ಸಿನಿಮಾ ಥಿಯೇಟರ್‌ಗೂ 100% ವಿನಾಯಿತಿ ನೀಡುವಂತೆ ವಾಣಿಜ್ಯ ಮಂಡಳಿ ಮನವಿ
Team Udayavani, Jan 29, 2022, 4:21 PM IST
ಬೆಂಗಳೂರು: ಕೋವಿಡ್ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಂದು ಹಲವು ನಿಯಮಗಳನ್ನು ಸಡಿಲಿಕೆ ಮಾಡಿದೆ. ಜ.31ರ ಬಳಿಕ ನೈಟ್ ಕರ್ಫ್ಯೂ ರದ್ದು ಸೇರಿದಂತೆ ಹಲವಾರು ನಿಯಮಗಳುಳ್ಳ ಹೊಸ ಮಾರ್ಗಸೂಚಿಯನ್ನು ಸರ್ಕಾರ ಇಂದು ಪ್ರಕಟಿಸಿದೆ.
ಆದರೆ ಚಿತ್ರಮಂದಿರಗಳಿಗಿದ್ದ 50-50 ನಿಯಮವನ್ನು ಮುಂದುವರಿಸಲಾಗಿದೆ. ಹೀಗಾಗಿ ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು.
ಸಿನಿಮಾ ಥಿಯೇಟರ್‌ಗೂ 100% ವಿನಾಯಿತಿ ನೀಡುವಂತೆ ಸಿಎಂ ಬೊಮ್ಮಾಯಿಗೆ ವಾಣಿಜ್ಯ ಮಂಡಳಿ ಮನವಿ ಪತ್ರ ಸಲ್ಲಿಸಿತು. ವಾಣಿಜ್ಯ ಮಂಡಳಿ ಸಭೆ ಬಳಿಕ ಸಿಎಂ ಬೊಮ್ಮಾಯಿ ಆರ್ ಟಿ ನಗರ ನಿವಾಸಕ್ಕೆ ತೆರಳಿದರು. ಬಳಿಕ ಕಂದಾಯ ಸಚಿವ ಆರ್.ಅಶೋಕ್ ಅವರು ವಾಣಿಜ್ಯ ಮಂಡಳಿ ಸದಸ್ಯರ ಜೊತೆ ಚರ್ಚೆ ನಡೆಸಿದರು.
ಇದನ್ನೂ ಓದಿ:ಶಾಲಾರಂಭಕ್ಕೆ ಗ್ರೀನ್ ಸಿಗ್ನಲ್, ನೈಟ್ ಕರ್ಫ್ಯೂ ರದ್ದು: ಹೊಸ ನಿಯಮ ಪ್ರಕಟಿಸಿದ ರಾಜ್ಯ ಸರ್ಕಾರ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, “ನಾವು ಸೋಮವಾರ ಮತ್ತೆ ಸಿಎಂ ಭೇಟಿ ಮಾಡುತ್ತೇವೆ. ಎಸ್ಒಪಿ ನಿಯಮಗಳ ಪಾಲನೆ ಮಾಡಿ ಚಿತ್ರಮಂದಿರ ನಡೆಸುತ್ತೇವೆ. ಇದರ ಬಗ್ಗೆ ಸಿಎಂಗೆ ಮಾಹಿತಿ ಕೊಡುತ್ತೇವೆ. ಚಿತ್ರಮಂದಿರಗಳ ಎಸಿ, ನಾನ್ ಎಸಿ ಮಾಹಿತಿ ಕೊಡುತ್ತೇವೆ. ಹಲವು ಚಿತ್ರಗಳು ಬಿಡುಗಡೆಗೆ ಕಾದಿವೆ. ಈಗಾಗಲೇ ಚಿತ್ರರಂಗಕ್ಕೆ ಸಾಕಷ್ಟು ನಷ್ಟವಾಗಿದೆ. ಮುಂದಿನ ಶುಕ್ರವಾರ ಸರ್ಕಾರ ನಿರ್ಬಂಧ ತೆರವು ಮಾಡುವ ವಿಶ್ವಾಸವಿದೆ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಸೂಚನೆ; ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ಸರಕಾರ ನಡೆಸುವಂತಿಲ್ಲ
ಇಂದು, ನಾಳೆ ಎಸ್‌ಐ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ: ತೀವ್ರ ನಿಗಾ
ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ : ಐದು ಮಂದಿ ಪ್ರಾಣಾಪಾಯದಿಂದ ಪಾರು
ಅರ್ಚಕರ ನಿರ್ಲಕ್ಷ್ಯ : ದೇವರ ದರ್ಶಕ್ಕಾಗಿ ಕಾದು ಕಾದು ಸುಸ್ತಾದ ತೆಲುಗು ನಟ ನಾಗಿನೀಡು ಕುಟುಂಬ
ಬಾಗಲಕೋಟೆ : ಗುಂಡು ಹಾರಿಸಿಕೊಂಡು ಕಡ್ಡಾಯ ನಿವೃತ್ತಿ ಹೊಂದಿದ್ದ ನ್ಯಾಯಾಧೀಶ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
ರಾಜ್ಯಸಭೆ, ಪರಿಷತ್ ಅಭ್ಯರ್ಥಿ ಆಯ್ಕೆಗೆ ಇಂದು ದಿಲ್ಲಿಗೆ: ಸಿದ್ದರಾಮಯ್ಯ
ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಸೂಚನೆ; ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ಸರಕಾರ ನಡೆಸುವಂತಿಲ್ಲ
ಇಂದು, ನಾಳೆ ಎಸ್‌ಐ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ: ತೀವ್ರ ನಿಗಾ
ಜಿ.ಪಂ., ತಾ.ಪಂ. ಚುನಾವಣೆ ಶೀಘ್ರ ನಡೆಸಲಿ: ಸಲೀಂ ಅಹ್ಮದ್
ಅಡಿಕೆ ಎಲೆ ಹಳದಿ ರೋಗ: ಸರಕಾರದ ನಿರ್ಲಕ್ಷ್ಯ: ಹರಿಪ್ರಸಾದ್