ಬಾಲಕಿಗೆ ವಿದ್ಯಾಭ್ಯಾಸ ಕೊಡಿಸೋದಾಗಿ ಮನೆಗೆಲಸ ಮಾಡಿಸಿಕೊಂಡ ವೈದ್ಯ!

Team Udayavani, Jun 20, 2019, 3:00 AM IST

Udayavani Kannada Newspaper

ಗಂಗಾವತಿ: ಬಡತನದಲ್ಲಿದ್ದ ಬಾಲಕಿಯನ್ನು ಕಾಲೇಜಿಗೆ ಸೇರಿಸಿ, ವಿದ್ಯಾಭ್ಯಾಸ ಕೊಡಿಸುತ್ತೇನೆ ಎಂದು ಕರೆದುಕೊಂಡು ಬಂದ ವೈದ್ಯ, ಮನೆಗೆಲಸ ಮಾಡಿಸಿಕೊಳ್ಳುತ್ತಿರುವುದಕ್ಕೆ ಕಂಗಾಲಾದ ಬಾಲಕಿ ಪೊಲೀಸರಿಗೆ ವಿಷಯ ತಿಳಿಸಿದ್ದರಿಂದ ಆಕೆಯನ್ನು ರಕ್ಷಣೆ ಮಾಡಲಾಗಿದೆ.

ಸಮೀಪದ ಬಸಾಪೂರ ರಾಜರಾಮಪೇಟೆಯ ಬಾಲಕಿ ರಾಧಿಕಾ, ಪೊಲೀಸ್‌ ಕಂಟ್ರೋಲ್‌ ರೂಂ ಹಾಗೂ ಎಸಿಬಿಗೆ ಕರೆ ಮಾಡಿ, ತನ್ನನ್ನು ಕಾಲೇಜಿಗೆ ಕಳುಹಿಸುತ್ತೇವೆ ಎಂದು ಕರೆದುಕೊಂಡು ಬಂದು ಮನೆಯಲ್ಲಿ ಕೆಲಸ ಮಾಡಿಸುತ್ತಿದ್ದಾರೆ. ನಮ್ಮ ತಂದೆಗೆ ಅಪಘಾತವಾಗಿದ್ದು, ಅವರ ಆರೋಗ್ಯ ಸರಿಯಿಲ್ಲ.

ವೈದ್ಯರ ಆಶ್ರಯದಲ್ಲಿ ಓದಬೇಕೆಂದು ಆಗಮಿಸಿದ್ದೆ. ಇವರು ಕಾಲೇಜಿಗೆ ಸೇರಿಸುತ್ತಿಲ್ಲ. ಮನೆಯಲ್ಲಿ ಕೆಲಸ ಮಾಡಿಕೊಂಡು ಇರಬೇಕಾಗಿದೆ. 10ನೇ ತರಗತಿಯಲ್ಲಿ ಶೇ.70 ಅಂಕ ಪಡೆದು ಉತ್ತೀರ್ಣಳಾಗಿದ್ದು, ತನ್ನನ್ನು ರಕ್ಷಿಸಿ, ಕಾಲೇಜಿಗೆ ಹೋಗಲು ಸಹಾಯ ಮಾಡುವಂತೆ ಕೋರಿದ್ದಾಳೆ.

ಈ ವಿಷಯವನ್ನು ಪೊಲೀಸ್‌ ಕಂಟ್ರೋಲ್‌ ರೂಂನಿಂದ ಗಂಗಾವತಿ ನಗರ ಠಾಣೆಯ ಪಿಐ ಉದಯರವಿ ಅವರ ಗಮನಕ್ಕೆ ತರಲಾಯಿತು. ಬುಧವಾರ ಸಂಜೆ ಬಾಲಕಿ ರಾಧಿಕಾ ಹಾಗೂ ಖಾಸಗಿ ವೈದ್ಯರಾದ ಡಾ| ಸೋಮರಾಜು ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಯಿತು.

ನಂತರ ವೈದ್ಯ ಡಾ| ಸೋಮರಾಜು ಹಾಗೂ ಅವರ ಪುತ್ರನ ವಿಚಾರಣೆ ನಡೆಸಿ, ಕೂಡಲೇ ಬಾಲಕಿಯನ್ನು ಪಾಲಕರ ಸುಪರ್ದಿಗೆ ವಹಿಸುವಂತೆ ಸೂಚನೆ ನೀಡಿ, ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಿದ್ದಾರೆ. ಬಾಲಕಿ ರಾ ಧಿಕಾಳನ್ನು ಮಕ್ಕಳ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗುತ್ತದೆ ಎಂದು ಪೊಲೀಸ್‌ ಇನ್ಸ್‌ಪೆಕ್ಟರ್‌ ಉದಯರವಿ ತಿಳಿಸಿದ್ದಾರೆ.

ಬಾಲಕಿಯನ್ನು ಕಾಲೇಜಿಗೆ ಅಡ್ಮಿಷನ್‌ ಮಾಡಿಸುವುದಾಗಿ ಹೇಳಿ ಖಾಸಗಿ ವೈದ್ಯರು ಮನೆಗೆಲಸಕ್ಕೆ ಇಟ್ಟುಕೊಂಡಿದ್ದ ವಿಷಯ ಎಸಿಬಿಯಿಂದ ತಿಳಿಯಿತು. ಬಾಲಕಿ ಮತ್ತು ವೈದ್ಯರನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ ವಿಷಯ ಖಚಿತವಾಗಿದ್ದು, ವೈದ್ಯರಿಗೆ ಎಚ್ಚರಿಕೆ ನೀಡಲಾಗಿದೆ. ಬಾಲಕಿಯನ್ನು ಮಕ್ಕಳ ಸಾಂತ್ವನ ಕೇಂದ್ರದ ಮೂಲಕ ಪಾಲಕರ ಬಳಿಗೆ ಕಳಿಸಲಾಗುತ್ತದೆ. ಬಾಲಕಿಯ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲಾಗುತ್ತದೆ.
-ಉದಯರವಿ, ಪೊಲೀಸ್‌ ಇನ್ಸ್‌ಪೆಕ್ಟರ್‌

ಟಾಪ್ ನ್ಯೂಸ್

ಕ್ರಿಕೆಟ್‌ ತಂಡದ ನಾಯಕತ್ವ ವಿಚಾರದಲ್ಲಿ ಅನಾವಶ್ಯಕ ವಿವಾದ ಸಲ್ಲದು

ಕ್ರಿಕೆಟ್‌ ತಂಡದ ನಾಯಕತ್ವ ವಿಚಾರದಲ್ಲಿ ಅನಾವಶ್ಯಕ ವಿವಾದ ಸಲ್ಲದು

ಸಮಸ್ಯೆ ನಿವಾರಣೆಗೆ ಹರಿ-ಗುರುಗಳಲ್ಲಿ ಪ್ರಾರ್ಥನೆ: ಕೃಷ್ಣಾಪುರ ಶ್ರೀ

ಸಮಸ್ಯೆ ನಿವಾರಣೆಗೆ ಹರಿ-ಗುರುಗಳಲ್ಲಿ ಪ್ರಾರ್ಥನೆ: ಕೃಷ್ಣಾಪುರ ಶ್ರೀ

ಪೆಸಿಫಿಕ್ ಸಾಗರ ಜ್ವಾಲಾಮುಖಿಗೆ ದ್ವೀಪವೇ ಕರಕಲು

ಪೆಸಿಫಿಕ್ ಸಾಗರ ಜ್ವಾಲಾಮುಖಿಗೆ ದ್ವೀಪವೇ ಕರಕಲು

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ಸೋಲಿನಿಂದ ಪಾರಾದ ಮೆಡ್ವೆಡೇವ್‌, ಲೇಲಾ ಔಟ್‌

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ಸೋಲಿನಿಂದ ಪಾರಾದ ಮೆಡ್ವೆಡೇವ್‌, ಲೇಲಾ ಔಟ್‌

ಯುದ್ಧನೌಕೆಯಲ್ಲಿ ಸ್ಫೋಟ: ಮೂವರು ಯೋಧರು ಹುತಾತ್ಮ

ಯುದ್ಧನೌಕೆಯಲ್ಲಿ ಸ್ಫೋಟ: ಮೂವರು ಯೋಧರು ಹುತಾತ್ಮ

251ನೇ ದ್ವೈವಾರ್ಷಿಕ ಪರ್ಯಾಯ ಸಂಭ್ರಮ; ಸಾಂಪ್ರದಾಯಿಕ ಪರ್ಯಾಯ ಮೆರವಣಿಗೆ

251ನೇ ದ್ವೈವಾರ್ಷಿಕ ಪರ್ಯಾಯ ಸಂಭ್ರಮ; ಸಾಂಪ್ರದಾಯಿಕ ಪರ್ಯಾಯ ಮೆರವಣಿಗೆ

ವಿಶ್ವಕ್ಕೆ ಸಂಸ್ಕಾರ, ಸಂಸ್ಕೃತಿ ಕೊಟ್ಟ ಭಾರತ: ಡಾ| ಪರಮೇಶ್ವರ್‌

ವಿಶ್ವಕ್ಕೆ ಸಂಸ್ಕಾರ, ಸಂಸ್ಕೃತಿ ಕೊಟ್ಟ ಭಾರತ: ಡಾ| ಪರಮೇಶ್ವರ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಲ್ಲ ಶಾಲಾ ಕಾಲೇಜುಗಳಲ್ಲಿ ಸುಭಾಷಚಂದ್ರ ಭೋಸ್‌ರ 125 ನೇ ಜಯಂತಿ ಆಚರಣೆ: ಸಿಎಂ

ಎಲ್ಲ ಶಾಲಾ ಕಾಲೇಜುಗಳಲ್ಲಿ ಸುಭಾಷಚಂದ್ರ ಭೋಸ್‌ರ 125 ನೇ ಜಯಂತಿ ಆಚರಣೆ: ಸಿಎಂ

ಮಾಸ್ಕ್ ಹಾಕಬೇಕೆಂದು ನನಗೆ ಅನಿಸಿಲ್ಲ, ಹಾಕಲ್ಲ: ಸಚಿವ ಕತ್ತಿ ಉಡಾಫೆ

ಮಾಸ್ಕ್ ಹಾಕಬೇಕೆಂದು ನನಗೆ ಅನಿಸಿಲ್ಲ, ಹಾಕಲ್ಲ: ಸಚಿವ ಕತ್ತಿ ಉಡಾಫೆ ಉತ್ತರ

ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ : ಏ.16ರಿಂದ ಮೇ 4 ರವರೆಗೆ ನಡೆಯಲಿದೆ ಪರೀಕ್ಷೆ

ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ : ಏ.16ರಿಂದ ಮೇ 4 ರವರೆಗೆ ನಡೆಯಲಿದೆ ಪರೀಕ್ಷೆ

ಶುಕ್ರವಾರ ಕರ್ಫ್ಯೂ ಭವಿಷ್ಯ, ಲಸಿಕಾಕರಣ ಕಡಿಮೆಯಾದರೆ ಜಿಲ್ಲಾಧಿಕಾರಿಗಳೆ ಹೊಣೆ : ಸಿಎಂ ಸೂಚನೆ

ಶುಕ್ರವಾರ ಕರ್ಫ್ಯೂ ಭವಿಷ್ಯ, ಲಸಿಕಾಕರಣ ಕಡಿಮೆಯಾದರೆ ಜಿಲ್ಲಾಧಿಕಾರಿಗಳೆ ಹೊಣೆ : ಸಿಎಂ ಸೂಚನೆ

ವಕಾರ ಸಾಲು ಮಾರಾಟ ಪ್ರಕ್ರಿಯೆಗೆ ಚಾಲನೆ! ನಗರಸಭೆ ಕೋಟ್ಯಂತರ ರೂ. ಆಸ್ತಿ ಕೈತಪುವ ಆತಂಕ

ವಕಾರ ಸಾಲು ಮಾರಾಟ ಪ್ರಕ್ರಿಯೆಗೆ ಚಾಲನೆ! ನಗರಸಭೆ ಕೋಟ್ಯಂತರ ರೂ. ಆಸ್ತಿ ಕೈತಪುವ ಆತಂಕ

MUST WATCH

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

udayavani youtube

18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಧನುಷ್ – ಐಶ್ವರ್ಯಾ

udayavani youtube

ಪರ್ಯಾಯ ಮಹೋತ್ಸವ : ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಿಂದ ಪವಿತ್ರ ಸ್ನಾನ

udayavani youtube

ನಿಷೇಧದ ನಡುವೆಯೂ ರಥೋತ್ಸವ : ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲ

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

ಹೊಸ ಸೇರ್ಪಡೆ

ಕ್ರಿಕೆಟ್‌ ತಂಡದ ನಾಯಕತ್ವ ವಿಚಾರದಲ್ಲಿ ಅನಾವಶ್ಯಕ ವಿವಾದ ಸಲ್ಲದು

ಕ್ರಿಕೆಟ್‌ ತಂಡದ ನಾಯಕತ್ವ ವಿಚಾರದಲ್ಲಿ ಅನಾವಶ್ಯಕ ವಿವಾದ ಸಲ್ಲದು

ಸಮಸ್ಯೆ ನಿವಾರಣೆಗೆ ಹರಿ-ಗುರುಗಳಲ್ಲಿ ಪ್ರಾರ್ಥನೆ: ಕೃಷ್ಣಾಪುರ ಶ್ರೀ

ಸಮಸ್ಯೆ ನಿವಾರಣೆಗೆ ಹರಿ-ಗುರುಗಳಲ್ಲಿ ಪ್ರಾರ್ಥನೆ: ಕೃಷ್ಣಾಪುರ ಶ್ರೀ

ಪೆಸಿಫಿಕ್ ಸಾಗರ ಜ್ವಾಲಾಮುಖಿಗೆ ದ್ವೀಪವೇ ಕರಕಲು

ಪೆಸಿಫಿಕ್ ಸಾಗರ ಜ್ವಾಲಾಮುಖಿಗೆ ದ್ವೀಪವೇ ಕರಕಲು

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ಸೋಲಿನಿಂದ ಪಾರಾದ ಮೆಡ್ವೆಡೇವ್‌, ಲೇಲಾ ಔಟ್‌

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ಸೋಲಿನಿಂದ ಪಾರಾದ ಮೆಡ್ವೆಡೇವ್‌, ಲೇಲಾ ಔಟ್‌

ಯುದ್ಧನೌಕೆಯಲ್ಲಿ ಸ್ಫೋಟ: ಮೂವರು ಯೋಧರು ಹುತಾತ್ಮ

ಯುದ್ಧನೌಕೆಯಲ್ಲಿ ಸ್ಫೋಟ: ಮೂವರು ಯೋಧರು ಹುತಾತ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.