ಡಿಪಿಎಆರ್‌ ಇಲಾಖೆಯಲ್ಲೇ ಕೆಲಸ ಖಾಲಿ ಖಾಲಿ!


Team Udayavani, Apr 24, 2017, 10:49 AM IST

job.jpg

ಬೆಂಗಳೂರು: ದೇಶದ ಪ್ರಗತಿಪರ ರಾಜ್ಯಗಳ ಪೈಕಿ ಕರ್ನಾಟಕವೂ ಮುಂಚೂಣಿಯಲ್ಲಿದೆ ಎಂದು ಸರ್ಕಾರ ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಆದರೆ ಸರ್ಕಾರಿ ಸೇವೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸಲು ಅಗತ್ಯವಾದ
ಅಧಿಕಾರಶಾಹಿಯ ಬಲವನ್ನೇ ಹೊಂದಿಲ್ಲ. ಇನ್ನೂ ವಿಚಿತ್ರವೆಂದರೆ, ಸರ್ಕಾರಿ ಹುದ್ದೆಗಳು ಖಾಲಿಯಾದ ಬಗ್ಗೆ ಹಾಗೂ ಭರ್ತಿ ಮಾಡಬೇಕಾದ ಕುರಿತು ಕಾಲ ಕಾಲಕ್ಕೆ ವರದಿ ನೀಡುವ ಡಿಪಿಎಆರ್‌ ಇಲಾಖೆಯಲ್ಲಿಯೇ ಸಾವಿರಾರು ಹುದ್ದೆಗಳು
ಭರ್ತಿಯಾಗದೇ ಖಾಲಿ ಉಳಿದಿವೆ! ರಾಜ್ಯದ ಸರ್ಕಾರಿ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಕಾರಣ, ಸಹಜವಾಗಿಯೇ ಸಕಾಲದಲ್ಲಿ ಜನರಿಗೆ ಸೇವೆ ಒದಗಿಸುವುದು ವಿಳಂಬವಾಗುತ್ತಿದೆ. ಪರಿಣಾಮವಾಗಿ ಹಾಲಿ ನೌಕರ, ಸಿಬ್ಬಂದಿಯು ಕಾರ್ಯ ಒತ್ತಡದ ಜತೆಗೆ ಸಾರ್ವಜನಿಕರು ಹಾಗೂ ಹಿರಿಯ ಅಧಿಕಾರಿಗಳಿಂದ ನಿಂದನೆಗೆ ಗುರಿಯಾಗುವಂತಾಗಿದೆ. ಇದಕ್ಕೆಲ್ಲ ಸರ್ಕಾರದ ವಿಳಂಬ ಧೋರಣೆಯೇ ಕಾರಣವಾಗಿರುವುದು ಬೇಸರದ ಸಂಗತಿ.

ರಾಜ್ಯದಲ್ಲಿ ಸರ್ಕಾರಿ ಸೇವೆಯಲ್ಲಿರುವವರನ್ನು ರಾಜ್ಯ ಹಾಗೂ ಜಿಲ್ಲಾ ವಲಯವಾಗಿ ವಿಂಗಡಿಸಲಾಗಿದೆ. ಅದರಂತೆ ರಾಜ್ಯ ವಲಯದಲ್ಲಿ ಒಟ್ಟು 3,47,985 ಮಂಜೂರಾದ ಹುದ್ದೆ ಪೈಕಿ 1,30,874 ಹುದ್ದೆ ಖಾಲಿ ಇವೆ. ಜಿಲ್ಲಾ ವಲಯದಲ್ಲಿ
ಒಟ್ಟು 4,13,303 ಮಂಜೂರಾದ ಹುದ್ದೆಯಲ್ಲಿ 1,15,306 ಹುದ್ದೆ ಖಾಲಿ ಇವೆ.

ಪ್ರಮುಖ ಇಲಾಖೆಗಳಲ್ಲೇ ಕೊರತೆ:
ಜನರಿಗೆ ನಿರಂತರ ಸೇವೆ ಒದಗಿಸುವ ಪ್ರಮುಖ ಇಲಾಖೆಗಳಲ್ಲೂ ನೌಕರರ ಕೊರತೆ ತೀವ್ರವಾಗಿರುವುದು ಅಂಕಿ,ಅಂಶಗಳಿಂದ ದೃಢಪಟ್ಟಿದೆ. ಮುಖ್ಯವಾಗಿ ಶಿಕ್ಷಣ ಇಲಾಖೆಗೆ ಸಂಬಂಧಪಟ್ಟಂತೆ ಇಲಾಖೆಯಲ್ಲಿ 71,091
ಹುದ್ದೆಗಳು ಖಾಲಿ ಇದ್ದು, ವಿದ್ಯಾರ್ಥಿಗಳ ಕಲಿಕೆ ಮೇಲೆ ನೇರ ಪರಿಣಾಮ ಬೀರುತ್ತಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ 10,803 ಹುದ್ದೆ ಖಾಲಿ ಇವೆ. ಹಾಗೆಯೇ ಕಂದಾಯ ಇಲಾಖೆಯಲ್ಲೂ ಸರ್ವೇಯರ್‌ಗಳ ಕೊರತೆಯಿಂದ ಭೂಮಿ ಗಡಿ ಗುರುತು, ಭೂವ್ಯಾಜ್ಯ ಪ್ರಕರಣಗಳ ಇತ್ಯರ್ಥ
ವಿಳಂಬದಿಂದಾಗಿ ಜನ ಹೈರಾಣಾಗಿದ್ದಾರೆ. ಸರ್ಕಾರ ಆರ್ಥಿಕವಾಗಿ ದುರ್ಬಲರಾದ ಪರಿಶಿಷ್ಟ ಜಾತಿ, ಪಂಗಡದ ಜನರ ಕಲ್ಯಾಣಕ್ಕಾಗಿ ಮಹತ್ವದ ಎಸ್‌ ಸಿಪಿಟಿಎಸ್‌ಪಿ ಯೋಜನೆ ರೂಪಿಸಿದೆ. ಆದರೆ ಪರಿಶಿಷ್ಟ ಜಾತಿ, ಪಂಗಡದ ವಸತಿ ನಿಲಯಗಳ ನಿರ್ವಹಣೆ ಸೇರಿ ಇತರೆ ವಿಭಾಗಗಳಲ್ಲಿ ಒಟ್ಟು 22,202 ಹುದ್ದೆಗಳು ಖಾಲಿ ಉಳಿದಿದ್ದು, ಸರ್ಕಾರ ಬೃಹತ್‌ ಮೊತ್ತದ ಅನುದಾನ ನೀಡಿದರೂ ಅದನ್ನು ಸಮರ್ಪಕವಾಗಿ ಬಳಸಿ ಅರ್ಹರಿಗೆ ತಲುಪಿಸಲು ಅಗತ್ಯವಾದ ನೌಕರ, ಸಿಬ್ಬಂದಿಯೇ ಇಲ್ಲ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಗೃಹ ಇಲಾಖೆಯಲ್ಲೇ 19,932 ಹುದ್ದೆ ಖಾಲಿ ಉಳಿದಿವೆ. ಇದರಲ್ಲಿ ಬಹುಪಾಲು ಎಂದರೆ 18081 ಪೊಲೀಸ್‌ ಪೇದೆ ಹುದ್ದೆ ಖಾಲಿ ಇದೆ.

ಡಿಪಿಎಆರ್‌ ಇಲಾಖೆ: ಸರ್ಕಾರದ ಎಲ್ಲ ಇಲಾಖೆಗಳಿಗೆ ಅಗತ್ಯವಾದ ಹುದ್ದೆ , ಸೃಜನೆ ಜತೆಗೆ ನಿವೃತ್ತಿಯಿಂದ ತೆರವಾದ ಹುದ್ದೆಗಳ ಭರ್ತಿಗೆ ಕಾಲ ಕಾಲಕ್ಕೆ ವರದಿ ಸಲ್ಲಿಸುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲೇ 4698
ಹುದ್ದೆ ಖಾಲಿಯಿವೆ. ಹಾಗೆಯೇ ಒಳಾಡಳಿತ ಮತ್ತು ಸಾರಿಗೆಯ ಒಟ್ಟು 37,012 ಹುದ್ದೆಗಳು ಭರ್ತಿಯಾಗಿಯೇ ಇಲ್ಲ.
14,300 ಹುದ್ದೆ ಖಾಲಿ: 2018ರ ಜೂನ್‌ನೊಳಗೆ 14,300 ಮಂದಿ ನೌಕರ, ಸಿಬ್ಬಂದಿ ಸೇವೆಯಿಂದ ನಿವೃತ್ತರಾಗಲಿದ್ದು, ಸರ್ಕಾರಿ ಹುದ್ದೆಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ನಿವೃತ್ತಿ, ಸ್ವಯಂ ನಿವೃತ್ತಿ, ಅಕಾಲಿಕ ಮರಣ ಸೇರಿ ಇತರೆ ಕಾರಣಗಳಿಂದ ತೆರವಾದ ಹುದ್ದೆ ನಿಯಮಿತವಾಗಿ ಭರ್ತಿ ಮಾಡಿಕೊಳ್ಳುವ ಕ್ರಮವನ್ನು ಒಂದೂವರೆ ದಶಕದಿಂದ ಕೈಗೊಳ್ಳದ ಕಾರಣ ನೌಕರರ ಕೊರತೆ ಅನುಭವಿಸುವಂತಾಗಿದೆ.

– ಕೀರ್ತಿಪ್ರಸಾದ್‌ ಎಂ.

ಟಾಪ್ ನ್ಯೂಸ್

ಸಿದ್ದರಾಮಯ್ಯಗೆ ನಿನ್ನ ನೋಡೋಕೆ ಬಂದಿದ್ದೀನಿ ಎಂದ ಪುಟಾಣಿ: ವಿಡಿಯೋ ವೈರಲ್

ಸಿದ್ದರಾಮಯ್ಯಗೆ ನಿನ್ನ ನೋಡೋಕೆ ಬಂದಿದ್ದೀನಿ ಎಂದ ಪುಟಾಣಿ: ವಿಡಿಯೋ ವೈರಲ್

monette dias

ಮದುವೆಯಾಗುವ ಖಯಾಲಿ: 11ನೇ ದಾಂಪತ್ಯ ಮುಗಿಸಿ, 12ನೇ ಮದುವೆಗೆ ಸಿದ್ಧಳಾದ ಮಹಿಳೆ!

ಭಾರತದ ನಾಲ್ಕನೇ ಒಮಿಕ್ರಾನ್ ಪ್ರಕರಣ ಮಹಾರಾಷ್ಟ್ರದ ಡೊಂಬಿವಿಲಿಯಲ್ಲಿ ಪತ್ತೆ

ಭಾರತದ ನಾಲ್ಕನೇ ಒಮಿಕ್ರಾನ್ ಪ್ರಕರಣ ಮಹಾರಾಷ್ಟ್ರದ ಡೊಂಬಿವಿಲಿಯಲ್ಲಿ ಪತ್ತೆ

s-r-patil

ಎಸ್.ಆರ್. ಪಾಟೀಲ್ ಮನವೊಲಿಕೆಗೆ ಕೈ ನಾಯಕರ ಕಸರತ್ತು!

ಭಿಕ್ಷೆ ಬೇಡುವ ಕೈಗಳಿಗೆ ಕೃಷಿ ಕಾರ್ಯ

ಭಿಕ್ಷೆ ಬೇಡುವ ಕೈಗಳಿಗೆ ಕೃಷಿ ಕಾರ್ಯ

rwytju11111111111

ಭಾನುವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಅಮೇಠಿಯಲ್ಲಿ ಎಕೆ-203 ರೈಫ‌ಲ್‌ ಉತ್ಪಾದನೆ

ಅಮೇಠಿಯಲ್ಲಿ ಎಕೆ-203 ರೈಫ‌ಲ್‌ ಉತ್ಪಾದನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

s-r-patil

ಎಸ್.ಆರ್. ಪಾಟೀಲ್ ಮನವೊಲಿಕೆಗೆ ಕೈ ನಾಯಕರ ಕಸರತ್ತು!

ಹೊಸ ವೈರಸ್‌ ಪತ್ತೆ ಹಿನ್ನೆಲೆ: ಸರಕಾರ ಏನೂ ಮಾಡುತ್ತಿಲ್ಲ ಎನ್ನಲಾಗದು

ಹೊಸ ವೈರಸ್‌ ಪತ್ತೆ ಹಿನ್ನೆಲೆ: ಸರಕಾರ ಏನೂ ಮಾಡುತ್ತಿಲ್ಲ ಎನ್ನಲಾಗದು

ಪತಿ-ಪತ್ನಿ ಪ್ರಕರಣಗಳಿಗೆ ವರ್ಗಾವಣೆ ಸಂಕಷ್ಟ

ಪತಿ-ಪತ್ನಿ ಪ್ರಕರಣಗಳಿಗೆ ವರ್ಗಾವಣೆ ಸಂಕಷ್ಟ

ನನ್ನನ್ನು ಸೋಲಿಸಿದವರಿಗೆ ಗರ್ವ ಭಂಗ ಮಾಡಿ : ಚುನಾವಣಾ ಪ್ರಚಾರದಲ್ಲಿ ದೇವೇಗೌಡ ಕರೆ

ನನ್ನನ್ನು ಸೋಲಿಸಿದವರ ಗರ್ವ ಭಂಗ ಮಾಡಿ : ಚುನಾವಣಾ ಪ್ರಚಾರದಲ್ಲಿ ದೇವೇಗೌಡ ಕರೆ

ಬಿಜೆಪಿ, ಜೆಡಿಎಸ್ ವಿರುದ್ದ ಸಿದ್ದು ಹಿಗ್ಗಾಮುಗ್ಗಾ ವಾಗ್ದಾಳಿ

ಎಡಿಯೂರಿನಲ್ಲಿ ಸಿದ್ದು ಚುನಾವಣಾ ಪ್ರಚಾರ ಸಭೆ : ಬಿಜೆಪಿ, ಜೆಡಿಎಸ್ ವಿರುದ್ದ ವಾಗ್ದಾಳಿ

MUST WATCH

udayavani youtube

ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ

udayavani youtube

ನಮ್ಮ ನೌಕಾಪಡೆ ಎಲ್ಲದಕ್ಕೂ ಸನ್ನದ್ಧ !

udayavani youtube

ಸರ್ಕಾರ ಹೇಗೆಲ್ಲಾ ರೈತರ ಬೆಂಬಲಕ್ಕೆ ನಿಂತಿದೆ ?

udayavani youtube

ಬಂಟ್ವಾಳ : ಬೇಟೆಗಾಗಿ ಬಂದು ಹೆದರಿ ಓಡಿದ ಚಿರತೆ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

udayavani youtube

ಚಿಕ್ಕಮಗಳೂರು : ಕಾಫಿ ತೋಟದೊಳಗೆ ನುಗ್ಗಿದ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಾವಲು ವಾಹನ

ಹೊಸ ಸೇರ್ಪಡೆ

1crop

ಜೋಯಿಡಾ: ಆನೆ ದಾಳಿ-ಬೆಳೆ ನಾಶ

gawraw gupta

ದ.ಆಫ್ರಿಕಾದವರ ಮೇಲೆ ವಿಶೇಷ ನಿಗಾ..!

ಸಿದ್ದರಾಮಯ್ಯಗೆ ನಿನ್ನ ನೋಡೋಕೆ ಬಂದಿದ್ದೀನಿ ಎಂದ ಪುಟಾಣಿ: ವಿಡಿಯೋ ವೈರಲ್

ಸಿದ್ದರಾಮಯ್ಯಗೆ ನಿನ್ನ ನೋಡೋಕೆ ಬಂದಿದ್ದೀನಿ ಎಂದ ಪುಟಾಣಿ: ವಿಡಿಯೋ ವೈರಲ್

monette dias

ಮದುವೆಯಾಗುವ ಖಯಾಲಿ: 11ನೇ ದಾಂಪತ್ಯ ಮುಗಿಸಿ, 12ನೇ ಮದುವೆಗೆ ಸಿದ್ಧಳಾದ ಮಹಿಳೆ!

ಭಾರತದ ನಾಲ್ಕನೇ ಒಮಿಕ್ರಾನ್ ಪ್ರಕರಣ ಮಹಾರಾಷ್ಟ್ರದ ಡೊಂಬಿವಿಲಿಯಲ್ಲಿ ಪತ್ತೆ

ಭಾರತದ ನಾಲ್ಕನೇ ಒಮಿಕ್ರಾನ್ ಪ್ರಕರಣ ಮಹಾರಾಷ್ಟ್ರದ ಡೊಂಬಿವಿಲಿಯಲ್ಲಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.