ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಫಲಿತಾಂಶ ಪ್ರಕಟ
Team Udayavani, Jun 30, 2019, 3:00 AM IST
ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಜೈರಾಜ್ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಳಿದಂತೆ ಇತರೆ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಉಮೇಶ್ ಬಣಕಾರ್ (ನಿರ್ಮಾಪಕರ ವಲಯ), ಬಿ.ಎಲ್.ನಾಗಣ್ಣ (ವಿತರಕರ ವಲಯ), ವೆಂಕರಮಣ ಬಾಬ್ಜಿ (ಪ್ರದರ್ಶಕರ ವಲಯ) ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಸ್ಥಾನಕ್ಕೆ ಎನ್.ಎಂ.ಸುರೇಶ್(ನಿರ್ಮಾಪಕರ ವಲಯ), ಎ.ಗಣೇಶ್ (ವಿತರಕರ ವಲಯ), ನರಸಿಂಹಲು (ಪ್ರದರ್ಶಕರ ವಲಯ) ಆಯ್ಕೆಯಾಗಿದ್ದಾರೆ.
ಖಜಾಂಚಿ ಸ್ಥಾನಕ್ಕೆ ಸಫೈರ್ ವೆಂಕಟೇಶ್ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸ್ಥಾನಗಳಿಗೂ ಆಯ್ಕೆಯಾಗಿದೆ. ಆಯ್ಕೆಯಾಗಿರುವ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಭಾನುವಾರ ನಡೆಯಲಿದೆ.