ರಾಜ್ಯದಲ್ಲಿ ಒಣಹವೆ
Team Udayavani, Feb 16, 2020, 3:00 AM IST
ಬೆಂಗಳೂರು/ಮಂಗಳೂರು: ಶನಿವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದೆಲ್ಲೆಡೆ ಒಣಹವೆ ಇತ್ತು. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ತಾಪಮಾನ ಕೊಂಚ ಕಡಿಮೆಯಾಗಿತ್ತು. ಕರಾವಳಿ ಮತ್ತು ದಕ್ಷಿಣ ಒಳನಾಡಿನಾದ್ಯಂತ ಹಾಗೂ ಉತ್ತರ ಒಳನಾಡಿನ ಬಹುತೇಕ ಎಲ್ಲೆಡೆ ತಾಪಮಾನದಲ್ಲಿ ಹೆಚ್ಚೇನೂ ಬದಲಾವಣೆ ಕಂಡು ಬರಲಿಲ್ಲ.
ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ತಾಪಮಾನ ಕೊಂಚ ಹೆಚ್ಚಾಗಿತ್ತು. ಬೀದರ್ನಲ್ಲಿ ರಾಜ್ಯ ದಲ್ಲಿಯೇ ಕನಿಷ್ಠ 12 ಡಿ.ಸೆ.ತಾಪಮಾನ ದಾಖಲಾಯಿತು. ಸೋಮವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂ ಚನೆಯಂತೆ ರಾಜ್ಯದೆಲ್ಲೆಡೆ ಒಣಹವೆ ಮುಂದುವರಿಯಲಿದೆ.