್ದಾರೆ.
ಕನ್ಹಯ್ಯರನ್ನು ಹತ್ಯೆ ಮಾಡಿದ ಇಬ್ಬರು ಪಾತಕಿಗಳನ್ನು ರಾಜಸ್ಥಾನ ಸರ್ಕಾರ ಈಗಾಗಲೇ ಬಂಧಿಸಿದೆ. ಈ ಇಬ್ಬರು ಕಿರಾತಕರ ಕೃತ್ಯ ಯಾವ ಭಯೋತ್ಪಾದಕ ಕೃತ್ಯಕ್ಕೂ ಕಡಿಮೆಯಿಲ್ಲ. ರಾಜಸ್ಥಾನ ಸರ್ಕಾರ ಈ ದುಷ್ಟರ ವಿರುದ್ದ ತ್ವರಿತಗತಿಯ ವಿಚಾರಣೆ ನಡೆಸಿ ಉಗ್ರ ಶಿಕ್ಷೆಯಾಗುವಂತೆ ನೋಡಿಕೊಳ್ಳಲಿ. ಈ ಪ್ರಕರಣದ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಲಿ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಂಪತಿ ಕಲಹ : ಪತಿ ಹೊಡೆದ ಗುಂಡೇಟಿಗೆ ಪತ್ನಿ ಸಾವು : ಚೇರಳ ಶ್ರೀಮಂಗಲದಲ್ಲಿ ಘಟನೆ
ಅಕ್ರಮ ವಿದೇಶಿ ವಲಸಿಗರ ದಿಗ್ಬಂಧನ ಕೇಂದ್ರ ವಿಸ್ತರಣೆ ಹಾಗೂ ಬಲವರ್ಧನೆ: ಆರಗ ಜ್ಞಾನೇಂದ್ರ
ಆಗ ಇಂದಿರಾಗಾಂಧಿಗೆ ಧಿಕ್ಕಾರ, ಈಗ ಸಿಎಂ ಆಗಲು ಜೈಕಾರ: ಸಿದ್ದು ವಿರುದ್ಧ ಈಶ್ವರಪ್ಪ ವಾಗ್ದಾಳಿ
ಕೇಂದ್ರ ಸಚಿವ ಅಮಿತ್ ಶಾ, ಬಿಎಸ್ ವೈ ಭೇಟಿ ವೇಳೆ ಸಿಎಂ ಬೊಮ್ಮಾಯಿ ಬಗ್ಗೆ ಚರ್ಚೆಯಾಗಿದ್ದೇನು?
ನಾಲ್ವರ ಹಂತಕ ಪ್ರವೀಣ್ ಕುಮಾರ್ ಬಿಡುಗಡೆ ವಿಚಾರ: ಅಧಿಕಾರಿಗಳ ಸಭೆ ಬಳಿಕ ನಿರ್ಧಾರ; ಗೃಹ ಸಚಿವ
MUST WATCH
ಹೊಸ ಸೇರ್ಪಡೆ
ನಟ ದರ್ಶನ್ ವಿರುದ್ದ ದೂರು ದಾಖಲಿಸಿದ ನಿರ್ಮಾಪಕ
ದಂಪತಿ ಕಲಹ : ಪತಿ ಹೊಡೆದ ಗುಂಡೇಟಿಗೆ ಪತ್ನಿ ಸಾವು : ಚೇರಳ ಶ್ರೀಮಂಗಲದಲ್ಲಿ ಘಟನೆ
ಅಕ್ರಮ ವಿದೇಶಿ ವಲಸಿಗರ ದಿಗ್ಬಂಧನ ಕೇಂದ್ರ ವಿಸ್ತರಣೆ ಹಾಗೂ ಬಲವರ್ಧನೆ: ಆರಗ ಜ್ಞಾನೇಂದ್ರ
ಮೆಂತ್ಯೆ ಸೊಪ್ಪು ತಿನ್ನಿ…ರಕ್ತದ ಕೊಲೆಸ್ಟ್ರಾಲ್, ಡಯೆಟ್ಗೆ ಸಹಕಾರಿ
ಆಗ ಇಂದಿರಾಗಾಂಧಿಗೆ ಧಿಕ್ಕಾರ, ಈಗ ಸಿಎಂ ಆಗಲು ಜೈಕಾರ: ಸಿದ್ದು ವಿರುದ್ಧ ಈಶ್ವರಪ್ಪ ವಾಗ್ದಾಳಿ