ಕೆಎಫ್ಡಿ ನಿಯಂತ್ರಣಕ್ಕೆ ತಜ್ಞರ ಶಿಫಾರಸು

Team Udayavani, Aug 22, 2019, 3:06 AM IST

kfd-niyantrana

ಬೆಂಗಳೂರು: ಮಂಗನ ಕಾಯಿಲೆ (ಕೆಎಫ್ಡಿ) ನಿಯಂತ್ರಿಸುವ ನಿಟ್ಟಿನಲ್ಲಿ ಸೋಂಕಿನ ಶೀಘ್ರ ಪತ್ತೆಗೆ ಅಗತ್ಯವಿರುವ ಪ್ರಯೋಗಾಲಯ ವಿಸ್ತರಣೆ ಹಾಗೂ ರೋಗಿಗಳಿಗೆ ನೀಡಲು ನಿರ್ದಿಷ್ಟ ಲಸಿಕೆ ಬಗ್ಗೆ ಸಂಶೋಧನೆಯಾಗಬೇಕು ಎಂದು ರಾಷ್ಟ್ರಮಟ್ಟದ ಕಾರ್ಯಾಗಾರದಲ್ಲಿ ತಜ್ಞರು ಶಿಫಾರಸು ಮಾಡಿದರು.

ಮೊದಲು ಒಂದು ಊರಿನಲ್ಲಿ ಕಾಣಿಸಿಕೊಂಡಿದ್ದ ಮಂಗನ ಕಾಯಿಲೆ ಐದು ರಾಜ್ಯಗಳಿಗೆ ವ್ಯಾಪಿಸಿದ ಹಿನ್ನೆಲೆಯಲ್ಲಿ ಸೋಂ ಕು ನಿಯಂತ್ರಣಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಲಲಿತ್‌ ಅಶೋಕ್‌ ಹೋಟೆಲ್‌ನಲ್ಲಿ ಆ.20, 21ರಂದು ರಾಷ್ಟ್ರೀಯ ಕಾರ್ಯಾಗಾರ ನಡೆಯಿತು.

ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡಿನ ಆರೋಗ್ಯ, ಪಶು ಸಂಗೋಪನೆ, ಅರಣ್ಯ ಇಲಾಖೆ (ವನ್ಯಜೀವಿ ವಿಭಾಗ), ಪಶು ವೈದ್ಯಕೀಯ ಸಂಶೋಧನೆ ಸಂಸ್ಥೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರಾಷ್ಟ್ರಮಟ್ಟದ ಸಂಶೋಧನಾ ಸಂಸ್ಥೆಗಳ ತಜ್ಞರು ಇದರಲ್ಲಿ ಭಾಗಹಿಸಿದ್ದರು.

ಸೋಂಕು ಪತ್ತೆ, ನಿಯಂತ್ರಣ, ರೋಗಿಗಳ ನಿರ್ವಹಣೆ, ಭವಿಷ್ಯದಲ್ಲಿ ಆಗಬೇಕಿರುವ ಸಂಶೋಧನೆಗಳು, ಸರ್ಕಾರದ ಇತರ ಇಲಾಖೆಗಳು ನೀಡಬೇಕಾದ ಸೌಲಭ್ಯಗಳು ಹಾಗೂ ಅವರ ಕಾರ್ಯ ಚಟುವಟಿಕೆ ಕುರಿತು ಚರ್ಚೆ ನಡೆಸಲಾಯಿತು.

ಪ್ರಮುಖ ಶಿಫಾರಸುಗಳು
-ಮಂಗನ ಕಾಯಿಲೆ ಕಾಣಿಸಿಕೊಂಡಿರುವ ಐದು ರಾಜ್ಯಗಳು ಒಟ್ಟಾಗಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು.

-ಮಂಗನ ಕಾಯಿಲೆ ಹಾಗೂ ಡೆಂಘೀ ರೋಗಿಗಳ ಚೇತರಿಕೆಗೆ ನಿರ್ದಿಷ್ಟ ಹಾಗೂ ಪರಿಣಾಮಕಾರಿ ಲಸಿಕೆಯನ್ನು ಕಂಡು ಹಿಡಿಯಬೇಕು.

-ರಾಜ್ಯದಲ್ಲಿ ಸದ್ಯ ಬೆಂಗಳೂರು, ಶಿವಮೊಗ್ಗ ಹಾಗೂ ಮಣಿಪಾಲದಲ್ಲಿ ಮಾತ್ರ ಸೋಂಕು ಪತ್ತೆ ಪ್ರಯೋಗಾಲವಿದ್ದು, ಅವುಗಳ ಸಂಖ್ಯೆ ಹೆಚ್ಚಿಸಬೇಕು. ಸೋಂಕು ಪತ್ತೆಯನ್ನು ಪ್ರಾಥಮಿಕ ಹಂತದಲ್ಲಿ ಸಾಧ್ಯ ಮಾಡುವಂತಹ ತಂತ್ರಜ್ಞಾನ ಕಂಡುಕೊಳ್ಳಬೇಕು.

-ಮುಂದಿನ ವರ್ಷ 5.5 ಲಕ್ಷ ಕೆಎಫ್ಡಿ ಲಸಿಕೆಗಳು ಅಗತ್ಯವಿದ್ದು, ಉತ್ಪಾದನೆ ಹೆಚ್ಚಿಸಬೇಕು.

-ನಿರ್ದಿಷ್ಟ ಸ್ಥಳಗಳಲ್ಲಿ ಸೋಂಕು ಹೆಚ್ಚಾದಾಗ ರೋಗಿಗಳನ್ನು ನಿಭಾಯಿಸುವ ಕುರಿತು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಿಲ್ಲಾಸ್ಪತ್ರೆಗಳವರೆಗೂ ಪ್ರೊಟೋಕಾಲ್‌ ಸಿದ್ಧಪಡಿಸಬೇಕು.

-ಸದ್ಯ ಸಾರ್ವಜನಿಕರಿಗೆ ನೀಡುವ ಲಸಿಕೆಯು ನೋವಿನಾಂಶ ಉಂಟು ಮಾಡುತ್ತಿದ್ದು, ನೋವು ರಹಿತ ಹಾಗೂ ಉತ್ಕೃಷ್ಟ ಮಟ್ಟದ ಲಸಿಕೆ ಕಂಡು ಹಿಡಿಯಬೇಕು.

-ಮಂಗನ ಕಾಯಿಲೆ ಕಂಡು ಬರುವ ಪ್ರದೇಶಗಳಲ್ಲಿ ಉಣ್ಣೆ ಸಂಗ್ರಹಣೆ, ಸಂಶೋಧನೆ ಹೆಚ್ಚಿಸಬೇಕು ಹಾಗೂ ಉಣ್ಣೆ ನಾಶಕ್ಕೆ ಉತ್ಕೃಷ್ಟ ರಾಸಾಯನಿಕ ಬಳಸಲು ಕ್ರಮ ವಹಿಸಬೇಕು.

ಟಾಪ್ ನ್ಯೂಸ್

ಬೆಂಗಳೂರಿನ ಗೆಳೆಯನೊಂದಿಗೆ ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಜೆಎಫ್ ಬೆಡಗಿ

ಬೆಂಗಳೂರಿನ ಗೆಳೆಯನೊಂದಿಗೆ ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಜೆಎಫ್ ಬೆಡಗಿ

ಆನ್‌ಲೈನ್‌ ತರಗತಿಯಲ್ಲಿ ಅಶ್ಲೀಲ ನೃತ್ಯ: ವರದಿ ಕೇಳಿದ ಶಿಕ್ಷಣ ಸಚಿವರು

ಆನ್‌ಲೈನ್‌ ತರಗತಿಯಲ್ಲಿ ಅಶ್ಲೀಲ ನೃತ್ಯ: ವರದಿ ಕೇಳಿದ ಶಿಕ್ಷಣ ಸಚಿವರು

ಕಾಂಗ್ರೆಸ್‌ ಅಭ್ಯರ್ಥಿ ಸೋಲಿಸಲು ಸಿದ್ದರಾಮಯ್ಯ ಎಷ್ಟು ಹಣ ಪಡೆದರು?ಎಚ್‌.ಡಿ.ಕುಮಾರಸ್ವಾಮಿ

ಕಾಂಗ್ರೆಸ್‌ ಅಭ್ಯರ್ಥಿ ಸೋಲಿಸಲು ಸಿದ್ದರಾಮಯ್ಯ ಎಷ್ಟು ಹಣ ಪಡೆದರು?ಎಚ್‌.ಡಿ.ಕುಮಾರಸ್ವಾಮಿ

ನಾನು ಪಕ್ಷವನ್ನು ಯಾಕೆ ಬಿಟ್ಟೆ ಅಂತ ಕಾಂಗ್ರೆಸ್ ಬಳಿ ಕೇಳಿ: ಬಿಜೆಪಿ ಸೇರ್ಪಡೆಗೊಂಡ ಕಿಶೋರ್

ನಾನು ಪಕ್ಷವನ್ನು ಯಾಕೆ ಬಿಟ್ಟೆ ಅಂತ ಕಾಂಗ್ರೆಸ್ ಬಳಿ ಕೇಳಿ: ಬಿಜೆಪಿ ಸೇರ್ಪಡೆಗೊಂಡ ಕಿಶೋರ್

sdghgjhg

ಸುಳ್ಯ: ನಾಪತ್ತೆಯಾಗಿದ್ದ ಅಸ್ಸಾಂ ಮೂಲದ ವಿವಾಹಿತ ಮಹಿಳೆ ಪ್ರಿಯಕರನೊಂದಿಗೆ ಪತ್ತೆ

ಶೂಟಿಂಗ್‌ನಲ್ಲಿ ಬಿಝಿಯಾದ ‘ಬಹದ್ದೂರ್‌ ಗಂಡು’

ಶೂಟಿಂಗ್‌ ನಲ್ಲಿ ಬಿಝಿಯಾದ ‘ಬಹದ್ದೂರ್‌ ಗಂಡು’

1-dffds

ಮೇಲ್ಮನೆ ವಿಪಕ್ಷ ಸ್ಥಾನ ತಪ್ಪಿದ್ದಕ್ಕೆ ಇಬ್ರಾಹಿಂ ಕೋಪ, ಕೈ ಗೆ ಗುಡ್ ಬೈಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್‌ ಅಭ್ಯರ್ಥಿ ಸೋಲಿಸಲು ಸಿದ್ದರಾಮಯ್ಯ ಎಷ್ಟು ಹಣ ಪಡೆದರು?ಎಚ್‌.ಡಿ.ಕುಮಾರಸ್ವಾಮಿ

ಕಾಂಗ್ರೆಸ್‌ ಅಭ್ಯರ್ಥಿ ಸೋಲಿಸಲು ಸಿದ್ದರಾಮಯ್ಯ ಎಷ್ಟು ಹಣ ಪಡೆದರು?ಎಚ್‌.ಡಿ.ಕುಮಾರಸ್ವಾಮಿ

1-dffds

ಮೇಲ್ಮನೆ ವಿಪಕ್ಷ ಸ್ಥಾನ ತಪ್ಪಿದ್ದಕ್ಕೆ ಇಬ್ರಾಹಿಂ ಕೋಪ, ಕೈ ಗೆ ಗುಡ್ ಬೈ

k gopalaiah

ಬಿಜೆಪಿ ನಮಗೆ ಎಲ್ಲವನ್ನೂ ಕೊಟ್ಟಿದೆ, ಬೇರೆ ಪಕ್ಷಕ್ಕೆ ನಾವ್ಯಾರೂ ಅರ್ಜಿ ಹಾಕಿಲ್ಲ: ಗೋಪಾಲಯ್ಯ

cm

ಸಂಪುಟ ಸಭೆಯ ಅಜೆಂಡಾದಲ್ಲಿ ಏನೇನು ಇದೆ ?

ನನಗೆ ಸಚಿವ ಸ್ಥಾನ ಬೇಕೇ ಬೇಕು: ಪಟ್ಟು ಹಿಡಿದ ಉಪ ಸ್ಪೀಕರ್ ಆನಂದ್ ಮಾಮನಿ

ನನಗೆ ಸಚಿವ ಸ್ಥಾನ ಬೇಕೇ ಬೇಕು: ಪಟ್ಟು ಹಿಡಿದ ಉಪ ಸ್ಪೀಕರ್ ಆನಂದ್ ಮಾಮನಿ

MUST WATCH

udayavani youtube

ರೈತರು ಇವಿಷ್ಟನ್ನು ಗಮನದಲ್ಲಿಟ್ಟುಕೊಳ್ಳಬೇಕು

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

ಹೊಸ ಸೇರ್ಪಡೆ

17accident

ಆಟೋ ಪಲ್ಟಿ: ಶಿಕ್ಷಕಿಯರಿಗೆ ಗಾಯ

ಬೆಂಗಳೂರಿನ ಗೆಳೆಯನೊಂದಿಗೆ ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಜೆಎಫ್ ಬೆಡಗಿ

ಬೆಂಗಳೂರಿನ ಗೆಳೆಯನೊಂದಿಗೆ ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಜೆಎಫ್ ಬೆಡಗಿ

16bus

ಗುರಿ ಆಶ್ರಮ ರಸ್ತೆಯ ಬಸ್‌ ತಂಗುದಾಣ ಲೋಕಾರ್ಪಣೆ

ಆನ್‌ಲೈನ್‌ ತರಗತಿಯಲ್ಲಿ ಅಶ್ಲೀಲ ನೃತ್ಯ: ವರದಿ ಕೇಳಿದ ಶಿಕ್ಷಣ ಸಚಿವರು

ಆನ್‌ಲೈನ್‌ ತರಗತಿಯಲ್ಲಿ ಅಶ್ಲೀಲ ನೃತ್ಯ: ವರದಿ ಕೇಳಿದ ಶಿಕ್ಷಣ ಸಚಿವರು

15anganavadi

ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಹರ ಆಯ್ಕೆ ಮಾಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.