ಸುಮಲತಾ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌

Team Udayavani, Sep 7, 2019, 3:00 AM IST

ಬೆಂಗಳೂರು: “ನನ್ನ ಹೆಸರಿನಲ್ಲಿ ಕೆಲ ದುಷ್ಕರ್ಮಿಗಳು ನಕಲಿ ಫೇಸ್‌ಬುಕ್‌ ಪೇಜ್‌ ತೆರೆದು ವ್ಯಕ್ತಿತ್ವಕ್ಕೆ ಧಕ್ಕೆ ತರುವ ವಿಚಾರಗಳನ್ನು ಪ್ರಕಟಿಸುತ್ತಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಕೋರಿ ಸಂಸದೆ ಸುಮಲತಾ ಅವರು ನಗರ ಸೈಬರ್‌ ಕ್ರೈಂ ಪೊಲೀಸರಿಗೆ ಶುಕ್ರವಾರ ದೂರು ನೀಡಿದ್ದಾರೆ.

ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಅವರನ್ನು ಖುದ್ದು ಭೇಟಿಯಾಗಿ ದೂರು ನೀಡಿರುವ ಸುಮಲತಾ, ನಕಲಿ ಫೇಸ್‌ಬುಕ್‌ ಖಾತೆಗಳನ್ನು ಸೃಷ್ಟಿಸಿ, ನನ್ನ ವ್ಯಕ್ತಿತ್ವದ ತೇಜೋವಧೆ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ವಹಿಸುವಂತೆ ಕೋರಿದ್ದಾರೆ. ದೂರು ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸುಮಲತಾ, ಚುನಾವಣೆಯ ಸಂದರ್ಭದಿಂದಲೂ ಕೆಲವರು ನನ್ನ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆಗಳನ್ನು ತೆರೆದು, ಇಲ್ಲಸಲ್ಲದ ವಿಚಾರಗಳನ್ನು ಹರಿ ಬಿಡುತ್ತಿದ್ದಾರೆ.

ರಾಜಕೀಯ ಬೆಳವಣಿಗೆಗಳ ಬಗ್ಗೆ ನಾನು ಪ್ರತಿಕ್ರಿಯಿಸಿದ ರೀತಿ, ಬರವಣಿಗೆಗಳನ್ನು ಬರೆಯುತ್ತಾರೆ. ಈ ಪೈಕಿ ಕೆಲವು ಪೇಜ್‌ಗಳನ್ನು ಎಚ್ಚರಿಕೆ ನೀಡಿ ಸ್ಥಗಿತಗೊಳಿಸಲಾಯಿತು. ಆದರೂ ಇನ್ನೂ ಕೆಲವು ಪೇಜ್‌ಗಳು ಅದೇ ರೀತಿಯ ಕೆಲಸ ಮಾಡುತ್ತಿವೆ. ಎಚ್ಚರಿಕೆ ನೀಡಿದರೂ ಸ್ಥಗಿತಗೊಳಿಸಿಲ್ಲ. ಹೀಗಾಗಿ, ದೂರು ನೀಡಲಾಗಿದೆ ಎಂದು ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ