Udayavni Special

ಡಾ.ಅಶ್ವತ್ಥನಾರಾಯಣ ನಿರ್ವಹಿಸಿದ್ದ ಇಲಾಖೆಗಳ ಕಡತ ಬಾಕಿ ಶೂನ್ಯ: ಎಲ್ಲ 3,760 ಕಡತ ವಿಲೇವಾರಿ

Team Udayavani, Jul 29, 2021, 5:00 PM IST

cn-ashwath-narayan

ಬೆಂಗಳೂರು: ಉನ್ನತ ಶಿಕ್ಷಣ, ಐಟಿ- ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವರಾಗಿದ್ದ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿಎನ್‌ ಅಶ್ವತ್ಥನಾರಾಯಣ ಅವರು 700 ದಿನಗಳ ತಮ್ಮ ಅಧಿಕಾರಾವಧಿಯಲ್ಲಿ ಒಟ್ಟು 3,760 ಕಡತಗಳನ್ನು ವಿಲೇವಾರಿ ಮಾಡಿ‌ ದಾಖಲೆ ಸ್ಥಾಪಿಸಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ಅವರು 26ರಂದು ರಾಜೀನಾಮೆ ನೀಡುವವರೆಗೆ ಅಶ್ವತ್ಥನಾರಾಯಣ ಅವರು ತಮ್ಮ ಇಲಾಖೆಗಳಲ್ಲಿದ್ದ ಎಲ್ಲ ಕಡತಗಳನ್ನು ವಿಲೇವಾರಿ ಮಾಡಿ, ಬಾಕಿ ಕಡತಗಳ ಪ್ರಮಾಣವನ್ನು ಶೂನ್ಯಕ್ಕೆ ತಂದಿದ್ದಾರೆ.

ಇ-ಆಫೀಸ್‌ (ಕಾಗದ ರಹಿತ ಕಡತ) ವ್ಯವಸ್ಥೆಯ ಮೂಲಕವೂ ಸಾವಿರಾರು ಕಡತಗಳನ್ನು ಪಾರದರ್ಶಕವಾಗಿ ವಿಲೇವಾರಿ ಮಾಡಲಾಗಿದೆ. ಇ- ಕಚೇರಿ ಮೂಲಕವೇ ವಿಶ್ವವಿದ್ಯಾಲಯಗಳ ಕಡತಗಳ ವಿಲೇವಾರಿ ಕೂಡ ಆರಂಭವಾಗಿದೆ.

ಒಟ್ಟು 3,760 ಕಡತ ವಿಲೇವಾರಿ : ಅಶ್ವತ್ಥನಾರಾಯಣ ಅವರು ತಾವು ಅಧಿಕಾರ ಸ್ವೀಕರಿಸಿದಾಗಿನಿಂದ ನಿರ್ಗಮಿಸುವ ದಿನದವರೆಗೂ ಒಟ್ಟು 3,760 ಕಡತಗಳನ್ನು ವಿಲೇವಾರಿ ಮಾಡಿದ್ದಾರೆ. ಬಂದ ಕಡತಗಳನ್ನು ಪರಿಶೀಲಿಸಿ ತ್ವರಿತವಾಗಿ ವಿಲೇವಾರಿ ಮಾಡಿದ್ದಾರೆ.

ಉನ್ನತ ಶಿಕ್ಷಣ ಇಲಾಖೆಯಲ್ಲಿ ಒಟ್ಟು 1,746 ಮ್ಯಾನುಯಲ್ ಕಡತಗಳು ಬಂದಿದ್ದು, ಅಷ್ಟನ್ನೂ ಅಶ್ವತ್ಥನಾರಾಯಣ ಅವರು ವಿಲೇವಾರಿ ಮಾಡಿದ್ದಾರೆ. ಜತೆಗೆ, 1,441 ಇ-ಕಡತಗಳು ಬಂದಿದ್ದು, ಅವೂ ವಿಲೇವಾರಿಯಾಗಿವೆ.

ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ-ಬಿಟಿ ಇಲಾಖೆಯಲ್ಲಿ 62 ಮ್ಯಾನುಯಲ್ ಕಡತಗಳು, 86 ಇ-ಕಡತಗಳು ಮಾಜಿ ಡಿಸಿಎಂ ಅವರಿಂದ ವಿಲೇವಾರಿ ಆಗಿವೆ. ಕೌಶಲ್ಯಾಭಿವೃದ್ಧಿ ಇಲಾಖೆಯಲ್ಲಿ 84 ಮ್ಯಾನುಯಲ್ ಕಡತಗಳು, 96 ಇ-ಕಡತಗಳು ಬಂದಿದ್ದವು. ವೈದ್ಯಕೀಯ ಶಿಕ್ಷಣ ಇಲಾಖೆಗೆ ಬಂದಿದ್ದ 245 ಮ್ಯಾನುಯಲ್ ಕಡತಗಳನ್ನೂ ಡಾ.ಅಶ್ವತ್ಥನಾರಾಯಣ ಅವರು ಕ್ಲಿಯರ್‌ ಮಾಡಿದ್ದಾರೆ.

ಒಟ್ಟಾರೆಯಾಗಿ ಅವರು 2,137 ಮ್ಯಾನುಯಲ್ ಕಡತಗಳು, 1,633 ಇ-ಕಡತಗಳನ್ನು ಬಾಕಿ ಇಟ್ಟುಕೊಳ್ಳದೇ ವಿಲೇವಾರಿ ಮಾಡಿದ್ದಾರೆ.

ಇದನ್ನೂ ಓದಿ:ಮತ್ತೆ ಪುಟಿದೆದ್ದ ವಹಿವಾಟು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 209 ಅಂಕ ಏರಿಕೆ

ಯಾವುದೇ ಕೆಲಸವನ್ನು ಬಾಕಿ ಇಟ್ಟುಕೊಳ್ಳುವುದು ನನ್ನ ಜಾಯಮಾನವಲ್ಲ. ಬಂದ ಕಡತವನ್ನೂ ಅಧಿಕಾರಿಗಳ ಜತೆ ಚರ್ಚೆ ಮಾಡಿ ಸಾಧ್ಯವಾದಷ್ಟು ತ್ವರಿತವಾಗಿ ಕ್ಲಿಯರ್‌ ಮಾಡಿದ್ದೇನೆ. ಪ್ರವಾಸವಿದ್ದಾಗ ಒಂದು ಅಥವಾ ಎರಡು ದಿನ ತಡವಾಗಿರುವುದು ಬಿಟ್ಟರೆ ಬಾಕಿ ಇಟ್ಟುಕೊಳ್ಳುವ ಪ್ರಶ್ನೆಯೇ ಇರಲಿಲ್ಲ. ಇ-ಆಫೀಸ್‌ ವ್ಯವಸ್ಥೆಯಿಂದ ಅನೇಕ ಫೈಲುಗಳು ವೇಗವಾಗಿ ವಿಲೇವಾರಿ ಆಗಿವೆ. ಇದರಿಂದ ನಾನು ನಿರ್ವಹಣೆ ಮಾಡುತ್ತಿದ್ದ ಎಲ್ಲ ಇಲಾಖೆಗಳಲ್ಲಿ ಕ್ಷಮತೆ ಹೆಚ್ಚಾಗಿದೆ. ಕಡತ ವಿಲೇವಾರಿಯನ್ನು ತ್ವರಿತವಾಗಿ ವಿಲೇವಾರಿ ಮಾಡುವ ಸಂಬಂಧ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಆಸಕ್ತಿ ತೋರಿದ್ದು ಇದು ಒಳ್ಳೆ ಬೆಳವಣಿಗೆ. ಇದರಿಂದ ಪಾರದರ್ಶಕತೆ ಬರುತ್ತೆ ಎಂಬುದು ನನ್ನ ನಂಬಿಕೆ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ಟಾಪ್ ನ್ಯೂಸ್

2022ರ ಆಸ್ಕರ್‌ ಅರ್ಹತಾ ಪಟ್ಟಿಯಲ್ಲಿ “ಮಂಡೇಲಾ’, “ನಯತ್ತು’ ಚಿತ್ರ

2022ರ ಆಸ್ಕರ್‌ ಅರ್ಹತಾ ಪಟ್ಟಿಯಲ್ಲಿ “ಮಂಡೇಲಾ’, “ನಯತ್ತು’ ಚಿತ್ರ

ಟ್ರಂಪ್‌ರಿಂದ “ಟ್ರಾತ್‌ ಸೋಷಿಯಲ್‌’ ಎಂಬ ಹೆಸರಿನಲ್ಲಿ ಪ್ರತ್ಯೇಕ ಸಾಮಾಜಿಕ ಜಾಲತಾಣ

ಟ್ರಂಪ್‌ರಿಂದ “ಟ್ರಾತ್‌ ಸೋಷಿಯಲ್‌’ ಎಂಬ ಹೆಸರಿನಲ್ಲಿ ಪ್ರತ್ಯೇಕ ಸಾಮಾಜಿಕ ಜಾಲತಾಣ

ಗತಿಶಕ್ತಿ ಯೋಜನೆಗೆ ಕೇಂದ್ರ ಸಂಪುಟ ಅಸ್ತು: ಕೇಂದ್ರ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ ಒಪ್ಪಿಗೆ

ಗತಿಶಕ್ತಿ ಯೋಜನೆಗೆ ಕೇಂದ್ರ ಸಂಪುಟ ಅಸ್ತು: ಕೇಂದ್ರ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ ಒಪ್ಪಿಗೆ

ಪ್ರಾಥಮಿಕ ತರಗತಿ ಆರಂಭಕ್ಕೆ ಮಾರ್ಗಸೂಚಿ

ಪ್ರಾಥಮಿಕ ತರಗತಿ ಆರಂಭಕ್ಕೆ ಮಾರ್ಗಸೂಚಿ

ಉ.ಪ್ರ.ದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌, ಸ್ಕೂಟಿ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌, ಸ್ಕೂಟಿ

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ : ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಿಂಧು

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌ : ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಿಂಧು

ಧರ್ಮಗಳನ್ನು ಒಡೆಯುವುದೇ ಕಾಂಗ್ರೆಸ್ ಪಕ್ಷದವರ ಕೆಲಸ ಸಿಎಂ ಬೊಮಾಯಿ ಆರೋಪ

ಧರ್ಮಗಳನ್ನು ಒಡೆಯುವುದೇ ಕಾಂಗ್ರೆಸ್ ಪಕ್ಷದವರ ಕೆಲಸ ಸಿಎಂ ಬೊಮ್ಮಾಯಿ ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಾಥಮಿಕ ತರಗತಿ ಆರಂಭಕ್ಕೆ ಮಾರ್ಗಸೂಚಿ

ಪ್ರಾಥಮಿಕ ತರಗತಿ ಆರಂಭಕ್ಕೆ ಮಾರ್ಗಸೂಚಿ

ಧರ್ಮಗಳನ್ನು ಒಡೆಯುವುದೇ ಕಾಂಗ್ರೆಸ್ ಪಕ್ಷದವರ ಕೆಲಸ ಸಿಎಂ ಬೊಮಾಯಿ ಆರೋಪ

ಧರ್ಮಗಳನ್ನು ಒಡೆಯುವುದೇ ಕಾಂಗ್ರೆಸ್ ಪಕ್ಷದವರ ಕೆಲಸ ಸಿಎಂ ಬೊಮ್ಮಾಯಿ ಆರೋಪ

80 ಟನ್‌ ಹೆರಾಯಿನ್‌ ಯಾರದ್ದು ಎಂಬುದು ಕಟೀಲ್‌ ಉತ್ತರಿಸಲಿ : ಹರಿಪ್ರಸಾದ್‌

80 ಟನ್‌ ಹೆರಾಯಿನ್‌ ಯಾರದ್ದು ಎಂಬುದು ಕಟೀಲ್‌ ಉತ್ತರಿಸಲಿ : ಹರಿಪ್ರಸಾದ್‌

ಕೋವಿಡ್ : ರಾಜ್ಯದಲ್ಲಿಂದು 365 ಹೊಸ ಪ್ರಕರಣಗಳು ಪತ್ತೆ | 443 ಸೋಂಕಿತರು ಗುಣಮುಖ

ಕೋವಿಡ್ : ರಾಜ್ಯದಲ್ಲಿಂದು 365 ಹೊಸ ಪ್ರಕರಣಗಳು ಪತ್ತೆ | 443 ಸೋಂಕಿತರು ಗುಣಮುಖ

nirani

ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ, ಉದ್ಯೋಗಗಳ ಸೃಷ್ಟಿ: ನಿರಾಣಿ ವಿಶ್ವಾಸ

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

2022ರ ಆಸ್ಕರ್‌ ಅರ್ಹತಾ ಪಟ್ಟಿಯಲ್ಲಿ “ಮಂಡೇಲಾ’, “ನಯತ್ತು’ ಚಿತ್ರ

2022ರ ಆಸ್ಕರ್‌ ಅರ್ಹತಾ ಪಟ್ಟಿಯಲ್ಲಿ “ಮಂಡೇಲಾ’, “ನಯತ್ತು’ ಚಿತ್ರ

ಟ್ರಂಪ್‌ರಿಂದ “ಟ್ರಾತ್‌ ಸೋಷಿಯಲ್‌’ ಎಂಬ ಹೆಸರಿನಲ್ಲಿ ಪ್ರತ್ಯೇಕ ಸಾಮಾಜಿಕ ಜಾಲತಾಣ

ಟ್ರಂಪ್‌ರಿಂದ “ಟ್ರಾತ್‌ ಸೋಷಿಯಲ್‌’ ಎಂಬ ಹೆಸರಿನಲ್ಲಿ ಪ್ರತ್ಯೇಕ ಸಾಮಾಜಿಕ ಜಾಲತಾಣ

ಗತಿಶಕ್ತಿ ಯೋಜನೆಗೆ ಕೇಂದ್ರ ಸಂಪುಟ ಅಸ್ತು: ಕೇಂದ್ರ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ ಒಪ್ಪಿಗೆ

ಗತಿಶಕ್ತಿ ಯೋಜನೆಗೆ ಕೇಂದ್ರ ಸಂಪುಟ ಅಸ್ತು: ಕೇಂದ್ರ ಆರ್ಥಿಕ ವ್ಯವಹಾರಗಳ ಸಭೆಯಲ್ಲಿ ಒಪ್ಪಿಗೆ

ಪ್ರಾಥಮಿಕ ತರಗತಿ ಆರಂಭಕ್ಕೆ ಮಾರ್ಗಸೂಚಿ

ಪ್ರಾಥಮಿಕ ತರಗತಿ ಆರಂಭಕ್ಕೆ ಮಾರ್ಗಸೂಚಿ

ಉ.ಪ್ರ.ದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌, ಸ್ಕೂಟಿ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್‌ಫೋನ್‌, ಸ್ಕೂಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.