ನಾಗರಮಡಿ ಫಾಲ್ಸ್‌ನಲ್ಲಿ ಒಂದೇ ಕುಟುಂಬದ ಐವರು ನೀರುಪಾಲು

Team Udayavani, Sep 17, 2017, 3:16 PM IST

ಕಾರವಾರ: ಇಲ್ಲಿನ ಪ್ರವಾಸಿ ತಾಣ ನಾಗರಮಡಿ ಪಾಲ್ಸ್‌ನಲ್ಲಿ ಗೋವಾ ಮೂಲದ ಐವರು ಪ್ರವಾಸಿಗರು ನೀರು ಪಾಲಾದ ದಾರುಣ ಘಟನೆ ಭಾನುವಾರ ನಡೆದಿದೆ.

ಮಡಗಾಂವ್‌ ನಿಂದ ಆಗಮಿಸಿದ್ದ  ಕುಟುಂಬವೊಂದರ ನಾಲ್ವರು ಮಹಿಳೆಯರು ಸೇರಿ ಐವರು ನೀರು ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಐವರೂ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ ಎಂದು ಹೇಳಲಾಗಿದ್ದು, ಮಹಿಳೆಯ ಶವ ಪತ್ತೆಯಾಗಿದ್ದು , ಇನ್ನುಳಿದವರ ಶವಗಳಿಗಾಗಿ ಶೋಧ ನಡೆಸಲಾಗುತ್ತಿದೆ. 

ಸ್ಥಳಕ್ಕೆ ಕಾರವಾರ ಗ್ರಾಮಾಂತರ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ