ಸಮಗ್ರ ಅಧ್ಯಯನ ಮಾಡಿ ವರದಿ ಸಲ್ಲಿಸಿ
Team Udayavani, Jun 17, 2019, 3:05 AM IST
ಗದಗ: “ಜಿಂದಾಲ್ ಕಂಪನಿಗೆ ಸರಕಾರ ಭೂಮಿ ನೀಡುವ ಬಗ್ಗೆ ರಚನೆಗೊಂಡ ಸಂಪುಟ ಉಪ ಸಮಿತಿ ಆ ಭಾಗದ ಜನರ ಅಹವಾಲು ಆಲಿಸಬೇಕು. ಈ ಕುರಿತು ಸಮಗ್ರ ಅಧ್ಯಯನ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಬೇಕು’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಶಾಸಕ ಎಚ್.ಕೆ. ಪಾಟೀಲ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, “ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ಮಾಡುವ ಬಗ್ಗೆ ಸಂಪುಟ ಉಪಸಮಿತಿ ಪರಿಶೀಲನೆ ಮಾಡಿ ವರದಿ ಸಲ್ಲಿಸಬೇಕು ಎನ್ನುವ ನಿರ್ಣಯ ಮೂಲಕ ಸರಕಾರ ತನ್ನ ಹಿಂದಿನ ನಿರ್ಣಯ ಕೈಬಿಟ್ಟಿದೆ. ಸರಕಾರದ ನಿಲುವು ಸದ್ಯಕ್ಕೆ ಸ್ವಾಗತಾರ್ಹ’ ಎಂದರು.
“ಶಾಸಕ ಆನಂದ ಸಿಂಗ್ ಅವರು ನನ್ನ ಹೇಳಿಕೆಗೆ ಬೆಂಬಲಿಸುವುದರೊಂದಿಗೆ ಹಲವಾರು ಗಂಭೀರ ವಿಚಾರಗಳನ್ನು ಜನರ ಮುಂದಿಟ್ಟಿದ್ದಾರೆ. ಈ ಭಾಗದ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರು ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗಲೆಲ್ಲ ಪಕ್ಷದ ಒಳಗೆ, ವಿಧಾನ ಪರಿಷತ್ತಿನ ಒಳಗೆ ಮತ್ತು ಹೊರಗೆ ಧ್ವನಿ ಎತ್ತಿದ್ದಾರೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಹೋದರಿಯ ಮದುವೆಗೆ ಬಂದಿದ್ದ ಯೋಧ ಅಪಘಾತದಲ್ಲಿ ಸಾವು : ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ
ಚಿಕ್ಕೋಡಿ : ಕಡು ಬಡತನದಲ್ಲಿ ಹುಟ್ಟಿ ಅರೋಗ್ಯ ಸೇವೆಗೆ ಮುಂದಾದ ಗಡಿ ಭಾಗದ ಯುವಕ
ಬೇಡರಶಿವನಕೆರೆ ಗ್ರಾಮದಲ್ಲಿ ಕರಡಿ ಪ್ರತ್ಯಕ್ಷ : ಅರಣ್ಯ ಸಿಬಂದಿಗಳಿಂದ ಕಾರ್ಯಾಚರಣೆ
ಶಿರಸಿ : ರಸ್ತೆ ದಾಟುತ್ತಿದ್ದ ವೇಳೆ ಟ್ರಕ್ ಢಿಕ್ಕಿ ಹೊಡೆದು ವ್ಯಕ್ತಿ ಸ್ಥಳದಲ್ಲೇ ಸಾವು
ರಾಜ್ಯದಲ್ಲಿ 98 ಮಂದಿಗೆ ಕೋವಿಡ್ ಸೋಂಕು ದೃಢ