ಫೇಸ್ಬುಕ್ ಲವ್, ರೇಪ್!; ಮೈಸೂರಿನಲ್ಲಿ ಟೆಕ್ಕಿಯ ಬಂಧನ
Team Udayavani, Jul 19, 2017, 10:23 AM IST
ಮೈಸೂರು: ವಿವಾಹವಾಗುವುದಾಗಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ವಂಚಿಸಿದ ಪ್ರಕರಣದಲ್ಲಿ ಗುಜರಾತ್ ಮೂಲದ ಟೆಕ್ಕಿಯೊಬ್ಬನನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ.
ಕುವೆಂಪುನಗರದ ಎ ಬ್ಲಾಕ್ನಲ್ಲಿ ಘಟನೆ ನಡೆದಿದ್ದು, 6 ತಿಂಗಳಿನಿಂದ ಫೇಸ್ಬುಕ್ನಲ್ಲಿ ಸ್ನೇಹಹೊಂದಿದ್ದಪ್ರೇಮ್ ಪಟೇಲ್ (28) ಎಂಬಾತ ಮದುವೆಯಾಗುವ ಮಾತಿನೊಂದಿಗೆ ದೇಹ ಸಂಪರ್ಕ ಹೊಂದಿ ವಂಚನೆ ನಡೆಸಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ.
ಪ್ರಕರಣ ದಾಖಲಿಸಿಕೊಂಡಿರುವ ಕುವೆಂಪುನಗರ ಪೊಲೀಸರು ಆರೋಪಿ ಪ್ರೇಮ್ನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಈತ ಇನ್ನೋರ್ವ ಯುವತಿಯೊಂದಿಗೂ ದೇಹ ಸಂಪರ್ಕ ಹೊಂದಿದ್ದ ಎಂದು ಹೇಳಲಾಗಿದೆ.