ನಾನೇ ಒಂದು ವರ್ಷ ಕಾದಿದ್ದೆನೆ, ಮುಂದೆ ಎಲ್ಲರೂ ಸಚಿವರಾಗುತ್ತಾರೆ: ಉಮೇಶ್ ಕತ್ತಿ
Team Udayavani, Jan 14, 2021, 12:39 PM IST
ಬೆಂಗಳೂರು: ಮಂತ್ರಿಯಾಗಲು ನಾನೇ ಒಂದು ವರ್ಷ ಕಾದಿದ್ದೆನೆ. ಈಗ ಮಂತ್ರಿ ಆಗಿದ್ದೇನೆ. ವಿಶ್ವನಾಥ್, ಮುನಿರತ್ನರಿಗೆ ಕೋರ್ಟ್ ವಿಚಾರದಲ್ಲಿ ತಡೆಯಿದೆ. ಆದು ಸರಿಯಾದ ಬಳಿಕ ಅವರೂ ಸಚಿವರಾಗಲಿದ್ದಾರೆ. ಮುಂದಿನ ದಿನಗಳಲ್ಲಿ 224 ಜನ ಶಾಸಕರೂ ಮಂತ್ರಿಯಾಗಲಿದ್ದಾರೆ ಎಂದು ನೂತನ ಸಚಿವ ಉಮೇಶ್ ಕತ್ತಿ ಹೇಳಿದರು.
ವಿಧಾನ ಸೌಧದಲ್ಲಿ ಕಛೇರಿ ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೆ ನನಗೆ ಯಾವುದೇ ಇಲಾಖೆ ಹಂಚಿಕೆಯಾಗಿಲ್ಲ. ಹಂಚಿಕೆಯಾದ ನಂತರ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತೇನೆ. ಈ ಹಿಂದೆಯೂ ಹಲವು ಇಲಾಖೆಗಳ ಸಚಿವರಾಗಿ ಕೆಲಸ ಮಾಡಿದ್ದೇನೆ. ಸಿಎಂ ಯಾವ ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ ಎಂದರು.
ಇದನ್ನೂ ಓದಿ:ದೂರಿದ್ದರೆ ದೆಹಲಿಗೆ ಹೋಗಿ ಕೊಡಿ, ನನಗೇನು ಅಭ್ಯಂತರವಿಲ್ಲ: ಬಿಎಸ್ ವೈ ಖಡಕ್ ನುಡಿ
ಬ್ಲಾಕ್ ಮೇಲ್ ಮಾಡಿ ಮಂತ್ರಿ ಆಗಿದ್ದಾರೆ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಉಮೇಶ್ ಕತ್ತಿ ನಿರಾಕರಿಸಿದರು. ಇಂದು ಮಕರ ಸಂಕ್ರಮಣ ಒಳ್ಳೆಯ ಯೋಚನೆ ಮಾಡಿ, ಒಳ್ಳೆಯ ಕೆಲಸ ಮಾಡಿ. ಎಲ್ಲರ ಕುಟುಂಬಕ್ಕೂ ಒಳಿತಾಗಲಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಾತಿ ಸಮಾವೇಶ ಮಾಡುವ ಸಿದ್ಧರಾಮಯ್ಯ ಡೋಂಗಿ ಜ್ಯಾತ್ಯತೀತ ನಾಯಕ: ಎಚ್.ಡಿ.ಕುಮಾರಸ್ವಾಮಿ
ಸೊರಬ: ನೂತನ ಗ್ರಾಮ ಪಂಚಾಯ್ತಿ ಸ್ಥಾಪನೆಗೆ ಒತ್ತಾಯಿಸಿ ಯಲಸಿ ಗ್ರಾಮಸ್ಥರಿಂದ ಮನವಿ
ಕುಷ್ಟಗಿ : ಮದುವೆ ನಿಶ್ಚಿತಾರ್ಥಗೊಂಡಿದ್ದ ಯುವ ಜೋಡಿ ಆತ್ಮಹತ್ಯೆ : ಕಾರಣ ನಿಗೂಢ
ಆಸ್ಪತ್ರೆಗಳಲ್ಲಿ ನಾರ್ಮಲ್ ಹೆರಿಗೆಗಿಂತ ಸಿಸೇರಿಯನ್ ಹೆರಿಗೆ ಹೆಚ್ಚಳ : ಅಡಳಿತಾಧಿಕಾರಿ ಕಳವಳ
ಫೇಸ್ ಬುಕ್ ನಲ್ಲಿ ಹಾಕಿದ್ದ ಸೆಲ್ಫಿ ಪೋಸ್ಟ್ ನಿಂದ 5 ವರ್ಷದ ಬಳಿಕ ಅರೆಸ್ಟ್ ಆದ ಕೊಲೆ ಆರೋಪಿ!