ಖನ್ನತೆಗೊಳಗಾಗಿದ್ದರಾ ಡಿವೈಎಸ್ಪಿ ಲಕ್ಷ್ಮೀ ?

Team Udayavani, Dec 17, 2020, 11:16 PM IST

ಖನ್ನತೆಗೊಳಗಾಗಿದ್ದರಾ ಡಿವೈಎಸ್ಪಿ ಲಕ್ಷ್ಮೀ ?

ಬೆಂಗಳೂರು: ಸಿಐಡಿ ಡಿವೈಎಸ್ಪಿ ವಿ. ಲಕ್ಷ್ಮೀ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬುಧವಾರ ಕರ್ತವ್ಯಕ್ಕೆ ಹಾಜರಾಗಿದ್ದ ಲಕ್ಷ್ಮೀ ಸಹೋದ್ಯೋಗಿಗಳ ಜತೆ ಆತ್ಮೀಯವಾಗಿ ಮಾತನಾಡಿ ಸಂಜೆ ಸ್ನೇಹಿತನ ಮನೆಗೆ ಹೋಗಿದ್ದರು.

ಮಾನಸಿಕ ಖನ್ನತೆಗೊಳಗಿದ್ದರಾ?
ನವೀನ್‌ ಅವರನ್ನು ಲಕ್ಷ್ಮೀ ಕಾಲೇಜು ದಿನಗಳಿಂದಲೇ ಪ್ರೀತಿಸುತ್ತಿದ್ದು, ಪೋಷಕರನ್ನು ಒಪ್ಪಿಸಿ 2012ರಲ್ಲಿ ಮದುವೆಯಾಗಿ ದುಬೈಯಲ್ಲಿ ವಾಸವಾಗಿದ್ದರು. ಅಲ್ಲಿಂದ ಬಂದ ಬಳಿಕ ಕೆಎಸ್‌ಪಿಎಸ್‌ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದರು. ಪತಿ ನವೀನ್‌ಗೂ ಅಮೆಜಾನ್‌ ಕಂಪೆನಿಯಲ್ಲಿ ಕೆಲಸ ಸಿಕ್ಕಿತ್ತು. ಈಗ ಹೈದರಾಬಾದ್‌ನಲ್ಲಿ ಬೇರೆ ಉದ್ಯೋಗದಲ್ಲಿದ್ದಾರೆ.

ದಂಪತಿಗೆ ಮಕ್ಕಳಿರಲಿಲ್ಲ. ಪತಿ ಹೈದರಾಬಾದ್‌ನಲ್ಲಿರುವುದು ಲಕ್ಷ್ಮೀಗೆ ಇಷ್ಟವಿಲ್ಲದೆ ಬೆಂಗಳೂರಿನಲ್ಲೇ ಇರುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ. ಅದಕ್ಕೆ ನವೀನ್‌ ಒಪ್ಪಿರಲಿಲ್ಲ. ಹೀಗಾಗಿ 2 ವರ್ಷದಿಂದ ಸಾಂಸಾರಿಕ ವಿಚಾರದಲ್ಲೂ ನೊಂದಿದ್ದರು ಎನ್ನಲಾಗಿದೆ.

ಸಾಮಾನ್ಯವಾಗಿ ಕೆಎಸ್‌ಪಿಎಸ್‌ ಮುಗಿಸಿದ ಬಳಿಕ ಎಕ್ಸಿಕ್ಯೂಟಿವ್‌ ಹುದ್ದೆ ನೀಡಬೇಕು. ಆದರೆ, ಲಕ್ಷ್ಮೀಗೆ ಸಿಐಡಿಯಲ್ಲಿ ನಾನ್‌ ಎಕ್ಸಿಕ್ಯೂಟಿವ್‌ ಹುದ್ದೆ ನೀಡಲಾಗಿತ್ತು. ತನ್ನ ಬ್ಯಾಚ್‌ನ ಮೂವರು ಮಹಿಳೆಯರಿಗೆ ನಗರ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಎಸಿಪಿ ದರ್ಜೆಯ ಹುದ್ದೆ ಲಭಿಸಿದೆ. ತನಗೆ ಸಿಕ್ಕಿಲ್ಲ ಎಂದು ಸ್ನೇಹಿತರ ಜತೆ ಬೇಸರ ತೋಡಿಕೊಂಡಿದ್ದರು. ನಗರದಲ್ಲೇ ಎಕ್ಸಿಕ್ಯೂಟಿವ್‌ ಹುದ್ದೆ ಪಡೆಯಲು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ, ಸಾಧ್ಯವಾಗಿರಲಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಈ ಎಲ್ಲ ವಿಚಾರಗಳಿಗೆ ಮಾನಸಿಕ ಖನ್ನತೆಗೊಂಡಿದ್ದ ಲಕ್ಷ್ಮೀ ಈ ಮೊದಲು ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಸಾವಿನಲ್ಲಿ ಅನುಮಾನ
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಕ್ಷ್ಮೀ ತಂದೆ ಹಾಗೂ ನಿವೃತ್ತ ಕೆಎಎಸ್‌ ಅಧಿಕಾರಿ ವೆಂಕಟೇಶ್‌, ಮಗಳ ಸಂಸಾರ ಚೆನ್ನಾಗಿತ್ತು. ಎರಡು ದಿನಗಳ ಹಿಂದಷ್ಟೇ ಅಳಿಯ ಹೈದರಾಬಾದ್‌ಗೆ ಹೋಗಿದ್ದರು.ಅದಕ್ಕೆ ಬೇಸರವಾಗಿದ್ದರೆ ಹೊರತು ಡಿಪ್ರಷನ್‌ಗೆ ಹೋಗಿರಲಿಲ್ಲ. ಮನೆ, ಹಣ, ಅಧಿಕಾರ ಎಲ್ಲವೂ ಇದೆ. ಯಾಕೆ ಡಿಪ್ರಷನ್‌ಗೆ ಹೋಗುತ್ತಾಳೆ? ಕಿಟಕಿಯ ಸರಳಿಗೆ ನೇಣು ಬಿಗಿದುಕೊಂಡಿದ್ದಾಳೆ ಎಂಬುದು ಸುಳ್ಳು. ಆಕೆಯ ಕಾಲು ನೆಲಕ್ಕೆ ಮುಟ್ಟುವಂತಿದೆ. ಹೀಗಾಗಿ ಈ ಸಾವಿನ ವಿಚಾರದಲ್ಲಿ ಮನು ಮತ್ತು ಪ್ರಜ್ವಲ್‌ ಮೇಲೆ ಅನುಮಾನವಿದೆ. ಈ ಸಂಬಂಧ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

ಶ್ರೀನಗರ: ಮತ್ತೆ ಉಗ್ರರು ಅಟ್ಟಹಾಸ; 2 ಕಡೆ ಗ್ರೆನೇಡ್‌ ದಾಳಿ

ಶ್ರೀನಗರ: ಮತ್ತೆ ಉಗ್ರರು ಅಟ್ಟಹಾಸ; 2 ಕಡೆ ಗ್ರೆನೇಡ್‌ ದಾಳಿ

ಭಾರತಕ್ಕೆ ಬರಬೇಕಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

ಭಾರತಕ್ಕೆ ಬರಬೇಕಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ತೇಲಾಡಿದ ಜನತೆ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ತೇಲಾಡಿದ ಜನತೆ

ಕೆನಡಿಯನ್‌ ಓಪನ್‌ ಟೆನಿಸ್‌: ಮೂರನೇ ಪ್ರಶಸ್ತಿ ಗೆದ್ದ ಸಿಮೋನಾ ಹಾಲೆಪ್‌

ಕೆನಡಿಯನ್‌ ಓಪನ್‌ ಟೆನಿಸ್‌: ಮೂರನೇ ಪ್ರಶಸ್ತಿ ಗೆದ್ದ ಸಿಮೋನಾ ಹಾಲೆಪ್‌

ರಾಸ್‌ ಟೇಲರ್‌ ಪ್ರಕರಣ: ತಮಾಷೆಗಾಗಿ ಕಪಾಳಮೋಕ್ಷ ? 

ರಾಸ್‌ ಟೇಲರ್‌ ಪ್ರಕರಣ: ತಮಾಷೆಗಾಗಿ ಕಪಾಳಮೋಕ್ಷ ? 

ಭಾರತ-ಪಾಕಿಸ್ಥಾನ ಕೇವಲ ಮತ್ತೊಂದು ಪಂದ್ಯ ಅಷ್ಟೇ: ಸೌರವ್‌ ಗಂಗೂಲಿ

ಭಾರತ-ಪಾಕಿಸ್ಥಾನ ಕೇವಲ ಮತ್ತೊಂದು ಪಂದ್ಯ ಅಷ್ಟೇ: ಸೌರವ್‌ ಗಂಗೂಲಿ

ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿದ ಡೇವಿಡ್‌ ವಾರ್ನರ್‌

ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿದ ಡೇವಿಡ್‌ ವಾರ್ನರ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ತೇಲಾಡಿದ ಜನತೆ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ತೇಲಾಡಿದ ಜನತೆ

ಪ್ರಧಾನಿ ಸಂದೇಶದಂತೆ ದೇಶ ಸೇವೆ ಸಂಕಲ್ಪ: ಬಿ.ಎಲ್‌. ಸಂತೋಷ್‌

ಪ್ರಧಾನಿ ಸಂದೇಶದಂತೆ ದೇಶ ಸೇವೆ ಸಂಕಲ್ಪ: ಬಿ.ಎಲ್‌. ಸಂತೋಷ್‌

ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಬೆಂಬಲದಿಂದ ಎಸ್‌ಡಿಪಿಐ ದುಷ್ಕೃತ್ಯ: ನಳಿನ್‌

ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಬೆಂಬಲದಿಂದ ಎಸ್‌ಡಿಪಿಐ ದುಷ್ಕೃತ್ಯ: ನಳಿನ್‌

ವಿಶ್ವವೇ ಭಾರತದೆಡೆಗೆ ನೋಡುತ್ತಿದೆ: ಸಚಿವ ಆರ್‌. ಅಶೋಕ್‌

ವಿಶ್ವವೇ ಭಾರತದೆಡೆಗೆ ನೋಡುತ್ತಿದೆ: ಸಚಿವ ಆರ್‌. ಅಶೋಕ್‌

ಸಚಿವರು ಎಚ್ಚರಿಕೆಯಿಂದ ಮಾತಾಡಲಿ: ಸಿ.ಟಿ.ರವಿ

ಸಚಿವರು ಎಚ್ಚರಿಕೆಯಿಂದ ಮಾತಾಡಲಿ: ಸಿ.ಟಿ.ರವಿ

MUST WATCH

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತದ ಕಾಂಗ್ರೆಸ್ ನಡಿಗೆಯಲ್ಲಿ ಜನಸ್ತೋಮ

udayavani youtube

ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿಗೆ ಬೆದರಿಕೆ ಕರೆ

udayavani youtube

ಸಾವರ್ಕರ್, ಟಿಪ್ಪು ಫೋಟೋ ವಿಚಾರದಲ್ಲಿ ಹೊಡೆದಾಟ : ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್‌ ಜಾರಿ

ಹೊಸ ಸೇರ್ಪಡೆ

ಶ್ರೀನಗರ: ಮತ್ತೆ ಉಗ್ರರು ಅಟ್ಟಹಾಸ; 2 ಕಡೆ ಗ್ರೆನೇಡ್‌ ದಾಳಿ

ಶ್ರೀನಗರ: ಮತ್ತೆ ಉಗ್ರರು ಅಟ್ಟಹಾಸ; 2 ಕಡೆ ಗ್ರೆನೇಡ್‌ ದಾಳಿ

ಭಾರತಕ್ಕೆ ಬರಬೇಕಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

ಭಾರತಕ್ಕೆ ಬರಬೇಕಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ತೇಲಾಡಿದ ಜನತೆ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ತೇಲಾಡಿದ ಜನತೆ

ಕೆನಡಿಯನ್‌ ಓಪನ್‌ ಟೆನಿಸ್‌: ಮೂರನೇ ಪ್ರಶಸ್ತಿ ಗೆದ್ದ ಸಿಮೋನಾ ಹಾಲೆಪ್‌

ಕೆನಡಿಯನ್‌ ಓಪನ್‌ ಟೆನಿಸ್‌: ಮೂರನೇ ಪ್ರಶಸ್ತಿ ಗೆದ್ದ ಸಿಮೋನಾ ಹಾಲೆಪ್‌

ರಾಸ್‌ ಟೇಲರ್‌ ಪ್ರಕರಣ: ತಮಾಷೆಗಾಗಿ ಕಪಾಳಮೋಕ್ಷ ? 

ರಾಸ್‌ ಟೇಲರ್‌ ಪ್ರಕರಣ: ತಮಾಷೆಗಾಗಿ ಕಪಾಳಮೋಕ್ಷ ? 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.