ಬೆಂಗಳೂರಿನಲ್ಲಿ ನಟೋರಿಯಸ್‌ ರೌಡಿ ಶೀಟರ್‌ ಮೇಲೆ ಪೊಲೀಸ್‌ ಫೈರಿಂಗ್‌

Team Udayavani, Feb 5, 2019, 2:06 PM IST

ಬೆಂಗಳೂರು: ಸಿಸಿಬಿ ಪೊಲೀಸರು ಮಂಗಳವಾರ ಸಂಜೆ ನಟೋರಿಯಸ್‌ ರೌಡಿ ಶೀಟರ್‌ ಸ್ಲಂ ಭರತ್‌ ಮೇಲೆ ಗುಂಡು ಹಾರಿಸಿದ ಘಟನೆ ಕೆಂಗೇರಿ ಉಪನಗರ ಬಳಿ ನಡೆದಿದೆ. 

ಬಂಧನಕ್ಕೆ ತೆರಳಿದ್ದ ವೇಳೆ ಪೇದೆ ಹನುಮೇಶ್‌ ಮೇಲೆ ಭರತ್‌ ಹಲ್ಲೆ ನಡೆಸಿದ್ದಾನೆ.ತಕ್ಷಣ ಆತ್ಮರಕ್ಷಣೆಗಾಗಿ ಪಿಎಸ್‌ಐ ಪ್ರವೀಣ್‌ ಅವರು ಗುಂಡು ಹಾರಿಸಿದ್ದು ಸ್ಲಂ ಭರತ್‌ ಕಾಲಿಗೆ ತಗುಲಿದೆ. ಕೂಡಲೇ ಆತನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಕೆಂಗೇರಿ ಸರ್ಕಲ್‌ ಬಳಿ  ಕಾರಿನಲ್ಲಿ  ಭರತ್‌ ತೆರಳುತ್ತಿದ್ದ ವೇಳೆ ಸಿಸಿಬಿ ತಂಡ ಬೆನ್ನಟ್ಟಿ ಕಾರ್ಯಾಚರಣೆ ನಡೆಸಿದೆ. 

ರಾಜಗೋಪಾಲ ನಗರ ಠಾಣೆಯಲ್ಲಿ ಭರತ್‌ ಮೇಲೆ ರೌಡಿ ಶೀಟರ್‌ ದಾಖಲಾಗಿದೆ.

30 ಕ್ಕೂ ಹೆಚ್ಚು ಪ್ರಕರಣಗಳು ಸ್ಲಂ ಭರತ್‌ ಮೇಲೆ ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.  


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ