ಪಂಚ ಸಚಿವರು ಫುಲ್‌ ಬ್ಯುಸಿ


Team Udayavani, May 7, 2021, 6:10 AM IST

ಪಂಚ ಸಚಿವರು ಫುಲ್‌ ಬ್ಯುಸಿ

ಕೋವಿಡ್ ನಿರ್ವಹಣೆ ಮತ್ತು ಸೋಂಕಿತರಿಗೆ ಅಗತ್ಯ ಸೌಲಭ್ಯ ಒದಗಿಸಿಕೊಡಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಪಂಚ ಸಚಿವರಿಗೆ ಹೊಣೆಗಾರಿಕೆ ನೀಡಿದ್ದು, ಈ ನಿಟ್ಟಿನಲ್ಲಿ ಪಂಚ ಸಚಿವರು ಗುರುವಾರ ತಮ್ಮ ಹೊಣೆಗಾರಿಕೆಯನ್ನು ಹೇಗೆಲ್ಲ ನಿಭಾಯಿಸಿದರು ಎಂಬ ಪುಟ್ಟ ಮಾಹಿತಿ ಇಲ್ಲಿದೆ..

1135 ಹಾಸಿಗೆ ನೀಡಲು ಖಾಸಗಿ ವೈದ್ಯಕೀಯ ಕಾಲೇಜಿಗೆ ಸೂಚನೆ :

ಬೆಂಗಳೂರು: ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ  ಚಿಕಿತ್ಸೆ ಪಡೆದು ಬಿಡುಗಡೆ ಹೊಂದುವ ಕೋವಿಡ್‌ ಸೋಂಕಿತರು ಮತ್ತು ಖಾಲಿ ಆಗುವ ಹಾಸಿಗೆಗಳ ಸ್ಟೇಟಸ್‌ ಅನ್ನು ಇನ್ನು ಮುಂದೆ ಪ್ರತೀದಿನ ಕೋವಿಡ್‌ ವಾರ್‌ ರೂಂ  ಮತ್ತು ಆಪ್ತಮಿತ್ರ ಪೋರ್ಟಲ್‌ಗೆ ನೀಡುವಂತೆ ಖಾಸಗಿ ಆಸ್ಪತ್ರೆಗಳ ಮಾಲಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಕೋವಿಡ್‌ ಚಿಕಿತ್ಸಾ ಹಾಸಿಗೆ ಉಸ್ತುವಾರಿ ಹಾಗೂ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗುರುವಾರ ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖಂಡರ ಜತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ,  ಪ್ರತಿದಿನ ವೈದ್ಯಕೀಯ ಕಾಲೇಜುಗಳಿಂದ ಎಷ್ಟು ರೋಗಿಗಳು ದಾಖಲಾಗುತ್ತಾರೆ?  ಎಷ್ಟು ರೋಗಿಗಳು ಬಿಡುಗಡೆ ಹೊಂದುತ್ತಾರೆ ಎಂಬುದರ ಮಾಹಿತಿ ಸಿಗುತ್ತಿರಲಿಲ್ಲ. ಆದರೆ, ಇಂದಿನ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದರ ಪರಿಣಾಮವಾಗಿ ಆಕ್ಸಿಜನ್‌, ಎಚ್‌ಡಿಯು, ವೆಂಟಿಲೇಟರ್‌ ಸೇರಿ ಒಟ್ಟು 1,135 ವಿವಿಧ ಪ್ರಕಾರದ ಹಾಸಿಗೆಗಳು ಸರಕಾರದ ಸುಪರ್ದಿಗೆ ಲಭಿಸಿವೆ ಎಂದು ಅವರು ತಿಳಿಸಿದರು.

ಸರಕಾರಕ್ಕೆ ನೀಡಬೇಕಾಗಿರುವ ಹಾಸಿಗೆಗಳ ಕುರಿತು ಮನವರಿಕೆ ಮಾಡಿಕೊಳ್ಳುವ ಸಂಬಂಧ ಪ್ರತಿಯೊಂದು ಖಾಸಗಿ ಆಸ್ಪತ್ರೆಗೆ ಒಬ್ಬ ಕೆಎಎಸ್‌ ಅಧಿಕಾರಿಯನ್ನು ನೇಮಕ ಮಾಡಲಾಗುವುದು.  ಪ್ರತೀ ಐದು ಆಸ್ಪತ್ರೆಗಳಿಗೆ ಒಬ್ಬ ಹಿರಿಯ ಅಧಿಕಾರಿಯನ್ನು ನೇಮಿಸಿ ಒಟ್ಟಾರೆ ಸರಕಾರದ ಪಾಲಿನ ಹಾಸಿಗೆಗಳು ಸಮರ್ಪಕವಾಗಿ ಬಳಕೆಯಾಗುವಂತೆ ನೋಡಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ಸಚಿವರು ತಿಳಿಸಿದರು

ಸಹಾಯವಾಣಿ ಕೇಂದ್ರಗಳ ಕರೆ ಮಾರ್ಗಗಳ ಹೆಚ್ಚಳಕ್ಕೆ ಕ್ರಮ  :

ಬೆಂಗಳೂರು: ಕೋವಿಡ್‌ ಸಹಾಯವಾಣಿ ಕೇಂದ್ರಗಳ ಕರೆ ಮಾರ್ಗಗಳ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವಂತೆ ವಾರ್‌ ರೂಂ ಉಸ್ತುವಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಕೆ.ಆರ್‌. ವೃತ್ತದಲ್ಲಿನ ಬೆಸ್ಕಾಂ ಕೇಂದ್ರ ಕಚೇರಿಯಲ್ಲಿರುವ ಕೋವಿಡ್‌ ವಾರ್‌ ರೂಮ್‌ಗೆ ಭೇಟಿ ನೀಡಿ, 1912 ಸಹಾಯವಾಣಿ ಕೇಂದ್ರದಲ್ಲಿನ ಕಾರ್ಯವೈಖರಿ ಪರಿಶೀಲನೆ ಮಾಡಿದರು. ಇಲ್ಲಿನ ಸಮಸ್ಯೆ ಮತ್ತು ಪರಿಹಾರ ಕುರಿತು ಚರ್ಚಿಸಿದರು. ಸಾರ್ವಜನಿಕರು ಮಾಡುವ ಕರೆಗಳಿಗೆ ತತ್‌ಕ್ಷಣವೇ ಸ್ಪಂದಿಸುವ ಹಾಗೆ ಮಾಡಲು ಯಾವ ಕ್ರಮಗಳನ್ನು ಕೈಗೊಳ್ಳ ಬೇಕು ಎಂಬುದರ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಕರೆ ಮಾರ್ಗಗಳ ಸಂಖ್ಯೆ ಹೆಚ್ಚಿಸಲು (ಲೈನ್‌) ತತ್‌ಕ್ಷಣವೇ  ಕ್ರಮ ಕೈಗೊಳ್ಳಲು ಸೂಚಿಸಿದರು. ಈ ಸಮಯದಲ್ಲಿ ಸೆಂಟರ್‌ ಫಾರ್‌ ಇ- ಗವರ್ನೆನ್ಸ್‌ ಸಿಇಒ ವಿಪಿನ್‌ ಸಿಂಗ್‌, ಬೆಸ್ಕಾಂನ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್‌ ಗೌಡ ಸೇರಿದಂತೆ ಸರಕಾರದ ಉನ್ನತಾಧಿಕಾರಿಗಳು ಹಾಜರಿದ್ದು ಸಚಿವರಿಗೆ ಮಾಹಿತಿ ಒದಗಿಸಿದರು.

ಡೀನ್‌ಗಳೇ ಜವಾಬ್ದಾರಿ ನಿರ್ವಹಿಸಬೇಕು: ಡಿಸಿಎಂ :

ಬೆಂಗಳೂರು: ಕೋವಿಡ್ ಸೋಂಕಿತರಾಗಿ ಮನೆಯಲ್ಲೇ ಐಸೋಲೇಶನ್‌ ಅಥವಾ ಕ್ವಾರಂಟೈನ್‌ ಆಗಿರುವವರಿಗೆ ದೂರವಾಣಿ ಮೂಲಕ ವೈದ್ಯಕೀಯ ಸಲಹೆ (ಟೆಲಿ ಕನ್ಸೆಲ್ಟೆನ್ಸಿ) ನೀಡುವುದಕ್ಕೆ ವೈದ್ಯಕೀಯ ವಿದ್ಯಾರ್ಥಿಗಳನ್ನು ನಿಯೋಜನೆ ಮಾಡುವ ಪೂರ್ಣ ಜವಾಬ್ದಾರಿಯನ್ನು ಆಯಾ ವೈದ್ಯ  ಕೀಯ ಕಾಲೇಜುಗಳ ಡೀನ್‌ ಗಳಿಗೆ ವಹಿಸಲಾಗಿದ್ದು, ಇದರಲ್ಲಿ ಕರ್ತವ್ಯ ಲೋಪವಾದರೆ ಡೀನ್‌ಗಳನ್ನೇ ಹೊಣೆ ಮಾಡಲಾಗುವುದು ಎಂದು ರಾಜ್ಯ ಕೋವಿಡ್‌ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಎಚ್ಚರಿಕೆ ನೀಡಿದರು.

ಬೆಂಗಳೂರಿನಲ್ಲಿ ಗುರುವಾರ ಕೋವಿಡ್‌ ಹೋಮ್‌ ಐಸೋಲೇಶನ್‌ ವಿಭಾಗದ ಉಸ್ತುವಾರಿಯೂ ಆಗಿರುವ ಹಿರಿಯ ಐಎಎಸ್‌  ಅಧಿಕಾರಿ ಪಂಕಜ್‌ ಕುಮಾರ್‌ ಪಾಂಡೆ ಸೇರಿದಂತೆ ಇತರ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ಅನಂತರ ಮಾತನಾಡಿ, ಟೆಲಿ ಕನ್ಸೆಲ್ಟೆನ್ಸಿ ಸೇವೆಗೆ ವೈದ್ಯ ವಿದ್ಯಾರ್ಥಿಗಳು ಹಾಜರಾಗದಿದ್ದರೆ ಆಯಾ ಮೆಡಿಕಲ್‌ ಕಾಲೇಜು ಪ್ರಾಂಶುಪಾಲರು, ಡೀನ್‌ ಅಥವಾ ಮುಖ್ಯಸ್ಥರನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.  ಈಗಾಗಲೇ ಟೆಲಿ ಕನ್ಸೆಲ್ಟೆನ್ಸಿ ಸೇವೆ ನೀಡಲು 7 ಸಾವಿರ ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದ್ದು 4 ಸಾವಿರ ವಿದ್ಯಾರ್ಥಿಗಳು ಸೇವೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಕೇವಲ 700 ವಿದ್ಯಾರ್ಥಿಗಳು ಮಾತ್ರ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಉಳಿದವರೂ ಈ ಸೇವೆಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದರು. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ, ಹಿರಿಯ ಐಎಎಸ್‌ ಅಧಿಕಾರಿ ತುಷಾರ್‌ ಗಿರಿನಾಥ, ಡಿಸಿಎಂ ಅವರ ಕಾರ್ಯದರ್ಶಿ ಪಿ. ಪ್ರದೀಪ್‌ ಇದ್ದರು. ಇದೇ ವೇಳೆ ಕೊರೊನಾ ಪರೀಕ್ಷೆ ಕುರಿತು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ರಾಜೇಂದ್ರ ಚೋಳನ್‌ ಜತೆ ಅಶ್ವತ್ಥನಾರಾಯಣ ಚರ್ಚಿಸಿ ದರು. ಸ್ಟೆಪ್‌ ಡೌನ್‌ ಆಸ್ಪತ್ರೆಗಳನ್ನು ಹೆಚ್ಚು ಪ್ರಮಾಣದಲ್ಲಿ ಮಾಡಲು ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯಲ್ಲಿ 5 ದಿನ ಚಿಕಿತ್ಸೆ ಪಡೆದ ಸೋಂಕಿತರನ್ನು ಇಂಥ ಆಸ್ಪತ್ರೆಗಳಿಗೆ ಶಿಫ್ಟ್‌ ಮಾಡಬೇಕು ಎಂದು ನಿರ್ದೇಶಿಸಿದರು.

ಭದ್ರಾವತಿಯಲ್ಲಿ ಆಕ್ಸಿಜನ್‌ ಉತ್ಪಾದನ ಘಟಕ ಪುನರಾರಂಭ :

ಭದ್ರಾವತಿ: ರಾಜ್ಯದಲ್ಲಿ ಉದ್ಭವಿಸಿರುವ ಆಕ್ಸಿಜನ್‌ ಸಮಸ್ಯೆ ಪರಿಹಾರಕ್ಕಾಗಿ ವಿಐಎಸ್‌ಎಲ್‌ ಕಾರ್ಖಾನೆಯಲ್ಲಿರುವ ಆಕ್ಸಿಜನ್‌ ಘಟಕ ಪುನರಾರಂಭಗೊಂಡಿದ್ದು, ಉತ್ಪಾದನೆ ಆರಂಭಿಸಲಾಗಿದೆ.

ಕೊರೊನಾ ತೀವ್ರವಾಗಿ ವ್ಯಾಪಿಸು ತ್ತಿರುವ ಬೆನ್ನಲ್ಲೇ ಸೋಂಕಿತರಿಗೆ ಅಗತ್ಯವಾದ ಆಕ್ಸಿಜನ್‌ ಕೊರತೆಯೂ ಉದ್ಭವಿಸಿರುವುದರಿಂದ ಈ ಘಟಕ ಪುನರಾರಂಭಕ್ಕೆ ಸರಕಾರ ಮುಂದಾ ಗಿದೆ. ಆಕ್ಸಿಜನ್‌ ಪೂರೈಕೆಯ ಹೊಣೆ ಹೊತ್ತಿರುವ ಕೈಗಾರಿಕ ಸಚಿವ ಜಗದೀಶ ಶೆಟ್ಟರ್‌ ಕಾರ್ಖಾನೆ ಆವರಣದಲ್ಲಿರುವ ಎಂಎಸ್‌ಪಿಎಲ್‌ ಆಕ್ಸಿಜನ್‌ ಉತ್ಪಾದನ ಘಟಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅ ಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದರು.

ಈ ಘಟಕದಲ್ಲಿ ಆಕ್ಸಿಜನ್‌ ಉತ್ಪಾದನೆ ಮಾಡುವುದಕ್ಕೆ ಪ್ರತೀ ತಿಂಗಳು ಅಂದಾಜು 10 ರಿಂದ 12 ಲಕ್ಷ ರೂ. ವೆಚ್ಚ ತಗಲುತ್ತದೆ. ಪ್ರತೀ ದಿನ ಉತ್ಪಾದನೆಗಾಗಿ 2 ಲಕ್ಷ ರೂ. ವಿದ್ಯುತ್‌ ಬಿಲ್‌ ಅಂದಾಜಿಸಲಾಗಿದ್ದು, ಇದನ್ನು ಜಿಲ್ಲಾಡಳಿತ ಪಾವತಿಸಲಿದೆ. ಜಿಲ್ಲೆಯಲ್ಲಿರುವ ಆಕ್ಸಿಜನ್‌ ಕೊರತೆ ನೀಗಿ ಅತೀ ಶೀಘ್ರದಲ್ಲಿ ಆಕ್ಸಿಜನ್‌ ಉತ್ಪಾದನ ಪ್ರಮಾಣವನ್ನು ಹೆಚ್ಚಿಸಿ, ಅಗತ್ಯವಿರುವ ಅಕ್ಕಪಕ್ಕದ ಜಿಲ್ಲೆಗಳಿಗೂ ಸಹ ಆಕ್ಸಿಜನ್‌ ರವಾನಿಸಲು ನಿರ್ಧರಿಸಲಾಗಿದೆ ಎಂದರು.

ಮಾಹಿತಿ ಪಡೆದ ಸಚಿವರು  ಕಾರ್ಖಾನೆಗೆ ಭೇಟಿ ನೀಡುವ ಮುನ್ನ ವಿಐಎಸ್‌ಎಲ್‌ ಅತಿಥಿ ಗೃಹದಲ್ಲಿ ಸಭೆ ನಡೆಸಿದ ಸಚಿವರು, ಜಿಲ್ಲಾಡಳಿತ ಹಾಗೂ ವಿಐಎಸ್‌ಎಲ್‌ ಅಧಿಕಾರಿ ಗಳಿಂದ ಆಕ್ಸಿಜನ್‌ ಪ್ಲಾಂಟ್‌ನ ಕುರಿತಾಗಿ ಮಾಹಿತಿ ಪಡೆದರು.

ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು, ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಇದು ಪ್ರಚಾರ ತೆಗೆದುಕೊಳ್ಳುವ ಸಮಯವಲ್ಲ. ರಾಜ್ಯದಲ್ಲಿ ಆಕ್ಸಿಜನ್‌ ಕೊರತೆ ಇರುವ ಬಗ್ಗೆ ಕೇಂದ್ರ ಸಚಿವ ಪಿಯೂಶ್‌ ಗೋಯಲ್‌ ಅವರ ಜತೆ ಮಾತನಾಡಿದ್ದೇನೆ. ರಾಜ್ಯಕ್ಕೆ ಆಕ್ಸಿಜನ್‌ ಪೂರೈಕೆ ಪ್ರಮಾಣದಲ್ಲಿ ಹೆಚ್ಚಳ ಮಾಡಿದ್ದಾರೆ. ಇವತ್ತು 975 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಕೊಡುತ್ತಿದ್ದಾರೆ.-ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ

ಲ್ಯಾಬ್‌ಗಳನ್ನು ಮತ್ತಷ್ಟು ಬಲಪಡಿಸ ಬೇಕು. ಸ್ಯಾಂಪಲ್‌ ಕೊಟ್ಟ 24 ಗಂಟೆ ಒಳಗೆ ಫಲಿತಾಂಶ  ಬರುವಂತೆ ಮಾಡಬೇಕು.  ಎಷ್ಟು ಬೇಗ ಫಲಿತಾಂಶ ಹೊರಬಿದ್ದು ಚಿಕಿತ್ಸೆ ವೇಗಗತಿಯಲ್ಲಿ ನೀಡಲಾಗುತ್ತದೋ ಅಷ್ಟು ಬೇಗ ಸಾವು ತಡೆಯಬಹುದು. ಈ ಬಗ್ಗೆ ಉಪೇಕ್ಷೆ ಸರಿಯಲ್ಲ. ಡಾ| ಸಿ.ಎನ್‌.ಅಶ್ವತ್ಥನಾರಾಯಣ, ಡಿಸಿಎಂ

ಬೆಂಗಳೂರಿನಲ್ಲಿ ಒಟ್ಟು 5,000 ಸ್ಟೆಪ್‌ ಡೌನ್‌ ಹಾಸ್ಪಿಟಲ್‌ ನಿರ್ಮಾಣದ ಗುರಿ ಇದೆ. ಇದಕ್ಕಾಗಿ ಆಸ್ಪತ್ರೆ ಪಕ್ಕದ ದೊಡ್ಡ ಹೊಟೇಲ್‌ ಗಳಲ್ಲಿನ ರೂಂಗಳನ್ನು ಪಡೆಯಲಾ ಗುತ್ತಿದೆ. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. -ಬಸವರಾಜ ಬೊಮ್ಮಾಯಿ,  ಗೃಹ ಸಚಿವ

ಕೆಲವು ಮೆಡಿಕಲ್‌ ಕಾಲೇಜಿನಲ್ಲಿ ವೈದ್ಯರು ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕೊಡುತ್ತಿಲ್ಲ ಎಂದು ದೂರು ಬಂದಿದೆ. ಯಾವ ಡಾಕ್ಟರ್‌ ಯಾವ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದ್ದೇನೆ.-ಆರ್‌. ಅಶೋಕ್‌, ಕಂದಾಯ ಸಚಿವ

ರಾಜ್ಯದಲ್ಲಿ  ಸುಮಾರು 5 ಲಕ್ಷ ಡೋಸ್‌ ಲಸಿಕೆ ದಾಸ್ತಾನು ಇದೆ. 18-44 ವರ್ಷದ ವರಿಗೆ ನೀಡಲು 2 ಕೋಟಿಯಷ್ಟು ಲಸಿಕೆ ಆರ್ಡರ್‌ ಮಾಡಲಾಗಿದೆ. ಮೇ 15 ರ ವೇಳೆಗೆ ಕಂಪೆನಿಗ ಳಿಂದ ನೇರವಾಗಿ ಲಸಿಕೆ ರವಾನೆಯಾಗಲಿದೆ. -ಡಾ| ಕೆ. ಸುಧಾಕರ್‌, ಆರೋಗ್ಯ ಸಚಿವ

ಟಾಪ್ ನ್ಯೂಸ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.